Depression:ಖಿನ್ನತೆ ಬಗ್ಗೆ ನಿರ್ಲಕ್ಷ್ಯ ಬೇಡ; ಚಿಕಿತ್ಸೆ ಬಗ್ಗೆ ಇರಲಿ ಮಾಹಿತಿ

(Depression) ಇಂದಿನ ವೇಗಭರಿತ ಪ್ರಪಂಚದಲ್ಲಿ ಹಲವಾರು ಕಾರಣಗಳಿಂದ ಖಿನ್ನತೆಗೆ ಒಳಗಾಗುವುದು ಸಹಜ.
ಇಂತಹ ಖಿನ್ನತೆಯ ಭಾವನೆಗಳು ಕೆಲವೊಮ್ಮೆ ಕಾಲಹರಣಕ್ಕೆ ಕಾರಣವಾಗಬಹುದು. ಇದರ ಪರಿಣಾಮ ಮೂಲಭೂತ ದೈನಂದಿನ ಕಾರ್ಯಗಳನ್ನು ಮಾಡಲು ಕಷ್ಟವಾಗುತ್ತದೆ. ಈ ಸ್ಥಿತಿ ಕನಿಷ್ಠ ಎರಡು ವಾರಗಳವರೆಗೆ ಮುಂದುವರೆದಿದ್ದರೆ ನೀವು ಖಿನ್ನತೆಗೆ ಒಳಗಾಗಿರುತ್ತೀರಿ ಎಂದು ಖಾತ್ರಿ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 6000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಪಿಟ್ಸ್ ಬರ್ಗ್ ವಿಶ್ವವಿದ್ಯಾನಿಲಯದ ಮಾನಸಿಕ ಆರೋಗ್ಯ ಸಂಶೋಧಕ ಡಾ.ಕಿಂಬರ್ಲಿ ಯಂಗ್ ರವರು ಖಿನ್ನತೆಯು ಗಂಭೀರ ಅಸ್ವಸ್ಥತೆಯಾಗಿದೆ ಎಂದು ಹೇಳುತ್ತಾರೆ.

ಮಾನವರಲ್ಲಿ ಖಿನ್ನತೆಯು ಕೇವಲ ಒಂದೇ ಒಂದು ವಿಷಯದಿಂದ ಉಂಟಾಗುವುದಿಲ್ಲ. ಒತ್ತಡದ ಸಂದರ್ಭಗಳು ಖಿನ್ನತೆಯನ್ನ ಪ್ರಚೋದಿಸುವುದಲ್ಲದೆ, ಹಣದ ಸಮಸ್ಯೆಗಳು, ಪ್ರೀತಿ ಪಾತ್ರದ ಅಗಲಿಕೆ, ಆರೋಗ್ಯ ಸಮಸ್ಯೆಗಳು ಮತ್ತು ತಕ್ಷಣದ ಜೀವನದ ಬದಲಾವಣೆಗಳು ಖಿನ್ನತೆಗೆ ದೂಡಬಹುದು.

ಮಹಿಳೆಯರಲ್ಲಿ ಗರ್ಭವಸ್ಥೆಯಲ್ಲಿ, ಹೆರಿಗೆಯ ನಂತರ ಕೆಲ ಸ್ತ್ರೀಯರು ಖಿನ್ನತೆಯನ್ನು ಅನುಭವಿಸುತ್ತಾರೆ. ಇದನ್ನು “ಪೆರಿನಾಟಲ್ಕಿನತೆ”ಎಂದು ಕರೆಯಲಾಗುತ್ತದೆ. ಋತುಗಳಲ್ಲಿ ಅಂದರೆ ಚಳಿಗಾಲದಲ್ಲಿ ಖಿನ್ನತೆಗೆ ಒಳಗಾಗುವುದನ್ನು ಕಾಲೋಚಿತ ಪರಿಣಾಮಕಾರಿ ಅಸ್ವಸ್ಥತೆ ಅಥವಾ ಬೇಸರ ಎಂದು ಕರೆಯಲಾಗುತ್ತದೆ.

Depression:ಖಿನ್ನತೆ ಬಗ್ಗೆ ನಿರ್ಲಕ್ಷ್ಯ ಬೇಡ; ಚಿಕಿತ್ಸೆ ಬಗ್ಗೆ ಇರಲಿ ಮಾಹಿತಿ
Depression:ಖಿನ್ನತೆ ಬಗ್ಗೆ ನಿರ್ಲಕ್ಷ್ಯ ಬೇಡ; ಚಿಕಿತ್ಸೆ ಬಗ್ಗೆ ಇರಲಿ ಮಾಹಿತಿ

ಇದನ್ನೂ ಓದಿ: ಪಿಯುಸಿ-ಐಟಿಐ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,200 ಸ್ಕಾಲರ್ ಶಿಪ್; ಈ ರೀತಿ ಸಿಂಪಲ್ ಆಗಿ ಅರ್ಜಿ ಸಲ್ಲಿಸಿ


ಖಿನ್ನತೆಯು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಖಿನ್ನತೆ ಹೋಗಲಾಡಿಸಲು ಇರುವ ಚಿಕಿತ್ಸೆಗಳು ಹಲವಾರು ಅದರಲ್ಲಿ ಟಾಕ್ತೆರಪಿ ಕೂಡ ಒಂದು. ಖಿನ್ನತೆಗೆ ಒಳಗಾದ ವ್ಯಕ್ತಿಯನ್ನು ಪ್ರಪಂಚವು ವಿಭಿನ್ನವಾಗಿ ನೋಡುವ ಮೂಲಕ ಹತಾಶರನ್ನಾಗಿ ಮಾಡುತ್ತದೆ. ಅಂತಹ ಸ್ಥಿತಿಯಿಂದ ಹೊರಬರಲು ಈ ಚಿಕಿತ್ಸೆ ಸಹಾಯ ಮಾಡುತ್ತದೆ. ಅಂದರೆ ಅವನೊಂದಿಗೆ ಮಾತನಾಡುವ ಮೂಲಕ ಅವನನ್ನು ಈ ಸ್ಥಿತಿಯಿಂದ ಹೂರತರುವ ಚಿಕಿತ್ಸೆ ಇದಾಗಿದೆ ಎಂದು ಲಾಸ್ ಏಂಜಲ್ಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಖಿನ್ನತೆಯ ಅಧ್ಯಯನಕಾರ ಡಾ.ಮಿಚೆಲ್ ಕ್ರಾಸ್ಗೆ ಹೇಳುತ್ತಾರೆ.

ಇಂತಹ ಮಾನಸಿಕ ಸ್ಥಿತಿಯಲ್ಲಿ ಕೆಲವೊಂದು ಆಯ್ದ ದೈಹಿಕ ಚಟುವಟಿಕೆಗಳನ್ನು ಪ್ರಯತ್ನಿಸುವುದರೊಂದಿಗೆ ಉತ್ತಮ ಆಹಾರ ಸೇವನೆ ಅವಶ್ಯವಾಗಿರುತ್ತದೆ. ಕೆಟ್ಟ ಚಟಗಳಿಗೆ ಬಲಿಯಾಗದೆ ಸುಖ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸುವುದರೊಂದಿಗೆ ನಿಮ್ಮನ್ನು ಬೆಂಬಲಿಸುವ ಜನರೊಂದಿಗೆ ಸಂಪರ್ಕದಲ್ಲಿ ಇದ್ದರೆ ಇನ್ನೂ ಒಳಿತು.


ಇದನ್ನೂ ಓದಿ: SSLC & PUCಯಲ್ಲಿ 65% ಪಡೆದಿದ್ದರೆ ₹30,000 ಸ್ಕಾಲರ್ಶಿಪ್; ಆದರೆ ಈ ಷರತ್ತು ಅನ್ವಯ.!


ಕೆಲವೊಂದು ಔಷಧ ಉಪಚಾರಗಳು ಖಿನ್ನತೆಯನ್ನು ತೆಗೆದು ಹಾಕುತ್ತವೆ ಎಂಬ ವಾದವಿದ್ದರೂ ಇದರಿಂದ ಹೆಚ್ಚಿನ ಫಲಿತಾಂಶಗಳು ಪ್ರಕಟವಾಗಿಲ್ಲ. ಹೆಚ್ಚಿನ ಔಷಧೋಪಚಾರಗಳು ಗಂಭೀರವಾದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು. ಇದನ್ನು ಅನುಸರಿಸುವ ಮುನ್ನ ಕುಟುಂಬ ವೈದ್ಯರ ಸಲಹೆ ಬಹು ಮುಖ್ಯವಾಗಿರುತ್ತದೆ.

ಕೆಲವೊಬ್ಬರಲ್ಲಿ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಾಗದೆ ಖಿನ್ನತೆಯು ಮುಂದುವರಿಯುತ್ತದೆ. ಇದನ್ನು ಚಿಕಿತ್ಸೆ ನಿರೋಧಕ ಖಿನ್ನತೆ ಎಂದು ಕರೆಯಲಾಗುತ್ತದೆ. ಇಂಥವರನ್ನು ಖಿನ್ನತೆಯಿಂದ ಹೊರತರಲು ವಿದ್ಯುತ್ ಮತ್ತು ಆಯಸ್ಕಾಂತಗಳನ್ನು ಬಳಸಿ ಮೆದುಳಿನ ಚಟುವಟಿಕೆಯನ್ನು ನೇರವಾಗಿ ವೈದ್ಯರು ಬದಲಾಯಿಸಲು ಪ್ರಯತ್ನಿಸುತ್ತಾರೆ.

ಇದಲ್ಲದೆ ಇನ್ನೂ ಹಲವು ವೈದ್ಯಕೀಯ ಲೋಕದ ಚಿಕಿತ್ಸಾ ವ್ಯವಸ್ಥೆಗಳನ್ನು ಕಾಣಬಹುದಾಗಿದೆ.
ಇಂತಹ ಸಂದರ್ಭದಲ್ಲಿ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಈಜು ಮತ್ತಿತರೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಖಿನ್ನತೆಯನ್ನು ನಿವಾರಿಸಲು ಅಥವಾ ತಡೆಗಟ್ಟಲು ಸಹಕಾರಿಯಾಗುತ್ತದೆ.
ಕ್ರೀಡೆಗಳು ಅವರಿಗೆ ಸಕ್ರಿಯವಾಗಿರಲು ಮತ್ತು ಇತರೆ ಆಟಗಾರರನ್ನು ಭೇಟಿ ಮಾಡಲು ಅವಕಾಶ ನೀಡುತ್ತದೆ.

ಇದರಿಂದ ಮೆದುಳಿನ ಕಾರ್ಯ ವೈಖರಿಯಲ್ಲಿ ಉತ್ತಮ ಪರಿಣಾಮಕಾರಿ ಬದಲಾವಣೆಯನ್ನು ಕಾಣುವುದರಿಂದ ಇದು ಖಿನ್ನತೆಯಿಂದ ಹೊರಬರಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದು ಅವುಗಳ ಒಟ್ಟಾರೆ ಫಲಿತಾಂಶವು ಸ್ವಾಗತಾರ್ಹವಾಗಿರುತ್ತದೆ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಸಿಗಲಿದೆ 50,000 ವರೆಗೆ ಸ್ಕಾಲರ್ ಶಿಪ್;ಈ ರೀತಿ ಅರ್ಜಿ ಸಲ್ಲಿಸಿ


ಯೋಗ ಅಭ್ಯಾಸವು ಕೂಡ ಖಿನ್ನತೆಯನ್ನ ತೊಡೆದು ಹಾಕುವ ದಿವ್ಯ ಔಷಧವಾಗಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಇದು ಆರೋಗ್ಯ ಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದು ಉತ್ತಮ ಫಲಿತಾಂಶಗಳನ್ನು ನೀಡಿವೆ. ಯೋಗವು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ ಬೇಗನೆ ಚೇತರಿಸಿಕೊಳ್ಳಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಹಕಾರಿಯಾಗಿದೆ.

ಖಿನ್ನತೆಯು ಸಹಜ ಆದರೆ ಅದನ್ನು ದೀರ್ಘಕಾಲ ಉಳಿಸಿಕೊಳ್ಳದೆ ಸಹಜ ಸ್ಥಿತಿಗೆ ಮರಳುವುದು ಪ್ರಸ್ತುತ.
ಆರೋಗ್ಯ ಸ್ಥಿತಿಗೆ ಮರಳಲು ಕ್ರೀಡೆ, ಮನೋಲ್ಲಾಸದ ಚಟುವಟಿಕೆಗಳು ಮತ್ತು ಯೋಗದಲ್ಲಿ ಪಾಲ್ಗೊಳ್ಳುವಿಕೆ ಉತ್ತಮ ಮತ್ತು ನಿಖರವಾದ ಫಲಿತಾಂಶ ಭರಿತ ಅಂಶಗಳಾಗಿದ್ದು, ಇವುಗಳಲ್ಲಿ ಪಾಲ್ಗೊಂಡು ಸಹಜ ಸ್ಥಿತಿಗೆ ಮರಳಬಹುದಾಗಿದೆ.


ಇದನ್ನೂ ಓದಿ: ಆಧಾರ್ ಕೌಶಲ್ಯದಿಂದ ಇಂತಹ ವಿದ್ಯಾರ್ಥಿಗಳಿಗೆ 10,000 ದಿಂದ ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಇಂದಿನ ಜನಜೀವನ ಶೈಲಿಯಲ್ಲಿ ಯಾವ ಮಾನಸಿಕ ಸ್ಥಿತಿಗಳು ಶಾಶ್ವತವಲ್ಲ, ವ್ಯಕ್ತಿ ಮನಸ್ಸು ಮಾಡಿದರೆ ಎಂತಹ ಸ್ಥಿತಿಯಿಂದ ಬೇಕಾದವರು ಹೂರಬರಬಹುದು. ಬದಲಾಯಿಸಿಕೊಳ್ಳುವ ಮನಸ್ಥಿತಿ, ಬದಲಾಯಿಸುವ ಪರಿಸರವನ್ನು ನಾವು ಅಪ್ಪಿಕೊಳ್ಳಬೇಕಾಗಿದೆ. ಬದುಕಿ ಬಾಳುವ ಭರವಸೆ ನಮ್ಮಲ್ಲಿರಬೇಕಾಗಿದೆ. ಆಗ ಮಾತ್ರ ನಾವು ಬದುಕುಳಿಯಲು ಸಾಧ್ಯವಾಗುತ್ತದೆ. ಬದಲಾವಣೆಗಳು ನಮಗಾಗಿ ಬದಲಾಗದು ನಾವು ಬದಲಿಸಿಕೊಳ್ಳಬೇಕಾಗಿದೆ.

-ಡಾ.ಸುಧಾಕರ.ಜಿ.ಲಕ್ಕವಳ್ಳಿ.


ಇದನ್ನೂ ಓದಿ: SSLC, PUC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ರೀತಿ ಅರ್ಜಿ ಸಲ್ಲಿಸಿ 40 ಸಾವಿರ ಸ್ಕಾಲರ್ಶಿಪ್ ಪಡೆಯಿರಿ