(compensation 25:) ನೈರುತ್ಯ ಮುಂಗಾರು ಹಂಗಾಮು, ಈಶಾನ್ಯ ಮುಂಗಾರು ಹಂಗಾಮಿನಲ್ಲಿನ ಪ್ರವಾಹದಿಂದ ಹಾನಿಯಾಗುವ ಮನೆಗಳ ಪುನರ್ ನಿರ್ಮಾಣ, ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಿ ಆದೇಶಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ; ಆದೇಶದ ಪ್ರತಿ ಇಲ್ಲಿದೆ ನೋಡಿ
೯compensation 25:) ನಡವಳಿಕೆ ಪತ್ರದಲ್ಲಿ ಏನಿದೆ?:
ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ SDRF | NDRF ರಡಿ ನೀಡಬಹುದಾದ ಪರಿಹಾರಗಳ ಕುರಿತು ಭಾರತ ಸರ್ಕಾರದ ಗ್ರಹ ಮಂತ್ರಾಲಯವು ಹೊರಡಿಸಿರುವ SDRF / NDRF Items and Norms of Assistance ರ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪರಿಹಾರ ಮೊತ್ತದ ಜೊತೆಗೆ, 2024-25 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 ರಿಂದ 30.09.2025) ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ (01.10.2025 ರಿಂದ 31.12.2025) ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪುವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚುವರಿ ಮೊತ್ತವನ್ನು ನಿಗದಿಪಡಿಸಿದೆ.
ಭಾರತೀಯ ಹವಾಮಾನ ಇಲಾಖೆಯು ನೈಋತ್ಯ ಮುಂಗಾರು (SouthWest) ಹಂಗಾಮು-2025 ರ ಮೊದಲ ಹಂತದ ಕಾರ್ಯಚರಣೆಯ ಧೀರ್ಘ ವ್ಯಾಪ್ತಿಯ ಮುನ್ಸೂಚನೆಯ (LRF) ಪ್ರಕಾರ ಒಟ್ಟಾರೆಯಾಗಿ ದೇಶದಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಪ್ರಸಕ್ತ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಮನೆ ಹಾನಿಗೆ ಪರಿಹಾರವನ್ನು ಪಾವತಿಸುವ ಬಗ್ಗೆ ಮಾರ್ಗಸೂಚಿಗಳನ್ನು ನೀಡುವುದು ಅವಶ್ಯಕವಾಗಿರುತ್ತದೆವಾದ್ದರಿಂದ, ಅತಿವೃಷ್ಟಿ | ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 2024-25 ನೇ ಸಾಲಿನಲ್ಲಿ ಪಾವತಿಸಿರುವ ಪರಿಹಾರದಂತೆ 2025-26 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 ರಿಂದ 30.09.2025) ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ (01.10.2025 ರಿಂದ 31.12.2025) ಹಾನಿಗೊಳಗಾಗುವ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನಿಯಾಮಾನುಸಾರ ಅರ್ಹತೆಯಂತೆ ಜಿಲ್ಲಾಧಿಕಾರಿರವರ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪಾವತಿಸಲು ಸರ್ಕಾರವು ನಿರ್ಧರಿಸಿದೆ.
(compensation 25:) ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು 02 ವರ್ಗಗಳಲ್ಲಿ (ಪೂರ್ಣ ಹಾನಿಯಾದ ಮನೆಗಳ ಮರು ನಿರ್ಮಾಣ ಮತ್ತು ಭಾಗಶ: ಹಾನಿಯಾದ ಮನೆಗಳ ದುರಸ್ತಿ) ವಿಂಗಡಿಸಿ ಪರಿಹಾರ ಪಾವತಿಸಬೇಕು.
ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ;ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಒನ್ ಟೈಮ್ ನೋಂದಣಿ ಕಡ್ಡಾಯ
ಪೂರ್ಣಹಾನಿಯಾದ ಮನೆಗಳಿಗೆ ಭಾರತ ಸರ್ಕಾರದ ಗೃಹ ಮಂತ್ರಾಲಯವು 11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ವಯ ರೂ.1.20 ಲಕ್ಷಗಳ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ನೀಡುವುದು. ದೇವರಾಜ್ ಅರಸು ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾನ್ಯ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.20 ಲಕ್ಷ ಮತ್ತು ಎಸ್ಸಿ/ಎಸ್ಟಿ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.50 ಲಕ್ಷ ಮಂಜೂರು ಮಾಡುವುದು. ಈ ಮನೆಗಳನ್ನು ಜಿಲ್ಲಾಧಿಕಾರಿಗಳು ಅನುಮೋದನೆ ಮಾಡಿ ವಿವರಗಳೊಂದಿಗೆ ಫಲಾನುಭವಿಗಳ ಪಟ್ಟಿಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ವಿವರಗಳನ್ನು ದಾಖಲಿಸುವುದು.
(compensation 25:) ಅನಧಿಕೃತ ಜಮೀನಿನಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಒಂದು ಬಾರಿ ಪರಿಹಾರವಾಗಿ ರೂ.1.00 ಲಕ್ಷಗಳನ್ನು ಪಾವತಿಸುವುದು ಮತ್ತು ಯಾವುದೇ ಮನೆಯನ್ನು ಮಂಜೂರು ಮಾಡುವಂತಿಲ್ಲ.
ಇದನ್ನೂ ಓದಿ: ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಹೆಚ್ಚುವರಿ ಖರೀದಿ ಕೇಂದ್ರ ಸ್ಥಾಪನೆ; ಹೈಕೋರ್ಟ್ ಆದೇಶ
ಭಾರತ ಸರ್ಕಾರದ ಗ್ರಹ ಮಂತ್ರಾಲಯವು 11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ವಯ ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ತಿಗೆ ಕನಿಷ್ಟ ರೂ.6,500/- ಗಳಿಂದ ಗರಿಷ್ಮ ರೂ.50,000/-ಗಳನ್ನು ಪಾರದರ್ಶಕ ಮಾನದಂಡಗಳನ್ವಯ ಅರ್ಹತೆಯನುಸಾರ ಪಾವತಿಸುವುದು.

ಇತ್ತೀಚಿನ ಜನಪ್ರಿಯ ಸುದ್ದಿಗಳು (compensation 25:)
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?





