Sunday, September 24, 2023
Homeಮಲೆನಾಡುಕೈಕೊಟ್ಟ ಮತಯಂತ್ರ: ಒಂದು ಗಂಟೆ ಕಾಲ ತಾಂತ್ರಿಕ ದೋಷ

ಕೈಕೊಟ್ಟ ಮತಯಂತ್ರ: ಒಂದು ಗಂಟೆ ಕಾಲ ತಾಂತ್ರಿಕ ದೋಷ

ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಮತಗಟ್ಟೆಗಳಲ್ಲಿ ಇವಿಎಂ ಮಿಷನ್ ಕೈಕೊಟ್ಟ ಉದಾಹರಣೆಗಳು ಕಂಡು ಬರುತ್ತಿವೆ. ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಇವಿಎಂ ಮಿಷನ್ ಕೈಕೊಟ್ಟಿತ್ತು.

ಸೈನ್ಸ್ ಮೈದಾನದ ಮೂರು ಮತಗಟ್ಟೆಳಿದ್ದು 163 ಮತಗಟ್ಟೆಯಲ್ಲಿ ಇವಿಎಂ ಮಿಷನ್ ಕೈಕೊಟ್ಟಿದ್ದು 15 ನಿಮಿಷಗಳ ಕಾಲ ಮತದಾನಕ್ಕೆ ತೊಂದರೆಯಾಹಿತ್ತು. ತಂತ್ರಜ್ಞರನ್ನ‌ಕರೆಯಿಸಿ ನಂತರ ಇವಿಎಂ ಸರಿ ಮಾಡಿರುವ ಘಟನೆ ನಡೆದಿದೆ.

ಇದನ್ನೂ ಓದಿ; ಶಾಸಕರು ಅನುದಾನ ತರದೇ ತಂದ ಅನುದಾನಗಳನ್ನು ತನ್ನ ಬೆಂಬಲಿಗರಿಗೆ ನೀಡಿದ್ದಾರೆ

ತೀರ್ಥಹಳ್ಳಿಯ ಮತಗಟ್ಟೆಯೊಂದರಲ್ಲಿ ಮತ ಯಂತ್ರ ಕೈಕೊಟ್ಟಿದ್ದು ಸುಮಾರು ಒಂದು ಗಂಟೆಯಿಂದ ಮತದಾನ ಸ್ಥಗಿತವಾಗಿದೆ. ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹೊದಲ ಮತಗಟ್ಟೆ ಸಂಖ್ಯೆ 143ರಲ್ಲಿ ಮತ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ಸುಮಾರು ಒಂದು ಗಂಟೆಯಿಂದ ಮತದಾನ ಸ್ಥಗಿತವಾಗಿದೆ. ಸರತಿಯಲ್ಲಿ ನಿಂತಿರುವ ಮತದಾರರು, ಮತಗಟ್ಟೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕುಶಾಲನಗರ: ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ಮತದಾನ ಪ್ರಕ್ರಿಯೆ

ಮಡಿಕೇರಿ: ಇಲ್ಲಿನ ಕುಶಾಲನಗರ ಎಚ್‌ಆರ್‌ಪಿ ಕಾಲೋನಿಯ ಸಣ್ಣ ನೀರಾವರಿ ಇಲಾಖೆಯ ಮತಗಟ್ಟೆ ಸಂಖ್ಯೆ 173ರಲ್ಲಿ ತಾಂತ್ರಿಕ ದೋಷದಿಂದ ಅರ್ಧ ತಾಸುಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತು. ತದನಂತರ ಆರಂಭವಾಯಿತ್ತಾದರೂ ತೀರಾ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿದೆ. ಒಟ್ಟು ಇಲ್ಲಿ 1,100 ಮತದಾರರು ಇದ್ದು, 450 ಮತದಾರರು ಮತದಾನ ಮಾಡಿದ್ದಾರೆ.

ಮದುವೆಗೂ ಮೊದಲು ಮತದಾನ ಮಾಡಿದ ವರ:
ಸಾಗರ: ಶಿವಪ್ಪನಾಯಕ ನಗರ ಬಡಾವಣೆಯ ನಾರಾಯಣ ಅವರ ಪುತ್ರ ವಿನೋದ್ ಕುಮಾರ್ ಮದುವೆ ಮಂಟಪಕ್ಕೆ ಹೊರಡುವ ಮುನ್ನ ಮತ ಚಲಾಯಿಸಿದ್ದಾರೆ. ವಿನೋದ್ ಅವರ ವಿವಾಹ ರಿಪ್ಪನ್ ಪೇಟೆಯಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೆ ಮದುವೆ ದಿನಾಂಕ ನಿಗದಿಯಾಗಿತ್ತು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಮದುವೆ ದಿನವೇ ಚುನಾವಣೆ ದಿನ ಎಂದು ತಿಳಿದು ಆರಂಭದಲ್ಲಿ ಬೇಸರವಾಗಿತ್ತು. ಆದರೆ ನಾನು ನನ್ನ ಕುಟುಂಬದ ಎಲ್ಲರೂ ಬೆಳಿಗ್ಗೆಯೆ ಮತ ಚಲಾಯಿಸಿ ಮದುವೆಗೆ ಹೊರಟಿದ್ದೇವೆ. ನಮ್ಮ ಹಕ್ಕನ್ನು ನಾವು ಮರೆಯಬಾರದು ಎಂದು ವಿನೋದ್ ತಿಳಿಸಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ಲೋಪ; ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಮಾನತ್ತು

ಶೃಂಗೇರಿ: ಚುನಾವಣಾ ಕರ್ತವ್ಯಕ್ಕೆ ಲೋಪವನ್ನುಂಟು ಮಾಡಿ, ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಯನ್ನು ಅಮಾನತ್ತುಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಪುಟ್ಟೇಗೌಡ ಅಮಾನತ್ತು ಆದ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಪುಟ್ಟೇಗೌಡ ಅವರಿಗೆ ನಿಯೋಜಿಸಿದ್ದ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡದೇ ಚುನಾವಣಾ ಕೆಲಸಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪ ಮಾಡಿದ್ದಾರೆ ಮತ್ತು ಮಹಿಳಾ ಸಿಬ್ಬಂದಿಗಳ ಮುಂದೆ ಅವಾಚ್ಯ ಪದಗಳನ್ನು ಬಳಸಿ ಅವರುಗಳಿಗೆ ಮುಜುಗರವಾಗುವಂತೆ ನಡೆದುಕೊಂಡಿದ್ದು, ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ್ದಾರೆ.

ಇದನ್ನೂ ಓದಿ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ರ ಕಲಂ 28 (ಎ) ಮತ್ತು 136 ರಡಿ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಆದೇಶ ಹೊರಡಿಸಿದ್ದಾರೆ.

Most Popular

Recent Comments