Budget 26: ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬಜೆಟ್‌ನಲ್ಲಿ ಸಿದ್ದರಾಮಯ್ಯ ಮಾರ್ಚ್ 6ರಂದು 2026ನೇ ಯಾವ ಯೋಜನೆಗಳು ಘೋಷಣೆಯಾಗಲಿವೆ? ಎಂದು ಜನರು ಕಾಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ 13 ಸೂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕ ಮತ್ತು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮನವಿಯೊಂದನ್ನು ಸಲ್ಲಿಕೆ ಮಾಡಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಈ ಯೋಜನೆಗಳನ್ನು ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಆಡಳಿತ ಸುಧಾರಣೆಗೆ ಪೂರಕವಾದ 13 ಅಂಶಗಳನ್ನೊಳಗೊಂಡ ಸಮಗ್ರ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: 10th ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 12,000 ದಿಂದ ಸಂಬಳ
ಯಾವ-ಯಾವ ಯೋಜನೆಗಳು?
1) ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೂತನ ಘಟಕ ಸ್ಥಾಪನೆ: ಬೆಂಗಳೂರಿನ ಹೊರವಲಯದ ಕೆಂಪೇಗೌಡ ಬಡಾವಣೆಯಲ್ಲಿನ ಸುಮಾರು 20 ಎಕರೆ ಪ್ರದೇಶದಲ್ಲಿ ನೂತನ ಘಟಕ ಸ್ಥಾಪಿಸಿ, ಹೆಚ್ಚುತ್ತಿರುವ ರೋಗಿಗಳ ಒತ್ತಡ ಕಡಿಮೆ ಮಾಡಲು ಅನುದಾನ ಮೀಸಲಿಡುವುದು.
2) ಮೈಸೂರು ರೇಷ್ಮೆ ಸೀರೆಯ ನೂತನ ಉತ್ಪಾದನಾ ಘಟಕ ಸ್ಥಾಪನೆ: ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪ್ರತಿದಿನ 5000 ಸೀರೆಗಳ ಉತ್ಪಾದನೆಗೆ ಅನುಕೂಲವಾಗುವಂತೆ ನೂತನ ಘಟಕ ಪ್ರಾರಂಭಿಸುವುದು.
3) ನೂತನ ಜಲ ಆಯೋಗ ರಚನೆ: ಜಲಾಶಯಗಳ ನಿರ್ವಹಣೆ, ಮಳೆ ನೀರು ಸಂಗ್ರಹ ಹಾಗೂ ಕೃಷಿ-ಕೈಗಾರಿಕೆಗಳಿಗೆ ಸಮರ್ಪಕ ನೀರು ಪೂರೈಸಲು ವೈಜ್ಞಾನಿಕ ಸಲಹೆ ನೀಡಲು ‘ಜಲ ಆಯೋಗ’ ರಚನೆ.
4) ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚಳ: ಹಾಲು ಉತ್ಪಾದಕರಿಗೆ ನೀಡುತ್ತಿರುವ 5 ರೂ. ಪ್ರೋತ್ಸಾಹ ಧನವನ್ನು 7ರೂ.ಗಳಿಗೆ ಹೆಚ್ಚಿಸುವುದು.
5) ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ: ಪ್ರಸ್ತುತ ಇರುವ 2 ಕೋಟಿ ರೂ.ಗಳ ನಿಧಿಯನ್ನು 4 ಕೋಟಿ ರೂ.ಗಳಿಗೆ ಏರಿಕೆ.
6) ಎಐ ತಂತ್ರಜ್ಞಾನದ ವಿಷಯಗಳ ಅಳವಡಿಕೆ: ಉದ್ಯೋಗ ಮಾರುಕಟ್ಟೆಯ ಬದಲಾವಣೆಗೆ ತಕ್ಕಂತೆ ಪ್ರತಿ ಜಿಲ್ಲೆಯಲ್ಲಿ ಉದ್ಯೋಗಾಧಾರಿತ ಎಐ ಕೌಶಲ ಡಿಪ್ಲೊಮಾ ಕೋರ್ಸ್ ಆರಂಭ
7) ಮೈಸೂರಿನಲ್ಲಿ ಕಾನೂನು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿ: ಹಳೇ ಮೈಸೂರು ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿಯಲ್ಲಿರುವ ಕಾನೂನು ವಿವಿಯ ಪ್ರಾದೇಶಿಕ ಕೇಂದ್ರವನ್ನು ಮೈಸೂರಿನಲ್ಲಿ ಸ್ಥಾಪಿನೆ.
ಇದನ್ನೂ ಓದಿ: 6 ತಿಂಗಳು ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್; ಕಾರಣವೇನು ಗೊತ್ತಾ…?
8) ಇ-ವಾಹನಗಳ ಖರೀದಿ: ಪರಿಸರ ಮಾಲಿನ್ಯ ತಡೆಗೆ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಇನ್ಮುಂದೆ ಕೇವಲ ಎಲೆಕ್ಟ್ರಾನಿಕ್ ವಾಹನಗಳ ಖರೀದಿ
9) ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ಪ್ರತ್ಯೇಕ ಸಚಿವಾಲಯ: 5 ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಸಮನ್ವಯಕ್ಕಾಗಿ ಐಎಎಸ್ ಅಧಿಕಾರಿ ನೇತೃತ್ವದ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದು.
10) ವಸತಿ ಯೋಜನೆಗೆ ಅನುದಾನ ಹೆಚ್ಚಳ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 1000 ಮನೆಗಳನ್ನು ನೀಡಿ, ಸಾಮಗ್ರಿಗಳ ಬೆಲೆ ಏರಿಕೆ ಹಿನ್ನೆಲೆ ಘಟಕ ವೆಚ್ಚ ಹೆಚ್ಚಳ.
11) ಸ್ಥಳೀಯ ಸಂಸ್ಥೆಗಳ ಸದಸ್ಯರ ಭತ್ಯೆ ಹೆಚ್ಚಳ: ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಗೌರವಧನ ಮತ್ತು ಸಭಾ ಭತ್ಯೆ ಹೆಚ್ಚಳ.
12) ರೈತರ ಸಾಲದ ಮೊತ್ತ ಹೆಚ್ಚಳ: ಶೂನ್ಯ ಬಡ್ಡಿದರದ ಸಾಲದ ಒಟ್ಟು ಅನುದಾನವನ್ನು 28,000 ಕೋಟಿ ರೂ.ಗಳಿಂದ 30,000 ಕೋಟಿ ರೂ.ಗಳಿಗೆ ಹೆಚ್ಚಳ.
13) ಬಾಕಿ ಉಳಿದ ರೈತರ ಸಾಲ ಮನ್ನಾ: ತಾಂತ್ರಿಕ ಕಾರಣದಿಂದ ಸಾಲ ಮನ್ನಾದಿಂದ ವಂಚಿತರಾದ 50,000 ರೈತರಿಗಾಗಿ 232 ಕೋಟಿ ರೂ. ಬಿಡುಗಡೆ ಮಾಡಿ ಹೊಸ ಸಾಲ ಪಡೆಯಲು ಅವಕಾಶ ಕಲ್ಪಿಸುವುದು.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Budget 26:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





