Book Reading: ಮಾಯವಾಗುತ್ತಿದೆ ಪುಸ್ತಕ ಓದು

(Book Reading) ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಹಲವಾರು ಜನರಲ್ಲಿ ಈ ಅಭ್ಯಾಸ ಮರೆತೆ ಹೋಗಿದೆ. ಹಿಂದಿನ ದಿನಗಳಲ್ಲಾದರೆ ಪುಸ್ತಕಗಳು ಬದುಕಿನ ಅವಿಭಾಜ್ಯ ಅಂಗವಾಗಿತ್ತು. ದಿನ ಬೆಳಗಾದರೆ ದಿನಪತ್ರಿಕೆಗಳು ಬೆಳಗಿನ ಕಾರ್ಯಕ್ರಮದ ಸ್ವಾಗತ ಬಯಸುತ್ತಿದ್ದವು. ವಾರಕ್ಕೊಮ್ಮೆ ಬರುವ ವಾರಪತ್ರಿಕೆಗಳು, ತಿಂಗಳಿಗೊಮ್ಮೆ ಮಾಸ ಪತ್ರಿಕೆಗಳು, 15 ದಿನಗಳಿಗೆ ಬರುವ ಪಾಕ್ಷಿಕಗಳು ಎಲ್ಲರ ಮನ ರಂಜಿಸುತ್ತಿದ್ದವು. ಅಷ್ಟೇ ಅಲ್ಲದೆ ಮಕ್ಕಳಿಗಾಗಿ ಬರುತ್ತಿದ್ದ ಬಾಲ ಮಿತ್ರ ಬಾಲವನ, ಚಂದಮಾಮ, ಬಾಲಮಂಗಳ ಪತ್ರಿಕೆಗಳಿಂದ ಮಕ್ಕಳಿಗೆ ಹೆಚ್ಚಿನ ಜ್ಞಾನಗಳು ಹಾಗೂ ಚಟುವಟಿಕೆಗಳು ದೊರೆಯುತ್ತಿದ್ದವು. ಅಷ್ಟೇ ಅಲ್ಲದೆ ಭಾನುವಾರ ಬರುತ್ತಿದ್ದ ವಿಶೇಷ ಪುರವಾಣಿಗಳಲ್ಲಿ ಬಣ್ಣ ಹಚ್ಚುವುದಕ್ಕೆ, ಬಹುಮಾನ ಚುಕ್ಕಿಗಳು ಸೇರಿಸಿ ಚಿತ್ರ ರಚಿಸುವುದು ಇನ್ನಿತರ ಜ್ಞಾನ ವರ್ಧಕಗಳಿಂದ ಮಕ್ಕಳಲ್ಲಿ ಹೆಚ್ಚಿನ ಜ್ಞಾನ ಬೆಳೆಯುತ್ತಿದ್ದವು ಹಾಗೂ ಭಾಗವಹಿಸುವ ಚಟುವಟಿಕೆ ಬೆಳೆಯುತ್ತಿತ್ತು.


ಇದನ್ನೂ ಓದಿ: ವಿದ್ಯಾರ್ಥಿಗಳ ಬಸ್​ ಪಾಸ್​ ವಿತರಣೆ ಆರಂಭ; ದರ, ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ


ಹೀಗೆ ಬರುವ ಪತ್ರಿಕೆ ದಿನಪತ್ರಿಕೆಗಳಿಂದ ಹಾಗೂ ವಾರಪತ್ರಿಕೆಗಳಲ್ಲಿ ಬರುವ ಧಾರವಾಹಿಗಳನ್ನು ಓದುತ್ತಾ ಮನಸ್ಸು ಪ್ರಫುಲ್ಲಗೊಳಿಸುತ್ತಿದ್ದರು ಹಾಗೂ ಹೆಚ್ಚಿನ ವಿಷಯಗಳು ಮನೆಯಲ್ಲಿಯೇ ತಿಳಿದುಕೊಳ್ಳುತ್ತಿದ್ದರು. ಬೇರೆ ದೇಶದ ಊರಿನ ಸುದ್ದಿಗಳು ಕುಳಿತಲ್ಲಿಯೇ ತಿಳಿದುಕೊಳ್ಳುತ್ತಾ, ಪೌರಾಣಿಕ, ಸಾಮಾಜಿಕ, ಪತ್ತೆದಾರಿ ಕಾದಂಬರಿಗಳಿಂದ ಪ್ರತಿಯೊಂದು ಕಣ್ಣಿಗೆ ಕಟ್ಟುವಂತೆ ಓದಿ ಅನುಭವ ಪಡೆಯುತ್ತಿದ್ದರು. ಉದಾಹರಣೆಗೆ ಏರ್ಪೋರ್ಟಿಗೆ ಹೋಗದೆ ಅಲ್ಲಿನ ವಾತಾವರಣವೆಲ್ಲ ತಿಳಿದುಕೊಳ್ಳಬಹುದು. ಅಷ್ಟು ಚೆನ್ನಾಗಿ ಕಾದಂಬರಿಗಳಲ್ಲಿ ಕೆಲವು ವರ್ಣನೆಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿಗಳು ನೀಡುತ್ತಿದ್ದರು. ಹಾಗಾಗಿಯೇ ಪುಸ್ತಕಗಳನ್ನು ಜ್ಞಾನ ಕೋಶಗಳು, ವಿಶ್ವಕೋಶಗಳು ಎಂದು ಕರೆಯುವುದು ವಾಡಿಕೆ. ಎಲ್ಲ ಮಾಹಿತಿಯು ಸಮಗ್ರವಾಗಿ ನೀಡುವ ಶಕ್ತಿ ಇರುವುದು ಪುಸ್ತಕಗಳಿಗೆ ಮಾತ್ರ.


ಇದನ್ನೂ ಓದಿ: ಸರ್ಕಾರಿ ಬೆಂಬಲದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ; 15 ಲಕ್ಷ ರೂವರೆಗೆ ಸಾಲದ ಅವಕಾಶ


ದಿನವೆಲ್ಲಾ ದುಡಿದು ಬೇಸತ್ತ ಹೆಂಗಳೆಯರಿಗೆ ಕಿಂಚಿತ್ತು ಮನರಂಜನೆ ನೀಡುತ್ತಿದ್ದೆ ಈ ಪುಸ್ತಕಗಳು. ಇದರಲ್ಲಿ ಬರುವ ಪಾಕಶಾಸ್ತ್ರಗಳು, ಹೊಸ ನಮೂನೆಯ ರಂಗೋಲಿಗಳು, ದೈನಂದಿನ ಬದುಕಿನ ಬಗ್ಗೆ ಟಿಪ್ಸ್ ಗಳು, ನಕ್ಕು ನಗಿಸುವ ಹಾಸ್ಯ ಲೇಖನಗಳು, ಪ್ರವಾಸ ತಾಣಗಳ ಬಗ್ಗೆ ಮಾಹಿತಿ, ಅಷ್ಟೇ ಅಲ್ಲದೆ ಅವರ ನೆಚ್ಚಿನ ಕಥೆ ಕಾದಂಬರಿಗಳು ಇದರಿಂದ ಅವರ ಬಿಡುವು ಸಮಯ ಕಳೆದು ಬಿಡುತ್ತಿತ್ತು. ಜೊತೆಗೆ ಜ್ಞಾನಾರ್ಜನೆಗೆ ದಾರಿಯಾಗುತ್ತಿತ್ತು. ಇದರಲ್ಲಿ ಬರುವ ಕಥೆಗಳು ಮಕ್ಕಳಿಗೆ ಹೇಳಿ ಸಂತೋಷಪಡಿಸುತ್ತಿದ್ದರು. ಮಲಗುವಾಗ ಚಂದಮಾಮ ಪುಸ್ತಕದ ಕಥೆಗಳನ್ನು ಮಕ್ಕಳಿಗೆ ರಂಜನೆಯವಾಗಿ ಹೇಳಬಹುದಾಗಿತ್ತು. ಅಜ್ಜಿಗಳು ಹಾಗೂ ತಾಯಂದಿರು ಚಿಕ್ಕ ಮಕ್ಕಳಿಗೆ ಮಲಗಿಸುವಾಗ ಇದರಲ್ಲಿ ಬರುವ ಕಥೆಗಳು ಹೇಳಿ ಮಲಗಿಸುವ ವಾಡಿಕೆ ಇತ್ತು. ಇದರಿಂದ ಮಕ್ಕಳಲ್ಲಿ ಜ್ಞಾನಾರ್ಜನೆಗೆ ಅವಕಾಶವಾಗುತ್ತಿತ್ತು. ಮಕ್ಕಳು ಬೆಳೆಯುವ ಅಷ್ಟರಲ್ಲಿ ಹಲವಾರು ವಿಚಾರಗಳು ತಿಳಿದುಕೊಳ್ಳುತ್ತಿದ್ದರು. ಆದರೆ, ಇಂದು ಈ ಪರಂಪರೆ ನಶಿಸಿಹೋಗಿದೆ. ಮಕ್ಕಳಿಗೆ ಮಲಗಿಸುವಾಗ ಕಥೆಗಳು ಹೇಳುವವರೇ ಇಲ್ಲದಾಗಿದೆ. ಇಂದಿನ ಕುಟುಂಬಗಳಲ್ಲಿ ಅಜ್ಜಿ-ಅಜ್ಜ ಇರುವುದೇ ಇಲ್ಲ ಅಪ್ಪ-ಅಮ್ಮ ಆಫೀಸಿಗೆ ಹೋಗುವ ದಾವಂತದಲ್ಲಿ ಇವೆಲ್ಲ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಮಕ್ಕಳಿಗೆ ಇಷ್ಟೆಲ್ಲ ಸಮಯ ಕೊಡಲು ಅವರ ಬಳಿ ಸಮಯವೇ ಇರುವುದಿಲ್ಲ. ತಿಂದರೆ ಆಯ್ತು ಮಲಗಿದರಾಯ್ತು ಎನ್ನುವಾಗ ಈ ಕಥೆಗಳು ಹೇಳುವ ಪುರುಸೊತ್ತು ಇಲ್ಲದಾಗಿದೆ. ಅಷ್ಟೇ ಅಲ್ಲ ಪತ್ರಿಕೆ ಪುಸ್ತಕಗಳು ಕೊಳ್ಳುವ ಅಭ್ಯಾಸ ಕೂಡ ನಿಂತು ಹೋಗಿದೆ.


ಇದನ್ನೂ ಓದಿ: ಈ ರೀತಿಯ ಆಹಾರ ಪದ್ದತಿ ಅನುಸರಿಸಿದ್ರೆ ಮೂಳೆ ಸವೆತ ಪಕ್ಕಾ!; ಎಚ್ಚರ.. ಯಾವುದೇ ಕಾರಣಕ್ಕೂ ಹೀಗೆ ಮಾಡ್ಬೇಡಿ..


ಇಂದಿನ ಬಿಸಿ ಲೈಫ್ ನಲ್ಲಿ ಯಾರು ಪುಸ್ತಕಗಳು ಕೊಳ್ಳುವುದೇ ಇಲ್ಲ. ಇನ್ನು ದಿನಪತ್ರಿಕೆಗಳು ಕೊಳ್ಳುವವರಿಲ್ಲದೆ ಸೊರಗುತ್ತಿವೆ ಹಾಗೂ ವಾರಪತ್ರಿಕೆಗಳು ನಿಂತೇ ಹೋಗುತ್ತಿವೆ. ಹಿಂದೆ ಬರುತ್ತಿದ್ದ ಎಷ್ಟೊಂದು ವಾರಪತ್ರಿಕೆಗಳು ಈಗ ಚಾಲ್ತಿಯಲ್ಲಿ ಇಲ್ಲದಾಗಿದೆ. ಮಹಿಳೆಯರ ಮನಮೆಚ್ಚುವ ಮಂಗಳ ವಾರಪತ್ರಿಕೆ ಈಗ ನಿಂತೆ ಹೋಗಿದೆ. ಅದಕ್ಕೆ ಯಾಕೆ ಅಷ್ಟು ಖರ್ಚು ಮಾಡಬೇಕು ಈಗ ಎಲ್ಲ ಮೊಬೈಲ್ ನಲ್ಲೆ ಲಭ್ಯವಿದೆ ಎನ್ನುವ ಮನೋಭಾವ ಹೆಚ್ಚಿನ ಜನರಲ್ಲಿ ಇದೆ. ಈಗ ಮೊಬೈಲ್ ಯೇ ಜೀವನವಾಗಿದೆ.


ಇದನ್ನೂ ಓದಿ: ಷೇರು ಮಾರುಕಟ್ಟೆಯ ಈ ಬೇಸಿಕ್ ವಿಚಾರಗಳನ್ನು ಸಿಂಪಲ್ಲಾಗಿ ತಿಳಿಯಿರಿ!; ಕನ್ನಡದಲ್ಲಿ.. ನಿಮಗೆ ಅರ್ಥವಾಗುವ ರೀತಿ ಮಾಹಿತಿ!


ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರಲಾರರು. ಎಲ್ಲಾ ಸುದ್ದಿ ಸಮಾಚಾರ ಇದರಲ್ಲೇ ತಿಳಿಯುತ್ತದೆ ಎನ್ನುವ ಧೋರಣೆಯಿಂದ ಪುಸ್ತಕ, ಪತ್ರಿಕೆಗಳಿಂದ ದೂರ ಉಳಿದು ಬಿಟ್ಟಿದ್ದಾರೆ. ಹಾಗಾಗಿ ಇಂದಿನ ಮಕ್ಕಳಿಗೆ ಮಕ್ಕಳ ಪತ್ರಿಕೆಗಳ ಬಗ್ಗೆ ಅರಿವು ಇಲ್ಲವೇ ಇಲ್ಲ. ಹಿಂದೆ ಬರುತ್ತಿದ್ದ ಕಾರ್ಟೂನ್ ಪತ್ರಿಕೆಗಳು ಪರಿಚಯವೇ ಇಲ್ಲ. ಎಲ್ಲ ಮಕ್ಕಳು ಇಷ್ಟಪಟ್ಟು ಓದುತ್ತಿದ್ದ ಕಾರ್ಟೂನ್ ಚಿತ್ರಗಳ ಪುಸ್ತಕಗಳು ಇಂದಿನ ಮಕ್ಕಳಿಗೆ ಪರಿಚಯವೇ ಇಲ್ಲದಾಗಿದೆ. ಎಲ್ಲವೂ ಡಿಜಿಟಲ್ ಎನ್ನುವ ಮಂತ್ರವಾಗಿರುವುದರಿಂದ ಚಿಕ್ಕ ಮಕ್ಕಳ ಕೈಯಲ್ಲಿ ಕೂಡ ಮೊಬೈಲ್ ಇಂದು ರಾರಾಜಿಸುತ್ತಿದೆ. ಕೂತರು ಮೊಬೈಲ್, ನಿಂತರು ಮೊಬೈಲ್, ತಿನ್ನಲು ಮೊಬೈಲ್, ಮಲಗಲು ಮೊಬೈಲ್ ಬೇಕಾಗಿದೆ. ಕಥೆ ಹೇಳುವ ಅಜ್ಜಿಯು ಇಲ್ಲ, ಕಥೆ ಓದುವ ಪುಸ್ತಕಗಳು ಇಲ್ಲ, ಅಜ್ಜಿಗಳಿದ್ದರೂ ಸೀರಿಯಲ್ ಅಲ್ಲಿ ಬಿಸಿಯಾಗಿರುತ್ತಾರೆ. ಮಕ್ಕಳು ಬರಿ ಫೋನ್ ನಲ್ಲಿ ಬಿಸಿ ಆಗಿರುತ್ತಾರೆ. ಇಂತಹ ಜೀವನ ಶೈಲಿಯಲ್ಲಿ ಪುಸ್ತಕಗಳಿಗೆ ಉಳಿಗಾಲವಿಲ್ಲವಾಗಿದೆ.


ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಲ್ಲಿದೆ ಮಾಹಿತಿ


(Book Reading) ಹಿಂದಿನ ದಿನಗಳಲ್ಲಿ ವಾರ ಅಂತ್ಯದಲ್ಲಿ ದೇವಸ್ಥಾನಕ್ಕೂ ಲೈಬ್ರರಿಗೋ ಹೋಗುತ್ತಿದ್ದರು. ಇಂದಿನ ಮಕ್ಕಳಿಗೆ ಗ್ರಂಥಾಲಯಗಳಿಗೆ ಹೋಗುವ ಅಭ್ಯಾಸವೇ ಇರುವುದಿಲ್ಲ. ಎಷ್ಟೋ ಮಕ್ಕಳು ಅದರ ಒಳಗೆ ಕಾಲು ಇಟ್ಟಿರುವ ಪ್ರಮಯವೇ ಬಂದಿರುವುದಿಲ್ಲ. ಪರಿಚಯವೇ ಇಲ್ಲದಾಗಿದೆ. ಇಂತಹ ಸ್ಥಿತಿಯಲ್ಲಿ ಪುಸ್ತಕಗಳು ಹೇಗೆ ತಾನೆ ಉಳಿಗಾಲ ಇರುವುದು. ಇದರ ಬಗ್ಗೆ ತಾಯಂದಿರು ಆಸಕ್ತಿ ವಹಿಸಿ ಆಗಾಗ ಪುಸ್ತಕಗಳು ಓದಲು ತರಬೇಕು. ವಾರ ಪತ್ರಿಕೆಗಳು, ದಿನಪತ್ರಿಕೆಗಳು ಮನೆಯಲ್ಲಿ ತರಿಸುತ್ತಿದ್ದರೆ ಇದರ ಬಗ್ಗೆ ಪರಿಚಯ ಉಂಟಾಗುತ್ತದೆ ಹಾಗೂ ಓದುವ ಅಭ್ಯಾಸ ಕೂಡ ತಂತಾನೆ ಬೆಳೆಯುತ್ತದೆ.


ಇದನ್ನೂ ಓದಿ: ವಿಶೇಷಚೇತನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; 10 ರಿಂದ 50 ಸಾವಿರದ ವರೆಗೆ ಪಡೆಯಬಹುದು ವಿದ್ಯಾರ್ಥಿ ವೇತನ


ಮನೆಯಲ್ಲಿ ಹಿರಿಯರು ದಿನನಿತ್ಯ ಪುಸ್ತಕ ಪತ್ರಿಕೆ ಓದುತ್ತಿದ್ದರೆ ಮಕ್ಕಳು ನೋಡಿ ಅದನ್ನು ಅನುಸರಿಸುತ್ತಾರೆ. ದೊಡ್ಡವರೇ ಸದಾ ಕಾಲ ಮೊಬೈಲ್ ನಲ್ಲಿ ಮುಳುಗಿ ಹೋದರೆ ಮಕ್ಕಳು ಹೇಗೆ ತಾನೇ ಆ ಅಭ್ಯಾಸ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಪುಸ್ತಕ ಸಂಸ್ಕೃತಿ ಬೆಳೆಸುವ ಹಾಗೂ ನಮ್ಮ ಪರಂಪರೆ ಉಳಿಸುವ ಜವಾಬ್ದಾರಿ ಹೆಣ್ಣು ಮಕ್ಕಳ ಹೆಗಲ ಮೇಲಿದೆ. ನಮ್ಮ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತ ಭಾಗವತ ಪುರಾಣಗಳು ಸದಾ ಕಾಲ ಮನೆಯಲ್ಲಿ ಇರಿಸಿಕೊಂಡು ಆಗಾಗ ಪಾರಾಯಣ ಮಾಡಿಸುತ್ತಿದ್ದರೆ ಸನಾತನ ಪರಂಪರೆಗಳು ತಿಳಿಯುತ್ತವೆ. ಹಾಗೂ ಪ್ರತಿಯೊಂದು ವಿಚಾರಗಳು ಮಕ್ಕಳಲ್ಲಿ ಬೆರೆತು ಹೋಗುತ್ತವೆ. ಹಾಗಾಗಿ ಓದುವ ಹವ್ಯಾಸ ಬೆಳೆಸುವ ಜವಾಬ್ದಾರಿ ತಾಯಂದಿರ ಹೆಗಲ ಮೇಲಿದೆ. ಮೊದಲೇ ಗಾದೆ ಹೇಳಿರುವಂತೆ ಮನೆ ಮೊದಲ ಪಾಠಶಾಲೆ ತಾಯಿತಾನೆ ಮೊದಲು ಗುರು ಎನ್ನುವಂತೆ ತಾಯಿ ಪ್ರತಿಯೊಂದನ್ನು ಮಕ್ಕಳಲ್ಲಿ ತುಂಬುತ್ತಾ ಹೋದರೆ ಮುಂದೆ ಅವರು ಅದನ್ನೇ ಪರಿಪಾಲನೆ ಮಾಡುತ್ತಾ ಹೋಗುತ್ತಾರೆ. ಹಾಗಾಗಿ ಈ ಸಂಸ್ಕೃತಿ ಬೆಳೆಸುವ ಹೊಣೆಗಾರಿಕೆ ಹೊತ್ತು ನಿಭಾಯಿಸಬೇಕಾಗುತ್ತದೆ.- ಎಸ್ ಪೂರ್ಣಿಮಾ ಬಾಬು, ಶಿರಾ


ಇದನ್ನೂ ಓದಿ: ಈ ರೋಗ ಲಕ್ಷಣಗಳಿದ್ರೆ ನಿಮಗೆ ಮಂಗ ಬಾವು ಖಾಯಿಲೆ ಇದೆ ಎಂದರ್ಥ!; ಏನಿದು ಮಂಗ ಬಾವು ಖಾಯಿಲೆ.. ಪರಿಣಾಮ ಏನು? ಚಿಕಿತ್ಸೆ ಹೇಗೆ..?


Book Reading: ಮಾಯವಾಗುತ್ತಿದೆ ಪುಸ್ತಕ ಓದು
Book Reading: ಮಾಯವಾಗುತ್ತಿದೆ ಪುಸ್ತಕ ಓದು