Student Bus Pass: ವಿದ್ಯಾರ್ಥಿ ಬಸ್​ ಪಾಸ್​ ವಿತರಣೆ ಆರಂಭ

(Student Bus Pass) 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿ ಬಸ್ ಪಾಸ್ ನೀಡುವುದಾಗಿ ಪ್ರಕಟಣೆ ಹೊರಡಿಸಿದೆ. ಹಾಗಾದರೆ ಈ ಬಾರಿಯ ಬಸ್ ಪಾಸ್ ದರ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: ಈ ರೈತರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 10 ಸಾವಿರ; ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು? ಇಲ್ಲಿದೆ ಡಿಟೈಲ್ಸ್


ಪಾಸ್ ದರ ಪಟ್ಟಿ:

  • ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪಾಸ್ ದರ- 150 ರೂ.
  • ಪ್ರೌಢ ಶಾಲಾ ವಿದ್ಯಾರ್ಥಿಗಳ ಪಾಸ್ ದರ- 750 ರೂ.
  • ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪಾಸ್ ದರ- 150 ರೂ.
  • ಪ್ರೌಢ ಶಾಲಾ ವಿದ್ಯಾರ್ಥಿನಿಯರ (ಗಡಿ ಭಾಗದ ಆಚೆಗೆ)- 150 ರೂ.
  • ಕಾಲೇಜು- ಡಿಪ್ಲೊಮಾ ವಿದ್ಯಾರ್ಥಿಗಳ ಪಾಸ್ ದರ- 1050 ರೂ.
  • ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪಾಸ್ ದರ- 150 ರೂ.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮ ಜಾರಿ


  • ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳ ಪಾಸ್ ದರ (12 ತಿಂಗಳ ಅವಧಿ)- 1310 ರೂ.
  • ಐಟಿಐ, ಡಿಪ್ಲೊಮಾ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪಾಸ್ ದರ- 160 ರೂ.
  • ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಪಾಸ್ ದರ- 1550 ರೂ.
  • ವೃತ್ತಿಪರ ಕೋರ್ಸ್ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪಾಸ್ ದರ- 150 ರೂ.
  • ಸಂಜೆ ಕಾಲೇಜು ವಿದ್ಯಾರ್ಥಿಗಳ ಪಾಸ್ ದರ- 1350 ರೂ.
  • ಸಂಜೆ ಕಾಲೇಜು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪಾಸ್ ದರ- 150 ರೂ.

ಇದನ್ನೂ ಓದಿ: ರೈತರೇ ನಿಮ್ಮ ಪಶುಗಳಿಗೆ ತುರ್ತು ಚಿಕಿತ್ಸೆ ಬೇಕೆ?; ಜಾನುವಾರುಗಳ ತುರ್ತು ಚಿಕಿತ್ಸೆಗೆ ಆಂಬ್ಯುಲೆನ್ಸ್ ವ್ಯವಸ್ಥೆ!; ಹಾಗಾದ್ರೆ ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ


ಅರ್ಜಿ ಸಲ್ಲಿಸುವ ವಿಧಾನ ಹೇಗೆ?:

  • ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮುಖೇನ ಅರ್ಜಿಯನ್ನು ಸಲ್ಲಿಸಬೇಕು.
    ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in/buspassservices
  • ವಿದ್ಯಾರ್ಥಿಗಳು ಮೇ 31 ರಿಂದ ಸೇವಾಸಿಂಧು ಪೋರ್ಟಲ್‌ನಲ್ಲಿ ಬಸ್ ಪಾಸ್‌ಗಾಗಿ ಅರ್ಜಿಗಳನ್ನು ಸಲ್ಲಿಸಬಹು. ಆನ್​ ಲೈನ್ ಪೋರ್ಟಲ್​ ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
  • ಇದಲ್ಲದೆ, ವಿದ್ಯಾರ್ಥಿಗಳು, ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ. ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದಂತೆ 30 ರೂ. ಸೇವಾ ಶುಲ್ಕವನ್ನು ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಪಡೆಯುತ್ತಾರೆ.
  • ವಿದ್ಯಾರ್ಥಿಗಳು ವಿದ್ಯಾರ್ಥಿ ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸಲು Declaration Forme ನ್ನು ಸೇವಾಸಿಂಧು ತಂತ್ರಾಂಶದಲ್ಲಿ ಅಥವಾ ಕರಾರಸಾ ನಿಗಮದ ವೆಬ್​​ ವೆಬ್ ಸೈಟ್ ನಲ್ಲಿ (https://ksrtc.karnataka.gov.in/studentpass) ಡೌನ್​ ಲೋಡ್​​ ಮಾಡಿಕೊಳ್ಳಬೇಕು ಹಾಗೂ ಅದನ್ನು ಅರ್ಜಿ ಸಲ್ಲಿಸುವಾಗ Submit ಮಾಡಬೇಕು.

ಇದನ್ನೂ ಓದಿ: ಕಾರ್ಮಿಕರ ಗಮನಕ್ಕೆ; ಕಾರ್ಮಿಕರ ಸಮಸ್ಯೆಗೆ ಇಂಡಿಯಾ ಲೇಬರ್ ಲೈನ್ ಪರಿಹಾರ; ಏನಿದು? ಇಲ್ಲಿದೆ ನೋಡಿ


  • ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್‌ ನ ಹೆಸರು / ವಿಳಾಸ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮುಖೇನ ಕಳುಹಿಸಲಾಗುತ್ತದೆ. ವಿದ್ಯಾರ್ಥಿ ಪಾಸುಗಳನ್ನು ಜೂ. 01 ರಿಂದ ನಿಗದಿತ ಪಾಸ್ ಕೌಂಟರ್​ ಗಳಲ್ಲಿ ವಿತರಿಸಲಾಗುತ್ತದೆ.
  • ತದನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್ಗೆಗೆ ತೆರಳಿ, ನಿಗದಿತ ಪಾಸಿನ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / UPI ಮುಖೇನ ಪಾವತಿಸಿ ಪಾಸನ್ನು ಪಡೆಯಬಹುದು.
  • ಸರ್ಕಾರವು ಕರ್ನಾಟಕ ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಅಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿದೆ. ನೆರೆರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು, ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಪಡೆಯಬಹುದು. ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ಗಡಿಭಾಗದ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಬಹುದು.
  • ಕರಾರಸಾನಿಗಮ ವ್ಯಾಪ್ತಿಯ 129 ಪಾಸ್ ವಿತರಣಾ ಕೌಂಟರ್​ ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್‌ ಸೈಟ್ ನಲ್ಲಿ ಒದಗಿಸಲಾಗಿದೆ. ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಿ ನೋಡಬಹುದಾಗಿದೆ.

https://ksrtc.karnataka.gov.in

Student Bus Pass: ವಿದ್ಯಾರ್ಥಿ ಬಸ್​ ಪಾಸ್​ ವಿತರಣೆ ಆರಂಭ
Student Bus Pass: ವಿದ್ಯಾರ್ಥಿ ಬಸ್​ ಪಾಸ್​ ವಿತರಣೆ ಆರಂಭ

ಇದನ್ನೂ ಓದಿ: ಬೆಳೆ ವಿಮೆ ಬಗ್ಗೆ ರಾಜ್ಯದ ರೈತರಿಗೆ ಬಿಗ್ ಅಪ್ ಡೇಟ್; ಈ ಕೆಲಸ ಮಾಡಲು ಸರ್ಕಾರ ಸೂಚನೆ..!


ಇತ್ತೀಚಿನ ಜನಪ್ರಿಯ ಸುದ್ದಿಗಳು

    1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    2. ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6.  ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    7. ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
    8. ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
    9. ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್;  ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
    10. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    11. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್