(Share Market kannada) ಬೇಸಿಕ್ಸ್ ಆ ಶೇರ್ ಮಾರ್ಕೆಟ್ – ಟೆಕ್ನಿಕಲ್ ಅನಾಲಿಸಿಸ್
ಮಾರ್ಕೆಟ್ ಟ್ರೆಂಡ್ ಗುರುತಿಸುವುದು ಹೇಗೆ ?
ಶೇರ್ ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಅಥವಾ ಇನ್ವೆಸ್ಟ್ಮೆಂಟ್ ಮಾಡುವುದು ಒಂದು ರೀತಿಯಲ್ಲಿ ಕಾರು ಡ್ರೈವ್ ಮಾಡುವ ಹಾಗೆಯೆ ಎನ್ನಬಹುದು. ಆಶ್ಚರ್ಯ ಎನಿಸಿದರೂ ಸಹ ಇದು ಸತ್ಯ. ಉದಾಹರಣೆ ನಾವು ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಯಾವ ರೀತಿಯ ರಸ್ತೆ ಸಿಗುತ್ತವೆ ..? ಸಿಗುವುದು ಕೇವಲ ಮೂರು ತರಹದ ರಸ್ತೆಗಳು, ಅವುಗಳೆಂದರೆ ಅಪ್ ಹಿಲ್ ಅಥವಾ ಏರು ಮುಖದ ರಸ್ತೆ, ಸಮತಟ್ಟಾದ ರಸ್ತೆ, ಮತ್ತು ಇಳಿಜಾರು ರಸ್ತೆ. ಇದೆ ರೀತಿ ಷೇರು ಮಾರುಕಟ್ಟೆಯ ಟ್ರೆಂಡ್ ಅನ್ನು ಮೂರು ವಿಧಗಳಲ್ಲಿ ಗುರುತಿಸಲಾಗುತ್ತದೆ. ಅವುಗಳೆಂದರೆ ಅಪ್ ಟ್ರೆಂಡ್ (Up Trend), ಸೈಡ್ ವೇಸ್ ಟ್ರೆಂಡ್(Sideways Trend), ಮತ್ತು ಡೌನ್ ಟ್ರೆಂಡ್(Down Trend).
ಇದನ್ನೂ ಓದಿ: ಈ ರೈತರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 10 ಸಾವಿರ; ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು? ಇಲ್ಲಿದೆ ಡಿಟೈಲ್ಸ್
ಡೌ ಥಿಯರಿ (Dow Theory) ಸಹಾಯದಿಂದ ಮೊದಲೇ ಟ್ರೆಂಡ್ ಗುರುತಿಸುವುದು ಹೇಗೆ ?
ಮಾರ್ಕೆಟ್ ಯಾವಾಗಲೂ ಒಂದೇ ಟ್ರೆಂಡ್ ನಲ್ಲಿ ಸಾಗುವುದಿಲ್ಲ. ಪ್ರತಿ ನಿಮಿಷ, ಘಂಟೆ,ದಿನಗಳ ಲೆಕ್ಕದಲ್ಲಿ ಒಂದು ಟ್ರೆಂಡ್ ಇಂದ ಇನ್ನೊಂದ್ ಟ್ರೆಂಡ್ ಕಡೆಗೆ ಸಾಗುತ್ತಲೇ ಇರುತ್ತದೆ. ಉದಾಹರಣೆಗೆ ಬೆಳಿಗ್ಗೆ ಅಪ್ ಟ್ರೆಂಡ್ ಇರುವ ಷೇರು/ ಮಾರ್ಕೆಟ್ ಮದ್ಯಾನ್ಹದ ಹೊತ್ತಿಗೆ ಸೈಡ್ ವೇಸ್ ಆಗಬಹುದು, ಮತ್ತೆ ಅಪ್ ಟ್ರೆಂಡ್ ಆಗಬಹುದು, ಡೌನ್ ಟ್ರೆಂಡ್ ಇಂದ ಅಪ್ ಟ್ರೆಂಡ್ ಅಥವಾ ಸೈಡ್ ವೇಸ್ ಏನು ಬೇಕಾದರೂ ಆಗಬಹುದು, ಮಾರ್ಕೆಟ್ ಡೇಟಾ ತುಂಬಾ ಡೈನಾಮಿಕ್ ಆಗಿರುವುದರಿಂದ ಯಾವುದೇ ಟ್ರೆಂಡ್ ಸಹ ನಿರ್ದಿಷ್ಟವಾಗಿರುವುದಿಲ್ಲ. ಹಾಗಾದರೆ ಬದಲಾಗುತ್ತಿರುವ ಟ್ರೆಂಡ್ ಅನ್ನು ಗುರುತಿಸುವುದು ಹೇಗೆ, ಈಗ ನಡೆಯುತ್ತಿರುವ ಟ್ರೆಂಡ್ ಯಾವುದು ಎಂಬುದನ್ನು Dow Theory ಸಹಾಯದಿಂದ ಕಂಡುಕೊಳ್ಳಬಹುದು. ಒಂದು ಟ್ರೆಂಡ್ ಯಾವಯಾವ ಟ್ರೆಂಡ್ ಹೇಗೆ ಚಲಿಸುತ್ತವೆ ಎಂಬುದನ್ನು ಕೆಳಗಿನ ಚಾರ್ಟ್ ನಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮ ಜಾರಿ

Dow Theory (ಡೌ ಥಿಯೋರಿ) :
ಡೌ ಥಿಯೋರಿಯನ್ನು ಅಮೇರಿಕಾದ ಡೌ ಜೋನ್ಸ್ ನಲಿ ಸಂಸ್ಥಾಪಕನಾದ ಚಾರ್ಲ್ಸ್ ಡೌ ಎಂಬಾತನು ಕ್ಯಾಂಡಲ್ ಸ್ಟಿಕ್ ಬರುವ ಮುನ್ನವೇ 1900ರ ಇಸವಿಯ ಸುಮಾರಿಗೆ ಅಭಿವೃದ್ಧಿಗೊಳಿಸಿ ಟೆಕ್ನಿಕಲ್ ಅನಾಲಿಸಿಸ್ ನ ಪ್ರಮುಖ ಅಂಗವಾಗಿಸಿದನು. ಚಾರ್ಲ್ಸ್ ಡೌ 27 ವರ್ಷಗಳಿಂದ ಅಭಿವೃದ್ಧಿಗೊಳಿಸಿದ್ದ ಒಂಬತ್ತು ಟೆನೆಟ್ ಗಳನ್ನೂ ವಿಲಿಯಂ ಹ್ಯಾಮಿಲ್ಟನ್ ಎಂಬಾತನು ಪರಿಶೀಲಿಸಿ ಉದಾಹರಣೆಗಳ ಸಮೇತವಾಗಿ ಸಮಗ್ರ ಥಿಯೋರಿ ಒಂದನ್ನು ಸಿದ್ಧಪಡಿಸಿದನು. ಇಂದಿಗೂ ಸಹ ಷೇರು ಮಾರುಕಟ್ಟೆಯ ದೊಡ್ಡ ದೊಡ್ಡ ಟ್ರೇಡರ್ಸ್ ಹಾಗು ಇನ್ವೆಸ್ಟರ್ಸ್ ಮಾರುಕಟ್ಟೆ ಅಭ್ಯಾಸ ಮಾಡುವಾಗ ಡೌ ಥಿಯೋರಿಯನ್ನು ಬಳಸುತ್ತಾರೆ. ಡೌ ಥಿಯೋರಿಯು ತುಂಬಾ ಬೇಸಿಕ್ ಅನಿಸಿದರೂ ಸಹಿತ ಮಾರ್ಕೆಟ್ ಟ್ರೆಂಡ್ ಅರ್ಥ ಮಾಡಿಕೊಳ್ಳಲು ಅತ್ಯವಶ್ಯವಾಗಿದೆ.
ಡೌ ಥಿಯೋರಿ (Dow Theory ) ಹಾಗೂ ಷೇರ್ ಮಾರ್ಕೆಟ್ ನ ಇನ್ನಿತರ ಟೂಲ್ ಮತ್ತು ಇಂಡಿಕೇಟರ್ ಗಳನ್ನು ಬಳಸಿ ಟ್ರೇಡ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಆಸಕ್ತಿ ಇದೆಯೇ ? ಆಸಕ್ತಿ ಇರುವವರು ಈ ಕೆಳಗಿನ ಪೋಲ್ ನಲ್ಲಿ ಉತ್ತರ ನೀಡಿ.
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
- ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
- ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
- ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್; ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್






