Bone Erosion: ಈ ರೀತಿ ಆಹಾರ ಸೇವಿಸಿದ್ರೆ ಮೂಳೆ ಸವೆತ ಕಟ್ಟಿಟ್ಟ ಬುತ್ತಿ!

(Bone Erosion) ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ವಿಷಯವೆಂದರೆ ಮನುಷ್ಯರಲ್ಲಿ ಮೂಳೆ ಸವೆತ (bone erosion). ಪ್ರತಿಯೊಬ್ಬ ವ್ಯಕ್ತಿಯು ಮೂಳೆಗಳ ಸವೆತದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಸರಿಯಾಗಿ ಇಲ್ಲದ ಆಹಾರ ಪದ್ದತಿ ಹಾಗೂ ಅವಸರಕ್ಕೆ ಆಹಾರ ತಿಂದು ಮುಗಿಸುವುದು. ಇದರಿಂದ ದೇಹಕ್ಕೆ ಬೇಕಾದ ಪ್ರೋಟಿನ್ಸ್ ಗಳು ಕ್ಯಾಲ್ಸಿಯಂ ಗಳ ಕೊರತೆ ಉಂಟಾಗುತ್ತದೆ. ಇದರಿಂದ ಮೂಳೆಗಳ ಸವೆತ ಉಂಟಾಗುತ್ತದೆ. ಅಲ್ಲದೆ ಇದು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ.


ಇದನ್ನೂ ಓದಿ: ಈ ರೈತರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 10 ಸಾವಿರ; ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು? ಇಲ್ಲಿದೆ ಡಿಟೈಲ್ಸ್


ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವೆತದಲ್ಲಿ ಎಲುಬಿನ ಶಕ್ತಿ ಕಡಿಮೆ ಇರುತ್ತದೆ. ಅಲ್ಲದೆ ಎಲುಬಿನ ಮಾಸ್ಕ್ ಕಡಿಮೆ ಇರುತ್ತದೆ. ಎಲುಬಿನ ಸವಕಳಿಯಿಂದಾಗಿ ಬೆನ್ನುಹುರಿ ಮತ್ತು ಮೊಣಕೈ ಎಲುಬುಗಳು ಮುರಿತಕ್ಕೆ ಒಳಗಾಗುವ ರಿಸ್ಕ್ ಅಧಿಕವಾಗುತ್ತವೆ. ಮೂಳೆಗಳು ಹೀರಿಕೆ ಬಹಳ ವೇಗದಲ್ಲಿ ಉಂಟಾಗುವುದರಿಂದ ಎಲುಬು ಸವೆತ ಉಂಟಾಗುತ್ತದೆ. ಇದರಲ್ಲಿ ಗಂಡಾಂತರದ ವಿಷಯವೆಂದರೆ ತೆಳ್ಳಗಿರುವವರು ಮತ್ತು ತೆಳ್ಳನೆಯ ಮೂಳೆಗಳನ್ನು ಹೊಂದಿರುವ ಮಹಿಳೆಯರಲ್ಲಿ ಮೂಳೆ ಸವೆತದ ತೊಂದರೆ ಹೆಚ್ಚಾಗಿರುತ್ತದೆ.

ಅಲ್ಲದೆ ಪೋಷಕರು ಮೂಳೆ ಸವೆತಕ್ಕೆ ಒಳಗಾಗಿದ್ದರೂ ಸಹ ಮೂಳೆಗಳ ಸವಕಳಿ ಉಂಟಾಗುತ್ತದೆ ಎನ್ನಲಾಗಿದೆ. ಇದನ್ನು ತಡೆಗಟ್ಟಬೇಕಾದರೆ ಪ್ರತಿ ದಿನ ಒಳ್ಳೆಯ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಬೇಕು. ದೀರ್ಘ ಕಾಲ ಸ್ಟೀರಾಯ್ಡ ಗಳನ್ನು ಸೇವಿಸಬಾರದು. ಜೀವನ ಶೈಲಿ ಬದಲಾಯಿಸಿ ಪ್ರತಿ ದಿನ ಕ್ರಮವಾಗಿ ವ್ಯಾಯಾಮವನ್ನು ಮಾಡುವುದರಿಂದ ಮೂಳೆಗಳು ಬಲಗೊಳ್ಳುವುದರ ಜೊತೆಗೆ ಮೂಳೆಗಳಲ್ಲಿ ಮಾಸ್ಕ್ ಹೆಚ್ಚಾಗುತ್ತದೆ.


ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮ ಜಾರಿ


ಧೂಮಪಾನ ಹಾಗೂ ಮಧ್ಯಪಾನಗಳಿಂದಲೂ ಮೂಳೆಗಳ ಸವೆತ ಉಂಟಾಗುತ್ತದೆ. ಇದನ್ನು ತಡೆಗಟ್ಟಬೇಕಾದರೆ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಪಧಾರ್ಥಗಳನ್ನು ಬಳಸಬೇಕು. ಅದರಲ್ಲೂ ಬಸಿರಿ ಮತ್ತು ಬಾಣಂತಿಯರಿಗೆ ಹೆಚ್ಚಿನ ಕ್ಯಾಲ್ಸಿಯಂ ಬೇಕಾಗುತ್ತದೆ. ಒಣ ಹಣ್ಣುಗಳಲ್ಲಿ ಹೆಚ್ಚಾಗಿ ಕ್ಸಾಲ್ಸಿಯಂ ಇರಲಿದ್ದು, ಒಣ ದ್ರಾಕ್ಷಿ, ಗೋಡಂಬಿ, ಖರ್ಜೂರಗಳಲ್ಲಿ ಹೆಚ್ಚಾಗಿ ಈ ಕ್ಯಾಲಿಸಿಯಂ ಇರುತ್ತದೆ. ಜೊತೆಗೆ ಮೀನು ಹಾಗೂ ರಾಗಿಯಲ್ಲೂ ಹೆಚ್ಚು ಕ್ಯಾಲ್ಸಿಯಂ ದೊರೆಯುತ್ತದೆ.

Bone Erosion: ಈ ರೀತಿ ಆಹಾರ ಸೇವಿಸಿದ್ರೆ ಮೂಳೆ ಸವೆತ ಕಟ್ಟಿಟ್ಟ ಬುತ್ತಿ!
Bone Erosion: ಈ ರೀತಿ ಆಹಾರ ಸೇವಿಸಿದ್ರೆ ಮೂಳೆ ಸವೆತ ಕಟ್ಟಿಟ್ಟ ಬುತ್ತಿ!

ಇದನ್ನೂ ಓದಿ: ರೈತರೇ ನಿಮ್ಮ ಪಶುಗಳಿಗೆ ತುರ್ತು ಚಿಕಿತ್ಸೆ ಬೇಕೆ?; ಜಾನುವಾರುಗಳ ತುರ್ತು ಚಿಕಿತ್ಸೆಗೆ ಆಂಬ್ಯುಲೆನ್ಸ್ ವ್ಯವಸ್ಥೆ!; ಹಾಗಾದ್ರೆ ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ


ಇನ್ನು ದೇಹಕ್ಕೆ ಬೇಕಾದ ವಿಟಮಿನ್ ಕೂಡ ಅತ್ಯಗತ್ಯವಾಗಿದೆ. ಸೂರ್ಯನ ಬೆಳಕಿನಿಂದ ವಿಟಮಿನ್ ದೊರೆಯುತ್ತದೆ. ವೈದ್ಯರ ಸಲಹೆ ಪಡೆದು ಮೆಡಿಸನ್ ತೆಗೆದುಕೊಳ್ಳಬೇಕಾಗುತ್ತದೆ. ದೀರ್ಘ ಕಾಲ ಔಷಧಗಳ ಸೇವಿಸುವುದರಿಂದೂ ಮೂಳೆ ಸವೆತ ಉಂಟಾಗುತ್ತದೆ. ಅಲ್ಯುಮಿನಿಯಂ ಹೊಂದಿರುವ ಆ್ಯಂಟಾಸಿಡ್ಸ್ ಗಳನ್ನು ಅತಿ ಹೆಚ್ಚಾಗಿ ಸೇವಿಸಿದಾಗ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಅಡಚಣೆ ಉಂಟಾಗಿ ಎಲುಬು ಸವೆತ ಉಂಟಾಗುತ್ತದೆ.


ಇದನ್ನೂ ಓದಿ: ಕಾರ್ಮಿಕರ ಗಮನಕ್ಕೆ; ಕಾರ್ಮಿಕರ ಸಮಸ್ಯೆಗೆ ಇಂಡಿಯಾ ಲೇಬರ್ ಲೈನ್ ಪರಿಹಾರ; ಏನಿದು? ಇಲ್ಲಿದೆ ನೋಡಿ


ರೋಗದ ಕೆಲವು ಲಕ್ಷಣಗಳೆಂದರೆ:
ಆಸ್ಟಿಯೊಪೊರೋಸಿಸ್ “ಮೌನ ರೋಗ” ಎನ್ನುತ್ತಾರೆ. ರೋಗದ ಲಕ್ಷಣ ಮನುಷ್ಯರಲ್ಲಿ ಕಾಣಬರುವುದಿಲ್ಲ. ಸುಲಭವಾಗಿ ಉಂಟಾಗುವ ಮೂಳೆ ನೋವು ಶುರುವಾದಾಗ ಸವೆತದ ತೊಂದರೆ ಗೊತ್ತಾಗುತ್ತದೆ. ಈ ರೋಗವನ್ನು ಎಕ್ಸರೆ ಮೂಲಕ ಕಂಡು ಹಿಡಿಯಬಹುದು. ಈ ವಿಧಾನವನ್ನು ಡೆನ್ಸಿ ಟೋಮೀಟ್ರಿ ಎಂದು ಕರೆಯುತ್ತಾರೆ. ಈ ಅಳತೆಗಳನ್ನು “ಬೋನ್ ಮಿನರಲ್ ಡೆನ್ಸಿಟಿ ಎ೦ದು ಕರೆಯುತ್ತಾರೆ. ಇದು ನೋವಿಲ್ಲದ ವಿಧಾನವಾಗಿದೆ. ಇದರಿಂದ ನಾವು ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಾಲ್ಸಿಯಂ ಮತ್ತು ವಿಟಮಿನ್ ಇರುವ ಸೇವನೆ ಮಾಡುವುದರಿಂದ ಮೂಳೆಗಳು ಗಟ್ಟಿಯಾಗುವುದರ ಜೊತೆಗೆ ಹೃದಯ ಸ್ನಾಯುಗಳು ಮತ್ತು ನರಗಳು ಸುಲಭವಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ ವ್ಯಾಯಾಮವು ಅನೇಕ ರೋಗಗಳನ್ನು ದೂರ ಮಾಡುತ್ತದೆ.


ಇದನ್ನೂ ಓದಿ: ಬೆಳೆ ವಿಮೆ ಬಗ್ಗೆ ರಾಜ್ಯದ ರೈತರಿಗೆ ಬಿಗ್ ಅಪ್ ಡೇಟ್; ಈ ಕೆಲಸ ಮಾಡಲು ಸರ್ಕಾರ ಸೂಚನೆ..!


ಆದ್ದರಿಂದ ಉತ್ತಮವಾದ ಆಹಾರ ವ್ಯಾಯಾಮಗಳನ್ನು ಮಾಡುವುದರಿಂದ ದೇಹವು ಚೆನ್ನಾಗಿರುತ್ತದೆ. ನಿತ್ಯ ಆಹಾರದಲ್ಲಿ ಹಸಿರು ತರಕಾರಿಯ ಜೊತೆಗೆ ಕನಿಷ್ಟ 3 ಲೀಟರ್ ಶುದ್ಧವಾದ ನೀರು, ತಾಜಾ ಹಣ್ಣುಗಳು ಬಿಟ್ಟು ಒಂದೇ ಬಾರಿಗೆ 4- 5 ಕಾಯಿಲೆಗಳ ಔಷಧಿ ತೆಗೆದುಕೊಳ್ಳಬಾರದು. ಸಂಧಿವಾತ ರೋಗಿಗಳು ಹೀರೆಕಾಯಿ, ಕ್ಯಾರೆಟ್, ಪಡುವಲಕಾಯಿ, ಮೂಲಂಗಿ, ಹಾಗಲಕಾಯಿ, ನುಗ್ಗೆಕಾಯಿ ಮೊದಲಾದವನ್ನು ಸೇವಿಸಬೇಕು. ಅಲ್ಲದೆ ಬೆಂಡೆಕಾಯಿ, ಹಲಸಿನ ಹಣ್ಣು, ಕುಂಬಳಕಾಯಿ, ಟೊಮೊಟೊ, ಆಲೂಗಡ್ಡೆ, ನೀಲಿ ದ್ರಾಕ್ಷಿ, ಬದನೇಕಾಯಿಗಳನ್ನು ಸೇವಿಸಬಾರದು. – ಕೆ. ಆರ್ ಲಕ್ಷ್ಮಿ ಶಾಮರಾವ್, ಲೇಖಕರು, ಕಾವ್ಯಶ್ರೀ ಪುರಸ್ಕೃತರು, ಕಾಳಿದಾಸನಗರ, ಚಿಕ್ಕಮಗಳೂರು

ಇತ್ತೀಚಿನ ಜನಪ್ರಿಯ ಸುದ್ದಿಗಳು

    1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    2. ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6.  ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    7. ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
    8. ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
    9. ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್;  ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
    10. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    11. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್