Bhat‘n’ Bhat: ಈಗಿನ ಡಿಜಿಟಲ್ ಪ್ರಪಂಚದಲ್ಲಿ ಇನ್‍ಸ್ಟಾಗ್ರಾಂ ರೀಲ್ಸ್(Instagram Reels), ಫೆಸ್ಬುಕ್ ಲೈವ್(FaceBook Live) ಯೂಟ್ಯೂಬ್ ಚಾನಲ್ (Youtube)ಗಳೆಲ್ಲಾ ಮಾಮೂಲಿ ಹೆಚ್ಚಿನವರಿಗೆ ಏನೋ ಕಾರಣಗಳಿಂದ ಪ್ರಖ್ಯಾತಿ ಆಗಲು ಸಾಧ್ಯವಾಗುವುದಿಲ್ಲ. ಅಂತಹದರಲ್ಲಿ ಅತಿ ಕಡಿಮೆ ಸಮಯದಲ್ಲಿ ಈ ಚಾನೆಲ್ ವೈರಲ್ ಆಗಿದೆ ಅಂತಾನೆ ಹೇಳಬಹುದು.
ಹೆಸರಾಂತ ಯುಟ್ಯೂಬ್ ಚಾನೆಲ್ “ಭಟ್ ಎನ್ ಭಟ್” (Bhat‘n’ Bhat) ಈ ಯುಟ್ಯೂಬ್ ಚಾನೆಲ್ ನಲ್ಲಿ ಹಳ್ಳಿಯ ಪ್ರಸಿದ್ಧ ಖಾದ್ಯ, ತಿನಿಸುಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ತಿಳಿಸಿ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ ವೃತ್ತಿಯಲ್ಲಿ ವಕೀಲನಾಗಿದ್ದು(Lawyer), ಪಾರ್ಟ್ ಟೈಂ ಕೆಲಸ (Part Time Job) ಮಾಡಿಕೊಂಡು ಕ್ಯಾಟರಿಂಗ್, ಅಡುಗೆ ಸಹಾಯಕರಾಗಿ ದುಡಿದ ಪ್ರತಿಫಲ ಇಂದು ಹಲವರ ಪಾಲಿಗೆ ಆದರ್ಶರಾಗಿ ನಿಂತಿದ್ದಾರೆ. ಸುತ್ತ ಮುತ್ತಲಿನ ಪರಿಸರದಲ್ಲಿಯೇ ಅಡುಗೆ ಮಾಡುವುದನ್ನ ನೋಡಲು ಜನರು ತುಂಬಾ ಇಷ್ಟ ಪಡುತ್ತಾರೆ. ಹಾಗೆ ಇವರ ನಿರೂಪಣೆಗೆ ಅಧಿಕ ಜನರು ಫ್ಯಾನ್ಸ್ (Fans) ಆಗಿದ್ದಾರೆ. ಇಷ್ಟೆಲ್ಲಾ ಪ್ರಸಿದ್ಧ ಪಡೆದ ಇವರು ಸಾಧಾರಣ ಸರ್ವೇ ಸಾಮಾನ್ಯರಂತೆ ವರ್ತಿಸುವುದು ಆಚರ್ಯಕರ, ಸ್ವಲ್ಪ ಹೊಗಳಿದರೂ ಅಟ್ಟಕ್ಕೆರುವ ಜನರ ನಡುವೆ ಇಂತಹ ಸರಳ ವ್ಯಕ್ತಿತ್ವದ ವ್ಯಕ್ತಿ ನಮ್ಮ ನಡುವೆ ಇರುವುದು ನಮಗೆ ಹೆಮ್ಮೆಯ ವಿಷಯ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-20.09.2023
ಅಪ್ಪಟ ಹಳ್ಳಿ ಪ್ರತಿಭೆಗಳು:
ಸುದರ್ಶನ್ ಭಟ್ ಹಾಗೂ ಮನೋಹರ್ ಭಟ್ ಅವರು “ಭಟ್ ಎನ್ ಭಟ್” (Bhat‘n’ Bhat) ಚಾನೆಲ್ ಅನ್ನು ನಡೆಸುತ್ತಾರೆ. ಸುದರ್ಶನ್ ಹಾಗೂ ಮನೋಹರ್ ಭಟ್ ಇಬ್ಬರು ಅವಳಿ ಸಹೋದರರು. ಇವರು ಕೇರಳದ ಕಾಸರಗೋಡು ಜಿಲ್ಲೆಯವರು. ಇವರದ್ದು ಹವ್ಯಾಕ ಬ್ರಾಹ್ಮಣ ಕುಟುಂಬ. ಇವರ ತಂದೆಯ ಹೆಸರು ವೆಂಕಟರಮಣ ಭಟ್ ಹಾಗೂ ತಾಯಿಯ ಹೆಸರು ಸುಲೋಚನಾ ಭಟ್, ಈ ಅವಳಿ ಸಹೋದರರು ಅಪ್ಪಟ ಹಳ್ಳಿ ಪ್ರತಿಭೆಗಳು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ.

ಇದನ್ನೂ ಓದಿ; ಚಿನ್ನದ ಬೆಲೆ ಭರ್ಜರಿ ಏರಿಕೆ; ಬೆಳ್ಳಿಯೂ ತುಸು ದುಬಾರಿ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ-20.09.2023
ಲಾಕ್ ಡೌನ್ ಸಮಯದಲ್ಲಿ ಶುರುವಾದ ಯೂಟ್ಯೂಬ್ ಚಾನೆಲ್ ಗೆ ಎಲ್ಲರೂ ಫುಲ್ ಫಿದಾ:
ಕೊರೋನಾ ಸಂಕಷ್ಟದಲ್ಲಿ ಕರ್ನಾಟಕ-ಕೇರಳ ಗಡಿ ಜಿಲ್ಲೆಯ ಈ ಅವಳಿ ಸಹೋದರರು ಆರಂಭಿಸಿದ ಯೂ ಟ್ಯೂಬ್ ಚಾನೆಲ್ ಮಾಡಿರುವ ಸಾಧನೆ ಅಮೋಘ. ನಿಸರ್ಗದ ಮಧ್ಯೆ, ಸುತ್ತಮುತ್ತಲಿನ ಪರಿಸರದಲ್ಲಿಯೇ ಸಿಗುವ ಆಹಾರ ಪದಾರ್ಥಗಳಿಂದ ತಯಾರಿಸುವ ಅಡುಗೆ ಹಾಗೂ ಇವರ ನಿರೂಪಣಾ ಶೈಲಿಗೆ ಎಲ್ಲರೂ ಫುಲ್ ಫಿದಾ ಆಗಿದ್ದಾರೆ. ಎಲ್ಲಿಂದಲ್ಲೋ ಸಿದ್ಧವಾಗುತ್ತಿದ್ದ ಇಂಥ ವೀಡಿಯೋಗಳು ಇದೀಗ ಕನ್ನಡದಲ್ಲಿಯೇ ಲಭ್ಯವಾಗುತ್ತಿರುವುದಕ್ಕೆ ಅಡುಗೆ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.
ಇವರ ಯೂಟ್ಯೂಬ್ ಸೇರಿದಂತೆ ಫೇಸ್ಬುಕ್ ಪೇಜ್ ನಲ್ಲಿ ಕೂಡ ಮಿಲಿಯನ್ ನಲ್ಲಿ ವೀಡಿಯೋಸ್ ಗಳಿಗೆ ವ್ಯೂಸ್ ಬರುತ್ತೆ. ಯೂಟ್ಯೂಬ್ ಚಾನೆಲ್ ನಲ್ಲೂ ಒಂದು ಮಿಲಿಯನ್ ಚಂದಾದಾರರನ್ನು ತಲುಪಿದೆ. ಲಾಕ್ ಡೌನ್ ನಲ್ಲಿ ಶುರುವಾದ ಇವರ ಚಾನೆಲ್ ಅತಿ ದೊಡ್ಡ ಮೈಲಿಗಲನ್ನು ತಲುಪಿದೆ.
ಇದನ್ನೂ ಓದಿ; ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ದೂರು!; ಈ ಬಾರಿ ವಂಚನೆ ಆರೋಪ ಮಾಡಿದ್ದು ಯಾರು?
ಭರ್ಜರಿ ವ್ಯೂಸ್ ಹೊಂದಿದ ಇವರ ವೀಡಿಯೋಗಳು:
2020 ಏ.18 ರಂದು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಬಾಳೆಕಾಯಿ ಚಿಪ್ಸ್ ರೆಸಿಪಿ ಹಂಚಿಕೊಂಡಲ್ಲಿಂದ ಇವರ ಸಾಹಸ ಶುರು. ಇವರ ಅಡುಗೆ ಶೈಲಿಗೆ ಮನಸೋತ ಬಂಧು ಮಿತ್ರರ ಪ್ರೋತ್ಸಾಹಕ್ಕೆ ಮಣಿದು ಬಳಿಕ ಒಂದಾದ ಮೇಲೊಂದರಂತೆ 459 ಕ್ಕೂ ಅಧಿಕ ಅಡುಗೆ ರೆಸಿಪಿಗಳನ್ನು ಜಾಲತಾಣಗಳಲ್ಲಿ ಹಂಚಿದ್ದಾರೆ. ತಮ್ಮ ಮನೆ ತೋಟದಲ್ಲಿಯೇ ಸಿಗುವ ಸೋರೆಕಾಯಿ, ಹುಣಸೆ, ಹಲಸು, ಮಾವು, ಪುನರ್ಪುಳಿ, ಕುಂಬಳ, ಕೆಸುವಿನ ಎಲೆ ಸಹಿತ ಸ್ಥಳೀಯ ಕಚ್ಛಾವಸ್ತುಗಳು, ಮನೆಯ ಪಾತ್ರೆ ಪಗಡಿ, ಅರೆಯುವ ಕಲ್ಲು ಇಷ್ಟನ್ನೇ ಬಳಸಿ ಇವರು ಶುರು ಮಾಡಿದ ಹಾಗೂ ಮುಂದುವರಿಸಿದ ಮರಗೆಣಸಿನ ಹಪ್ಪಳದ ಪೋಸ್ಟ್ ಅತ್ಯಧಿಕ ಅಂದರೆ ಫೇಸ್‌ಬುಕ್‌ನಲ್ಲಿ 4 ದಶಲಕ್ಷ, ಯೂಟ್ಯೂಬ್‌ನಲ್ಲಿ 3 ಮಿಲಿಯನ್ ಗೂ ಅಧಿಕ ವ್ಯೂಸ್ ಗಳಿಸಿವೆ. ಇವರ ಬಹುತೇಕ ಪ್ರತಿ ಪೋಸ್ಟ್ ಗೂ ಸರಾಸರಿ ಎರಡೂವರೆ ಲಕ್ಷದಷ್ಟು ವ್ಯೂಸ್ ಸಿಗುತ್ತವೆ. ಫೇಸ್ಬುಕ್ ಪೇಜಿಗೆ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದು, ಯೂಟ್ಯೂಬ್ ಚಾನೆಲ್‌ನ ಚಂದಾದಾರರ ಸಂಖ್ಯೆ “1.07M” ದಾಟಿದೆ.
ಇದನ್ನೂ ಓದಿ; ಚೈತ್ರಾ ಕುಂದಾಪುರ ಗ್ಯಾಂಗ್ನ ಪ್ರಮುಖ ಆರೋಪಿ ಹಾಲಶ್ರೀ ಅರೆಸ್ಟ್; ಸಿಕ್ಕಿಬಿದ್ದಿದ್ದು ಹೇಗೆ?, ದೊಡ್ಡವರ ಹೆಸರು ಹೊರಬರುತ್ತಾ?
ಅಡುಗೆ ಅನುಭವ:
ವಿದ್ಯಾರ್ಥಿ ದೆಸೆಯಿಂದಲೇ ಏಳು ವರ್ಷಗಳಿಂದ ಸಮಾರಂಭಗಳಿಗೆ ಅಡುಗೆ ಸಹಾಯಕರಾಗಿ ತೆರಳುತ್ತಿದ್ದ ಅನುಭವ ಇವರಿಗಿದೆ. ತಂದೆ ವೆಂಕಟ್ರಮಣ ಭಟ್, ತಾಯಿ ಸುಲೋಚನಾ, ಅಕ್ಕ ಪ್ರಸನ್ನ, ಭಾವ ಮಹಾಬಲೇಶ್ವರ ಭಟ್ ಹಾಗೂ ಮಾವಂದಿರು ಇವರಿಗೆ ರೆಸಿಪಿ ಐಡಿಯಾ, ಚಿತ್ರೀಕರಣ, ಪರಿಕರ ಹೊಂದಾಣಿಕೆ ಇತ್ಯಾದಿಗಳಿಗೆ ನೆರವಾಗುತ್ತಾರೆ. ಕಷ್ಟದ ರೆಸಿಪಿಗಳನ್ನು ಪ್ರಾಯೋಗಿಕವಾಗಿ ಒಮ್ಮೆ ತಯಾರಿಸುತ್ತಾರೆರೆ. ಪ್ರತಿ ವಿಡಿಯೋ ಸಿದ್ಧಪಡಿಸಲು ಸರಾಸರಿ 2-3 ದಿನಗಳ ಶ್ರಮ ಇದೆ.
ಇವರ ಒಂದು ತಿಂಗಳ ಯೂಟ್ಯೂಬ್ ಸಂಪಾದನೆ ಎಷ್ಟಿದೆ ಗೊತ್ತ?:
ಇದು ಸಾಮಾಜಿಕ ಜಾಲತಾಣ ಯುಗವಾಗಿದ್ದು, ಇಂದು ಸಾಮಾಜಿಕ ಜಾಲತಾಣಗಳು ಕೇವಲ ಮನೋರಂಜನೆಗೆ ಮೀಸಲಾಗಿಲ್ಲ, ಬುದ್ಧಿವಂತಿಕೆ, ಪ್ರತಿಭೆಯ ಜನರನ್ನು ಸೆಳೆಯುವ ವಿಭಿನ್ನ ಕಂಟೆಂಟ್ ಸೃಷ್ಟಿಸುವ ತಾಕತ್ತು ನಿಮಗಿದ್ದರೆ ನೀವು ಕೂಡ ಇಂಟರ್‌ನೆಟ್‌ನಲ್ಲಿ ಇಂದು ಕಡಿಮೆ ಎಂದರೂ ಲಕ್ಷದಲ್ಲಿ ಸಂಪಾದನೆ ಮಾಡಬಹುದು. ಹಾಗೆಯೇ ಭಟ್ ಎನ್ ಭಟ್ ಇವರ ಯೂಟ್ಯೂಬ್ ಚಾನೆಲ್ ನಲ್ಲಿ ಎಷ್ಟು ಸಂಪಾದನೆ ಮಾಡುತ್ತಾ ಇದ್ದಾರೆ ಗೊತ್ತಾ?. ಭಟ್ ಎನ್ ಭಟ್ ನ ಸುದರ್ಶನ್ ಭಟ್ ಹೇಳುವ ಪ್ರಕಾರ, ಯೂಟ್ಯೂಬ್ ನಲ್ಲಿ ಸಂಪಾದನೆ ಮಾಡಬಹುದು. ನಾವು ಯಾವ ರೀತಿ ವಿಡಿಯೊ ಮಾಡುತ್ತೇವೆ. ಅದರ ವಿಷಯ (ಕಂಟೆಂಟ್) ಹೇಗಿರುತ್ತದೆ ಅನ್ನೊದರ ಮೇಲೆ ಹಣ ಬರುತ್ತದೆ ಎನ್ನುತ್ತಾರೆ. ಅಂದಾಜು 3 ರಿಂದ 4 ಲಕ್ಷ ತನಕ ಇವರ ಯೂಟ್ಯೂಬ್ ಚಾನೆಲ್ ನಲ್ಲಿ ಸಂಪಾದನೆ ಮಾಡಬಹುದು.
ಒಟ್ಟಿನಲ್ಲಿ, ಈ ಕಿರಿ ವಯಸ್ಸಿನಲ್ಲೇ ವಿಶೇಷ ಹವ್ಯಾಸದೊಂದಿಗೆ, ಅಭ್ಯಾಸದೊಂದಿಗೆ ಜನಪ್ರೀತಿಗಳಿಸುತ್ತಿರುವ ಬೆದ್ರಡಿ ಸಹೋದರರಿಗೆ ಭವಿಷ್ಯ ಇನ್ನಷ್ಟು ಚೆನ್ನಾಗಿ ಒದಗಿ ಬರಲಿ ಎಂದು ತುಂಬು ಪ್ರೀತಿಯಿಂದ ಹಾರೈಸುತ್ತಿದೆ.
ಪ್ರಮುಖ ಸುದ್ದಿಗಳನ್ನು ಓದಿ
- ಚೈತ್ರಾ ಕುಂದಾಪುರ ಗ್ಯಾಂಗ್ನ ಪ್ರಮುಖ ಆರೋಪಿ ಹಾಲಶ್ರೀ ಅರೆಸ್ಟ್; ಸಿಕ್ಕಿಬಿದ್ದಿದ್ದು ಹೇಗೆ?, ದೊಡ್ಡವರ ಹೆಸರು ಹೊರಬರುತ್ತಾ?
- ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ದೂರು!; ಈ ಬಾರಿ ವಂಚನೆ ಆರೋಪ ಮಾಡಿದ್ದು ಯಾರು?
- ಕೊನೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಹಾಲಶ್ರೀ; ಹಾಲಶ್ರೀ ಲಾಕ್ ಗಾಗಿ ಅರ್ಚಕರ ವೇಷ; ಶೃಂಗೇರಿ ಅರ್ಚಕರ ಪೋಷಾಕಿನಲ್ಲಿ ಹೋಗಿದ್ದ ಸಿಸಿಬಿ ಟೀಂ
- ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಗಣೇಶ ಚತುರ್ಥಿ ಪೂಜೆ ಮಾಡಲು ಶ್ರೇಷ್ಠ ಸಮಯ ಯಾವುದು ಗೊತ್ತಾ?; ಶುಭ ಮುಹೂರ್ತದ ವಿವರ, ಆಚರಣೆ ಇಲ್ಲಿದೆ
- ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ; ಏನಿದು ಪಿಎಂ ವಿಶ್ವಕರ್ಮ ಯೋಜನೆ; ಇದಕ್ಕೆ ಯಾರು ಅರ್ಹರು
- hsrp ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ; ಏನಿದು hsrp? ಅಳವಡಿಕೆ ಹೇಗೆ?
- ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-16.09.2023
- ಕರ್ನಾಟಕದಲ್ಲಿ ಬರ ಪಟ್ಟಿ ಘೋಷಣೆ; ಯಾವೆಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?
- 2,000 ರೂ. ನೋಟ್ ಹಿಂಪಡೆದ rbi; ಆದಷ್ಟು ಬೇಗ ಬದಲಾಯಿಸಿ 2000 ನೋಟು; ಇನ್ನುಳಿದಿದೆ ಕೆಲವೇ ದಿನಗಳು
- 14 ನ್ಯೂಸ್ ಆ್ಯಂಕರ್ಗಳನ್ನು ಬಹಿಷ್ಕರಿಸಿದ i.n.d.i.a ಮೈತ್ರಿಕೂಟ; ಯಾರೆಲ್ಲ ಪಟ್ಟಿಯಲ್ಲಿದ್ದಾರೆ?
- ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಚೈತ್ರಾ ಕುಂದಾಪುರ; ಏನಿದು ಸ್ಟೋರಿ?
- ಪೊಲೀಸರ ಮಿಂಚಿನ ಕಾರ್ಯಾಚರಣೆ; ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಬಂಧನ
- ಚೈತ್ರಾ ಕುಂದಾಪುರ ಬಂಧನವಾಗುತ್ತಿದಂತೆ 3 ನೇ ಆರೋಪಿ ನಾಪತ್ತೆ
- ಬಿಜೆಪಿ ಎಂಎಲ್ಎ ಟಿಕೆಟ್ ಹೆಸರಲ್ಲಿ ವಂಚಿಸಿದ ಚೈತ್ರಾ ಗ್ಯಾಂಗ್ ನ ಮೋಸದ ರೋಚಕ ಸ್ಟೋರಿ ಸಿನಿಮಾ ಸ್ಟೋರಿಯನ್ನೂ ಮೀರಿಸುತ್ತದೆ.
- ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಮುಸ್ಲಿಂ ಫ್ರೆಂಡ್, ಎನ್ನುವ ಸುದ್ದಿ ನಿಜನೋ? ಸುಳ್ಳೋ?; ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ
- ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಮುಸ್ಲಿಂ ಫ್ರೆಂಡ್, ಎನ್ನುವ ಸುದ್ದಿ ನಿಜನೋ? ಸುಳ್ಳೋ?; ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ
- ಜಿ20 ಶೃಂಗಸಭೆ, ಏನಿದು g20?; ಇದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ?
- ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ; ಶೃಂಗಸಭೆ ಮೂಲಕ ಈಡೇರಲಿದೆ ಭಾರತದ ಕನಸು
- ಗಣೇಶನಿಗೆ ಪ್ರಿಯವಾದ ಕರ್ಜಿಕಾಯಿ ತಯಾರಿಸುವುದು ಹೇಗೆ?; ಹಬ್ಬಕ್ಕೆ ಗರಿಗರಿಯಾದ ಕರ್ಜಿಕಾಯಿ ಈ ರೀತಿ ಮಾಡಿ ನೋಡಿ
- ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್; ಈ ಐಫೋನ್‌ಗೆ ಈಗ ಸಖತ್ ಡಿಸ್ಕೌಂಟ್..!; ಆಫರ್ ತಿಳಿದ್ರೆ ವಾವ್ ಅಂತೀರಾ!?
intresting story ಓದಲು ಇಲ್ಲಿ ಕ್ಲಿಕ್ ಮಾಡಿ