ಶಿವಮೊಗ್ಗ; (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಜಾಗವನ್ನ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಗಸ್ತಿನಲ್ಲಿದ್ದ ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಮೂವರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ; ಜೋಗ ಜಲಪಾತಕ್ಕೆ ನೋ ಎಂಟ್ರಿ
ಶೆಟ್ಟಿಹಳ್ಳಿ ಅಭಯಾರಣ್ಯದ ಚಿತ್ರಶೆಟ್ಟಿಹಳ್ಳಿ ಸರ್ವೆ ನಂಬರ್ 7 ರಲ್ಲಿ ನಾಗರಾಜ್ ಎಂಬ ವ್ಯಕ್ತಿಯು ಇಟ್ಟಿಗೆಗಳನ್ನ, ಬಾಳೆಗಿಡಗಳನ್ನ ಹಾಗೂ ಶೆಡ್ ಗಳನ್ನ ನಿರ್ಮಿಸಿಕೊಂಡಿದ್ದು ಈ ಜಾಗ ನ್ಯಾಯಾಲಯದಲ್ಲಿದ್ದರೂ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಗಸ್ತಿನಲ್ಲಿದ್ದ ಅರಣ್ಯ ಅಧಿಕಾರಿ ಸಂತೋಷ್ ನ್ಯಾಯಾಲಯದಲ್ಲಿದ್ದರೂ ಸ್ಥಳ ಅಕ್ರಮ ಮಾಡಿಕೊಂಡಿದ್ದು ಈ ಬಗ್ಗೆ ಕೋರ್ಟ್ ಆದೇಶ ಅಥವಾ ಸರ್ಕಾರಿ ಅನುಮತಿ ದಾಖಲಾತಿ ಇದೆಯಾ ಎಂದು ಕೇಳಿದ್ದಾರೆ. ನಾಗರಾಜ್ ಜೊತೆ ವಕೀಲರೊಬ್ಬರು ಧ್ವನಿಗೂಡಿಸಿ ನಾನು ವಕೀಲ ಏನು ಮಾಡಕೊಳ್ತೀರ ಎಂದು ಧಮ್ಕಿ ಹಾಕಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕಾರು ಹಾಗೂ ಸ್ಕೂಟಿಯ ನಡುವೆ ಡಿಕ್ಕಿ
- mlc ಭೋಜೇಗೌಡಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಜೆಡಿಎಸ್ ಕಾರ್ಯಕರ್ತ
- ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದ ಟ್ಯಾಕ್ಸಿ ಡ್ರೈವರ್
ಗಸ್ತಿನಲ್ಲಿದ್ದ ಅರಣ್ಯ ಅಧಿಕಾರಿಗಳನ್ನ ಎಳೆದಾಡಿ ಸಮವಸ್ತ್ರವನ್ನ ಹರಿದಿರುವುದಾಗಿ ಆರೋಪಿಸಲಾಗಿದೆ. ಅರಣ್ಯ ಅಧಿಕಾರಿ ಸಂತೋಷ್ ಗೆ ಈ ಬಾಗಕ್ಕೆ ಬಂದರೆ ಜೀವ ಸಮೇತ ಬಿಡುವುದಿಲ್ಲವೆಂಬ ಧಮ್ಕಿ ಹಾಕಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಹಾಗೂ ಜೀವಬೆದರಿಕೆ ಆರೋಪದ ಅಡಿಯಲ್ಲಿ ನಾಗರಾಜ್ ಬಿನ್ ದುಗ್ಗಪ್ಪ, ವಕೀಲ ಶಶಿಕುಮಾರ್ ವನಜಾಕ್ಷಿ ವಿರುದ್ಧ ಅರಣ್ಯ ಪಾಲಕ ಸಂತೋಷ್ ತುಂಗಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್; ಮೇ 1ರಿಂದ ಫೇಕ್ ಕಾಲ್, ಮೆಸೇಜ್ ಗೆ ನಿರ್ಬಂಧ
ಟೆಲಿಕಾಂ ನೀತಿಯಲ್ಲಿ ಮೇ 1 ರಿಂದ ಮಹತ್ತರ ಬದಲಾವಣೆ ಆಗುತ್ತಿದೆ ಇಷ್ಟು ದಿನ ಅನಗತ್ಯ ಕಾಲ್, ಮೆಸೇಜುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಮೊಬೈಲ್ ಬಳಕೆದಾರರಿಗೆ ಇದೀಗ ಟ್ರಾಯ್ ಶುಭ ಸುದ್ದಿಯನ್ನು ನೀಡಿದೆ.
ಇದನ್ನೂ ಓದಿ; ಜೆಡಿಎಸ್ ಗೆ ಮತ್ತೊಂದು ಆಘಾತ; ಮಾಜಿ ಸಚಿವ ಬಿಬಿ ನಿಂಗಯ್ಯ ಕಾಂಗ್ರೆಸ್ ಸೇರ್ಪಡೆ
ಫೇಕ್ ಕಾಲ್ ಹಾಗೂ ಮೆಸೇಜ್‌ಗೆ ಟ್ರಾಯ್ ಕಡಿವಾಣ ಹಾಕಿದೆ. ಮೊಬೈಲ್ ಬಳಕೆದಾರರು ಪ್ರತಿನಿತ್ಯ ಲೋನ್, ಬಂಪರ್ ಬಹುಮಾನ ಸೇರಿದಂತೆ ಹಲವು ಅನಗತ್ಯ ಕರೆ ಹಾಗೂ ಸಂದೇಶಗಳಿಂದ ಹೈರಾಣಾಗುತ್ತಿದ್ದವರಿಗೆ ಟ್ರಾಯ್ ಸಿಹಿ ಸುದ್ದಿ ನೀಡಿದೆ.
ಇದನ್ನೂ ಓದಿ; ಅಧಿಕಾರಕ್ಕೆ ಬರುವ ಮುನ್ನವೇ ಹೆಚ್ಚಾಯ್ತು ಸಿಎಂ ಕೂಗು
ಮೊಬೈಲ್‌ಗಳಿಗೆ ಬರುವ ಅನಗತ್ಯ ಮೆಸೇಜ್‌ಗಳಿಗೆ ಕಡಿವಾಣ ಹಾಕುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿಯಂತ್ರಕ ಸಂಸ್ಥೆ ಟ್ರಾಯ್ ಗುರುವಾರ ಸೂಚನೆ ನೀಡಿದೆ. ಮೇ.01 ರಿಂದ ಟೆಲಿಕಾಂ ಕಂಪನಿಗಳು ಅನಗತ್ಯ ಕಾಲ್ ಹಾಗೂ ಸಂದೇಶ ಫಿಲ್ಟರ್ ಮಾಡಲಿದೆ. ಇದರಿಂದಾಗಿ ಗ್ರಾಹಕರಿಗೆ ಅನಗತ್ಯ ಮೆಸೇಜ್‌ಗಳಿಂದ ಉಂಟಾಗುವ ಕಿರಿಕಿಯಿಂದ ಮುಕ್ತಿ ಸಿಗಲಿದೆ.
ಇನ್ನು ಅಪರಿಚಿತ ನಂಬರ್, ಸ್ಪಾಯಮ್ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ಮಾರ್ಗ ಕಂಡು ಹಿಡಿದಿದೆ. ಫೋನ್‌ನಲ್ಲಿ ಸೇವ್ ಆಗಿರದ ನಂಬರ್‌ಗಳಿಂದ ಯಾರಾದರೂ ಕರೆ ಮಾಡಿದರೆ ಕರೆ ಮಾಡಿದ ವ್ಯಕ್ತಿಯ ಹೆಸರು ನಿಮ್ಮ ಮೊಬೈಲ್‌ನಲ್ಲಿ ಕಂಡುಬರುವಂತೆ ಮಾಡುವ ಹೊಸ ಉಪಕ್ರಮವನ್ನು ಟ್ರಾಯ್ ಶೀಘ್ರವೇ ಜಾರಿಗೆ ತರಲು ಸಜ್ಜಾಗಿದೆ. ಟೆಲಿಕಾಂ ಆಪರೇಟರ್ ಬಳಿ ಲಭ್ಯವಿರುವ ಕೆವೈಸಿ ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ತಿಳಿಯುವಂತೆ ಮಾಡಲಾಗುತ್ತದೆ. ಈ ಉಪಕ್ರಮ ಜಾರಿಗೆ ಬಂದಾಗ ಮೊಬೈಲ್‌ನಲ್ಲಿ ಅಪರಿಚಿತ ನಂಬರ್‌ಗಳ ಬದಲು ಕರೆ ಮಾಡುತ್ತಿರುವವರ ಹೆಸರು ಕಾಣಿಸಲಿದೆ.
ಪ್ರಸ್ತುತ ಇಂತಹ ಸೌಲಭ್ಯವನ್ನು ಪಡೆಯಲು ಜನರು ‘ಟ್ರೂಕಾಲರ್’ನಂತಹ ಆಯಪ್‌ಗಳಿಗೆ ಮೊರೆ ಹೋಗಬೇಕಾಗುತ್ತದೆ. ಇಂತಹ ಆಯಪ್‌ಗಳು ಮಾಹಿತಿಯನ್ನು ಕ್ರೌಡ್‌ಸೋರ್ಸಿಂಗ್ ವಿಧಾನದ ಮೂಲಕ ಸಂಗ್ರಹಿಸುವುದರಿಂದ ಅವು ಅಧಿಕೃತವಾಗಿವೆ ಎನ್ನಲು ಸಾಧ್ಯವಾಗಿಲ್ಲ. ಆದರೆ ಕೆವೈಸಿ ಡೇಟಾಗಳು ಸಂಪೂರ್ಣವಾಗಿ ಅಧಿಕೃತ ಹಾಗೂ ನಂಬಲು ಅರ್ಹವಾಗಿರುತ್ತವೆ.
ಒಂದು ವೇಳೆ ಕೆವೈಸಿ ಸರಿಯಾಗಿ ಮಾಡಿಸದಿದ್ದರೆ ಫೋನ್‌ನಲ್ಲಿ ಹೆಸರು ಕಂಡುಬರುವುದಿಲ್ಲ. ಹೀಗಾಗಿ ಟ್ರಾಯ್‌ನ ಈ ಹೊಸ ಉಪಕ್ರಮದಿಂದಾಗಿ ಟೆಲಿಕಾಂ ಸೇವೆ ಪೂರೈಕೆದಾರರು ಕೆವೈಸಿ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಬಹುದಾಗಿದೆ.