Sunday, September 24, 2023
Homeಮಲೆನಾಡುಚಿಕ್ಕಮಗಳೂರುMLC ಭೋಜೇಗೌಡಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಜೆಡಿಎಸ್ ಕಾರ್ಯಕರ್ತ

MLC ಭೋಜೇಗೌಡಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಜೆಡಿಎಸ್ ಕಾರ್ಯಕರ್ತ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿ ಕಣದಲ್ಲಿರುವಾಗಲೇ ಜೆಡಿಎಸ್ ವಿಧಾನಪರಿಷತ್ ಸದಸ್ಯ ಎಸ್ ಎಲ್ ಬೋಜೇಗೌಡ ಅವರು ಕಾಂಗ್ರೆಸ್ ಗೆ ಮತ ಹಾಕುವಂತೆ ತಮ್ಮದೇ ಕಾರ್ಯಕರ್ತರಿಗೆ ತಾಕೀತು ಮಾಡುವ ವಿಡಿಯೋ ಬೆನ್ನಲ್ಲೇ ಇದೀಗ ಫೋಟೋ ಸಹ ವೈರಲ್ ಆಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಈ ನಡೆಯಿಂದಾಗಿ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.

ಇದನ್ನೂ ಓದಿ; ಜೋಗ ಜಲಪಾತಕ್ಕೆ ನೋ ಎಂಟ್ರಿ

ಇದನ್ನೂ ಓದಿ; ಅಧಿಕಾರಕ್ಕೆ ಬರುವ ಮುನ್ನವೇ ಹೆಚ್ಚಾಯ್ತು ಸಿಎಂ ಕೂಗು

ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರ ಜೊತೆ ಇರುವ ಫೋಟೋ ವೈರಲ್ ಆಗಿದೆ. ಸಖರಾಯಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡ ಮಹಡಿಮನೆ ಸತೀಶ್ ಜೊತೆ ಸಭೆ ಮಾಡಿರುವ ಫೋಟೋಗಳು ಹರಿದಾಡುತ್ತಿದೆ. ಎಸ್ ಎಲ್ ಭೋಜೇಗೌಡ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪರಮಾಪ್ತರಾಗಿದ್ದು, ಚಿಕ್ಕಮಗಳೂರಿನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಕೈ ಜೋಡಿಸಿದ್ರಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

ಇನ್ನು ಜೆಡಿಎಸ್ ಕಾರ್ಯಕರ್ತ MLC ಭೋಜೇಗೌಡಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಆಡಿಯೋ ಕೂಡ ವೈರಲ್ ಆಗಿದೆ.

ಜೆಡಿಎಸ್ ಕಾರ್ಯಕರ್ತ: ಗೌಡ್ರೇ ನಮಸ್ಕಾರ
ಎಮ್ ಎಲ್ ಸಿ ಬೋಜೆಗೌಡ: ನಮಸ್ಕಾರ
ಜೆಡಿಎಸ್ ಕಾರ್ಯಕರ್ತ: ಗೌಡ್ರೇ ಕೊಲಪ್ಪಾ ಮಾತಾಡ್ತಾ ಇದೀನಿ
ಎಮ್ ಎಲ್ ಸಿ ಬೋಜೆಗೌಡ: ಹೇಳಪ್ಪಾ
ಜೆಡಿಎಸ್ ಕಾರ್ಯಕರ್ತ: ಆವಾಗ್ಲೇ ಫೋನ್ ಮಾಡಿದ್ರಿ ಸರಿಯಾಗಿ ಮಾತಾಡಕ್ಕೆ ಆಗಿಲ್ಲಾ, ಸ್ವಲ್ಪ ಎಣ್ಣೆ ಜಾಸ್ತಿ ಆಗಿತ್ತು
ಎಮ್ ಎಲ್ ಸಿ ಬೋಜೆಗೌಡ: ಹೇಳಪ್ಪಾ
ಜೆಡಿಎಸ್ ಕಾರ್ಯಕರ್ತ: ಅಲ್ಲ ನೀವು ಈ ತರ ಕೆಲ್ಸಾ ಮಾಡ್ತೀರಾ ಅಂತ ಗೊತ್ತಿರ್ಲಿಲ್ಲ ಗೌಡ್ರೇ, ನೀವು ಇಷ್ಟೊತ್ತಿಗೆ ಒಬ್ಬ ರಾಜಕಾರಣಿಯಾಗಿ ನಿಮಿಗೆ ಶೋಭೆ ತರುತ್ತಾ
ಎಮ್ ಎಲ್ ಸಿ ಬೋಜೆಗೌಡ: ಏ ತಪ್ಪಾಯ್ತಪ್ಪಾ
ಜೆಡಿಎಸ್ ಕಾರ್ಯಕರ್ತ: ನೀವು ಚುನಾವಣೆಗೆ ನಿತ್ತಾಗ ಬೇಕಿದ್ರೆ, ನಾನು ನಿಲ್ತೀನಿ ಕಣೋ ಏನೋ ಹೆಲ್ಪ್ ಮಾಡಿ ಅಂತ ಕೇಳಿ ಪರ್ವಾಗಿಲ್ಲ, ಅದು ಬಿಟ್ಟು ಅವ್ನ್ ಯಾರಿಗೋ ಕೇಳದ್ ಸರಿ ಅನ್ಸತ್ತಾ
ಎಮ್ ಎಲ್ ಸಿ ಬೋಜೆಗೌಡ: ಎನೋ ಕೇಳ್ನಪ್ಪಾ
ಜೆಡಿಎಸ್ ಕಾರ್ಯಕರ್ತ: ಅವತ್ತ್ ನೋಡ್ರೆ ನನ್ನುನ್ನ ರೌಡಿ ಶೀಟರ್ ಮಾಡಿ 307 ಕೇಸ್ ಹಾಕ್ಸಿ ಸ್ಟೇಶನ್ ಊರು ಸುತ್ತೋ ಹಾಗೆ ಮಾಡಿದ್ರಿ, ಏನ್ ಘನಂದಾರಿ ಕೆಲಸ ಮಾಡಿದ್ದೀರಾ
ಎಮ್ ಎಲ್ ಸಿ ಬೋಜೆಗೌಡ: ಆಯ್ತ್ ಬಿಡಪ್ಪಾ
ಜೆಡಿಎಸ್ ಕಾರ್ಯಕರ್ತ: ಅಲ್ಲ ಏನಾದ್ರೂ ಘನಂದಾರಿ ಕೆಲಸ ಮಾಡಿದ್ರೆ ಹೇಳಿ, ಬೋಜೆಗೌಡ್ರು ನಿಮ್ಮ ಕುಟುಂಬ ಏನಾದ್ರೂ ಕೆಲಸ ಮಾಡಿದ್ದೀರಾ, ಇವತ್ತು ಯಾಕೆ ಹೆಂಗಸ್ರು ತರ ಇಷ್ಟೊತ್ತಿಗೆ ಫೋನ್ ಮಾಡಕ್ಕೆ ಹೋಗಿದ್ದ್ ಗೌಡ್ರೆ


ಇತ್ತೀಚಿನ ಜನಪ್ರಿಯ ಸುದ್ದಿಗಳು


ವಿಡಿಯೋದಲ್ಲಿ ಏನಿತ್ತು?:
ಬೋಜೇಗೌಡ ಅವರ ನಿವಾಸದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಕರೆಸಿ, ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಏಯ್, ಅದೆಲ್ಲಾ ಗೊತ್ತಿಲ್ಲಾ ಕೇಳ್ರೋ.. ಈ ಸಾರಿ ನೀವೆಲ್ಲಾ ಸೇರಿ ಕಾಂಗ್ರೆಸ್ ಗೆ ವೋಟ್ ಹಾಕಬೇಕು ಅರ್ಥವಾಯ್ತ ಎನ್ನುತ್ತಿದ್ದಂತೆ ಕಾರ್ಯರ್ತರೊಬ್ಬರು ಸಾರ್ ನಾವು ಇದುವರೆಗೆ ಜೆಡಿಎಸ್‌ಗೆ ವೋಟ್ ಹಾಕಿಕೊಂಡು ಬಂದಿದ್ದೇವೆ. ಈಗ ಬದಲಿಸಬೇಕು ಎಂದರೆ ಕೈ ಮುಂದೆ ಬರುವುದಿಲ್ಲ ಎಂದು ಹೇಳುತ್ತಾರೆ. ಆಯ್ತಪ್ಪ ಇದೊಂದು ಸಾರಿ ಹಾಕ್ರಪ್ಪ ಎಂದು ಬೋಜೇಗೌಡರು ಹೇಳುವುದು ವೀಡಿಯೋದಲ್ಲಿ ಸೆರೆಯಾಗಿದೆ.

ನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ?

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ

1) ಎಂ ಪಿ ಈರೇಗೌಡ – ಆಮ್ ಆದ್ಮಿ ಪಾರ್ಟಿ
2) ಹೆಚ್ ಡಿ ತಮ್ಮಯ್ಯ – ಕಾಂಗ್ರೆಸ್ (inc)
3) ಬಿ ಎಮ್ ತಿಮ್ಮಶೆಟ್ಟಿ – ಜನತಾದಳ (ಜಾತ್ಯತೀತ)
4) ಸಿ ಟಿ ರವಿ – ಭಾರತೀಯ ಜನತಾ ಪಾರ್ಟಿ
5) ಸುಧಾ ಕೆ ಬಿ – ಬಹುಜನ ಸಮಾಜ ಪಾರ್ಟಿ
6) ಯತೀಶ್ ಬಿ ಜೆ – ಉತ್ತಮ ಪ್ರಜಾಕೀಯ ಪಾರ್ಟಿ
7) ಶಿವಪ್ರಕಾಶ್ – ಕರ್ನಾಟಕ ರಾಷ್ಟ್ರ ಸಮಿತಿ
8) ಅಫ್ಜಲ್ ಪಾಷ – ಪಕ್ಷೇತರ
9) ಸಿ ಕೆ ಜಗದೀಶ – ಪಕ್ಷೇತರ
10) ನೂರುಲ್ಲಾ ಖಾನ್ – ಪಕ್ಷೇತರ
11) ಮುನಿಯಪ್ಪಾ – ಪಕ್ಷೇತರ
12) ಹೆಚ್ ಸಿ ಮುಳ್ಳಪ್ಪ ಶೆಟ್ಟಿ – ಪಕ್ಷೇತರ
13) ಮೋಸೀನ – ಪಕ್ಷೇತರ
14) ಎಂ ಜಿ ವಿಜಯ ಕುಮಾರ್ – ಪಕ್ಷೇತರ
15) ಶಶಿಧರ ಬಿ ಜೆ – ಪಕ್ಷೇತರ
16) ಸೈಯದ್ ಜಬಿ – ಪಕ್ಷೇತರ

ಕಡೂರು ವಿಧಾನಸಭಾ ಕ್ಷೇತ್ರ

1) ಆನಂದ್ ಕೆ ಎಸ್ – ಕಾಂಗ್ರೆಸ್ (inc)

2) ವೈ ಎಸ್ ವಿ ದತ್ತಾ – ಜನತಾದಳ (ಜಾತ್ಯತೀತ)

3) ಬೆಳ್ಳಿ ಪ್ರಕಾಶ್ – ಭಾರತೀಯ ಜನತಾ ಪಾರ್ಟಿ
4) ರಾಜೇಶ್ವರಿ – ಆಮ್ ಆದ್ಮಿ ಪಾರ್ಟಿ
5) ಆನಂದ್ ಕೆ ಟಿ – ಸರ್ವೋದಯ ಕರ್ನಾಟಕ ಪಕ್ಷ
6) ಆನಂದ ನಾಯ್ಕ ಎಸ್ ಎಲ್ – ಕರ್ನಾಟಕ ರಾಷ್ಟ್ರ ಸಮಿತಿ
7) ಲೋಹಿತ ಜಿ ಟಿ – ಉತ್ತಮ ಪ್ರಜಾಕೀಯ ಪಾರ್ಟಿ
8) ಕೋಟಿ ಉಮೇಶ್ ಹೊಂಬಾಳೆ – ಪಕ್ಷೇತರ
9) ಕೆ ಆರ್ ಗಂಗಾಧರಪ್ಪ – ಪಕ್ಷೇತರ
10) ಹೆಚ್ ಆರ್ ಶ್ರೀನಿವಾಸ್ ಭಗೀರತ – ಪಕ್ಷೇತರ

ಮೂಡಿಗೆರೆ ವಿಧಾನಸಭಾ ಕ್ಷೇತ್ರ (ಎಸ್ ಸಿ ಮೀಸಲು)

1) ಎಂ. ಪಿ ಕುಮಾರಸ್ವಾಮಿ – ಜನತಾದಳ (ಜಾತ್ಯತೀತ)
2) ದೀಪಕ್ ದೊಡ್ಡಯ್ಯ – ಬಿಜೆಪಿ
3) ನಯನ ಮೋಟಮ್ಮ – ಕಾಂಗ್ರೆಸ್
4) ಪ್ರಭು ಸಿ. – ಆಮ್ ಆದ್ಮಿ ಪಾರ್ಟಿ
5) ಲೋಕವಳ್ಳಿ ರಮೇಶ – ಬಹುಜನ ಸಮಾಜ ಪಾರ್ಟಿ (bsp)
6) ಅಂಗಡಿ ಚಂದ್ರು – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (sdpi)
7) ರಮೇಶ್ ಕೆಳಗೂರು – ಕಮ್ಯೂನಿಸ್ಟ್‌ ಪಾರ್ಟಿ ಆಫ್ ಇಂಡಿಯಾ
8) ಚೇತನ್ ಪ್ರಸಾದ್ – ಪಕ್ಷೇತರ ಅಭ್ಯರ್ಥಿ
9) ರುದ್ರೇಶ್ ಕಹಳೆ – ಪಕ್ಷೇತರ

ಶೃಂಗೇರಿ ವಿಧಾನಸಭಾ ಕ್ಷೇತ್ರ

1) ಕೆ.ಎಮ್ ಗೋಪಾಲ– ಬಹುಜನ ಸಮಾಜ ಪಾರ್ಟಿ
2) ಜೀವರಾಜ್ ಡಿ ಎನ್ – ಭಾರತೀಯ ಜನತಾ ಪಾರ್ಟಿ (bjp)
3) ರಾಜನ್ ಗೌಡ ಹೆಚ್ ಎಸ್ – ಆಮ್ ಆದ್ಮಿ ಪಾರ್ಟಿ
4) ಟಿ ಡಿ ರಾಜೇಗೌಡ – ಕಾಂಗ್ರೆಸ್ (inc)
5) ಸುಧಾಕರ್ ಎಸ್ ಶೆಟ್ಟಿ – ಜನತಾದಳ (ಜಾತ್ಯತೀತ)
6) ಕಾಮ್ರೇಡ್ ಉಮೇಶ್ – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ
7) ಎಂ ಕೆ ದಯಾನಂದ ಮಾವಿನಕೆರೆ – ಪ್ರೌಟೀಸ್ಟ್ ಸರ್ವ ಸಮಾಜ
8) ಇಲ್ಲಿಯಾಜ್ ಅಹ್ಮದ್ – ಪಕ್ಷೇತರ
9) ಕೆ ಆರ್ ಕುಸುಮ – ಪಕ್ಷೇತರ
10) ಜಿ ಭಾರತಿ – ಪಕ್ಷೇತರ
11) ಅಭ್ರಾಹಾಮ್ – ಪಕ್ಷೇತರ

ತರೀಕೆರೆ ವಿಧಾನಸಭಾ ಕ್ಷೇತ್ರ

1) ಜಿ ಹೆಚ್ ಶ್ರೀನಿವಾಸ್ – ಕಾಂಗ್ರೆಸ್ (inc)
2) ಡಿ ಎಸ್ ಸುರೇಶ್ – ಭಾರತೀಯ ಜನತಾ ಪಾರ್ಟಿ
3) ಡಿ ಸಿ ಸುರೇಶ್ – ಆಮ್ ಆದ್ಮಿ ಪಾರ್ಟಿ
4) ಕೆ ಗೋವಿಂದಪ್ಪ – ಕರ್ನಾಟಕ ರಾಷ್ಟ್ರ ಸಮಿತಿ
5) ಬಿ ಪಿ ವಿಕಾಸ್ – ಉತ್ತಮ ಪ್ರಜಾಕೀಯ ಪಾರ್ಟಿ
6) ಕಡ್ಲೆ ಬಟ್ಟಿ ಅಶೋಕಣ್ಣ – ಪಕ್ಷೇತರ
7) ಗೋಪಿಕೃಷ್ಣ ಅಲಿಯಾಸ್ ಗೋಪಾಲ ಕೃಷ್ಣ – ಪಕ್ಷೇತರ
8) ಹೆಚ್ ಎಮ್ ಗೋಪಿಕೃಷ್ಣ – ಪಕ್ಷೇತರ
9) ಎ ಆರ್ ನಾಗರಾಜಪ್ಪ – ಪಕ್ಷೇತರ
10) ಸಿ ಎಂ ನಂಜುಂಡಪ್ಪ – ಪಕ್ಷೇತರ
11) ದೋರನಾಳು ಪರಮೇಶ್ – ಪಕ್ಷೇತರ
12) ರಫೀಕ್ ಅಹ್ಮದ್ – ಪಕ್ಷೇತರ
13) ಎ ಬಿ ರಾಜ್ ಕುಮಾರ್ – ಪಕ್ಷೇತರ
14) ಎ ಆರ್ ಸತೀಶ – ಪಕ್ಷೇತರ

Most Popular

Recent Comments