(apl card cancel) ರಾಜ್ಯದಲ್ಲಿ ಅನರ್ಹರ 22 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದ ಆಹಾರ ಇಲಾಖೆ ಆಧಾರ್ ದೃಢೀಕರಣ ಮಾಡದ ಕಾರಣಕ್ಕೆ ಲಕ್ಷಾಂತರ ಎಪಿಎಲ್ ಕಾರ್ಡುಗಳನ್ನು ಕೂಡ ರದ್ದು ಮಾಡಿದೆ.
ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಪಡೆಯಿರಿ
ಎಪಿಎಲ್ ಕಾರ್ಡ್ ಗಳಿಗೆ ನೀಡಲಾಗುತ್ತಿದ್ದ ರೇಷನ್ ಹಂಚಿಕೆಯನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಆಯುಷ್, ವಿಮೆ, ಗೃಹಲಕ್ಷ್ಮಿ ಹಣ ಸೇರಿ ಹಲವು ಸೌಲಭ್ಯ ಪಡೆಯುತ್ತಿದ್ದ ಎಪಿಎಲ್ ಕಾರ್ಡ್ ದಾರರಿಗೆ ತೊಂದರೆಯಾಗಿದೆ.
ರಾಜ್ಯದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ಕೈಗೊಂಡ ಆಹಾರ ಇಲಾಖೆ ಇ- ಕೆವೈಸಿ ಮಾಡಿಸಲು ಸೂಚನೆ ನೀಡಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್ ಗಳು ಪತ್ತೆಯಾಗಿದ್ದು, ಅಂತಹ ಕಾರ್ಡುಗಳನ್ನು ರದ್ದು ಮಾಡಲಾಗಿದೆ.
ಇದನ್ನೂ ಓದಿ; ಪೋಷಕರ ಗಮನಕ್ಕೆ; ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತು ಪೋಷಕರಿಗೆ ಮುಖ್ಯ ಮಾಹಿತಿ
ಎಪಿಎಲ್ ಕಾರ್ಡ್ ರದ್ದಾಗಿದ್ದರಿಂದ ಗೃಹಲಕ್ಷ್ಮಿ ಯೋಜನೆಯಡಿ ಪಡೆಯುತ್ತಿದ್ದ ಹಣ ಸ್ಥಗಿತವಾಗಿದೆ. ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ವಿವಿಧ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಆಯುಷ್ಮಾನ್ ಭಾರತ್ ಯೋಜನೆ ಲಾಭ ಪಡೆಯಲು, ರಿಯಾಯಿತಿ ದರದಲ್ಲಿ ಅಕ್ಕಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹೀಗೆ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ; ರೈತರಿಗೆ ಗುಡ್ ನ್ಯೂಸ್; ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಆರಂಭ; ಬೆಲೆ ಎಷ್ಟು ನಿಗದಿ… ಇಲ್ಲಿದೆ ಡಿಟೈಲ್ಸ್
ಏನೆಲ್ಲಾ ಸೇವೆಗಳು ವಂಚಿತ? :
* ಎಪಿಎಲ್ ರದ್ದತಿಯಿಂದ ಗೃಹಲಕ್ಷ್ಮೀ ಯೋಜನೆಯಡಿ ಪಡೆಯುತ್ತಿದ್ದ ಹಣ ಸ್ಥಗಿತ
• ಕುಟುಂಬದ ಐಡಿ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲ್ಲ
• ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಆಗಲ್ಲ
* ವಿವಿಧ ಸರ್ಕಾರಿ ಸೌಲಭ್ಯಗಳು ಸಿಗಲ್ಲ ಈ ‘ಆಯುಷ್ಮಾನ್ ಭಾರತ’ ಯೋಜನೆ ಲಾಭ ಪಡೆಯಲು ಸಾಧ್ಯವಾಗಲ್ಲ
* ರಿಯಾಯಿತಿ ದರದಲ್ಲಿ ಪಡೆಯುತ್ತಿದ್ದ ಅಕ್ಕಿ ಸಿಗಲ್ಲ
* ಮುಂದಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳಿಗೆ ಎಪಿಎಲ್ ಕಡ್ಡಾಯ ಮಾಡಿದರೆ ಆ ಸೌಲಭ್ಯಗಳು ಸಿಗಲ್ಲ
* ಕೇಂದ್ರ ಸರ್ಕಾರದಿಂದ ನೀಡುವ ಮೀಸಲಾತಿ ದೊರೆಯಲ್ಲ.
ಇದನ್ನೂ ಓದಿ; ಯುವನಿಧಿ ಯೋಜನೆ ಫಲಾನುಭವಿಗಳ ಗಮನಕ್ಕೆ; ನ.25 ರೊಳಗೆ ತಪ್ಪದೇ ಈ ಕೆಲಸ ಮಾಡಿ!
22 ಲಕ್ಷ ಬಿಪಿಎಲ್ ರದ್ದಾಗಿತ್ತು:
ತಂತ್ರಾಂಶದ ಮೊರೆ ಹೋಗಿದ್ದ ಇಲಾಖೆ, 22,62,413 ಅನರ್ಹ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದುಪಡಿಸಿತ್ತು. ಇದರಲ್ಲಿ 10,97,621 ಅನರ್ಹ ಬಿಪಿಎಲ್, ಅಂತ್ಯೋದಯ 1,06,152 ಕಾರ್ಡ್‌ದಾರರು ಆದಾಯ ತೆರಿಗೆ ಪಾವತಿದಾರರು, 10,54,368 ಕಾರ್ಡ್‌ಗಳು 1.2 ಲಕ್ಷಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರು ಹಾಗೂ 4,272 ಚೀಟಿ ಕೆಜಿಐಡಿ, ಎಚ್ ಆರ್‌ಎಂಎಸ್‌ನಲ್ಲಿ ಜೋಡಣೆಯಾಗಿರುವವರನ್ನು ಡಿಲೀಟ್ ಮಾಡಲಾಯಿತು. ಈ ಮೇಲಿನವು ಸರ್ಕಾರ ನಿಗದಿಪಡಿಸಿದ್ದ ಮಾನದಂಡ ಉಲ್ಲಂಘಿಸಿ ಪಡೆದ ಪಡಿತರ ಚೀಟಿಗಳಾಗಿದ್ದವು.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳು ಕಡ್ಡಾಯ!
- ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
- ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಬೆಳೆ ಹಾನಿಗೊಳಗಾದ ರೈತರ ಬ್ಯಾಂಕ್ ಖಾತೆಗೆ ಇನ್ಪುಟ್ ಸಬ್ಸಿಡಿ ಜಮೆ!
- ರಾಜ್ಯದ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಗುಡ್ ನ್ಯೂಸ್; ಪಡಿತರ ಚೀಟಿ ವಿತರಣೆ ಆರಂಭ
- ರೇಷನ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ; ಇಂತಹವರಿಗೆ ಮುಂದಿನ ತಿಂಗಳಿನಿಂದ ಸಿಗಲ್ಲ ರೇಷನ್!
- ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಏನದು? ರೈತರೇ ಮಿಸ್ ಮಾಡ್ದೆ ಈ ಸುದ್ದಿ ಓದಿ
- ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
- ಪಡಿತರ ಚೀಟಿ ಹೊಂದಿರುವವರು ಓದಲೇಬೇಕು ಈ ಸುದ್ದಿ; ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ಕಾರ್ಡ್
- ಆಧಾರ್ ಕೇಂದ್ರದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ
- ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಈ ಯೋಜನೆಯಡಿ ಸಿಗಲಿದೆ ಸಾಲ ಸೌಲಭ್ಯ!; ಸಾಲಕ್ಕೆ ಯಾವುದೇ ಗ್ಯಾರಂಟಿಯ ಅಗತ್ಯವಿಲ್ಲ
- ಇನ್ಮುಂದೆ DL ಪಡೆಯುವುದು ಬಹಳ ಸುಲಭ; ಬರಲಿದೆ ಈ ಹೊಸ ನಿಯಮ
- ಪೋಷಕರ ಗಮನಕ್ಕೆ; ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಈ ದಾಖಲೆಗಳು ಕಡ್ಡಾಯ!
- ವಾಹನ ಖರೀದಿಸಲು ಸಬ್ಸಿಡಿ; ಆಧಾರ್ ಕಾರ್ಡ್ ಇದ್ರೆ ಈ ರೀತಿ ಅರ್ಜಿ ಸಲ್ಲಿಸಿ
- ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆ ನಷ್ಟ ಪರಿಹಾರ ಖಾತೆಗೆ ಜಮಾ!
- ಶ್ರೀಲಂಕಾದಿಂದ ಕಾಳು ಮೆಣಸು ಆಮದು; ಐದು ವಾರಗಳಲ್ಲಿ ಕುಸಿತ ಕಂಡ ಕರಿ ಚಿನ್ನ: ರೈತರಲ್ಲಿ ಆತಂಕ
- ಅಕ್ರಮ ಕಟ್ಟಡ ಮಾಲೀಕರಿಗೆ ಬಿಗ್ ಶಾಕ್; ಕಟ್ಟಡ ತೆರವುಗೊಳಿಸುವುದರ ಕುರಿತು ಮಖ್ಯ ಮಾಹಿತಿ ನೀಡಿದ ಡಿ.ಕೆ.ಶಿ






