MSY: ಮಿಷನ್‌ ಶಕ್ತಿ ಯೋಜನೆಯಡಿ ಜಾಬ್‌ ಆಫರ್

(MSY) ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಹಾಯಕ ಜಿಲ್ಲಾ ಸಂಯೋಜನಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಡಿಟೈಲ್ಸ್‌ ಇಲ್ಲಿದೆ ನೋಡಿ.


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಹಣಕಾಸು ಸಾಕ್ಷರತೆ ಮತ್ತು ಅಕೌಂಟೆಟ್ ನಲ್ಲಿ
ತಜ್ಞರು, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಹಾಯಕ ಜಿಲ್ಲಾ ಸಂಯೋಜನಕರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಇದನ್ನೂ ಓದಿ;  ಪೋಷಕರ ಗಮನಕ್ಕೆ; ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತು ಪೋಷಕರಿಗೆ ಮುಖ್ಯ ಮಾಹಿತಿ


ವಿದ್ಯಾರ್ಹತೆ:
* ಹಣಕಾಸು ಸಾಕ್ಷರತೆ ಮತ್ತು ಅಕೌಂಟೆಟ್ ನಲ್ಲಿ ತಜ್ಞರ ಹುದ್ದೆಗೆ: ಅರ್ಥಶಾಸ್ತ್ರ, ಬ್ಯಾಂಕಿಂಗ್, ಇತರೆ ವಿಭಾಗಗಳಲ್ಲಿ ಪದವೀಧರರು, ಸ್ನಾತಕೋತ್ತರ ಪದವಿ ಹೊಂದಿದವರಿಗೆ ಆದ್ಯತೆ ಸರ್ಕಾರಿ / ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
* ಕಂಪ್ಯೂಟರ್ ಬಳಕೆಯಲ್ಲಿ ಕನ್ನಡ / ಇಂಗ್ಲಿಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್. ಆಫೀಸ್ ಹಾಗೂ ಪಿ.ಪಿ.ಟಿ.ಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.


ಇದನ್ನೂ ಓದಿ;  ರೈತರಿಗೆ ಗುಡ್ ನ್ಯೂಸ್; ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಆರಂಭ; ಬೆಲೆ ಎಷ್ಟು ನಿಗದಿ… ಇಲ್ಲಿದೆ ಡಿಟೈಲ್ಸ್


* ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಹಾಯಕ ಜಿಲ್ಲಾ ಸಂಯೋಜನಕರ ಹುದ್ದೆಗೆ: ಕಂಪ್ಯೂಟರ್/ ಐಟಿ ಇತ್ಯಾದಿಗಳಲ್ಲಿ ಕೆಲಸ ಮಾಡುವ ಜ್ಞಾನದೊಂದಿಗೆ ಪದವಿ ಹೊಂದಿರಬೇಕು.
* ಸರ್ಕಾರಿ / ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
* ಕಂಪ್ಯೂಟರ್ ಬಳಕೆಯಲ್ಲಿ ಕನ್ನಡ / ಇಂಗ್ಲಿಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್. ಆಫೀಸ್ ಹಾಗೂ ಪಿ.ಪಿ.ಟಿ ಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

(MSY) ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಅಭ್ಯರ್ಥಿಗಳು ಉಪ ನಿರ್ದೇಶಕರವರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಹೆಚ್. ಮರಿಗೌಡ ರಸ್ತೆ, ಬೆಂಗಳೂರು -560029 ಇಲ್ಲಿಗೆ ತಮ್ಮ ವ್ಯಕ್ತಿಗತ ವಿವರ (Resume) ವನ್ನು ಎಲ್ಲಾ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ಯುವನಿಧಿ ಯೋಜನೆ ಫಲಾನುಭವಿಗಳ ಗಮನಕ್ಕೆ; ನ.25 ರೊಳಗೆ ತಪ್ಪದೇ ಈ ಕೆಲಸ ಮಾಡಿ!


ಕೊನೆಯ ದಿನಾಂಕ;
ನವೆಂಬರ್ 23

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-26578688 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MSY: ಮಿಷನ್‌ ಶಕ್ತಿ ಯೋಜನೆಯಡಿ ಜಾಬ್‌ ಆಫರ್
MSY: ಮಿಷನ್‌ ಶಕ್ತಿ ಯೋಜನೆಯಡಿ ಜಾಬ್‌ ಆಫರ್

ಇತ್ತೀಚಿನ ಜನಪ್ರಿಯ ಸುದ್ದಿಗಳು