property:- ಇ-ಖಾತೆ ಗೊಂದಲದಲ್ಲಿದ್ದ ಆಸ್ತಿ ಮಾಲೀಕರಿಗೆ ಭರ್ಜರಿ ಸುದ್ದಿ

(property:-) ಇ- ಖಾತಾ ಪಡೆಯುವ ಮುನ್ನ ತಮ್ಮ ಖಾತೆಯಲ್ಲಿನ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


ಹೌದು, ಆಸ್ತಿ ಮಾಲೀಕರು ಇ- ಖಾತಾ ಪಡೆಯುವ ಮುನ್ನ ತಮ್ಮ ಖಾತೆಯಲ್ಲಿನ ತಪ್ಪು ಸರಿಪಡಿಸಿಕೊಳ್ಳಲು ನವೆಂಬರ್ 18ರಿಂದ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ಆಯುಕ್ತ ಮುನೀಶ್ ಮೌದಿಲ್ ತಿಳಿಸಿದ್ದಾರೆ.


ಇದನ್ನೂ ಓದಿ;  ಪೋಷಕರ ಗಮನಕ್ಕೆ; ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತು ಪೋಷಕರಿಗೆ ಮುಖ್ಯ ಮಾಹಿತಿ


ಬಿಬಿಎಂಪಿ ವ್ಯಾಪ್ತಿಯಲ್ಲಿನ 22 ಲಕ್ಷ ಆಸ್ತಿಗಳಿಗೆ ಈಗಾಗಲೇ ಕರಡು ಇ- ಖಾತಾ ಸಿದ್ಧಪಡಿಸಲಾಗಿದೆ. ಕೆಲವು ಖಾತೆಯಲ್ಲಿ ವಿಸ್ತೀರ್ಣ, ಹೆಸರು ಸೇರಿ ಇತರೆ ಅಂಶಗಳು ತಪ್ಪಾಗಿ ನಮೂದಾದ ಬಗ್ಗೆ, ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ತಪ್ಪು ಮಾಹಿತಿಯನ್ನು ಸೂಕ್ತ ದಾಖಲೆ ನೀಡಿ ಸರಿಪಡಿಸಲು ಅವಕಾಶ ಕಲ್ಪಿಸಲಾಗುತ್ತಿದೆ.


ಇದನ್ನೂ ಓದಿ;  ರೈತರಿಗೆ ಗುಡ್ ನ್ಯೂಸ್; ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಆರಂಭ; ಬೆಲೆ ಎಷ್ಟು ನಿಗದಿ… ಇಲ್ಲಿದೆ ಡಿಟೈಲ್ಸ್


ಇ-ಖಾತಾ ಸಂಬಂಧ ದೂರು ಸಲ್ಲಿಕೆಗೆ ಪ್ರತ್ಯೇಕ ವೆಬೈಟ್ ರಚಿಸಲಾಗುವುದು ಮೂರು ವಾರಗಳಲ್ಲಿ ಜನರ ಬಳಕೆಗೆ ನೀಡಲಾಗುವುದು. ಸದ್ಯ ಸಹಾಯವಾಣಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಖಾತೆ ಬದಲಾವಣೆ ಸೇರಿ ಇತರೆ ವಿಚಾರದಲ್ಲಿ ಸಮಸ್ಯೆ ತಪ್ಪಿಸಲು ಇ- ಖಾತಾ ಸೇಲ್ ಡೀಡ್ ಹೊಂದಿರುವ ಆಸ್ತಿ ಮಾಲೀಕರು 7 ದಿನಗಳಲ್ಲಿ ತಮ್ಮ ಆಸ್ತಿ ಮಾರಾಟ ಮಾಡುವ ವ್ಯವಸ್ಥೆ ತರಲಾಗಿದೆ. ಖರೀದಿದಾರರ ಮತ್ತು ಮಾರಾಟಗಾರರ ಆಧಾರ್ ಪ್ರಮಾಣ ಪತ್ರವನ್ನು ಇದಕ್ಕೆ ಕಡ್ಡಾಯವಾಗಿ ನೀಡಬೇಕಿದೆ.


ಇದನ್ನೂ ಓದಿ; ಯುವನಿಧಿ ಯೋಜನೆ ಫಲಾನುಭವಿಗಳ ಗಮನಕ್ಕೆ; ನ.25 ರೊಳಗೆ ತಪ್ಪದೇ ಈ ಕೆಲಸ ಮಾಡಿ!


ಖಾಸಗಿ ಸೈಬರ್ ಕೇಂದ್ರಗಳ ಮೂಲಕವೂ ಇ ಖಾತಾ ನೀಡುವ ಚಿಂತನೆ ನಡೆಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಇ- ಖಾತಾ ವಿತರಣೆಗೆ ಹಣ ಕೇಳುವ ಸಿಬ್ಬಂದಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಬಹುದು ಎಂದು ಹೇಳಿದ್ದಾರೆ.

property:- ಇ-ಖಾತೆ ಗೊಂದಲದಲ್ಲಿದ್ದ ಆಸ್ತಿ ಮಾಲೀಕರಿಗೆ ಭರ್ಜರಿ ಸುದ್ದಿ
property:- ಇ-ಖಾತೆ ಗೊಂದಲದಲ್ಲಿದ್ದ ಆಸ್ತಿ ಮಾಲೀಕರಿಗೆ ಭರ್ಜರಿ ಸುದ್ದಿ

ಇತ್ತೀಚಿನ ಜನಪ್ರಿಯ ಸುದ್ದಿಗಳು