ಮರಕ್ಕೆ ಡಿಕ್ಕಿ ಹೊಡೆದ ಕಾರು; ಚಾಲಕ ಸ್ಥಳದಲ್ಲೇ ಸಾವು

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶರತ್(29) ಮೃತಪಟ್ಟ ವ್ಯಕ್ತಿ.

ಇದನ್ನೂ ಓದಿ;  ಚಾರ್ಮಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಓರ್ವ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ

ಇದನ್ನೂ ಓದಿ;  ಸಿಟ್ಟಿನಲ್ಲಿ ತಮ್ಮನ ಜೀವವನ್ನೇ ತೆಗೆದ ಅಣ್ಣ

ಸೋಮವಾರ ಶಿವಮೊಗ್ಗದಿಂದ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮಕ್ಕೆ ಕಿಯಾ ಕಾರಿನಲ್ಲಿ ಬರುತ್ತಿದ್ದ ಶರತ್ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜುಗುಜ್ಜಾಗಿದ್ದು, ಶರತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಕಾರಿನಲ್ಲಿ ಶರತ್ ಒಬ್ಬನೇ ಇದ್ದ ಕಾರಣ ಹಾಗೂ ಜಾಗದಲ್ಲಿ ಸಾರ್ವಜನಿಕರ ಓಡಾಟ ವಿರಳವಿದ್ದ ಕಾರಣ ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಬಾರ್ ಕ್ಯಾಷಿಯರ್ ನ ಬರ್ಬರ ಕೊಲೆ

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬಾರ್ ನ ಕ್ಯಾಷಿಯರ್ ನನ್ನು ಡ್ರ‍್ಯಾಗರ್ ನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಚಿನ್ ಕುಮಾರ್ (27) ಕೊಲೆಯಾದ ವ್ಯಕ್ತಿ.

ಇದನ್ನೂ ಓದಿ; ತರೀಕೆರೆ ಶಾಸಕರ ಅಭಿನಂದನಾ ಸಮಾರಂಭದಲ್ಲೇ ವ್ಯಕ್ತಿಯ ಬರ್ಬರ ಕೊಲೆ

ನಿನ್ನೆ ರಾತ್ರಿ 10.00 ಗಂಟೆಗೆ ಬಾರ್ ಗೆ ಕುಡಿಯಲು ಬಂದಿದ್ದ ಮೂರು ಜನ ಆರೋಪಿಗಳು ರಾತ್ರಿ 11.30 ಆದರೂ ಮದ್ಯ ಸೇವಿಸುತ್ತಿದ್ದರು. “11.30 ಆಗಿದೆ ಬಂದ್ ಮಾಡ್ತೇವೆ ಹೊರಡಿ” ಎಂದು ಕ್ಯಾಶಿಯರ್ ಹೇಳಿದ್ದಕ್ಕೆ ಮೂವರು ಖ್ಯಾತೆ ತೆಗೆದಿದ್ದಾರೆ.

“ನಮ್ದು ಇನ್ನು ಕುಡಿದು ಮುಗಿದಿಲ್ಲ, ನಾವು ಹೋಗಲ್ಲ ಏನ್ ಮಾಡ್ತೀಯಾ” ಅಂತಾ ಆರೋಪಿಗಳು ಗಲಾಟೆ ಮಾಡಿ ಯುವಕನ ಎದೆಗೆ ಡ್ರ‍್ಯಾಗರ್ ನಿಂದ ಚುಚ್ಚಿದ್ದಾರೆ. ಇದೆ ವೇಳೆ 112 ವಾಹನ ಕೂಡ ಬಂದಿದ್ದು, ಪೊಲೀಸರ ಎದುರೆ ಜಗಳ ನಡೆದು ಕೊಲೆಯಾಗಿದೆ. ನಿರಂಜನ, ಸತೀಶ, ಅಶೋಕನಾಯ್ಕ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ; ಡ್ರೈವಿಂಗ್ ಸ್ಕೂಲ್ ಕುಮಾರಣ್ಣ ಇನ್ನಿಲ್ಲ, ಅನಾರೋಗ್ಯ ಕಾರಣದಿಂದ ನಿಧನ

ಇನ್ನು ಮೃತ ಸಚಿನ್ ಗೆ ಆಯನೂರು ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವ ಮೊದಲೇ ಸಚಿನ್ ಸಾವನ್ನಪ್ಪಿದ್ದಾನೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ; ಪೈಪ್ ಲೈನ್ ದುರಸ್ತಿ ಕಾಮಗಾರಿಯಿಂದ ತೊಂದರೆ: ಸ್ಥಳೀಯರ ಪ್ರತಿಭಟನೆ