YouTube Tricks: ಯೂಟ್ಯೂಬ್ ನಲ್ಲಿ ಅಶ್ಲೀಲ ವಿಡಿಯೋಗಳು ಕಾಣಿಸುತ್ತಿವೆಯಾ?

YouTube Tricks: ಪ್ರಸ್ತುತ ಡಿಜಿಟಲ್ ಜಾಹಿರಾತು ಮಾರುಕಟ್ಟೆ ಹೆಚ್ಚು ಮುಂಚೂಣಿಯಲ್ಲಿ ಸಾಗಿದೆ. ನೀವು ಯಾವುದೋ ಒಂದು ವಿಡಿಯೋವನ್ನು ನೋಡಲು ಯೂಟ್ಯೂಬ್ ಅನ್ನು ಒಪನ್ ಮಾಡುತ್ತೀರಿ. ಮತ್ತು ಯೂಟ್ಯೂಬ್ ಆ್ಯಪ್ ಅನ್ನು ಸುಮ್ಮನೆ ಆ್ಯಪ್ ಅನ್ನು ಸ್ಕ್ರೋಲ್ ಮಾಡುತ್ತೀರಾ. ಕೆಲವು ಅಶ್ಲೀಲ ಅಸಹ್ಯಕರವಾದ ವಿಡಿಯೋಗಳು ಕಾಣಿಸಬಹುದು. ಇದರಿಂದಾಗಿ ಖಂಡಿತವಾಗಿಯೂ ನಿಮಗೆ ಮುಜುಗರ ಉಂಟಾಗಬಹುದು. ಒಂದು ವೇಳೆ ಮನೆಯಲ್ಲಿ ನಿಮ್ಮ ಕುಟುಂಬದ ಸದಸ್ಯರುಗಳು ಯಾರಾದರೂ ಯೂಟ್ಯೂಬ್ ತೆರೆದಾಗ ಇಂತಹ ವಿಡಿಯೋಗಳು ಕಂಡರೆ ಅವರಿಗೂ ಮುಜುಗರವಾಗಬಹುದು. ಹಾಗಾದರೆ. ಇಂತಹ ಅಶ್ಲೀಲ ವಿಡಿಯೋಗಳು ನಿಮ್ಮ ಯೂಟ್ಯೂಬ್ ಆ್ಯಪ್ ನಲ್ಲಿ ಕಾಣಿಸದಂತೆ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ತಿಳಿಯೋಣ.

ಇದನ್ನೂ ಓದಿ; ಮೂಡಿಗೆರೆ: ಅರ್ಧ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಈ ಬಗ್ಗೆ ನೀವು ತಿಳಿಯುವ ಮೊದಲು ಮತ್ತೊಂದು ವಿಷಯ ನಿಮಗೆ ತಿಳಿದಿರಬೇಕು. ಯೂಟ್ಯೂಬ್ ಯಾವಾಗಲೂ ತನ್ನ ಬಳಕೆದಾರರ ವಿಡಿಯೋ ವೀಕ್ಷಣೆ ಅಭಿರುಚಿಯಂತೆ, ವಿಡಿಯೋಗಳನ್ನು ವೀಕ್ಷಿಸಲು ಶಿಫಾರಸು ಮಾಡುತ್ತದೆ. ಅಂದರೆ, ನೀವು ಅಂತಹ ಅಶ್ಲೀಲ ವಿಡಿಯೋಗಳನ್ನು ಹೆಚ್ಚು ಸರ್ಚ್ ಮಾಡಿ ಹುಡುಕಿದ್ದರೆ ಅಥವಾ ಅಚಾನಾಕ್ ಆಗಿ ಶಿಫಾರಸ್ಸು ಮಾಡಿರುವ ಅಂತಹ ವಿಡಿಯೋವನ್ನು ಹೆಚ್ಚು ಸಮಯ ವೀಕ್ಷಿಸಿದ್ದರೆ, ನಿಮ್ಮ ಯೂಟ್ಯೂಬ್ ನಲ್ಲಿ ಅಶ್ಲೀಲ ವಿಡಿಯೋಗಳು ಕಾಣಿಸುತ್ತವೆ ಎಂಬುದನ್ನು ನೀವು ತಿಳಿದಿರಬೇಕು.

YouTube Tricks:
YouTube Tricks:

ಇದನ್ನೂ ಓದಿ; ಕಳಸ: 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆ

ಯೂಟ್ಯೂಬ್ ಆ್ಯಪ್ ನಲ್ಲಿ ಹೇಗೆ ಅಗತ್ಯವಿಲ್ಲದ ವಿಡಿಯೋ ಶಿಫಾರಸುಗಳನ್ನು ನಿಲ್ಲಿಸುವುದು:
* ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಯೂಟ್ಯೂಬ್ ಆ್ಯಪ್ ತೆರೆಯರಿ.
* ನಂತರ ನೀವು ವೀಕ್ಷಿಸಲು ಇಚ್ಛೆಪಡದ ಶಿಫಾರಸ್ಸು ವಿಡಿಯೋ ಅಲ್ಲಿ ಕಾಣಿಸಿದರೆ ವಿಡಿಯೋ ಪಕ್ಕದಲ್ಲಿ ಮುಂದೆ ಇರುವ
* ಡಾಟ್ ಮೆನುವನ್ನು ಆಯ್ಕೆ ಮಾಡಿ.
* ಅಲ್ಲಿ ಚಾನಲ್ ಶಿಫಾರಸು ಮಾಡಬೇಡಿ ಎಂಬ ಆಯ್ಕೆ ಕ್ಲಿಕ್ ಮಾಡಿ
* ನಂತರ, ಈ ಚಾನಲ್‌ನಿಂದ ಮತ್ತೆ ಯಾವ ವಿಡಿಯೋಗಳನ್ನು ಶಿಫಾರಸು ಮಾಡಲ್ಲ ಎಂಬ ಪಾಪ್ ಆ್ಯಪ್ ನಿಮಗೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
* ಈಗ ಆ ವಿಷಯಾಧಾರಿತ ಯಾವುದೇ ವಿಡಿಯೋಗಳು ನಿಮಗೆ ಕಾಣಿಸುವುದಿಲ್ಲ.


ಇತ್ತೀಚಿನ ಜನಪ್ರಿಯ ಸುದ್ದಿಗಳು   


YouTube Tricks: ಅಗತ್ಯವಿಲ್ಲದ ವಿಡಿಯೋ ಶಿಫಾರಸುಗಳನ್ನು ನಿಲ್ಲಿಸಲು ಹೀಗೂ ಮಾಡಬಹುದು:
* ಯೂಟ್ಯೂಬ್ ಆ್ಯಪ್ ತೆರೆಯಿರಿ.
* ನಂತರ ನಿಮ್ಮ ಅಕೌಂಟ್ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ
* ಬಳಿಕ, ಸೆಟ್ಟಿಂಗ್ಸ್ ತೆರೆದು.
* ನೋಟಿಫಿಕೇಷನ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* Recommend ವೀಡಿಯೋಸ್ ಆಯ್ಕೆಯನ್ನು ಆಫ್ ಮಾಡಿ.
* ಈಗ ವಿಡಿಯೋ ತೆಗೆಯಲಾಗಿದೆ ಎಂಬ ಪಾಪ್‌ ಅಪ್ ಕಾಣುತ್ತದೆ.
* ನಂತರ, ಏಕೆ ಹೇಳಿ..? ಕ್ಲಿಕ್ ಮಾಡಿ.
* ವಿಡಿಯೋ ನನಗೆ ಇಷ್ಟವಾಗಲಿಲ್ಲ ಆಯ್ಕೆ ಕ್ಲಿಕ್ ಮಾಡಿ ಸಮಸ್ಯೆಯನ್ನು ತಪ್ಪಿಸಬಹುದು.
ಈ ಮೂಲಕ ಯೂಟ್ಯೂಬ್ ನಲ್ಲಿ ಇಂತಹ ವಿಡಿಯೋಗಳು ಕಾಣಿಸದಂತೆ ಮಾಡಿ ನೀವು ಮುಜುಗರದಿಂದ ಪಾರಾಗಬಹುದು.

ಇದನ್ನೂ ಓದಿ; ಮೂಡಿಗೆರೆ: ಕೇದಾರನಾಥ ಯಾತ್ರೆ ಸಂದರ್ಭ ಮೃತಪಟ್ಟಿದ ಯುವಕ; ಗಿರೀಶ್ ಮನೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ