Workers’ pension scheme: ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ

Workers’ pension scheme: ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೃದ್ಧಾಪ್ಯ, ಮರಣಾ ನಂತರ ಕುಟುಂಬಕ್ಕೆ ಆಸರೆಯಾಗುವ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. 60 ವರ್ಷ ವೃದ್ದ ವಯಸ್ಸು ತುಂಬಿದವರಿಗೆ ಮಾಸಿಕ 3000 ರೂ. ಪಿಂಚಣಿ, ಅಂಗವಿಕಲರಿಗೆ 2000 ರೂ. ಹಾಗೂ ಮರಣಾ ನಂತರ ಕುಟುಂಬಕ್ಕೆ 1500 ರೂ. ಪಿಂಚಣಿ ಲಭ್ಯವಿದೆ. ಶೈಕ್ಷಣಿಕ, ಹೆರಿಗೆ, ಮದುವೆ, ಉಪಕರಣಗಳ ನೇರವು ಕೂಡಾ ಇದೆ.

ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ರಾಜ್ಯದಲ್ಲಿರುವ ಲಕ್ಷಾಂತರ ಕಾರ್ಮಿಕರ ಹಿತ ರಕ್ಷಣೆಯ ದೃಷ್ಟಿಯಿಂದ ಹಲವಾರು ಆರ್ಥಿಕ ನೆರವಿನ ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯವಾಗಿ ವೃದ್ಧಾಪ್ಯದಲ್ಲಿ ಆಸರೆಯಾಗುವ ಮಾಸಿಕ ಪಿಂಚಣಿ ಮತ್ತು ಕಾರ್ಮಿಕರ ಮರಣದ ನಂತರ ಅವರ ಕುಟುಂಬಕ್ಕೆ ಆಸರೆಯಾಗುವ ಕುಟುಂಬ ಪಿಂಚಣಿ ಸೌಲಭ್ಯಗಳು ಸೇರಿವೆ. ಕುಟುಂಬದಲ್ಲಿ ದುಡಿಯುವ ವ್ಯಕ್ತಿಗೆ 60 ವರ್ಷಗಳು ತುಂಬಿದ ಸಂದರ್ಭದಲ್ಲಿ ಮಾಸಿಕ ಪಿಂಚಣಿ ಸೌಲಭ್ಯ ದೊರೆಯಲಿದೆ. ಒಂದು ವೇಳೆ ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಕುಟುಂಬದ ನಿರ್ವಹಣೆಗೆ ಪಿಂಚಣಿ ನೀಡಲಾಗುತ್ತದೆ. ಇದರ ಜೊತೆಗೆ ಇನ್ನಿತರ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

ಕಟ್ಟಡ ಕಾರ್ಮಿಕರಿಗಾಗಿ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯನ್ನು “ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪಿಂಚಣಿ ಮತ್ತು ಕಲ್ಯಾಣ ಯೋಜನೆ” ಎಂದು ಕರೆಯಲಾಗುತ್ತದೆ. ಮಾಸಿಕ ಪಿಂಚಣಿ 60 ವರ್ಷ ಪೂರೈಸಿ ನೋಂದಾಯಿತ ಫಲಾನುಭವಿಗೆ ಪ್ರತಿ ತಿಂಗಳು 3,000 ರೂ. ಗಳ ಪಿಂಚಣಿ ನೀಡಲಾಗುತ್ತದೆ. ಒಂದು ವೇಳೆ ಕಾರ್ಮಿಕರು ಕಾಯಿಲೆ ಅಥವಾ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ 2,000 ರೂ. ಪಿಂಚಣಿ ನೀಡಲಾಗುತ್ತದೆ. ಅದಲ್ಲದೆ ಅಂಗವಿಕಲತೆಯ ತೀವ್ರತೆಯ ಆಧಾರದ ಮೇಲೆ 2,00,000 ರೂ. ವರೆಗೆ ಅನುಗ್ರಹ ರಾಶಿ ಸಹಾಯಧನ ದೊರೆಯುತ್ತದೆ.

ಇದನ್ನೂ ಓದಿ: ಆಧಾರ್‌ ಸೇವಾ ಕೇಂದ್ರದಲ್ಲಿ ಜಾಬ್‌, ಅರ್ಜಿ ಆಹ್ವಾನ

ಅರ್ಹತೆಗಳು:
* ಅರ್ಜಿದಾರರು ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು.
* ಕನಿಷ್ಠ 60 ವಯೋಮಿತಿ ಹೊಂದಿರಬೇಕು.
* 60 ವರ್ಷ ಪೂರ್ಣಗೊಳ್ಳುವ ಮೊದಲು ಕನಿಷ್ಠ 3 ವರ್ಷಗಳ ಕಾಲ ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿರಬೇಕು.
* ವರ್ಷಕ್ಕೆ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು.

ಪ್ರಮುಖ ದಾಖಲೆಗಳು:
* ಮೃತ ಕಾರ್ಮಿಕನ ಮರಣ ಪ್ರಮಾಣ ಪತ್ರ.(Death certificate of deceased worker)
* ಕಂದಾಯ ಇಲಾಖೆಯಿಂದ ಪಡೆದ ವಾರಸುದಾರರ ಪ್ರಮಾಣ ಪತ್ರ.(Inheritance Certificate obtained from Revenue Department)
* ಬ್ಯಾಂಕ್ ಪಾಸ್ ಬುಕ್(Bank pass book)
* ಆಧಾರ್ ಕಾರ್ಡ್(Aadhaar Card)
* ಭಾವಚಿತ್ರ(Photos)

Workers' pension scheme: ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ
Workers’ pension scheme: ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Workers’ pension scheme:)

    1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
    2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
    3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
    4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
    5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ