Online Property Details: ಆಸ್ತಿದಾರರಿಗೆ ಸಿಹಿ ಸುದ್ದಿ; ಇ-ಖಾತಾ ಅಪ್ಡೇಟ್‌

Online Property Details: ಪ್ರಸ್ತುತ ದಿನಗಳಲ್ಲಿ ಒಂದು ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಅತೀ ಮುಖ್ಯವಾಗಿದೆ. ಹಾಗೇ ಹೇಳುವದಾದರೆ ನೀವು ಹೊಸ ಮನೆಯನ್ನು ಕಟ್ಟುವ ಯೋಜನೆಯನ್ನು ಹೊಂದಿದ್ದರೆ, ಜಾಗದ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಮುಖ್ಯವಾಗಿ ದಾಖಲೆಗಳು ಸರಿಯಾಗಿರಬೇಕಾಗುತ್ತದೆ. ಅಂತಹ ಸಮಸ್ಯೆಯಿಂದ ಪಾರಾಗಲು ಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ನೂತನ ಇ-ಸ್ವತ್ತು 2.0 ವೆಬ್ಸೈಟ್ ಅನ್ನು ಬಿಡುಗಡೆಗೊಳಿಸಿದೆ.

ಇ-ಸ್ವತ್ತು ಎಂದರೆ ಮೋಬೈಲ್‌ ಮೂಲಕ ಗ್ರಾಮೀಣ ಭಾಗದ ಸಾರ್ವಜನಿಕರು ಮನೆಯಿಂದಲೇ ತಮ್ಮ ಮೊಬೈಲ್ ಮೂಲಕವೇ ಹಳ್ಳಿಯ ಆಸ್ತಿಯ ವಿವರವನ್ನು ತಿಳಿದುಕೊಳ್ಳಬಹುದು. ಇನ್ನಿತರೆ ಅಗತ್ಯ ದಾಖಲೆಗಳನ್ನು ಪಡೆಯಲು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಯ ದಾಖಲೆಯ ವಿವರ ಮತ್ತು ಮಾಲೀಕರ ಪಕ್ಕ ಮಾಹಿತಿಯನ್ನು ಸಾರ್ವಜನಿಕರು ತಮ್ಮ ಮೊಬೈಲ್‌ ಮೂಲಕವೇ ಚೆಕ್‌ ಮಅಡಬಹುದು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯಸರ್ಕಾರದಡಿ ಕಾರ್ಯನಿರ್ವಹಿಸುತ್ತಿದ್ದು, ಮೊಬೈಲ್ ಮೂಲವೇ ಚೆಕ್ ಮಾಡಿಕೊಳ್ಳಲು ಅಧಿಕೃತ ತಂತ್ರಾಂಶವನ್ನು ಹೊಂದಿದೆ.

ಉಪಯೋಗಗಳು:
* ನಾಗರಿಕರು ಪಂಚಾಯತ್ ಕಚೇರಿಗೆ ಪದೇ ಪದೇ ಅಲೆಯದೆ, ಮನೆಯಲ್ಲೇ ಕುಳಿತು ಇ-ಸ್ವತ್ತು 2.0 ಪೋರ್ಟಲ್ ಮೂಲಕ ಇ-ಖಾತಾ ಪಡೆಯಬಹುದು.
* ಆಸ್ತಿ ಖರೀದಿಗೆ, ಮಾರಾಟಕ್ಕೆ ಮತ್ತು ನೋಂದಣಿ ಪ್ರಕ್ರಿಯೆಗಳು ಸರಳ ಮತ್ತು ವೇಗವಾಗುತ್ತವೆ.
* ಇ-ಖಾತಾ ಇದ್ದರೆ ಮಾತ್ರ ಬ್ಯಾಂಕ್‌ಗಳಲ್ಲಿ ಆಸ್ತಿಯ ಮೇಲೆ ಸಾಲ ಪಡೆಯಬಹುದು.
* ಆಸ್ತಿ ವಿವರಗಳ ಡಿಜಿಟಲೀಕರಣದಿಂದ ದಾಖಲೆಗಳಲ್ಲಿನ ಲೋಪದೋಷಗಳು ಕಡಿಮೆಯಾಗುತ್ತವೆ.
* ಈ ವ್ಯವಸ್ಥೆಯು ಕೃಷಿಯೇತರ ಆಸ್ತಿಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡುತ್ತದೆ.
* ಗ್ರಾಮೀಣ ಆಸ್ತಿ ಮೌಲ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: ಆಧಾರ್‌ ಸೇವಾ ಕೇಂದ್ರದಲ್ಲಿ ಜಾಬ್‌, ಅರ್ಜಿ ಆಹ್ವಾನ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅವಕಾಶ
E-Swathu/E-Khatha Online Application ಮೇಲೆ ಕ್ಲಿಕ್‌ ಮಾಡಿ ಇ-ಸ್ವತ್ತು 2.0 ತಂತ್ರಾಂಶವನ್ನು ಪ್ರವೇಶ ಮಾಡಿ ನಂತರ ಹೊಸ ಖಾತಾ” ಬಟನ್ ಮೇಲೆ ಕ್ಲಿಕ್ ಮಾಡಿ.ಮೊಬೈಲ್‌ ನಂಬರ್‌ ಹಾಕಿ ಕ್ಯಾಪ್ಚ್ ಕೋಡ್ ನಮೂದಿಸಿ ಹಾಕಿರುವ ಮೊಬೈಲ್‌ ಸಂಖ್ಯೆಯಿಂದ OTP ಬರುತ್ತದೆ, ಆಮೇಲೆ ಲಾಗಿನ್‌ ಅಗಬೇಕು. ನಂತರ ಕೇಳುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ, ಇ-ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Online Property Details:  ಆಸ್ತಿದಾರರಿಗೆ ಸಿಹಿ ಸುದ್ದಿ; ಇ-ಖಾತಾ ಅಪ್ಡೇಟ್‌
Online Property Details: ಆಸ್ತಿದಾರರಿಗೆ ಸಿಹಿ ಸುದ್ದಿ; ಇ-ಖಾತಾ ಅಪ್ಡೇಟ್‌

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Online Property Details:)

    1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
    2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
    3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
    4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
    5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ