(Kisan Yojana) ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕಳೆದ ವರ್ಷ ದೇಶಾದ್ಯಂತ 1.16 ಲಕ್ಷ ರೈತರು ಸ್ವಯಂಪ್ರೇರಣೆಯಿಂದ ತ್ಯಜಿಸಿದ್ದಾರೆ. ಹೌದು, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಜೂನ್ 2023 ರಿಂದ ಮೇ 2024 ರವರೆಗೆ ದೇಶಾದ್ಯಂತ ವಾರ್ಷಿಕ ರೂ. 6,000 ಪಡೆಯುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಪ್ರಯೋಜನಗಳನ್ನು ಸ್ವಯಂಪ್ರೇರಣೆಯಿಂದ 1.16 ಲಕ್ಷ ರೈತರು ತ್ಯಜಿಸಿದ್ದಾರೆ. ಈ ಪಟ್ಟಿಯಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ರಾಜಸ್ಥಾನವು ಅಗ್ರಸ್ಥಾನದಲ್ಲಿದೆ ಎನ್ನಲಾಗಿದೆ. ಅದರಲ್ಲಿ ಬಿಹಾರ 29,176 ರೈತರ ಕುಟುಂಬಗಳು, ಉತ್ತರ ಪ್ರದೇಶದ 26,593 ಮತ್ತು ರಾಜಸ್ಥಾನದ 10,343 ರೈತರು ಯೋಜನೆಯನ್ನು ತ್ಯಜಿಸಿದ್ದಾರೆ.
ಇದನ್ನೂ ಓದಿ: ಬಡ್ಡಿ ರಹಿತ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್; 3 ಲಕ್ಷ ವರೆಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಸ್ವಯಂಪ್ರೇರಿತವಾಗಿ ನಿರ್ಗಮಿಸುವ ಅವಕಾಶ:
ಕೃಷಿ ಸಚಿವಾಲಯವು ಕಳೆದ ವರ್ಷ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಸೈಟ್ ನಲ್ಲಿ ಮಾಡ್ಯೂಲ್ ಅನ್ನು ಪರಿಚಯಿಸಿದ್ದು ಇದರಲ್ಲಿ ರೈತರು ಸ್ವಯಂಪ್ರೇರಿತವಾಗಿ ಯೋಜನೆಯಿಂದ ನಿರ್ಗಮಿಸುವ ಅವಕಾಶ ಇದೆ.
ಭೂಮಾಲೀಕರ ಬದಲಾವಣೆ, ಯೋಜನೆಗೆ ಅರ್ಹರಲ್ಲದ ತೆರಿಗೆ ಪಾವತಿದಾರರಿಗೆ ವರ್ಗಾವಣೆಯಾದ ಜಮೀನು ಸಬ್ಸಿಡಿ ಪಡೆಯದಿರುವ ನಿರ್ಧಾರಗಳು ಯೋಜನೆಯ ಪ್ರಯೋಜನ ತ್ಯಜಿಸಲು ಕಾರಣಗಳಾಗಿವೆ.
ಪಿಎಂ-ಕಿಸಾನ್ ಪೋರ್ಟಲ್ ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ ಯೋಜನೆ ಪ್ರಯೋಜನ ತ್ಯಜಿಸಲು ಸಿದ್ಧರಿರುವ ರೈತರು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಅಗತ್ಯವಿದೆ. ನಂತರ ತಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ ಅನ್ನು ಜನರೇಟ್ ಮಾಡಿದರೆ ಪಿಎಂ-ಕಿಸಾನ್ ಫಲಾನುಭವಿಯನ್ನು ಗುರುತಿಸಲಾಗುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 33 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅದರ ನಂತರ ಫಲಾನುಭವಿಯು ಯೋಜನೆಯ ಪ್ರಯೋಜನಗಳನ್ನು ಬಿಟ್ಟುಕೊಡಬಹುದು. ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ಅರ್ಹ ರೈತ ಕುಟುಂಬಗಳು ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6,000 ರೂ ಪಡೆಯುತ್ತವೆ. ಈ ಯೋಜನೆಯನ್ನು ಫೆಬ್ರವರಿ 2019 ರಂದು ಪ್ರಾರಂಭಿಸಲಾಯಿತು.
ಇದನ್ನೂ ಓದಿ: ಮಾರ್ಕೆಟ್ ನಲ್ಲಿ ಕರಡಿ ಕುಣಿತ.. ಮೊದಲೇ ಕೊಟ್ಟಿತ್ತು ಸೂಚನೆ; ಷೇರು ಖರೀದಿಸಲು ಯೋಚಿಸುತ್ತಿದ್ದೀರಾ..?
ಇದೀಗ ಪಿಎಂ-ಕಿಸಾನ್ 16 ಕಂತುಗಳನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ. ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಾಕಿಯಿರುವ 17 ನೇ ಕಂತಿನ ಹಣವನ್ನು ಯಾವುದೇ ಸಮಯದಲ್ಲಿ ಬಿಡುಗಡೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರೈತರೇ ಗಮನಿಸಿ; ಪಿಎಂ ಫಸಲ್ ಭೀಮಾ ಯೋಜನೆ; ಈ ಯೋಜನೆಯ ಉದ್ದೇಶವೇನು? ಅರ್ಜಿ ಸಲ್ಲಿಕೆ ಹೇಗೆ?
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
- ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
- ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
- ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
- ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್; ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ






