Union Budget 2024: ಕೇಂದ್ರ ಬಜೆಟ್: ಮುಖ್ಯಾಂಶ ಇಲ್ಲಿದೆ ನೋಡಿ

(Union Budget 2024) ಕೇಂದ್ರ ಸರ್ಕಾರ ಇಂದು 2024-25 ಸಾಲಿನ ಬಜೆಟ್​​ ಮಂಡನೆ ಮಾಡುತ್ತಿದ್ದಾರೆ. ಹಲವು ಕ್ಷೇತ್ರಗಳಿಗೆ ಮಹತ್ವದ ಅನುದಾನ ನೀಡಿದ್ದಾರೆ. ಇದರಲ್ಲಿ ಯಾವ ಕ್ಷೇತ್ರಕ್ಕೆ ಏನು ಅನುದಾನ ನೀಡಿದೆ ಎಂಬ ಮುಖ್ಯಾಂಶ ಇಲ್ಲಿದೆ ನೋಡಿ


ಇದನ್ನೂ ಓದಿ: ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ


• ಬಡವರು, ಮಹಿಳೆಯರು, ಯುವಕರು ಮತ್ತು ರೈತರತ್ತ ಚಿತ್ರ
• ಭಾರತದ ಆರ್ಥಿಕತೆ ವೃದ್ಧಿಯಾಗಿದೆ
• ರೈತರು ಮತ್ತು ಕಾರ್ಮಿಕರಿಗೆ ಶಕ್ತಿ ನೀಡಲಾಗಿದೆ.
• ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲು
• ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ
• ಕೃಷಿ ಕ್ಷೇತ್ರ, ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಒತ್ತು
• ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು
• ವಿಕಸಿತ ಭಾರತಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು
• ಸಂಶೋಧನೆ ಸೇರಿ ಹಲವು ಕ್ಷೇತ್ರಗಳಿಗೆ ಒತ್ತು
• ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು
• ಕೃಷಿ ಕ್ಷೇತ್ರದಲ್ಲೂ ಡಿಜಿಟಲೀಕರಣ ತರಲು ನಿರ್ಧಾರ
• 100 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೇ
• ಕೃಷಿ ಮತ್ತು ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ
• ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು
• ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ


• ಗ್ರಾಮೀಣ ಭಾಗದಲ್ಲಿ ಆರ್ಥಿಕತೆಗೆ ಹೆಚ್ಚಿನ ಒತ್ತು
• ಉದ್ಯೋಗ ಸೃಷ್ಟಿಗೆ ಮೂರು ಕೌಶಲ್ಯ ಜಾರಿಗೆ
• ತರಕಾರಿ ಬೆಳೆಗಳ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ
• 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ಧಿ ಯೋಜನೆ
• 1000 ಕೈಗಾರಿಕಾ ತರಬೇತಿ ಕೇಂದ್ರಗಳ ಸ್ಥಾಪನೆ
• ಮಹಿಳಾ ಉದ್ಯೋಗಿಗಳಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಆದ್ಯತೆ
• ಉನ್ನತ ಶಿಕ್ಷಣಕ್ಕೆ ಲೋನ್: 10 ಲಕ್ಷದವರೆಗೆ ಅವಕಾಶ
• ಕೌಶಲ್ಯಾಭಿವೃದ್ಧಿ ತರಬೇತಿಗೆ ಸಾಲ 7.5 ಲಕ್ಷಕ್ಕೆ ಹೆಚ್ಚಳ
• 1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್ ನೀಡುವ ಯೋಜನೆ
• 30 ಲಕ್ಷ ಯುವಕರಿಗೆ ಉದ್ಯೋಗ
• ಯುವಕರಿಗೆ 4 ವರ್ಷ ಆರ್ಥಿಕ ನೆರವು
• ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಂಪರ್ ಕೊಡುಗೆ
• ಬಿಹಾರಕ್ಕೆ ಹೆದ್ದಾರಿ ಎಕ್ಸ್‌ಪ್ರೆಸ್ ರಸ್ತೆ ಯೋಜನೆ ಘೋಷಣೆ
• ಆಂಧ್ರಪ್ರದೇಶಕ್ಕೆ ಪುನರ್‌ ನಿರ್ಮಾಣಕ್ಕೆ ಅಸ್ತು
• ಅಮೃತ್‌ ಸರ್ -ಗಯಾ ಆರ್ಥಿಕ ಕಾರಿಡಾರ್ ಘೋಷಣೆ
• ಆಂಧ್ರಪ್ರದೇಶಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ
• ಹೈದರಾಬಾದ್ – ಬೆಂಗಳೂರು ಕಾರಿಡಾರ್ ಘೋಷಣೆ

• ಬಿಹಾರಕ್ಕೆ ವಿಮಾನ ನಿಲ್ದಾಣ ಮತ್ತು ಮೆಡಿಕಲ್ ಕಾಲೇಜು
• ಆಂಧ್ರ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್
• ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ. ಮೀಸಲು
• ಮಹಿಳಾ ಅಭಿವೃದ್ಧಿಗೆ 3 ಲಕ್ಷ ಕೋಟಿ ಮೀಸಲು
• ಬಿಹಾರಕ್ಕೆ 26 ಸಾವಿರ ಕೋಟಿ ವಿಶೇಷ ಅನುದಾನ
• ಮುದ್ರಾ ಲೋನ್ ಮಿತಿ 10 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಳ
• ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಅನುದಾನ
• ದೇಶಾದ್ಯಂತ ಆಹಾರ ಗುಣಮಟ್ಟ ಪರೀಕ್ಷೆ ಲ್ಯಾಬ್‌ಗಳ ಸ್ಥಾಪನೆ
• ಸಣ್ಣ ಕೈಗಾರಿಕೆಗಳಿಗೆ ಸ್ವಯಂ ಸಹಾಯ ನಿಧಿ ಸ್ಥಾಪನೆ
• 12 ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆ
• 1 ಕೋಟಿ ಯುವಕರಿಗೆ ಹೊಸ ಇಂಟರ್ನ್ ಶಿಪ್ ಯೋಜನೆ
• ಯುವಕರಿಗೆ 12 ತಿಂಗಳು ತರಬೇತಿ ಮತ್ತು 6 ಸಾವಿರ ಇಂಟರ್ನ್‌ ಶಿಪ್
• ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ

• ಕೈಗಾರಿಕಾ ನೌಕರರಿಗೆ ಪಿಪಿಪಿ ಮಾಡೆಲ್‌ನಲ್ಲಿ ಮನೆ ನಿರ್ಮಾಣ ಯೋಜನೆ
• ಕಾರ್ಮಿಕರ ಅಭ್ಯುದಯಕ್ಕೆ ಹೆಚ್ಚಿನ ಒತ್ತು
• 500 ಸಂಸ್ಥೆಗಳಿಗೆ ಯುವಕರಿಗೆ ಇಂಟರ್ನ್‌ ಶಿಪ್
• ಶೂರಿಟಿ ಇಲ್ಲದೆ ಕೈಗಾರಿಕೆಗಳಿಗೆ ಬೃಹತ್ ಯಂತ್ರೋಪಕರಣ ಖರೀದಿ
• ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಹೊಸ ಮನೆಗಳ ನಿರ್ಮಾಣ
• 1 ಕೋಟಿ ನಗರದ ಬಡವರಿಗೆ ಮನೆ ಕಟ್ಟಲು ನೆರವು
• ನಗರಗಳ ಪುನರಾಭಿವೃದ್ಧಿಗೆ ಆರ್ಥಿಕ ಸಹಾಯ
• ಮಹಿಳೆಯರಿಗೆ ಆಸ್ತಿ ಖರೀದಿಗೆ ವಿಶೇಷ ಯೋಜನೆ
• ರೂಫ್ ಟಾಪ್ ಸೋಲಾರ್ ಶಕ್ತಿ ಯೋಜನೆ ಜಾರಿಗೆ
• ಪಿಎಂ ಸೂರ್ಯ ಫರ್ ಉಚಿತ ವಿದ್ಯುತ್ ಶಕ್ತಿ ಯೋಜನೆ
• 1 ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ಸೋಲಾರ್ ವಿದ್ಯುತ್
• ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಒತ್ತು
• ಸ್ಟ್ಯಾಂಪ್ ಡ್ಯೂಟಿ ಕಡಿಮೆ ಮಾಡುವಂತೆ ರಾಜ್ಯಗಳಿಗೆ ಮನವಿ
• ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷ ಆದ್ಯತೆ

• ಮೂಲಸೌಕರ್ಯಕ್ಕೆ 11,11,111 ಕೋಟಿ ರೂ. ಮೀಸಲು
• ಬಿಹಾರ ಪ್ರವಾಹ ಪರಿಸ್ಥಿತಿ ನಿಭಾಯಿಸಲು 11,500 ಕೋಟಿ ರೂ. ನೆರವು ಘೋಷಣೆ
• ಕಾಶಿ ವಿಶ್ವನಾಥ್ ದೇವಸ್ಥಾನ ಕಾರಿಡಾರ್ ಅಭಿವೃದ್ಧಿ
• ಗಯಾ, ಬುದ್ಧಗಯಾ ಕಾಶಿ ಮಾಡೆಲ್‌ನಲ್ಲಿ ಅಭಿವೃದ್ಧಿ
• ಗಯಾ, ಬುದ್ಧಗಯಾದಲ್ಲಿ ದೇವಸ್ಥಾನಗಳ ಪುನರುಜ್ಜಿವನ
• ನಳಂದ ವಿಶ್ವವಿದ್ಯಾನಿಲಯವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ನೆರವು
• ಬಿಹಾರವನ್ನು ಜಾಗತಿಕ ಪ್ರವಾಸೋದ್ಯಮ ಹಬ್ ಮಾಡುವ ಯತ್ನ
• ಭಾರತವನ್ನು ಗ್ಲೋಬಲ್ ಟೂರಿಸಂ ಹಬ್ ಮಾಡಲು ಪಣ
• ಜಮೀನು ದಾಖಲೆಗಳಿಗೆ ಡಿಜಿಟಲ್ ಭೂ ಆಧಾರ್ ಘೋಷಣೆ
• ರಾಜ್ಯಗಳಿಗೆ 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ
• ಕಾರ್ಮಿಕರ ಅಭಿವೃದ್ಧಿಗೆ ಇ-ಶ್ರಮ ಪೋರ್ಟಲ್ ಕಾರ್ಯಾರಂಭ
• ಗ್ರಾಮೀಣ ಭಾಗದಲ್ಲಿ ಭೂ ಸುಧಾರಣೆಗೆ ಹೆಜ್ಜೆ
• ನಗರಗಳ ಜಿಐಎಸ್ ಮ್ಯಾಪಿಂಗ್ ಮೂಲಕ ಸೈಟ್ ಗುರುತಿಸುವಿಕೆ
• ವಿತ್ತೀಯ ಕೊರತೆ ಜಿಡಿಪಿಯ 4.9% ರಷ್ಟು ಮಾತ್ರ ಇದೆ
• ಮುಂದಿನ ವರ್ಷಕ್ಕೆ ವಿತ್ತೀಯ ಕೊರತೆ 4.5% ರಷ್ಟು ಅಂದಾಜು
• ಡಾಲರ್ ಬದಲಿಗೆ ರೂಪಾಯಿ ವ್ಯವಹಾರಕ್ಕೆ ಕ್ರಮ

• ಬಜೆಟ್‌ನ ಒಟ್ಟು ಗಾತ್ರ 32.07 ಲಕ್ಷ ಕೋಟಿ
• 3 ಕ್ಯಾನ್ಸರ್ ಔಷಧಿಗಳಿಗೆ ತೆರಿಗೆ ರದ್ದು
• ಎಕ್ಸ್ ರೇ ಮೇಷಿನ್ ದೇಶಿಯ ಉತ್ಪಾದನೆಗೆ ಪ್ರೋತ್ಸಾಹ
• ಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ ಡ್ಯೂಟಿಯಿಂದ ವಿನಾಯಿತಿ
• 6 ವರ್ಷದಲ್ಲಿ ಮೊಬೈಲ್ ಉತ್ಪಾದನೆ 3 ಪಟ್ಟು ಹೆಚ್ಚಳ
• ಮೊಬೈಲ್ ಪೋನ್, ಮೊಬೈಲ್ ಚಾರ್ಜರ್ ಬೆಲೆ ಇಳಿಕೆ
• ಮೊಬೈಲ್ ಬಿಡಿಭಾಗಗಳ ತೆರಿಗೆ ಕಡಿತ
• ಮೊಬೈಲ್ ಪೋನ್‌ಗಳ ಮೇಲಿನ ತೆರಿಗೆ ಇಳಿಕೆ
• ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು
• ಮೀನು ಆಹಾರ ಆಮದಿಗೆ ಶುಲ್ಕ ಕಡಿತ
• ಚಿನ್ನ, ಬೆಳ್ಳಿ ಮೇಲೆ 6% ಕಸ್ಟಮ್ ಡ್ಯೂಟಿ ಇಳಿಕೆ
• ಪ್ಲಾಟಿನಂ ಮೇಲೆ 6.4% ಕಸ್ಟಮ್ ಡ್ಯೂಟಿ ಇಳಿಕೆ
• ಆಮಾದಾಗುವ ಬಟ್ಟೆಗಳ ಮೇಲಿನ ಶುಲ್ಕ ಏರಿಕೆ
• ತೆರಿಗೆ ಪದ್ಧತಿ ಸರಳಿಕರಣಕ್ಕೆ ಒತ್ತು
• ಆಮದು ಪ್ಲಾಸ್ಟಿಕ್ ಮೇಲಿನ ತೆರಿಗೆ ಶೇ. 25ರಷ್ಟು ಏರಿಕೆ
• ಆನ್‌ಲೈನ್ ವ್ಯವಹಾರಗಳ ಮೇಲಿನ TDS ಶೇ.9% ಇಳಿಕೆ

• ಸೋಲಾರ್ ಪ್ಯಾನಲ್‌ಗಳ ದರ ಮತ್ತಷ್ಟು ಇಳಿಕೆ
• ಮೊಬೈಲ್ ಬಿಡಿಭಾಗಗಳ ತೆರಿಗೆ ಶೇ.15% ರಷ್ಟು ಇಳಿಕೆ
• ಬಾಹ್ಯಾಕಾಶ ವಲಯಕ್ಕೆ 1 ಸಾವಿರ ಕೋಟಿ
• ಟಿಡಿಎಸ್ ಕಟ್ಟುವುದು ತಡವಾದರೆ ದಂಡ ಇಲ್ಲ
• ಆದಾಯ ತೆರಿಗೆ ನೀತಿಯಲ್ಲಿ ಭಾರಿ ಬದಲಾವಣೆ
• ತೆರಿಗೆ ವಿವಾದಗಳನ್ನು ಇಳಿಸಲು ಕೇಂದ್ರದ ಕ್ರಮ
• ಟಿಡಿಎಸ್ ಪಾವತಿ ವಿಳಂಬ ಕ್ರಿಮಿನಲ್ ಅಪರಾಧವಲ್ಲ
• ಹೂಡಿಕೆದಾರರಿಗೆ ವಿಧಿಸುತ್ತಿದ್ದ ಏಂಜಲ್ ಟ್ಯಾಕ್ಸ್ ರದ್ದು
• ಹೂಡಿಕೆದಾರರಿಗೆ ಬಿಗ್ ರಿಲೀಫ್ ಕೊಟ್ಟ ಮೋದಿ
• ವಿದೇಶಿ ಬಂಡವಾಳ ಹೂಡಿಕೆ ಮಾಡುವವರಿಗೆ ಬಂಪರ್
• ಸಂಬಳದಾರರಿಗೆ ಬೀಗ್ ರಿಲೀಫ್
• 0-3 ಲಕ್ಷ ಆದಾಯಕ್ಕೆ ಯಾವ ತೆರಿಗೆ ಇಲ್ಲ
• ತೆರಿಗೆ ಪಾವತಿ ಮಿತಿ 50 ಸಾವಿರದಿಂದ 75 ಸಾವಿರಕ್ಕೆ ಏರಿಕೆ (Union Budget 2024)

ಬಜೆಟ್ PDF ಅನ್ನು ಡೌನ್ ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇

( www.indiabudget.gov.in )

Union Budget 2024: ಕೇಂದ್ರ ಬಜೆಟ್: ಮುಖ್ಯಾಂಶ ಇಲ್ಲಿದೆ ನೋಡಿ
Union Budget 2024: ಕೇಂದ್ರ ಬಜೆಟ್: ಮುಖ್ಯಾಂಶ ಇಲ್ಲಿದೆ ನೋಡಿ