(Type Of Rest) ಮನುಷ್ಯ ಎಂದ ಮೇಲೆ ತನ್ನ ಜೀವನವನ್ನು ಸಾಗಿಸಲು ಒಂದಲ್ಲ ಒಂದು ಕೆಲಸವನ್ನ ಆತ ಮಾಡಲೇಬೇಕು ಅದು ಅನಿವಾರ್ಯವೂ ಹೌದು.
ಇದನ್ನೂ ಓದಿ: ಬಿತ್ತನೆ ಬೀಜದ ಬೆಲೆಯಲ್ಲಿ ಏರಿಕೆ; ರೈತರಿಗೆ ಸಿಎಂ ಯಿಂದ ಮಹತ್ವದ ಮಾಹಿತಿ; ಇಲ್ಲಿದೆ ನೋಡಿ ಡಿಟೈಲ್ಸ್
ದುಡಿಮೆಯೊಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವು ಬಹಳ ಮುಖ್ಯವಾಗಿದೆ ಅದಕ್ಕಾಗಿ ದಣಿದ ದೇಹಕ್ಕೆ ನಾವು ಪ್ರತಿನಿತ್ಯ ವಿಶ್ರಾಂತಿಯನ್ನು ಪಡೆಯಲೇಬೇಕಾಗಿದೆ.
ಕೇವಲ ದೈಹಿಕ ವಿಶ್ರಾಂತಿ ಮಾತ್ರ ನಾವು ವಿಶ್ರಾಂತಿ ಎಂದು ನಿರ್ಣಯಿಸಿದ್ದೇವೆ. ಆದರೆ, ಹಲವು ಸಂಶೋಧನೆಗಳು ಈ ಕೆಳಕಂಡ ರೀತಿಯ ವಿಶ್ರಾಂತಿ ಅಗತ್ಯವಿರುತ್ತದೆ ಎಂದು ತಿಳಿಸಿಕೊಟ್ಟಿವೆ.
1.ದೈಹಿಕ ವಿಶ್ರಾಂತಿ:
ಕೆಲಸಕ್ಕೆ ಓಡ್ಡಿಕೊಂಡಂತಹ ದೇಹಕ್ಕೆ ವಿಶ್ರಾಂತಿಯ ಅಗತ್ಯತೆ ಇರುತ್ತದೆ. ನಿದ್ರಿಸುವುದು ಇದರ ಅತ್ಯುತ್ತಮ ವಿಧಾನವಾಗಿದೆ. ಇದಕ್ಕಾಗಿ ನಾವು ರಾತ್ರಿಯ ವೇಳೆಯನ್ನು ಬಹುತೇಕ ಬಳಸಿಕೊಳ್ಳುತ್ತೇವೆ.
ಇದನ್ನೂ ಓದಿ: ಹೊರಗುತ್ತಿಗೆ ನೌಕರರ ಗಮನಕ್ಕೆ; ನೇಮಕಾತಿ ಮೀಸಲಾತಿ ಬಗ್ಗೆ ಗೆಜೆಟ್ ನಿಂದ ಅಧಿಸೂಚನೆ; ಮೀಸಲಾತಿ ಅಳವಡಿಕೆ ಕುರಿತು ಈ ಸೂಚನೆ ಕಡ್ಡಾಯ
ಬೆಳಗಿನಿಂದ ಸಂಜೆವರೆಗೂ ನಾವು ನಮ್ಮ ಕೆಲಸ ಕಾರ್ಯದಲ್ಲಿ ತೊಡಗಿದಾಗ ನಮ್ಮ ದೇಹವು ಸಾಕಷ್ಟು ದಣಿಯುವುದರೊಂದಿಗೆ ದೇಹದ ಅಂಗಾಂಗಗಳಲ್ಲಿ ಸಣ್ಣ ಸಣ್ಣ ಅಂಗಾಂಶಗಳು ಹಾನಿಗೊಳಗಾಗಿರುತ್ತವೆ, ಇವುಗಳು ಸಹಜ ಸ್ಥಿತಿಗೆ ಮರಳಲು ನಮಗೆ ವಿಶ್ರಾಂತಿಯ (6 ರಿಂದ 8 ಗಂಟೆಗಳ ಸುಖನಿದ್ರೆ) ಅಗತ್ಯತೆ ಇರುತ್ತದೆ. ಅಗತ್ಯವಿದ್ದಲ್ಲಿ ವಾರಕ್ಕೊಮ್ಮೆ ಅಭ್ಯಂಜನ ಸ್ನಾನ, ಮಸಾಜ್ ಅಳವಡಿಸಿಕೊಳ್ಳಬಹುದು ಇವುಗಳು ಸಹ ದೇಹಕ್ಕೆ ಚೈತನ್ಯವನ್ನು ಒದಗಿಸಬಲ್ಲವು.
2.ಮಾನಸಿಕ ವಿಶ್ರಾಂತಿ:
ದೈನಂದಿನ ಚಟುವಟಿಕೆಗಳು, ಗೊಂದಲಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಯಾವುದಾದರೂ ಸಂದರ್ಭದಲ್ಲಿ ನಾವು ಒಂದು ವಿಚಾರದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾದರೆ ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸಿಗೆ ವಿಶ್ರಾಂತಿ ಅಗತ್ಯವಾಗಿದೆ ಎಂದು ಹೇಳಬಹುದು.

ಬಿಡುವಿಲ್ಲದ ಕೆಲಸಗಳು ಒಮ್ಮೊಮ್ಮೆ ಹೀಗೆ ಮಾಡಬಹುದು. ಅಂತಹ ಸಮಯದಲ್ಲಿ ಸಂಗೀತ ಕೇಳುವುದು, ಸಣ್ಣದಾಗಿ ನಡಿಗೆ ಹೋಗುವುದು, ಸಹೋದ್ಯೋಗಿಗಳೊಂದಿಗೆ ಅಥವಾ ಪ್ರೀತಿ ಪಾತ್ರರೊಂದಿಗೆ ಆರೋಗ್ಯಕರ ಹರಟೆ ಹೂಡೆಯುವುದರಲ್ಲಿ ತೊಡಗಿಸಿಕೊಂಡರೆ ಮಾನಸಿಕವಾಗಿ ನಾವು ಮತ್ತೊಮ್ಮೆ ತಯಾರಾಗುತ್ತೇವೆ. ಸಾಕಷ್ಟು ಸಮಯ, ಅಗತ್ಯತೆ ಇದ್ದಲ್ಲಿ ಯೋಗ ಅಥವಾ ಧ್ಯಾನವನ್ನು ಕೂಡ ಅಳವಡಿಸಿಕೊಳ್ಳಬಹುದು.
ಇದನ್ನೂ ಓದಿ: ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ ಸಿಗಲಿದೆ ಬಡ್ಡಿರಹಿತ ಸಾಲ!
3.ಭಾವನಾತ್ಮಕ ವಿಶ್ರಾಂತಿ:
ಭಾವನಾತ್ಮಕವಾಗಿ ಆರೋಗ್ಯವಾಗಿದ್ದರೆ ಬದುಕು ಬಲು ಸುಂದರ. ಭಾವನೆಗಳು ಧನಾತ್ಮಕವಾಗಿರಬಹುದು ಅಥವಾ ಋಣಾತ್ಮಕವಾಗಿರಬಹುದು ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳದೆ ಇರುವುದು ಒತ್ತಡ, ಆತಂಕಕ್ಕೆ ಕಾರಣವಾಗುತ್ತದೆ. ನಮ್ಮವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಮುಂದಾಗಬೇಕು ಇದರಿಂದ ವಿಶ್ರಾಂತಿ ದೊರೆತು ಆರೋಗ್ಯವಾಗಿರಬಹುದು.
4.ಸಾಮಾಜಿಕ ವಿಶ್ರಾಂತಿ:
ಮನುಷ್ಯ ಸಂಘಜೀವಿ, ಸಮಾಜವನ್ನು ಬಿಟ್ಟು ಬದುಕಲಾರ ತನಗಿರುವ ಸ್ಥಾನಮಾನಗಳನ್ನು ಬಳಸಿಕೊಂಡು ವಿವಿಧ ವರ್ಗದವರ ಮತ್ತು ಜನರ ಜೊತೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಸಾಗುತ್ತಾನೆ. ಆದರೆ, ತನ್ನ ಆರೋಗ್ಯದ ಕಡೆಗೆ ಗಮನ ಕೊಡುವುದನ್ನು ಮರೆತುಬಿಡುತ್ತಾನೆ.
ದಿನದಲ್ಲಿ ಸ್ವಲ್ಪ ಸಮಯ ಹೊರಗಿನ ಪ್ರಪಂಚದಿಂದ ಬಿಡುವು ತೆಗೆದುಕೊಂಡು ತನ್ನ ಬಗ್ಗೆ ಕಾಳಜಿ ವಹಿಸಲು ಸಮಯ ನೀಡುವುದು ತನ್ನ ಆರೋಗ್ಯಕ್ಕೆ ಒಳ್ಳೆಯದು. ಇದು ಕೆಲವರಿಗೆ ಸಾಧ್ಯವಾಗುವುದಿಲ್ಲ ಆದರೂ ಕೂಡ ಸಾಧ್ಯ ಮಾಡಿಕೊಳ್ಳಲು ಪ್ರಯತ್ನ ಪಡಬೇಕು.
5.ಕ್ರಿಯಾಶೀಲತೆಗೆ ವಿಶ್ರಾಂತಿ:
ಕ್ರಿಯಾತ್ಮಕವಾಗಿ ಇಲ್ಲದ ವ್ಯಕ್ತಿ ಎಲ್ಲಿಯೂಸಲ್ಲಲಾರ ತಾನು ಕಾರ್ಯ ನಿರ್ವಹಿಸುವ ಸಂಸ್ಥೆ, ಕೆಲಸ ನೀಡಿದವರ ಮೆಚ್ಚುಗೆಯನ್ನು ಪಡೆದುಕೊಳ್ಳಬೇಕಾದರೆ, ವಿವಿಧ ಸ್ಥಾನಮಾನಗಳನ್ನು ಅಲಂಕರಿಸಬೇಕಾದರೆ, ಅಚ್ಚುಕಟ್ಟಾಗಿ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವುದು ಅನಿವಾರ್ಯ. ಮಾನಸಿಕವಾಗಿ ಶ್ರಮವನ್ನು ಉಪಯೋಗಿಸಿ ಮಾಡುವಂತಹ ಕೆಲಸಗಳಲ್ಲಿ ಆಗಾಗ್ಗೆ ಲಘು ವಿಶ್ರಾಂತಿ ಪಡೆಯುವುದು ಅತ್ಯವಶ್ಯಕ. ಸಂಗೀತ ಕೇಳುವುದು, ಹಾಡುವುದು, ಓದುವಿಕೆಯಂತೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಕೆಲಸದಲ್ಲಿ ವಿಶ್ರಾಂತಿ ಪಡೆಯುವುದರೊಂದಿಗೆ, ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು.
ಇದನ್ನೂ ಓದಿ: ಮೇಜರ್ ಸಪೋರ್ಟ್ ನಿಂದ ಬ್ರೇಕ್ ಡೌನ್ ಆದ ನಿಫ್ಟಿ!; 6 ತಿಂಗಳಿಗೆ 86% ಲಾಭ ಕೊಟ್ಟ ಈ ಸರ್ಕಾರಿ ಷೇರು ಯಾವುದು?
6.ಆಧ್ಯಾತ್ಮಿಕ ವಿಶ್ರಾಂತಿ:
ಮಾನಸಿಕ ನೆಮ್ಮದಿಗೆ ಆಧ್ಯಾತ್ಮಿಕ ದಾರಿ ಸುಖದ ಹೆದ್ದಾರಿಯಾಗಿದೆ. ಸ್ವಚ್ಛಂದ ಪರಿಸರದಲ್ಲಿ ಬೆರೆತರೆ ಎಲ್ಲಾ ಒತ್ತಡಗಳು ಆತಂಕಗಳು ದೂರವಾಗುತ್ತವೆ. ಭಗವಂತನ ನಾಮಸ್ಮರಣೆ, ಜಪ ಮುಂತಾದವು ದೇವರನ್ನು ನಂಬುವವರಲ್ಲಿ ನೂರಕ್ಕೆ ನೂರು ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ನಾಸ್ತಿಕರು ಪರಿಸರದೊಂದಿಗೆ ಬೆರೆಯುವುದು ಧನಾತ್ಮಕ ಪರಿಣಾಮ ಬೀರುತ್ತದೆ.
7.ಸಂವೇದನಾಶೀಲತೆಯ ವಿಶ್ರಾಂತಿ:
ನಮ್ಮ ಈಗಿನ ಪ್ರತಿದಿನದ ಬದುಕು ಹೇಗಾಗಿದೆ ಎಂದರೆ ನನ್ನನ್ನು ಸೇರಿಸಿಕೊಂಡು ನಾವು ಜನರಿಗಿಂತ ಹೆಚ್ಚು ಯಂತ್ರೋಪಕರಣಗಳ ಮೇಲೆ ಅವಲಂಬಿತರಾಗಿದ್ದೇವೆ. ಬೆಳಗ್ಗಿನ ಕಾರ್ಯಗಳು ಶುರುವಾಗುವುದೇ ಮೊಬೈಲ್ ಮೂಲಕ ಇದರೊಂದಿಗೆ ಇನ್ನು ಹತ್ತು ಹಲವು ಉಪಕರಣಗಳೊಂದಿಗೆ ಜೀವನವನ್ನು ಸಾಗಿಸುತ್ತೇವೆ.
ದಿನದ ಕೊನೆಯಲ್ಲಿ ಮಲಗುವಾಗ ಕೆಲವರು ತಮ್ಮ ಮಗುವನ್ನು ಮರೆತರು ಮೊಬೈಲ್ ಅನ್ನು ಮರೆಯುವುದಿಲ್ಲ. ಇದು ಸತ್ಯ ಹೌದು ತಾನೆ? ಇದರಿಂದ ನಮ್ಮ ನಿಜವಾದ ಸಂವೇದನ ಶಕ್ತಿ ಕಳೆದುಹೋಗಿದೆ. ಹಾಗಾಗಿ ದಿನದಲ್ಲಿ ಸ್ವಲ್ಪ ಹೊತ್ತು ಕನಿಷ್ಠ ನಾವು ಈ ಯಂತ್ರೋಪಕರಣಗಳಿಂದ ದೂರ ಉಳಿದು ನಮ್ಮ ಸ್ವಚ್ಚಂದ ಪರಿಸರದಲ್ಲಿ ಓಡಾಟ ಮಾಡುವುದು, ಯಾವುದಾದರೂ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದನ್ನು ಮಾಡಿದರೆ ನಮಗೆ ಸಂವೇದನಾಶೀಲತೆಗೆ ವಿಶ್ರಾಂತಿ ಸಿಕ್ಕಂತೆ ಆಗುತ್ತದೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
ಮನುಷ್ಯನಿಗೆ ದುಡಿಮೆ ಬಹಳ ಮುಖ್ಯ ಹೌದು ಆದರೆ, ಆತನ ಆರೋಗ್ಯವು ಅಷ್ಟೇ ಮುಖ್ಯ. ತತಕ್ಷಣದ ದಣಿವು ನಿವಾರಣೆಗಾಗಿ ಅನ್ಯ ಮಾರ್ಗಗಳನ್ನು ತುಳಿಯದೆ ವಿಶ್ರಾಂತಿ ಎಂಬ ರಾಜಮಾರ್ಗವನ್ನು ಬಳಸಿ. ದಣಿವು ಮತ್ತು ವಿಶ್ರಾಂತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬನ್ನಿ ದುಡಿಯೋಣ ದುಡಿದ ದೇಹಕ್ಕೆ ಕ್ರಮವರಿತ ವಿಧಾನದ ವಿಶ್ರಾಂತಿಯನ್ನು ನೀಡೋಣ.
ಡಾ.ರವೀಂದ್ರಗೌಡ.ಎಸ್.ಎಂ. (ಸಹಾಯಕ ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ.)






