TSDPL Scholarship:10th ಪಾಸ್‌ ಆದ ವಿದ್ಯಾರ್ಥಿಗೆ 50,000 ಸ್ಕಾಲರ್ಶಿಪ್‌

(TSDPL Scholarship:) ಎಸ್.ಎಸ್‌.ಎಲ್.ಸಿ ಪಾಸ್‌ ಆದ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಟಿಎಸ್ಡಿಪಿಎಲ್ ಸಿಲ್ವರ್ ಜುಬಿಲಿ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!


ಟಾಟಾ ಸ್ಟೀಲ್ ಡೌನ್ಸ್ಟ್ರೀಮ್ ಪ್ರಾಡಕ್ಟ್ಸ್ ಲಿಮಿಟೆಡ್ (ಟಿಎಸ್ಡಿಪಿಎಲ್), ಜೆಮ್ಶೆಡ್ಪುರ್, ಕಳಿಂಗನಗರ್, ಪಂತ್ನಗರ್, ಫರೀದಾಬಾದ್, ಪುಣೆ, ಚೆನ್ನೈ, ಟಾಡಾ ಅಥವಾ ಕೋಲ್ಕತ್ತಾದ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸುತ್ತದೆ. ಕಡಿಮೆ ಆದಾಯದ ಕುಟುಂಬಕ್ಕೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುವ ಉದ್ದೇಶವನ್ನು ಈ ವಿದ್ಯಾರ್ಥಿವೇತನವು ಹೊಂದಿದೆ.


ಇದನ್ನೂ ಓದಿ; ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?


ಅರ್ಜಿ ಸಲ್ಲಿಸಲು ಈ ಅರ್ಹತೆ ಹೊಂದಿರುವುದು ಕಡ್ಡಾಯ:
* ಜೆಮ್ಶೆಡ್ಪುರ್, ಕಳಿಂಗನಗರ್, ಪಂತ್ನಗರ್, ಫರೀದಾಬಾದ್, ಪುಣೆ, ಚೆನ್ನೈ, ಟಾಡಾ ಅಥವಾ ಕೋಲ್ಕತ್ತಾದ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ.
* ಅಭ್ಯರ್ಥಿಗಳು ಸರ್ಕಾರಿ-ಮಾನ್ಯತೆ ಪಡೆದ ಸಂಸ್ಥೆಗಳಿಂದ ಫಿಟ್ಟರ್, ಎಲೆಕ್ಟ್ರಿಕಲ್, ವೆಲ್ಡರ್ಸ್, ಸೇಫ್ಟಿ ಇತ್ಯಾದಿ ಕ್ಷೇತ್ರಗಳಲ್ಲಿ ಯಾವುದೇ ವರ್ಷದ ಐಟಿಐ/ಡಿಪ್ಲೊಮಾವನ್ನು ಅಭ್ಯಾಸ ಮಾಡುತ್ತಿರಬೇಕು.
* ಅಭ್ಯರ್ಥಿಗಳು ತಮ್ಮ 10ನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು.
* ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ರೂ. 5,00,000ಕ್ಕಿಂತ ಹೆಚ್ಚಿರಬಾರದು.


ಇದನ್ನೂ ಓದಿ; ಬೆಳೆ ಹಾನಿ ಪರಿಹಾರಕ್ಕೆ 297 ಕೋಟಿ ರೂ. ಬಿಡುಗಡೆ; ಈ ದಿನ ಜಮಾ- ಸಚಿವ ಕೃಷ್ಣಬೈರೇಗೌಡ ಮಾಹಿತಿ


ಎಷ್ಟು ಸ್ಕಾಲರ್‌ ಶಿಪ್‌ ಲಭ್ಯ?;
1 ವರ್ಷಕ್ಕೆ ರೂ. 50,000


ಇದನ್ನೂ ಓದಿ; ಆಧಾರ್‌ ಹೊಂದಿರುವವರಿಗೆ UIDAl ಮುಖ್ಯ ಮಾಹಿತಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/TSDPL4 ಈ ವೆಬ್‌ ಸೈಟ್‌ ಗೆ ಭೇಟಿ ನೀಡಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ಪಂಚಾಯತ್‌ ರಾಜ್‌ ವಿವಿಯಲ್ಲಿ ಉದ್ಯೋಗ; ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಲಿಂಕ್‌ ಇಲ್ಲಿದೆ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
30-12-2024

TSDPL Scholarship:10th ಪಾಸ್‌ ಆದ ವಿದ್ಯಾರ್ಥಿಗೆ 50,000 ಸ್ಕಾಲರ್ಶಿಪ್‌
TSDPL Scholarship:10th ಪಾಸ್‌ ಆದ ವಿದ್ಯಾರ್ಥಿಗೆ 50,000 ಸ್ಕಾಲರ್ಶಿಪ್‌

ಇದನ್ನೂ ಓದಿ; ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌; ಈ ಸ್ಟೇಪ್‌ ಫಾಲೋ ಮಾಡಿ ಅರ್ಜಿ ಸಲ್ಲಿಸಿ


ಇತ್ತೀಚಿನ ಜನಪ್ರಿಯ ಸುದ್ದಿಗಳು