Panchayat -Raj: ಪಂಚಾಯತ್‌ ರಾಜ್‌ ವಿವಿಯಲ್ಲಿ ಉದ್ಯೋಗ

(Panchayat -Raj) ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; SC/ST ಸಮುದಾಯದ ವಿದ್ಯಾರ್ಥಿಗಳ ಗಮನಕ್ಕೆ; ಈ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ


ನೇಮಕಾತಿ ಸಂಸ್ಥೆ:
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯ

ಹುದ್ದೆಗಳ ಹೆಸರು:
ಬೋಧಕ ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ:
ಆಫ್‌ಲೈನ್‌ ಮಾದರಿ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
16-12-2024


ಇದನ್ನೂ ಓದಿ; ಶಾಲೆಗಳ ಶೈಕ್ಷಣಿಕ ಪ್ರವಾಸ ರದ್ದು!; ಇಲ್ಲಿದೆ ಮಹತ್ವದ ಮಾಹಿತಿ…


ಆಯ್ಕೆ ವಿಧಾನ:
ನೇರ ಸಂದರ್ಶನ

ಅರ್ಜಿ ಸಲ್ಲಿಸಬೇಕಾದ ವಿಳಾಸ:
ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯ, ಗದಗ- 582 101.

ಈ ಮೇಲಿನ ವಿಳಾಸಕ್ಕೆ ಖಾಲಿ ಹಾಳೆಯಲ್ಲಿ ಅರ್ಜಿ ಬರೆದು, ನಂತರ ಶೈಕ್ಷಣಿಕ ಅರ್ಹತೆಗಳು, ಬಯೋಡಾಟಾ, ಕಾರ್ಯಾನುಭವ ದಾಖಲೆಗಳು, ಅಂಕಪಟ್ಟಿಗಳ ಎರಡು ಸೆಟ್‌ ಜೆರಾಕ್ಸ್‌ ಪ್ರತಿಗಳನ್ನು ಲಗತ್ತಿಸಿ ಸಲ್ಲಿಸುವುದು.


ಇದನ್ನೂ ಓದಿ; ಆಧಾರ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಓದಿ; ಈ ಕೆಲಸ ಮಾಡಲು ಇಂದು ಕೊನೆಯ ದಿನ


ಅರ್ಜಿ ಸಲ್ಲಿಸಿದವರಿಗೆ ನೇರ ಸಂದರ್ಶನವನ್ನು ವಿಳಾಸ:
ಕೌಶಲ್ಯ ವಿಕಾಸ್ ಭವನ್, ಗ್ರಾಮ ಗಂಗೋತ್ರಿ ಕ್ಯಾಂಪಸ್, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯ, ನಾಗವಿ, ಗದಗ-582103 ವಿಳಾಸದಲ್ಲಿ ನಡೆಸಲಾಗುವುದು.

ವಿದ್ಯಾರ್ಹತೆ:
ಮಾಸ್ಟರ್ ಆಫ್‌ ಪಬ್ಲಿಕ್ ಹೆಲ್ತ್‌ (ಎಂಪಿಹೆಚ್‌):
ಈ ಕೋರ್ಸ್‌ಗೆ ಬೋಧಕ ಹುದ್ದೆಗಳಿಗೆ ಅರ್ಜಿ ಹಾಕಲು ಪಬ್ಲಿಕ್ ಹೆಲ್ತ್‌ ವಿಷಯದಲ್ಲಿ ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಎನ್‌ಇಟಿ / ಕೆಸೆಟ್‌ / ಪಿಹೆಚ್‌ಡಿ ಡಿಗ್ರಿ ಯಾವುದಾದರೂ ಅರ್ಹತೆ ಪಡೆದಿರಬೇಕು.

ಗ್ರಾಮೀಣ ನಿರ್ವಹಣೆ / ಕೃಷಿ ನಿರ್ವಹಣೆ ಎಂಬಿಎ:
ಹಣಕಾಸು, ಮಾರ್ಕೆಟಿಂಗ್ ವಿಷಯಗಳಲ್ಲಿ ಎಂಬಿಎ ಅನ್ನು ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು. ಜೊತೆಗೆ ಎನ್‌ಇಟಿ / ಕೆಸೆಟ್‌ / ಪಿಹೆಚ್‌ಡಿ ಡಿಗ್ರಿ ಯಾವುದಾದರೂ ಅರ್ಹತೆ ಪಡೆದಿರಬೇಕು.


ಇದನ್ನೂ ಓದಿ; ರೇಷನ್‌ ಕಾರ್ಡ್‌ ಹೊಂದಿರುವ ಯುವಕ – ಯುವತಿಯರಿಗೆ ಸಿಹಿಸುದ್ದಿ; ಈ ತರಬೇತಿಗೆ ಅರ್ಜಿ ಆಹ್ವಾನ


ಬಿಎಸ್ಸಿ (ಅಗ್ರಿ ಬ್ಯುಸಿನೆಸ್ ಅಂಡ್‌ ಫುಡ್ ಪ್ರೊಸೆಸಿಂಗ್):
ಅಗ್ರಿ ಬ್ಯುಸಿನೆಸ್‌ ಮ್ಯಾನೇಜ್ಮೆಂಟ್ ವಿಷಯದಲ್ಲಿ ಬಿಎಸ್ಸಿ ನಂತರ ಸ್ನಾತಕೋತ್ತರ ಪದವಿ ಅನ್ನು ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು. ಜೊತೆಗೆ ಎನ್‌ಇಟಿ / ಕೆಸೆಟ್‌ / ಪಿಹೆಚ್‌ಡಿ ಡಿಗ್ರಿ ಯಾವುದಾದರೂ ಅರ್ಹತೆ ಪಡೆದಿರಬೇಕು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಚೇತನ ಅಭ್ಯರ್ಥಿಗಳು ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಾಸ್‌ ಮಾಡಿದ್ದರು ಸಹ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಳಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯ ಅಧಿಕೃತ ವೆಬ್‌ಸೈಟ್‌ ವಿಳಾಸ: ksrdpru.ac.in

Panchayat -Raj: ಪಂಚಾಯತ್‌ ರಾಜ್‌ ವಿವಿಯಲ್ಲಿ ಉದ್ಯೋಗ
Panchayat -Raj: ಪಂಚಾಯತ್‌ ರಾಜ್‌ ವಿವಿಯಲ್ಲಿ ಉದ್ಯೋಗ

ಇದನ್ನೂ ಓದಿ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿರುವವರ ಗಮನಕ್ಕೆ; ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ


ಇತ್ತೀಚಿನ ಜನಪ್ರಿಯ ಸುದ್ದಿಗಳು