Aadhar -Update NM:ಆಧಾರ್‌ ಹೊಂದಿರುವವರಿಗೆಲ್ಲಾ ಮುಖ್ಯ ಮಾಹಿತಿ

(Aadhar -Update NM:) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ವಿವರಗಳ ಉಚಿತ ನವೀಕರಣದ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಿದೆ.


ಇದನ್ನೂ ಓದಿ; SC/ST ಸಮುದಾಯದ ವಿದ್ಯಾರ್ಥಿಗಳ ಗಮನಕ್ಕೆ; ಈ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ


ಹೌದು, ಸರ್ಕಾರದ ಯಾವುದೇ ಯೋಜನೆಯನ್ನು ಪಡೆಯಲು ಆಧಾರ್‌ ಕಾರ್ಡ್‌ ದಾಖಲೆ ಪ್ರಮಖವಾಗಿ ಬೇಕಾಗುತ್ತದೆ. ಈ ಆಧಾರ್‌ ಕಾರ್ಡ್‌ ಪಡೆದುಕೊಂಡು 10 ವರ್ಷ ಆದವರು ಅಪ್ಡೇಟ್‌ ಮಾಡಬೇಕಿದ್ದು, ಈ ಮೊದಲು ಕೊನೆಯ ದಿನಾಂಕ ಡಿಸೆಂಬರ್ 14, 2024 ಆಗಿತ್ತು. ಇದೀಗ ಉಚಿತ ನವೀಕರಣದ ದಿನಾಂಕವನ್ನು ಜೂನ್ 14, 2025 ರವರೆಗೆ ವಿಸ್ತರಿಸಲಾಗಿದೆ.


ಇದನ್ನೂ ಓದಿ; ಶಾಲೆಗಳ ಶೈಕ್ಷಣಿಕ ಪ್ರವಾಸ ರದ್ದು!; ಇಲ್ಲಿದೆ ಮಹತ್ವದ ಮಾಹಿತಿ…


ಆಧಾರ್ ಕಾಡ್ ಅಪ್ಡೇಟ್ ಮಾಡುವುದು ಹೇಗೆ?
* uidai.gov.in ನಲ್ಲಿ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ
* ಹೋಮ್‌ ಪೇಜ್‌ ನಲ್ಲಿ, ‘ಮೈ ಅಧಾರ್’ ಟ್ಯಾಬ್ ಅಡಿಯಲ್ಲಿ, ‘ಅಪ್‌ ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಮತ್ತು ಚೆಕ್ ಸ್ಟೇಟಸ್’ ಅನ್ನು ಕ್ಲಿಕ್ ಮಾಡಿ.
* ಲಾಗಿನ್ ಪುಟಕ್ಕೆ ಹೋದ ನಂತರ, ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಲು ‘OTP’ ಆಯ್ಕೆಯನ್ನು ಆರಿಸಿ.
* ಒಮ್ಮೆ ಹೀಗೆ ಮಾಡಿದ ನಂತರ, ‘ಅಪ್‌ ಡೇಟ್ ಆಧಾರ್ ಆನ್‌ ಲೈನ್’ ವಿಭಾಗಕ್ಕೆ ಹೋಗಿ ಮತ್ತು ‘ಅಪ್‌ ಡೇಟ್ ಆಧಾರ್’ ಕ್ಲಿಕ್ ಮಾಡಿ.
* ಈ ವಿಂಡೋದಲ್ಲಿ ನೀವು ನವೀಕರಿಸಲು ಬಯಸುವ ಡೇಟಾವನ್ನು ಆಯ್ಕೆಮಾಡಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ ಗಳನ್ನು ಅಪ್‌ ಲೋಡ್ ಮಾಡಿ.
* ಇದೆಲ್ಲಾ ಆದ ಬಳಿಕ ಸಬ್‌ ಮಿಟ್‌ ಕೊಡಿ.
* ಇದಿಷ್ಟು ಮಾಡಿದರೆ ನಿಮ್ಮ ಆಧಾರ್‌ ನವೀಕರಣಗೊಳ್ಳುತ್ತದೆ.

Aadhar -Update NM:ಆಧಾರ್‌ ಹೊಂದಿರುವವರಿಗೆಲ್ಲಾ ಮುಖ್ಯ ಮಾಹಿತಿ
Aadhar -Update NM:ಆಧಾರ್‌ ಹೊಂದಿರುವವರಿಗೆಲ್ಲಾ ಮುಖ್ಯ ಮಾಹಿತಿ

ಇದನ್ನೂ ಓದಿ; ಆಧಾರ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಓದಿ; ಈ ಕೆಲಸ ಮಾಡಲು ಇಂದು ಕೊನೆಯ ದಿನ


ಇತ್ತೀಚಿನ ಜನಪ್ರಿಯ ಸುದ್ದಿಗಳು