Tiger Reserve Forest Area: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿಕೊಟ್ಟಿದ್ದ ಕಡೂರು ತಾಲ್ಲೂಕಿನ ಹಿಂದಿನ ತಹಸಿಲ್ದಾರ್ ಉಮೇಶ್ ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಇದನ್ನೂ ಓದಿ; ಕೊಪ್ಪ: ವಸತಿ ಶಾಲೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಎಮ್ಮದೊಡ್ಡಿ, ಕಾವಲು ಗ್ರಾಮದ ಸ.ನಂ.70, 71, 12, 13, 14, 77, 84 ಮತ್ತು 1 ರಿಂದ 63ರವರೆಗಿನ 21 ಸಾವಿರ ಎಕರೆ ಜಾಗವನ್ನು notification no: A.F.3892-Ft-137-41-2, Dt:04.02.1942 ರಂತೆ ಮೈಸೂರು ಗೇಮ್ ಅಂಡ್ ಫಿಷ್ ಪ್ರಿಸರ್ವೇಶನ್ ಕಾಯ್ದೆ II 1901 ರ ಕಲಂ-4(ಬಿ) ಅಡಿಯಲ್ಲಿ ಸರ್ಕಾರಿ ಆದೇಶದಂತೆ ಮೈಸೂರು ಒಡೆಯರ್ ಕಾಲದಲ್ಲೇ “ಎಮ್ಮೆದೊಡ್ಡಿ ಹುಲಿ ಸಂರಕ್ಷಿತ ಪ್ರದೇಶ” ಎಂದು ಅಧಿಸೂಚಿಸಲ್ಪಟ್ಟಿದೆ. ಆದರೆ, ಪ್ರಸ್ತುತ ಕಾರವಾರದ ಸೀ ಬರ್ಡ್ ನೌಕಾನೆಲೆಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿರುವ ಕಡೂರಿನಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದ ಜೆ.ಉಮೇಶ್ ಎಂಬ ಅಧಿಕಾರಿ ಬೀರೂರು ಹೋಬಳಿಯ ಎಮ್ಮೆದೊಡ್ಡಿ ಗ್ರಾಮದ ಸ.ನಂ.77ರ ಪ್ರದೇಶ ಸೆಕ್ಷನ್ 4 ರಡಿ ಪ್ರಾಥಮಿಕ ಅಧಿಸೂಚನೆಯಾಗಿ, ತದ ನಂತರ, ಟೈಗರ್ ರಿಸರ್ವ್ ಎಂದು ಘೋಷಿತವಾಗಿದ್ದರೂ 18 ಜನರಿಗೆ ಆ ಭೂಮಿಯನ್ನು ಅರಣ್ಯ ಇಲಾಖೆಯವರ ಗಮನಕ್ಕೆ ಬಾರದ ರೀತಿಯಲ್ಲಿ ತಹಸೀಲ್ದಾರ್ ಮಂಜೂರು ಮಾಡಿದ್ದಾರೆ.
ಇದನ್ನೂ ಓದಿ; ಸಾಗರ: ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಅರಣ್ಯ ಭೂಮಿಯನ್ನು ಪರಾಭಾರೆ ಮಾಡಿದ ಈ ಪ್ರಕರಣದಲ್ಲಿ ತಹಶೀಲ್ದಾರ್ ಉಮೇಶ್ ಅವರಿಗೆ ಸಹಕರಿಸಿದ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರ ವಿರುದ್ಧವೂ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಹುಲಿ ಸಂರಕ್ಷಿತ ಪ್ರದೇಶ ಎಂಬ ವಿಷಯ ಗೊತ್ತಿದ್ದರೂ ಸಹ ವಾಸ್ತವಾಂಶ ಮರೆಮಾಚಿ ಸ್ಥಳ ಪರಿಶೀಲನೆ ಮಾಡಿದ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಕಡತದ ಮನವಿ ಪತ್ರಕ್ಕೆ ಮಂಜೂರಾತಿಗೆ ಶಿಫಾರಸು ಮಾಡಿದ್ದರು. ತಹಶೀಲ್ದಾರ್ ಉಮೇಶ್ ಸಾಗುವಳಿ ಚೀಟಿಗೆ ಸಹಿ ಮಾಡಿ ಭೂಮಿ ತಂತ್ರಾಂಶದಲ್ಲಿ ಅನುಮೋದನೆ ನೀಡಿದ್ದರು. ನಂತರ ಶಿರಸ್ತೇದಾರರು, ರಾಜಸ್ವ ನಿರೀಕ್ಷಕರು ಅನುಮೋದಿಸಿ ಖಾತೆ ಮಾಡಿದ್ದಾರೆ.
ಇದನ್ನೂ ಓದಿ; ಶಿರಾಳಕೊಪ್ಪ: ನಿರಂತರ ಅತ್ಯಾಚಾರ ನಡೆಸಿದ ಯುವಕನೋರ್ವನ ಬಂಧನ
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸಿನಿಮಾ ನೋಡುತ್ತಿದ್ದಾಗಲೇ ಕುಸಿಯಿತು ತೀರ್ಥಹಳ್ಳಿಯ ಚಿತ್ರಮಂದಿರ; 10 ಕ್ಕೂ ಹೆಚ್ಚು ಬೈಕ್ ಜಖಂ
- ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದ ಶ್ರೀಗಳು; ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳು ಏನಂದ್ರು; ಆ ಸ್ಫೋಟಕ ಭವಿಷ್ಯ ಏನು
- ಜೈಲಿನಲ್ಲಿ ಗಾಂಜಾ, ಮೊಬೈಲ್ ಪತ್ತೆ ಪ್ರಕರಣ; ನಾಲ್ವರು ಅಧಿಕಾರಿಗಳ ಅಮಾನತು
Tiger Reserve Forest Area: ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಿದ್ದು, ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಹಕ್ಕು ದಾಖಲಿಸಿರುವ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಬಗರ್ ಹುಕುಂ ಸಮಿತಿಯಲ್ಲಿ ನಮೂನೆ 50/53 ವಜಾಗೊಂಡಿದ್ದರೂ ಸಹ ಪುನಃ ನಕಲಿ ಸಾಗುವಳಿ ಚೀಟಿಯನ್ನು ಕಾನೂನು ಬಾಹೀರವಾಗಿ ಸೃಷ್ಟಿಸಿ ಮಂಜೂರು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-23.08.2023
ಕಾಫಿನಾಡಿನಲ್ಲಿಯೇ ಅತಿ ದೊಡ್ಡ ಲ್ಯಾಂಡ್ ಸ್ಕ್ಯಾಂ ಇದಾಗಿದ್ದು, ಸಿಕ್ಕಸಿಕ್ಕ ಜಾಗಕ್ಕೆಲ್ಲಾ ಬೇಲಿ ಹಾಕಿಕೊಂಡು ನಂದೇ ಅಂದೋರ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ.
ಇದನ್ನೂ ಓದಿ; ಚಂದ್ರಯಾನ – 3 ಯಶಸ್ಸಿಗೆ ಶ್ರೀ ಮೃತ್ಯುಂಜಯ ಮಾರ್ಕಂಡೇಶ್ವರ ಸನ್ನಿಧಿಯಲ್ಲಿ ಗ್ರಾಮ ಭಾರತ್ ವೇದಿಕೆಯಿಂದ ಪ್ರಾರ್ಥನೆ







ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ಅಬ್ಬಾ! ಇಷ್ಟೊಂದು ದೊಡ್ಡ ಮೊತ್ತಕ್ಕೆ ಹರಾಜಾಯ್ತು ವಾಹನಗಳ ನಂಬರ್ ಪ್ಲೇಟ್
- ಹಳೆ ಬಸ್‌ಗೆ ಹೊಸ ಲುಕ್; ಇದು ksrtc ವಿನೂತನ ಪ್ರಯತ್ನ
- ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-22.08.2023
- ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ; ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ
- ಈ ಕೆಂಪಿರುವೆ ಚಟ್ನಿ ಆರೋಗ್ಯಕ್ಕೆ ಎಷ್ಟು ಒಳ್ಳೇದು ಅಂತ ನಿಮಗೊತ್ತಾ?
- ಶೃಂಗೇರಿ: ಕೊಲೆ ಮಾಡಿ ಕಾಡಿನಲ್ಲಿ ಹೂತಿಟ್ಟ, ಫೋನ್ ಕಾಲ್ ನಿಂದ ಸಿಕ್ಕಾಕ್ಕೊಂಡ
- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವರ್ಗಾವಣೆ
- ಶೃಂಗೇರಿ ಕೊಲೆ ಪ್ರಕರಣ: ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಿಷ್ಟು..!
- ಕೊಪ್ಪ: ವಸತಿ ಶಾಲೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
- ಸಿನಿಮಾ ನೋಡುತ್ತಿದ್ದಾಗಲೇ ಕುಸಿಯಿತು ತೀರ್ಥಹಳ್ಳಿಯ ಚಿತ್ರಮಂದಿರ; 10 ಕ್ಕೂ ಹೆಚ್ಚು ಬೈಕ್ ಜಖಂ
- ಸಾಗರ: ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
- ಶಿರಾಳಕೊಪ್ಪ: ನಿರಂತರ ಅತ್ಯಾಚಾರ ನಡೆಸಿದ ಯುವಕನೋರ್ವನ ಬಂಧನ
- ಚಂದ್ರಯಾನ – 3 ಯಶಸ್ಸಿಗೆ ಶ್ರೀ ಮೃತ್ಯುಂಜಯ ಮಾರ್ಕಂಡೇಶ್ವರ ಸನ್ನಿಧಿಯಲ್ಲಿ ಗ್ರಾಮ ಭಾರತ್ ವೇದಿಕೆಯಿಂದ ಪ್ರಾರ್ಥನೆ
- ಚಿಕ್ಕಮಗಳೂರು: ಎತ್ತು ತಿವಿದು ಯುವ ರೈತ ಸಾವು
- ಜೈಲಿನಲ್ಲಿ ಗಾಂಜಾ, ಮೊಬೈಲ್ ಪತ್ತೆ ಪ್ರಕರಣ; ನಾಲ್ವರು ಅಧಿಕಾರಿಗಳ ಅಮಾನತು
- ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದ ಶ್ರೀಗಳು; ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳು ಏನಂದ್ರು
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-23.08.2023
- ವಾಹನ ಖರೀದಿ ಮಾಡಿದ ಎಲ್ಲರಿಗೂ ಹೊಸ ರೂಲ್ಸ್!; ಈ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ
- ಚಿಕ್ಕಮಗಳೂರು: ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply