Prime Minister: ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿಲ್ವಾ? ಜನಪ್ರತಿನಿಧಿಗಳೂ ತಲೆಕೆಡಿಸಿಕೊಳ್ಳುತ್ತಾ ಇಲ್ವಾ? ಮೂಲಸೌಕರ್ಯಗಳ ಕೊರತೆ ಇದೆಯಾ? ನಿಮ್ಮೂರಿನ ಸಮಸ್ಯೆಗೆ ಮುಂದಿನ ದಾರಿ ಏನು? ಪ್ರಧಾನಿ ಮಂತ್ರಿನಾ!….
ಇದನ್ನೂ ಓದಿ; ಕೊಪ್ಪ: ವಸತಿ ಶಾಲೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಹೌದು ನಿಮ್ಮೂರಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳೂ ಮೂಲಸೌಕರ್ಯಗಳ ಕುಂದುಕೊರತೆಗೆ ಸ್ಪಂದಿಸಲಿಲ್ಲ ಅಂದ್ರೆ ಪ್ರಧಾನಿ ಮಂತ್ರಿಗೆ ಪತ್ರ ಬರೆಯಬೇಕು… ಪ್ರಧಾನ ಮಂತ್ರಿಗಳ ಕಾರ್ಯಾಲಯವನ್ನು ಹಾಗೂ ಪ್ರಧಾನಿಗಳನ್ನು ಸಂಪರ್ಕಿಸುವುದು ಹೇಗೆ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾಗುತ್ತದೆ. ತನ್ನ ಸಮಸ್ಯೆ ಹೇಳಿ ಆ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕಾದದ್ದು ಆತನ ಆದ್ಯ ಕರ್ತವ್ಯ ಕೂಡ.
ಪ್ರಧಾನ ಮಂತ್ರಿಗಳನ್ನು ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಯವನ್ನು ಯಾವುದರ ಮೂಲಕ ಸಂಪರ್ಕಿಸುವುದು?:
ಪ್ರಧಾನಿ ಕಾರ್ಯಾಲವಯವನ್ನು ಸಾರ್ವಜನಿಕರು ಸಂಪರ್ಕಿಸಲು ಹಲವು ಮಾರ್ಗಗಳಿದ್ದು, ಪತ್ರ ಮತ್ತು ಫ್ಯಾಕ್ಸ್, ಇ-ಮೇಲ್, ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟ್, ಮೊಬೈಲ್ ಸಂಖ್ಯೆ ಮೂಲಕ ದೇಶದ ಪ್ರತಿಯೊಬ್ಬ ನಾಗರೀಕನೂ ಪ್ರಧಾನ ಮಂತ್ರಿಗಳನ್ನು ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ; ಸಾಗರ: ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
* ಪತ್ರದ ಮೂಲಕ:
ಪತ್ರದ ಮೂಲಕ ಪ್ರಧಾನ ಮಂತ್ರಿಗಳಿಗೆ ಅಥವಾ ಕಾರ್ಯಾಲಯವನ್ನ ಸಂಪರ್ಕಿಸುವುದಾದರೆ ಪ್ರಧಾನಮಂತ್ರಿಗಳ ಕಚೇರಿ ಹಾಗೂ ನಿವಾಸದ ವಿಳಾಸಕ್ಕೆ ಪತ್ರ ಬರೆಯಬಹುದಾಗಿದೆ. ಅಲ್ಲಿನ ಅಧಿಕಾರಿಗಳು ಪತ್ರದ ಪ್ರಾಮುಖ್ಯತೆಗೆ ಅನುಗುಣವಾಗಿ ಅವುಗಳನ್ನು ವಿಲೇವಾರಿ ಮಾಡುತ್ತಾರೆ. ಪ್ರಮುಖ ಮತ್ತು ವಿಶೇಷ ಪತ್ರವಾಗಿದ್ದರೆ ಖುದ್ದು ಪ್ರಧಾನ ಮಂತ್ರಿಗಳಿಗೆ ತಲುಪಿಸುತ್ತಾರೆ. ಇಲ್ಲವಾದರೇ ತಾವೇ ಪತ್ರದಲ್ಲಿ ಸಮಸ್ಯೆ ಪರಿಷ್ಕರಿಸಲು ಪ್ರಯತ್ನಿಸುತ್ತಾರೆ.
ಹಾಗಾದರೆ ಪ್ರಧಾನಿ ಮಂತ್ರಿಗಳಿಗೆ ಪತ್ರ ಕಳುಹಿಸುವ ವಿಳಾಸ ಏನು?;
(ಪ್ರಧಾನಿ ಕಚೇರಿ ವಿಳಾಸ)
ಪ್ರಧಾನಿ ಕಾರ್ಯಾಲಯ
ಸೌತ್ ಬ್ಲಾಕ್, ರೈಸೀನಾ ಹಿಲ್
ನವದೆಹಲಿ-110011
ಭಾರತ

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸಿನಿಮಾ ನೋಡುತ್ತಿದ್ದಾಗಲೇ ಕುಸಿಯಿತು ತೀರ್ಥಹಳ್ಳಿಯ ಚಿತ್ರಮಂದಿರ; 10 ಕ್ಕೂ ಹೆಚ್ಚು ಬೈಕ್ ಜಖಂ
- ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದ ಶ್ರೀಗಳು; ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳು ಏನಂದ್ರು; ಆ ಸ್ಫೋಟಕ ಭವಿಷ್ಯ ಏನು
- ಜೈಲಿನಲ್ಲಿ ಗಾಂಜಾ, ಮೊಬೈಲ್ ಪತ್ತೆ ಪ್ರಕರಣ; ನಾಲ್ವರು ಅಧಿಕಾರಿಗಳ ಅಮಾನತು
Prime Minister: * ಫ್ಯಾಕ್ಸ್:
ಫ್ಯಾಕ್ಸ್ ಮೂಲಕ ದೂರು ನೀಡಬಯಸುವವರು ಪ್ರಧಾನಿ ಕಾರ್ಯಾಲಯದ ಫ್ಯಾಕ್ಸ್ ನಂಬರ್ +91-11-23019545, 23016857ಕ್ಕೆ ಫ್ಯಾಕ್ಸ್ ಮಾಡಬಹುದು.
* ವೆಬ್ ಸೈಟ್:
ಪ್ರಧಾನಿ ಮಂತ್ರಿ ಅವರ ಅಧಿಕೃತ ಮತ್ತು ವೈಯುಕ್ತಿಕ ವೆಬ್ ಸೈಟ್ ಕೂಡ ಲಭ್ಯವಿದ್ದು, ಸರ್ಕಾರಿ ಅಧಿಕೃತ ವೆಬ್ ಸೈಟ್ http://pmindia.gov.in/en/interact-with-honble-pm ಮತ್ತು ವೈಯುಕ್ತಿ ವೆಬ್ ಸೈಟ್ www.narendramodhi.in ಗೆ ಭೇಟಿ ನೀಡುವ ಮೂಲಕ ಪ್ರಧಾನಿಮಂತ್ರಿ ಅವರನ್ನು ಸಂಪರ್ಕಿಸಬಹುದಾಗಿದೆ.
ಅಲ್ಲದೆ ನೇರವಾಗಿ ಸರ್ಕಾರದ ವೆಬ್ ಸೈಟ್ http://mygov.nic.in/signup ಗೆ ಲಾಗಿನ್ ಆಗುವ ಮೂಲಕ ಕೂಡ ಪ್ರಧಾನಿಮಂತ್ರಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ; ಶಿರಾಳಕೊಪ್ಪ: ನಿರಂತರ ಅತ್ಯಾಚಾರ ನಡೆಸಿದ ಯುವಕನೋರ್ವನ ಬಂಧನ
* ಇ-ಮೇಲ್
ಇ-ಮೇಲ್ ಮೂಲಕ ಪ್ರಧಾನಿಗಳನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದು ಅವರ ಮೇಲ್ ಖಾತೆ narendramodhi1234@gmail.com
* ಸಾಮಾಜಿಕ ಜಾಲತಾಣಗಳು:
ಇನ್ನು ಪ್ರಧಾನಮಂತ್ರಿಗಳು ಸಾಮಾಜಿಕ ಜಾಲತಾಣಗಳಲ್ಲೂ ಸಾರ್ವಜನಿಕರಿಗೆ ಲಭ್ಯವಿದ್ದು, ಪ್ರಧಾನಿಗಳ ಫೇಸ್ ಬುಕ್ ಖಾತೆ ಸರ್ಕಾರಿ ಅಧಿಕೃತ ಫೇಸ್ ಬುಕ್ ಖಾತೆ https://facebook.com/pmoindia ಮತ್ತು ವೈಯುಕ್ತಿಕ ಫೇಸ್ ಬುಕ್ ಖಾತೆ https://www.facebook.com/narendramodhi ಮೂಲಕ ಸಂಪರ್ಕಿಸಬಹುದು.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-23.08.2023
ಇನ್ನು ಟ್ವಿಟರ್ ಮೂಲಕ ಸಂಪರ್ಕಿಸ ಬಯಸುವವರು ಸರ್ಕಾರಿ ಅಧಿಕೃತ ಟ್ವಿಟರ್ ಖಾತೆ https://twitter.com/PMOindian ಮತ್ತು ವೈಯುಕ್ತಿಕ ಟ್ವಿಟರ್ ಖಾತೆ https://twitter.com/Narendramodhi ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ.
ನಮೋ ಆ್ಯಪ್:
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸುವ ವಿಶೇಷ ಆ್ಯಪ್ ಒಂದನ್ನು ಸಿದ್ಧಪಡಿಸಲಾಗಿದ್ದು, ಈ ಆ್ಯಪ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಲಭವಾಗಿ ಸಂಪರ್ಕಿಸಬಹುದಾಗಿದೆ. ಈ ಆ್ಯಪ್ https://play.google.com/store/apps/details?Id=com.narendramodhiapp ಈ ಲಿಂಕ್ ನಲ್ಲಿ ದೊರೆಯುತ್ತದೆ.
ಇದನ್ನೂ ಓದಿ; ಚಂದ್ರಯಾನ – 3 ಯಶಸ್ಸಿಗೆ ಶ್ರೀ ಮೃತ್ಯುಂಜಯ ಮಾರ್ಕಂಡೇಶ್ವರ ಸನ್ನಿಧಿಯಲ್ಲಿ ಗ್ರಾಮ ಭಾರತ್ ವೇದಿಕೆಯಿಂದ ಪ್ರಾರ್ಥನೆ