Tiger Census: ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಳವಾದ ವ್ಯಾಘ್ರಗಳ ಸಂತತಿ

Tiger Census: ಚಿಕ್ಕಮಗಳೂರು: ಹುಲಿಗಳ ದೇಶ ಭಾರತ ಜಗತ್ತಿನ ಶೇ. 75ಕ್ಕಿಂತ ಅಧಿಕ ಹುಲಿಗಳು ಭಾರತದಲ್ಲೇ ಇವೆ. ದೇಶದಲ್ಲಿ ಈ ವ್ಯಾಘ್ರಗಳ ಸಂಖ್ಯೆ 3167. ಕಳೆದ ನಾಲ್ಕು ವರ್ಷಗಳಲ್ಲಿ ಇವುಗಳ ಸಂಖ್ಯೆಯಲ್ಲಿ 200 ಹೆಚ್ಚಳವಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಇದನ್ನೂ ಓದಿ; ಮಲೆನಾಡಲ್ಲಿ ಪತ್ರೋಡೆ ಘಮ; ಮಳೆಗಾಲದ ಸ್ಪೆಷಲ್ ಮರಗೆಸು ಎಲೆಯ ಪತ್ರೋಡೆ

ವನ್ಯಜೀವಿಗಳ ಪೈಕಿ ವ್ಯಾಘ್ರಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಆತಂಕಗೊಂಡಿದ್ದವರಿಗೆ ಸಮಾಧಾನ ತರಿಸುವ ಸಂಗತಿ ಸಮೀಕ್ಷೆಯಿಂದಲೇ ಹೊರಬಿದ್ದಿದೆ, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ವಿವಿಧ ವನ್ಯಜೀವಿ ತಾಣಗಳಲ್ಲಿ ಆಶ್ರಯ ಪಡೆದಿದ್ದ ಹುಲಿಗಳ ಸಂತತಿಯಲ್ಲಿ ಹೆಚ್ಚಳ ಕಂಡುಬಂದಿದೆ. 2019 ರಲ್ಲಿ ಇದ್ದ ೪೦೪ ಹುಲಿಗಳ ಸಂಖ್ಯೆ 2022 ರಲ್ಲಿ 345 ಕ್ಕೆ ಹೆಚ್ಚಳವಾಗಿದೆ. ಇಂತದ್ದೊಂದು ಸಂಗತಿಯನ್ನು ಖುದ್ದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ; ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜನೆ

ಅಂತಾರಾಷ್ಟ್ರೀಯ ಹುಲಿದಿನಕ್ಕೆ 2 ದಿನಗಳ ಮುನ್ನ ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರ ಬಿಡುಗಡೆ ಮಾಡಿದ ಸಚಿವ ಈಶ್ವರ ಖಂಡ್ರೆ ರಾಷ್ಟ್ರೀಯ ಹುಲಿ ಪ್ರಾಧಿಕಾರ ಮಾರ್ಗಸೂಚಿಯ ಪ್ರಕಾರ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುವ ಹುಲಿ ಗಣತಿ ಅನ್ವಯ ಗಣತಿ ಮಾಡಲಾಗಿದ್ದು ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಮಾಡಲಾಗಿದೆ. ಪಶ್ಚಿಮ ಘಟ್ಟದ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕವು ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, 2021-22ರ ಅವಧಿಯಲ್ಲಿ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಸಲಾಗಿದೆ ಎಂದರು.

ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾಳಿ ಕಾನನ ಸೇರಿದಂತೆ 37 ವನ್ಯಜೀವಿ ಧಾಮಗಳಲ್ಲಿ ಒಟ್ಟು 37 ವಿಭಾಗದಲ್ಲಿ ನಡೆಸಲಾಗಿದೆ.

ಇದನ್ನೂ ಓದಿ; ನಿಮಗೆ ಮೈಗ್ರೇನ್ ತಲೆನೋವಿನ ಸಮಸ್ಯೆ ಇದೆಯಾ?; ಪದೇ ಪದೇ ಕಾಡೋ ಮೈಗ್ರೇನ್ ಸಮಸ್ಯೆ ಇಲ್ಲಿದೆ ಸರಳ ಪರಿಹಾರ

Tiger Census: ಈ ಗಣತಿಗೆ ಕ್ಯಾಮರಾ ಟ್ರ‍್ಯಾಪ್ ಮತ್ತು ಲೈನ್ ಟ್ರನ್ಸ್ಯಾಕ್ಟ್ ವಿಧಾನ ಬಳಸಲಾಗಿದೆ. ರಾಜ್ಯದ ಎಲ್ಲ ಸಂರಕ್ಷಿತ ಅರಣ್ಯಗಳಲ್ಲಿ ಅಳವಡಿಸಲಾಗಿದ್ದ 5399 ಕ್ಯಾಮರಾ ಟ್ರ‍್ಯಾಪ್ ನಲ್ಲಿ 66 ಲಕ್ಷಕ್ಕೂ ಹಚ್ಚು ವನ್ಯ ಜೀವಿಗಳ ಛಾಯಾಚಿತ್ರ ಕ್ರೋಡೀಕರಣವಾಗದ್ದು, ಆಧುನಿಕ ತಂತ್ರಜ್ಞಾನ ಬಳಸಿ ಹುಲಿಗಳ ಚಲನವಲನ, ಪ್ರಾದೇಶಿಕ ಪರಿಮಿತಿ ಹುಲಿಗಳ ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಹುಲಿಗಳ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆಯಂತೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು  


ಹಾಗಾದರೆ ಎಲ್ಲಿ ಎಷ್ಟು ಹುಲಿಗಳಿದೆ?:
* ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 612
* ಭದ್ರಾದಲ್ಲಿ 330
* ಬಿಆರ್.ಟಿ.ಯಲ್ಲಿ 288
* ಕಾಳಿಯಲ್ಲಿ 448
* ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 80
* ಬೆಳಗಾವಿ ವಿಭಾಗದಲ್ಲಿ 119
* ಭದ್ರಾವತಿ ವಿಭಾಗದಲ್ಲಿ 121
* ಕಾವೇರಿ ವನ್ಯಜೀವಿ ಧಾಮದಲ್ಲಿ 473
* ಚಿಕ್ಕಮಗಳೂರು ವನ್ಯಜೀವಿ ಅರಣ್ಯದಲ್ಲಿ 41
* ಹಳಿಯಾಳದಲ್ಲಿ 106
* ಕಾರವಾರ ವಿಭಾಗದಲ್ಲಿ 135
* ಕೊಪ್ಪ ವನ್ಯಜೀವಿಧಾಮದಲ್ಲಿ 50
* ಕುದುರೇಮುಖ ವಿಭಾಗದಲ್ಲಿ 173
* ಮಡಿಕೇರಿ ವಿಭಾಗದಲ್ಲಿ 175
* ಮಲೆ ಮಹದೇಶ್ವರ ಬೆಟ್ಟದಲ್ಲಿ 432
* ಮೈಸೂರು ವಿಭಾಗದಲ್ಲಿ 36
* ಶಿವಮೊಗ್ಗ ವನ್ಯಜೀವಿ ಧಾಮದಲ್ಲಿ 182
* ಶಿರಸಿ ವಿಭಾಗದಲ್ಲಿ 107
* ವಿರಾಜಪೇಟೆ ವಿಭಾಗದಲ್ಲಿ 111
* ನಾಗರಹೊಳೆಯಲ್ಲಿ 502 ಕ್ಯಾಮರಾ ಪಾಯಿಂಟ್ ಅಳವಡಿಸಲಾಗಿತ್ತು. ಇದರಲ್ಲಿ 376 ಅನನ್ಯ (ವಿಶಿಷ್ಟ) ಹುಲಿಗಳು ಪತ್ತೆಯಾಗಿವೆ.
ಯಲ್ಲಾಪುರ ವಿಭಾಗದಲ್ಲಿ 94 ಸೇರಿ ರಾಜ್ಯದಲ್ಲಿ ಒಟ್ಟಾರೆ 4786 ಕ್ಯಾಮರಾ ಪಾಯಿಂಟ್ ಅಳವಡಿಸಲಾಗಿತ್ತು, ಈ ಎಲ್ಲ ಕ್ಯಾಮರಾಗಳಲ್ಲಿ 1 ಲಕ್ಷ 61 ಸಾವಿರದ 53 ರಾತ್ರಿಯ ವೇಳೆ ಸಂಚಾರದ ಚಿತ್ರೀಕರಣ ಪ್ರಯತ್ನ ಮಾಡಲಾಗಿತ್ತು.

ಇದನ್ನೂ ಓದಿ; ಮಲೆನಾಡಿನ ಜನತೆಗೆ ಗುಡ್ ನ್ಯೂಸ್; ವಿಮಾನ ಹಾರಾಟದ ದಿನಾಂಕ ಪ್ರಕಟಿಸಿದ ಇಂಡಿಗೋ ಸಂಸ್ಥೆ

1972ರಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ನಂತರ 1972ರಿಂದ ಹುಲಿ ಗಣತಿಯನ್ನು ಆರಂಭಿಸಲಾಯಿತು ಮತ್ತು ಪ್ರತಿ 4 ಸಾಲಿನಲ್ಲಿ ಒಮ್ಮೆ ಗಣತಿ ಕಾರ್ಯ ನಡೆಸಲಾಗುತ್ತಿದೆ.

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇