(Surveyors:) ಜಾತಿಗಣತಿಯಲ್ಲಿ ತೊಡಗಿರುವಂತ ಸಮೀಕ್ಷಾದಾರರು, ಮೇಲ್ವಿಚಾರಕರಿಗೆ ಸರ್ಕಾರ ಗೌರವಧನವನ್ನು ನಿಗದಿ ಪಡಿಸಿ ಆದೇಶಿಸಿದೆ.
ಇದನ್ನೂ ಓದಿ: ಈ ನಿಯಮಗಳನ್ನು ಪಾಲಿಸದಿದ್ದರೆ ರೇಷನ್ ಕಾರ್ಡ್ ರದ್ದು
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ಈ ಕೆಳಕಂಡಂತೆ ಗೌರವಧನವನ್ನು ನಿಗದಿ ಪಡಿಸಲಾಗಿದೆ ಎಂದಿದೆ.
ರಾಜ್ಯ ಸರ್ಕಾರದಿಂದ ಜಾತಿಗಣತಿಯಲ್ಲಿ ತೊಡಗಿರುವಂತ ಸಮೀಕ್ಷಾದಾರರಿಗೆ ರೂ.5,000 ಹಾಗೂ ಪ್ರತಿ ಮನೆ ಸಮೀಕ್ಷೆಗೆ ರೂ.100 ರಂತೆ ಗೌರವಧನವನ್ನು ನಿಗದಿ ಪಡಿಸಲಾಗಿದೆ. ಮೇಲ್ವಿಚಾರಕರಿಗೆ ರೂ.10,000 ಗೌರವಧನ ನಿಗದಿ ಪಡಿಸಲಾಗಿದೆ.
ಇದನ್ನೂ ಓದಿ: 6 ಜಿಲ್ಲೆಗಳಲ್ಲಿ ಪ್ರಧಾನಿ ಧನಧಾನ್ಯ ಯೋಜನೆ ಜಾರಿ
ಮೊದಲ ಕಂತಿನಲ್ಲಿ ತಲಾ ರೂ.5,000ದಂತೆ ಸಮೀಕ್ಷಾದಾರರಿಗೆ ಗೌರವಧನ ಪಾವತಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಸಮೀಕ್ಷಾದಾರರಿಗೆ ಬಾಕಿ ಮೊತ್ತ ಹಾಗೂ ಮೇಲ್ವಿಚಾರಕರಿಗೆ ನಿಗದಿಪಡಿಸಿದ ಗೌರವಧನವನ್ನು ಬಿಡುಗಡೆ ಮಾಡಬೇಕಾಗಿದ್ದು, ಒಂದು ಬ್ಲಾಕ್ ಗೆ ಒಂದಕ್ಕಿಂತ ಹೆಚ್ಚು ಸಮೀಕ್ಷಾದಾರರನ್ನು ನೇಮಿಸಿದ್ದಲ್ಲಿ ಪ್ರತಿ ಬ್ಲಾಕ್ ಗೆ ನಿಗದಿಪಡಿಸಿರುವ Lump-sum ಮೊತ್ತವನ್ನು ಸಮೀಕ್ಷಾದಾರರಿಗೆ ವಿಭಜಿಸಿ ನೀಡಬೇಕಾಗಿರುತ್ತದೆ.

ಇದನ್ನೂ ಓದಿ: 18,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ; ಇಲ್ಲಿದೆ ಡಿಟೈಲ್ಸ್
ಇತ್ತೀಚಿನ ಜನಪ್ರಿಯ ಸುದ್ದಿಗಳು (Surveyors:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





