Stree Shakti Package: ಭಾರತೀಯ ಸ್ಟೇಟ್ ಬ್ಯಾಂಕ್ ಮಹಿಳಾ ಉದ್ಯಮಿಗಳಿಗಾಗಿ ವಿಶೇಷವಾಗಿ “ಸ್ತ್ರೀ ಶಕ್ತಿ ಪ್ಯಾಕೇಜ್” ಯೋಜನೆಯನ್ನು ಜಾರಿಗೆ ತಂದಿದೆ. ಇದು ಸ್ವಂತ ಉದ್ಯೋಗ ಅಥವಾ ವ್ಯವಹಾರ ಆರಂಭಿಸಲು ಬಯಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯಡಿ, ಮಹಿಳೆಯರು ನಡೆಸುವ ಮ್ಯವಹಾರಗಳಿಗೆ 5 ಲಕ್ಷದಿಂದ 25 ಲಕ್ಷ ರೂಪಾಯಿಗಳವರೆಗೆ ಸೌಲಭ್ಯವನ್ನು ಬ್ಯಾಂಕ್ ಒದಗಿಸುತ್ತದೆ.
ಈ ಪ್ಯಾಕೇಜ್‌ನ ಪ್ರಮುಖ ಅನುಕೂಲವೆಂದರೆ 5 ಲಕ್ಷಕ್ಕೂ ಹೆಚ್ಚಿನ ಸಾಲದ ಮೊತ್ತದ ಮೇಲೆ ಬಡ್ಡಿ ದರದಲ್ಲಿ ಶೇ.0.50 ರಷ್ಟು ರಿಯಾಯಿತಿ ದೊರೆಯುತ್ತದೆ. ಸಣ್ಣ ಉದ್ಯಮಗಲು, ಉತ್ಪಾದನೆ, ಚಿಲ್ಲರೆ ವ್ಯಾಪಾರ, ಅಥವಾ ಸೇವಾ ವಲಯಗಳಲ್ಲಿ ತೊಡಗಿರುವ ಮಹಿಳೆಯರು, ವಿಶೇಷವಾಗಿ ನೊಂದಾಯಿತ ಸ್ವಸಹಾಯ ಗುಂಪುಗಳು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಸಾಲ ಪಡೆಯಲು ವ್ಯವಹಾರದ ಪುರಾವೆ, ಯೋಜನಾ ವರದಿ, ಮತ್ತು ಗುರುತಿನ ಚೀಟಿಗಳ ಅಗತ್ಯವಿರುತ್ತದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಈ ಯೋಜನೆಯ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹಿಸಲು ಒಂದು ಉತ್ತಮ ಉಪಕ್ರಮವಾಗಿದ್ದು, ಮಹಿಳಾ ಅಭ್ಯರ್ಥಿಗಳು ಅವಕಾಶವನ್ನು ಪಡೆದುಕೊಳ್ಳಲು ಕೋರಿದೆ.25 ಲಕ್ಷ ರೂ.ವರೆಗೆ ಸಾಲ ಸೌಲಭ್ಯಗಳನ್ನು ಪಡೆಯಲು ಅವಕಾಶವಿದ್ದು,10 ಲಕ್ಷ ರೂ.ದವರೆಗೆ ಮೇಲಾಧಾರ ರಹಿತ ಸಾಲ ಲಭ್ಯವಾಗಲಿದೆ.
ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಪಂಚ ಯೋಜನೆಗಳಲ್ಲಿ ಸ್ತ್ರೀ ಶಕ್ತಿ ಪ್ಯಾಕೇಜ್ ಕೂಡ ಒಂದಾಗಿದ್ದು, ಇದನ್ನು 2000-01ನೇ ಸಾಲಿನಲ್ಲಿ ಜಾರಿಗೆ ತಂದಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಯೋಜನೆಯೊಂದನ್ನು ಪರಿಚಯ ಮಾಡಿಸಿರುವ ಯೋಜನೆಯೇ ಈ ಸ್ತ್ರೀ ಶಕ್ತಿ ಪ್ಯಾಕೇಜ್ ಯೋಜನೆ.
ಯೋಜನೆಯ ಮೂಲ ಉದ್ದೇಶ:
ಮಹಿಳೆಯರು ತಮ್ಮದೇ ಆದ ಸ್ವಂತ ಸಣ್ಣ ಪ್ರಮಾಣದ ಉದ್ಯಮವನ್ನ ಪ್ರಾರಂಭಿಸಲು ಈ ಯೋಜನೆ ಆರ್ಥಿಕ ಸಹಾಯ ಮಾಡುತ್ತದೆ.ಸಣ್ಣ ಕೈಗಾರಿಕೆಗಳ ಅಡಿಯಲ್ಲಿ ಬರುವ ಉದ್ಯಮಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಲು ಯಾವುದೇ ಹೆಚ್ಚಿನ ಶ್ಯೂರಿಟಿ ನೀಡುವ ಅಗತ್ಯ ಇರುವುದಿಲ್ಲ.
2 ಲಕ್ಷಕ್ಕಿಂತ ಹೆಚ್ಚಿನ ಸಾಲ: ಬಡ್ಡಿ ದರದಲ್ಲಿ 0.50% ರಿಯಾಯಿತಿ ಸಿಗುತ್ತದೆ.
ಸಾಲದ ಮಾರ್ಜಿನ್ ಮೊತ್ತದಲ್ಲಿ 5% ವರೆಗೆ ರಿಯಾಯಿತಿ ಲಭ್ಯವಿದೆ.
ಯಾರು ಅರ್ಹರು:
* ಚಿಲ್ಲರೆ ವ್ಯಾಪಾರಿಗಳು ದಿನಸಿ ಅಂಗಡಿ, ಬಟ್ಟೆ ಅಂಗಡಿ ನೆಡೆಸುವವರು.
* ಸಣ್ಣ ಕೈಗಾರಿಕೆಗಳು ವ್ಯಾಪಾರಿಗಳು
* ಕೃಷಿಗೆ ಸಂಬಂಧಿತ ಚಟುವಟಿಕೆಗಳನ್ನು ನೆಡೆಸುವ ವ್ಯಾಪಾರಿಗಳು ಅರ್ಹರು.
ಅಗತ್ಯ ದಾಖಲಾತಿಗಳು:
* ಆಧಾರ್ ಕಾರ್ಡ್(Aadhaar card)
* ಪಾನ್ ಕಾರ್ಡ್(Pan card)
* ರೇಷನ್ ಕಾರ್ಡ್(Ration Card)
* ಉದ್ಯಮ ನೋಂದಣಿ ಪತ್ರ(Udyam Registration)
* ಯೋಜನೆಯ ವರದಿ ಪತ್ರ(Project Report)
* ಬ್ಯಾಂಕ ಪಾಸ್ ಪುಸ್ತಕ(Bank Passbook)
* ಫೋಟೋ(Photo)
ಯೋಜನೆಯ ಪ್ರಯೋಜನವನ್ನ ಪಡೆಯಲು ಅರ್ಹ ಅಭ್ಯರ್ಥಿಗಳು ನಿಮ್ಮ ಹತ್ತಿರದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ಕೊಡಿ ಯೋಜನೆ ಬಗ್ಗೆ ವಿಚಾರಿಸಿ ಅರ್ಜಿ ಫಾರಂ ಅನ್ನು ಪಡೆದು ಅಗತ್ಯ ದಾಖಲಾತಿಯೋದಿಗೆ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಲು ಅವಕಅಶವಿರುತ್ತದೆ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Stree Shakti Package:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





