Sringeri News; ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಖಂಡ ಭಾರತ ಸಂಕಲ್ಪ ದಿವಸದ ಅಂಗವಾಗಿ ಇಂದು ಶೃಂಗೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು.
ಇದನ್ನೂ ಓದಿ; ಕಾಫಿನಾಡ ಕಳ್ ಕಹಾನಿ: ಪ್ರೇಮಿಯ ಜೊತೆಗಿನ ಕಳ್ಳಾಟಕ್ಕೆ ಪತಿಯನ್ನೇ ಮರ್ಡರ್ ಮಾಡಿದ ಮಿಟಕಲಾಡಿ
ನಿವೃತ್ತ ಯೋಧರಾದ ಜ್ಞಾನೇಶ್ ಶೃಂಗೇರಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಈ ಕುರಿತು ಮಾತನಾಡಿದ ಅವರು ಪ್ರತಿಯೊಂದು ಮನೆಯಿಂದಲೂ ಓರ್ವ ವ್ಯಕ್ತಿ ಸೈನಿಕನಾಗಿ ದೇಶಸೇವೆ ಮಾಡಲು ಕಾರ್ಯಪರ್ವೃತ್ತರಾದಾಗ ಭಾರತ ಅಖಂಡತೆಯನ್ನು ಪಡೆಯಲು ಸಾಧ್ಯ. ಯುವಕರು ಹೆಚ್ಚಿನ ಆದ್ಯತೆಯನ್ನು ದೇಶದ ಗಡಿ ಕಾಯುವಲ್ಲಿ ನೀಡಬೇಕು ಈ ಮೂಲಕ 1947ರ ಸಂದರ್ಭದಲ್ಲಿ ವಿಭಜನೆಗೊಂಡ ದೇಶವನ್ನು ಮತ್ತೆ ಬಲಪಡಿಸುವತ್ತ ಕೈಜೋಡಿಸಬೇಕು, ಪ್ರಮುಖವಾಗಿ ದೇಶದ ಒಳಗಿರುವ ವಿದ್ವಂಸಕ ಕೃತ್ಯಎಸಗುವವರನ್ನು ಸದೆಬಡಿಯಬೇಕು ಎಂದರು.
ಇದನ್ನೂ ಓದಿ; ಮೂಡಿಗೆರೆ: ಮಚ್ಚಿನಿಂದ ಹೊಡೆದು ಇಬ್ಬರ ಕೊಲೆ; ಓರ್ವನ ಸ್ಥಿತಿ ಗಂಭೀರ; ಕೊಲೆ ಮಾಡಿ ತಾನೇ ಪೊಲೀಸ್ ಠಾಣೆ ಹೋದ ಆರೋಪಿ

Sringeri News; ಕಾರ್ಯಕ್ರಮದ ಕುರಿತು ದಿಕ್ಸೂಚಿ ಭಾಷಣ ಮಾಡಿದ ಬಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ಮುರಳಿ ಕೃಷ್ಣ ಹಸಂತಡ್ಕ ವಿಭಜನೆಯಾಗಿರುವ ಭಾರತವನ್ನು ಮರಳಿ ಅಖಂಡವನ್ನಾಗಿಸುವ ನಿಟ್ಟಿನಲ್ಲಿ ಭಜರಂಗದಳ ಸದಾ ಶ್ರಮಿಸುತ್ತಾ ಬಂದಿದೆ. ರಾಷ್ಟ್ರ ವಿರೋಧಿ ಹಿಂದೂ ವಿರೋಧಿ ನಿಲುವುಗಳನ್ನು ಹೊಂದಿರುವವರ ಮಾನಸಿಕತೆಯನ್ನು ಸರಿದೂಗಿಸಬೇಕು, ಭಾರತವನ್ನು ವಿಶ್ವಗುರು ಮಾಡುವ ನಿಟ್ಟಿನಲ್ಲಿ ಒಂದೊಂದೇಯಾಗಿ ಮೆಟ್ಟಿಲುಗಳನ್ನು ಏರುತ್ತಿದ್ದು, ಪ್ರತಿಯೊಬ್ಬರು ದೇಶಕ್ಕಾಗಿ, ಧರ್ಮದ ರಕ್ಷಣೆಗಾಗಿ ಶ್ರಮಿಸಿದಾಗ ಮಾತ್ರ ಅಖಂಡ ಭಾರತ ನಿರ್ಮಾಣವಾಗುತ್ತದೆ. ಕೇವಲ ಶಾಂತಿ ಮತ್ತು ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿಲ್ಲ, ಅನೇಕ ಕ್ರಾಂತಿಕಾರಿಗಳು ಸ್ವಾತಂತ್ರದ ಚಳುವಳಿಗೆ ಧುಮುಕಿ ತಮ್ಮ ಪ್ರಾಣಾರ್ಪಣೆಯನ್ನು ಮಾಡಿದ್ದಾರೆ ಅದನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಈ ಬಾರಿ 76ನೇ ಸ್ವಾತಂತ್ರ್ಯ ದಿನಾಚರಣೆಯೇ? ಅಥವಾ 77ನೇಯದ್ದ?; ಕಳೆದ ಬಾರಿ 75 ವರ್ಷದ ಸ್ವಾತಂತ್ರ್ಯ ಸಂಭ್ರಮ ಆಚರಿಸಿದ್ದೇವೆ.. ಈಗ ಹೇಗೆ 77 ಆಗುತ್ತೆ?
- ಹೊಟ್ಟೆಯಲ್ಲಿ ಕರಕರ ಶಬ್ದ; ಏನಿರಬಹುದು ಈ ಅಶರೀರವಾಣಿ?
- ಬೆಳಿಗ್ಗೆ ಟಿಫಿನ್ ಬಿಡ್ತೀರಾ.?; ತೂಕ ಇಳಿಸಲು ಊಟ ಬಿಡುವ ಹವ್ಯಾಸ ನಿಮಗಿದ್ಯಾ?; ಉಪವಾಸದ ಹೆಸ್ರಲ್ಲಿ ಊಟ ಮಾಡಲ್ವಾ.?

ಲವ್ ಜಿಹಾದ್, ಮತಾಂತರ, ಗೋಹತ್ಯೆ ಸೇರಿದಂತೆ ಮೊದಲಾದ ಸಮಾಜಘಾತುಕ ಶಕ್ತಿಗಳಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹೋರಾಟದ ಮೂಲಕ ಉತ್ತರ ನೀಡುತ್ತಲೇ ಬಂದಿದೆ. ಬಲಿಷ್ಠವಾದ ಹಿಂದೂ ಸಮಾಜದ ಮೂಲಕ ಎಲ್ಲದಕ್ಕೂ ಉತ್ತರ ಕೊಡಲು ಬಜರಂಗದಳ ಸಿದ್ಧವಿದೆ ಎಂದರು.
ಇದನ್ನೂ ಓದಿ; ಬೋರ್ವೆಲ್ ಕೊರೆಸಲು ಸರ್ಕಾರವೇ ನೀಡತ್ತೆ 3 ಲಕ್ಷ ಸಹಾಯಧನ!

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಬಜರಂಗದಳದ ತಾಲೂಕು ಸಂಚಾಲಕ ರವಿ ಸಂಜಯ್ ಪೂಜಾರಿ ಮಾತನಾಡಿದರು. ನಗರ ಸಂಚಾಲಕ ಸಂತೋಷ್ ಕೆರೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೃಂಗೇರಿಯ ಶಂಕರಾಚಾರ್ಯ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಂಜುಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತಾ ಮಹಿಳೆಯರು, ಭಜರಂಗದಳದ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಇದನ್ನೂ ಓದಿ; ಪ್ರಮಾಣಿಕ ಸರ್ಕಾರ ಅನ್ನೋದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡ್ಲಿ

ಪ್ರಮುಖ ಸುದ್ದಿಗಳನ್ನು ಓದಿ
- ನೀವು ಅತಿಯಾಗಿ ನಿದ್ದೆ ಮಾಡುತ್ತೀರಾ?; ಹಾಗದ್ರೆ ಈ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು
- ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಭೀಕರ ಅಪಘಾತ; ಒಬ್ಬನ ಸ್ಥಿತಿ ಗಂಭೀರ
- ಕೊಪ್ಪ: ಮರಕ್ಕೆ ಡಿಕ್ಕಿಯಾದ ಕಾರು | ಸ್ಥಳದಲ್ಲೇ ವ್ಯಕ್ತಿ ಸಾವು
- ಚಿಕ್ಕಮಗಳೂರು: ಕೈ ಶಾಸಕನಿಂದ ಮಹಿಳಾ ಪೊಲೀಸ್ ಪೇದೆಯ ಮೇಲೆ ದೌರ್ಜನ್ಯ; ಯಾರು ಈ ಕೈ ಶಾಸಕ
- ಚಿಕ್ಕಮಗಳೂರು: ಸಿಎಂ, ಡಿಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ; ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು
- ಬ್ರಿಟಿಷ್ ಕಾಲದ ಕಾನೂನು ಬದಲು; ಹೊಸ ಕಾನೂನಿನಲ್ಲಿ ಲವ್ ಜಿಹಾದ್ ಗೆ ಬ್ರೇಕ್ ಬೀಳುತ್ತಾ?
- ರೇಪಿಸ್ಟ್ಗಳಿಗೆ ಎಷ್ಟು ವರ್ಷ ಜೈಲು ಗ್ಯಾರಂಟಿ?; ಕೇಂದ್ರದಿಂದ ಮಹತ್ವದ ನಿರ್ಧಾರ
- ಮೂಡಿಗೆರೆ: ಸರ್ಕಾರಿ ಬಸ್-ಕಾರಿನ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು: ಇನ್ನೋರ್ವನ ಸ್ಥಿತಿ ಗಂಭೀರ
- ಸ್ಮಾರ್ಟ್ಫೋನ್ ಹ್ಯಾಕ್ ಆಗಿದೆಯೇ? ತಿಳಿಯುವುದು ಹೇಗೆ..?; ಹ್ಯಾಕ್ ಆಗಿದ್ದರೆ ಏನು ಮಾಡಬೇಕು?
- ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಕಿಡ್ನಿ ಸಮಸ್ಯೆ ಶುರುವಾಗಿದೆ ಎಂದರ್ಥ!; ಕಿಡ್ನಿ ಸಮಸ್ಯೆಯ ಈ ಆರಂಭಿಕ ಲಕ್ಷಣಗಳನ್ನು ತಿಳಿಯಿರಿ
- ಸೋಂಪು-ಕಲ್ಲುಸಕ್ಕರೆ ಕಾಂಬಿನೇಷನ್; ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತೆ ಗೊತ್ತಾ?
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply