Rasgulla Sweet: ಇನ್ನೂ ಕೆಲವೇ ದಿನಗಳಲ್ಲಿ ಹಬ್ಬ ಬರ‍್ತಾ ಇದೆ. ವೈಭವದಿಂದ ಆಚರಿಸುವ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬ ಕೂಡ ಒಂದು. ಈ ದಿನ ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ನೈವೇದ್ಯ ಮಾಡಲಾಗುತ್ತದೆ. ಈಗಾಗಲೇ ಜನರು ಹಬ್ಬದ ತಯಾರಿ ಆರಂಭಿಸಿದ್ದಾರೆ. ನೈವೇದ್ಯಗಳಿಗೆ ಯಾವ ಸಿಹಿ ತಿಂಡಿ ಮಾಡುವುದು, ಅಲಂಕಾರ ಹೇಗೆ ಎಂಬ ಸಿದ್ದತೆ ಆರಂಭವಾಗಿದೆ.
ಇನ್ನು ಈ ಹಬ್ಬದ ಸಮಯದಲ್ಲಿ ಅಡುಗೆ ವಿಷಯಕ್ಕೆ ಬಂದರೆ ಯಾವ ತಿಂಡಿ ಮಾಡುವುದು ಅಂತ ಚಿಂತೆ ಮಾಡ್ತಾ ಇದ್ದರೆ, ನಿಮ್ಮ ಚಿಂತೆಗೆ ಇಲ್ಲಿದೆ ಪರಿಹಾರ. ಹೌದು ಸುಲಭವಾಗಿ ಪಟ್ ಅಂತ ಮಾಡುವ ಸಿಹಿ ತಿಂಡಿ ಬಗ್ಗೆ ಇವತ್ತು ಹೇಳ್ತೀವಿ.
ಇದನ್ನೂ ಓದಿ; 10 ನಿಮಿಷದಲ್ಲೇ ರೆಡಿಯಾಗುತ್ತೆ ಈ ಸ್ಪೆಷಲ್ ತಿಂಡಿ; ನೀವ್ಯಾಕೆ ಟ್ರೈ ಮಾಡ್ಬಾರ್ದು?
ಸಿಹಿ ಅಂದರೆ ಸಾಕು ಕೆಲವರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹೀಗಿದ್ದಾಗ ಈ ಬಾರಿ ಹಬ್ಬಕ್ಕೆ ಕೇವಲ 3 ಪದಾರ್ಥಗಳೊಂದಿಗೆ ಮನೆಯಲ್ಲೇ ತಯಾರಿಸಬಹುದಾದ ಈ ಸುಲಭವಾದ ಸಿಹಿ ಪಾಕವಿಧಾನವನ್ನು ಪ್ರಯತ್ನಿಸಿ. ರಸಗುಲ್ಲಾ ಭಾರತೀಯ ಆಹಾರಪದ್ಧತಿಯಲ್ಲಿ ಮುಖ್ಯವಾದ ಸಿಹಿ ತಿಂಡಿ ಆಗಿದೆ. ಹಾಗಿದ್ರೆ ಸುಲಭವಾಗಿ ಫಟಾಫಟ್ ರಸಗುಲ್ಲಾ ರೆಸಿಪಿ ಮಾಡೋದು ಹೇಗೆ ತಿಳ್ಕೊಳ್ಳಿ.

ಬೇಕಾಗುವ ಸಾಮಾಗ್ರಿಗಳು:
* ಹಾಲು.
* ಸಕ್ಕರೆ
* ನಿಂಬೆ ಹಣ್ಣು
ಇದನ್ನೂ ಓದಿ; ಭಾರತದಲ್ಲಿ UPI ಎಟಿಎಂ; ಡೆಬಿಟ್ ಕಾರ್ಡ್ ಇಲ್ಲದೆಯೇ ಸ್ಕ್ಯಾನ್ ಮೂಲಕ ಹಣ ವಿಥ್ ಡ್ರಾ ಮಾಡಿ!
ರಸಗುಲ್ಲಾ(Rasgulla Sweet:) ಮಾಡುವ ವಿಧಾನ ಹೇಗೆ:
2 ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿ (ನಿಮಗೆ ಎಷ್ಟು ರಸಗುಲ್ಲಾ ಬೇಕಾಗುತ್ತದೆ ಅಷ್ಟು ಪ್ರಮಾಣದ ಹಾಲನ್ನು ತೆಗೆದುಕೊಳ್ಳಬಹುದು) ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ ಹಾಕಿ ಸ್ಟವ್ ಮೇಲೆ ಇಡಿ. ಅದು ಕುದಿ ಬಂದ ನಂತರ ಹಾಲು ವಡೆಯುತ್ತೆ. ವಡೆದ ನಂತರ ಅದು ಸ್ವಲ್ಪ ತಣ್ಣಗಾಗಲು ಇಡಿ. ಮತ್ತೆ ಒಂದು ತೆಳುವಾದ ಬಟ್ಟೆಯಲ್ಲಿ ಸೋಸಿ ಹಿಂಡಬೇಕು. ಅರ್ಧ ಗಂಟೆ ಬಟ್ಟೆಯಲ್ಲಿ ಕಟ್ಟಿ ಇಡಿ. ನಂತರ ಅದರಲ್ಲಿ ನೀರಿನ ಅಂಶ ಇರಬಾರದು ಹಾಲಿನ ಪುಡಿಯಾಗಿರುತ್ತೆ ಅದು ಉಂಡೆ ಮಾಡಿರಿ. ನಂತರ ಸಕ್ಕರೆ ಪಾಕವನ್ನು ಚೆನ್ನಾಗಿ ಕುದಿಸಿ (ನಿಮ್ಮಗೆ ಎಷ್ಟು ಪ್ರಮಾಣದಲಿ ಸಿಹಿ ಬೇಕೋ ಅಷ್ಟು ಸಕ್ಕರೆ ಹಾಗೂ ನೀರನ್ನು ಹಾಕಿ ಪಾಕ ಮಾಡಿಕೊಳ್ಳಿ) ನಂತರ ಅದಕ್ಕೆ ರಸಗುಲ್ಲಾ ಅನ್ನು ಪಾಕಕ್ಕೆ ಹಾಕಿ ಕುದಿಸಿ 10 ನಿಮಿಷ ಸಾಕು ಸ್ಟವ್ ನಿಂದ ಇಳಿಸಿ ಇಡಿ. (ಯಾವುದೇ ಸ್ಪೂನಿಂದ ತಿರುಗಿಸಬಾರದು) ತಣ್ಣಗಾದ ನಂತರ ಫ್ರಿಜ್ ನಲ್ಲಿ ಇಡಿ. ತಣ್ಣಗಾದಾಗ ರಸಗುಲ್ಲಾಗಳು ಅತ್ಯುತ್ತಮವಾದ ರುಚಿಯನ್ನು ನೀಡುತ್ತವೆ.

ಪ್ರಮುಖ ಸುದ್ದಿಗಳನ್ನು ಓದಿ
- ಪ್ರಧಾನಿ ಮೋದಿ ಭದ್ರತೆಗಿರುವ spg ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ಸಾವು; ಏನಿದು ದೇಶದಲ್ಲಿ ಸಂಚಲನ ಸೃಷ್ಟಿಸಿದ ಸುದ್ದಿ
- ಡ್ರೋಣ್ ಪ್ರತಾಪ್ ಕಂಪೆನಿಯಲ್ಲಿ ಉದ್ಯೋಗಾವಕಾಶ.. ತಿಂಗಳಿಗೆ 40 ಸಾವಿರ ಸಂಬಳ; ಯಾವುದೇ ಪದವಿ ಬೇಕಂತಿಲ್ಲ.. ಅಪ್ಲೈ ಮಾಡೋದು ಹೇಗೆ?
- ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾಯಿಸೋಕೆ ಇದೇ ನೋಡಿ ಲಾಸ್ಟ್ ಡೇಟ್
- ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ?; ಪ್ರಧಾನಿ ಮಂತ್ರಿಗೆ ಪತ್ರ ಬರೆಯೋ ಯೋಚನೆ ಇದೆಯಾ?
- ಭಾರತದಲ್ಲಿ ಭರ್ಜರಿ ಹೂಡಿಕೆ ಮಾಡಲಿರುವ ಅಮೆಜಾನ್
- ಶವಸಂಸ್ಕಾರದ ವೇಳೆ ನೀರಿನ ಮಡಕೆಯನ್ನು ಒಡೆಯಲು ಕಾರಣವೇನು ಗೊತ್ತೇ…?; ಇಲ್ಲಿದೆ ನೋಡಿ ಅನೇಕರಿಗೆ ತಿಳಿಯದ ಮಾಹಿತಿ….
- ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ?; ಯಾವುದೆಲ್ಲಾ ದಾಖಲೆಗಳು ಬೇಕು
- ಕಾರಿದ್ದವರ ಬಿಪಿಎಲ್ ಕಾರ್ಡ್ ರದ್ದತಿ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ; ನಿಮ್ಮ ಮನೆಯಲ್ಲಿ ಕಾರ್ ಇದ್ದರೆ ರೇಷನ್ ಕಾರ್ಡ್ ಏನಾಗುತ್ತೆ?
- ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ವಾ?; ಬಿಪಿಎಲ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಆಗಬೇಕಾ?; ಬಿಪಿಎಲ್ ಕಾರ್ಡ್ ದಾರರಿಗೆ ಮತ್ತೆ ಬಂಪರ್ ಆಫರ್ ನೀಡಿದ ಸರ್ಕಾರ
- ವೀರ ಮದಕರಿ ಚಿತ್ರದಲ್ಲಿ ಸುದೀಪ್ ಮಗಳ ಪಾತ್ರದಲ್ಲಿ ಕಾಣಸಿಕೊಂಡಿದ್ದ ಬಾಲಕಿ ಈಗ ಹೇಗಿದ್ದಾಳೆ?; ಫೋಟೋ ಕಂಪೇರ್ ಮಾಡಿ ಫಿದಾ ಆದ ನೆಟ್ಟಿಗರು.. ಇಲ್ಲಿವೆ ಫೋಟೋಸ್
- ಆ ಒಂದು ಘಟನೆ ಕಿರಿಕ್ ಕೀರ್ತಿ ಜೀವನವನ್ನೇ ಹಾಳು ಮಾಡಿತ್ತಾ?; ವಿಚ್ಛೇದನ ಬಳಿಕ ಮೊದಲ ಬಾರಿಗೆ ಕೀರ್ತಿ ಹೇಳಿದ್ದೇನು?
- ಪೇರಳೆ ಬೆಳೆ ಬೆಳೆದು ಎಷ್ಟು ಲಾಭ ಮಾಡಬಹುದು ಗೊತ್ತಾ?; ಲಾಭ ತಿಳಿದರೆ ಅಚ್ಚರಿ ಆಗೋದು ಗ್ಯಾರಂಟಿ
- ಸಕತ್ ಟೇಸ್ಟಿ ಈ ಗೋಧಿ ಹಿಟ್ಟಿನ ಹಲ್ವಾ; 4 ಸಾಮಗ್ರಿಗಳಿದ್ರೆ ಸಾಕು ರೆಡಿಯಾಗುತ್ತೆ ಈ ಸಿಹಿ ತಿಂಡಿ
- ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ; ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ಬಿಡುಗಡೆ
- ಇಂದಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟ ಶುರು; ಟಿಕೆಟ್ ದರ ಎಷ್ಟು ಗೊತ್ತಾ?
-
intresting story ಓದಲು ಇಲ್ಲಿ ಕ್ಲಿಕ್ ಮಾಡಿ





Leave a Reply