- ಷೇರು ಮಾರುಕಟ್ಟೆಯಲ್ಲಿ ಕ್ಯಾಂಡಲ್ ಸ್ಟಿಕ್ ಪ್ರೈಸ್ ಆಕ್ಷನ್ ಅನಲೈಸ್ ಮಾಡುವುದು ಹೇಗೆ ?
- ವಿವಿಧ ರೀತಿಯ ಇಂಡಿಕೇಟರ್ ಬಳಸುವುದರ ಪ್ರಯೋಜನವೇನು ?
- ಹಾರಿಜಾಂಟಲ್/ಆಂಗ್ಯುಲರ್ ಸಪೋರ್ಟ್ & ರೆಸಿಸ್ಟನ್ಸ್ ಗುರುತಿಸಿ ಅದರ ಆಧಾರದ ಮೇಲೆ ಹೇಗೆ ಟ್ರೇಡ್ ಮಾಡಬಹುದು ?
- ವಿವಿಧ ರೀತಿಯ ಚಾರ್ಟ್ ಪ್ಯಾಟರ್ನ್ ಗಳ ಪರಿಣಾಮಗಳು ಏನಿರುತ್ತವೆ ?
- ಸರಿಯಾದ ಸಮಯದಲ್ಲಿ ಉತ್ತಮವಾದ ಷೇರುಗಳನ್ನು ಗುರುತಿಸುವುದು ಹೇಗೆ ?
- ಸರಿಯಾದ ಸ್ಟಾಪ್ ಲಾಸ್ ಮತ್ತು ರಿಸ್ಕ್ ರಿವಾರ್ಡ್ ಲೆಕ್ಕಾಚಾರ ಮಾಡಿ ಉತ್ತಮ ಲಾಭ ಪಡೆಯುವುದು ಹೇಗೆ ?
- ಬೇರೆಯವರ ಸ್ಟಾಪ್ ಲಾಸ್ ಕಂಡು ಹಿಡಿಯಲು ಸಾಧ್ಯವೇ ?
- ಯಾವ ಟೈಮ್ ಫ್ರೇಮ್ ನಲ್ಲಿ ಹೇಗೆ ಟ್ರೇಡ್ ಮಾಡುವುದು ಉತ್ತಮ ?
ಮೇಲಿನ ಎಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯೇ, ಹಾಗಾದರೆ ಷೇರು ಮಾರುಕಟ್ಟೆಯ ಉಚಿತ ಕೋರ್ಸ್ (ಕಾರ್ಯಾಗಾರ), ಹಾಗೂ ಲೈವ್ ಮಾರ್ಕೆಟ್ ನಲ್ಲಿ ಮಾರುಕಟ್ಟೆಯ ಅಪ್ಡೇಟ್ ಪಡೆಯಲು ಈ ಲಿಂಕ್ ಒತ್ತುವುದರ ಮೂಲಕ ಉಚಿತ Whatsapp Group (https://chat.whatsapp.com/EPQ3IZ3QTsDJRHZWRsq7xa) ಜಾಯಿನ್ ಆಗಬಹುದು. (ಈ ಗ್ರೂಪ್ ನಲ್ಲಿ ಕೇವಲ ಆಸಕ್ತರಿಗೆ ಹಾಗೂ ದಿನದಲ್ಲಿ ಸ್ವಲ್ಪ ಸಮಯ ಮೀಸಲಿಟ್ಟು ಕಲಿಯುವ ಇಚ್ಛೆ ಹೊಂದಿರುವವರಿಗೆ ಮಾತ್ರ ಅವಕಾಶ)
(SHARE MARKET:) ಸೈಡ್ ವೇಸ್ ಮಾರ್ಕೆಟ್ ನಲ್ಲಿ ಹಣ ಮಾಡುವವರು ಯಾರು ?
ಲೋಕಸಭಾ ಚುನಾವಣೆಯ ನಂತರದಲ್ಲಿ ಮತ್ತು ಏನ್ ಡಿ ಎ ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಒಂದು ಉತ್ತಮ ಬುಲ್ಲಿಶ್ ರನ್ ಕಂಡು ಬರಬಹುದೆಂಬ ನಿರೀಕ್ಷೆ ಇಂದು ಸುಳ್ಳಾಗಿದೆ. ಇಂದು ಬೆಳಿಗ್ಗೆಯೇ ಮತ್ತೊಂದು ಎಲ್ಲ ಟೈಮ್ ಹೈಗ್ ಮಾಡಿದ ನಿಫ್ಟಿಗೆ ಬುಲ್ ಸೈಡ್ ನಲ್ಲಿ ಉತ್ತಮ ಫಾಲೋ ಅಪ್ ಸಿಗದೇ ನಿಫ್ಟಿಯು ದಿನವೆಲ್ಲ ಸೈಡ್ ವೇಸ್ ಜೋನ್ ನಲ್ಲಿ ಟ್ರೇಡ್ ಆಯಿತು.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
ಆಲ್ ಟೈಮ್ ಹೈ ಅನ್ನು ಮೇಜರ್ ಸಪೋರ್ಟ್ ಹಾಗು ಇವತ್ತಿನ ಲೊ ಪ್ರೈಸ್ ಆದ 23233 ರ ಹಂತವನ್ನು ಮೇಜರ್ ಸುಪೋರ್ಟ್ ಜೋನ್ ಆಗಿಸಿಕೊಂಡಿದ್ದ ನಿಫ್ಟಿ ಟ್ರೇಡಿಂಗ್ ಕೊನೆಯ ಹೊತ್ತಿನಲ್ಲಿ 23233 ರ ಹಂತದಲ್ಲಿ ಕ್ಲೋಸ್ ನೀಡಿದೆ. ಇಂದಿನ ಪ್ರೈಸ್ ಆಕ್ಷನ್ ಗಮನಿಸಿದರೆ ನಿಫ್ಟಿಯು ನಾಳೆ ಎಲ್ಲಾದರೂ 23233 ರ ಹಂತದಿಂದ ಕೆಳಗೆ ಓಪನ್ ನೀಡಿದ ಪಕ್ಷದಲ್ಲಿ ಇನ್ನಷ್ಟು ಕುಸಿತ ಅಥವಾ ಸೈಡ್ ವೇಸ್ ನಲ್ಲಿ ಟ್ರೇಡ್ ಆಗುವ ಸಾಧ್ಯತೆ ಗಳು ಇರಬಹುದು. ಇನ್ನು ನಿಫ್ಟಿಯ ಮುಂದಿನ ಮೇಜರ್ ಸಪೋರ್ಟ್ 23100 ರ ಹಂತ ಆಗಿರಲಿದೆ, ಈ ಹಂತದಿಂದ ಪ್ರೈಸ್ ಕುಸಿದಲ್ಲಿ ಮುಂದೆ 22900 ಹಾಗು 22790ರ ವರೆಗೂ ಕುಸಿತ ಕಾಣುವ ಸಾಧ್ಯತೆ ಇರಬಹುದು.
ಸೈಡ್ ವೇಸ್ ಮಾರ್ಕೆಟ್ ನಲ್ಲಿ ಪ್ರೈಸ್ ಯಾವುದೇ ಮೊಮೆಂಟುಮ್ ಕಂಡುಕೊಳ್ಳದೆ ಹಲವು ಸಮಯದ ವರೆಗೆ ಒಂದೇ ರೇಂಜ್ ನಲ್ಲಿ ಟ್ರೇಡ್ ಆಗುವುದರಿಂದ್ ಆಪ್ಷನ್ ಪ್ರೀಮಿಯಂ ನಲ್ಲಿ ಟೈಮ್ ಡೀಕೆ (decay) ಆಗಿ ಪ್ರೀಮಿಯಂ ನ ಬೆಲೆಗಳು ಕ್ಷೀಣಿಸತೊಡಗುತ್ತವೆ. ಪ್ರೀಮಿಯಂ ನಲ್ಲಿ ಬೆಲೆಯಲ್ಲಿ ಆಗುವ ಈ ಕುಸಿತವು ಆಪ್ಷನ್ ಸೆಲ್ಲರ್ ಗೆ ದೊರಕುತ್ತದೆ, ಈ ಕಾರಣದಿಂದಲೇ ಸೈಡ್ ವೇಸ್ ಮಾರ್ಕೆಟ್ ನಲ್ಲಿ ಕಾಲ್ ಹಾಗೂ ಪುಟ್ ಸೈಡ್ ನಲ್ಲಿ ಆಪ್ಷನ್ ಸೆಲ್ಲಿಂಗ್ ನಡೆಯುತ್ತಿರುವುದು ಕಂಡು ಬರುತ್ತದೆ. ಅಲ್ಲದೆಯೇ, ಆಪ್ಷನ್ ಟ್ರೇಡಿಂಗ್ ನಲ್ಲಿ ಶೇಖಡಾ 75%ರಷ್ಟು ಬಾರಿ ಆಪ್ಷನ್ ಖರೀದಿ ಮಾಡುವವರಿಗಿಂತಲೂ ಆಪ್ಷನ್ ಸೆಲ್ಲರ್ ಹಣ ಗಳಿಸುತ್ತಾನೆ ಎನ್ನುವುದನ್ನು ಮಾರ್ಕೆಟ್ ಡೇಟಾ ತಿಳಿಸುತ್ತದೆ.
ಇದನ್ನೂ ಓದಿ: ಆರು ವರ್ಷದ ಬಳಿಕ ಕಾಳುಮೆಣಸು ಬೆಲೆಯಲ್ಲಿ ಭಾರೀ ಏರಿಕೆ; 2018 ರ ದಾಖಲೆ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು
ಈ ಷೇರಿನ ಮೇಲೆ ಗಮನವಿಡಿ:
Websol Energy System Limited – ಕಳೆದ ವರ್ಷ ಜೂನ್ ನಲ್ಲಿ 80 ರೂಪಾಯಿ ಆಸುಪಾಸಿನಲ್ಲಿದ್ದ ಈ ಷೇರು ಕೇವಲ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 743 ರೂಪಾಯಿ ತಲುಪಿದ್ದು ಇದೀಗ 608 ರೂಪಾಯಿಯಲ್ಲಿ ಟ್ರೇಡ್ ಆಗುತ್ತಿದೆ. ದೀರ್ಘಾವಧಿಯ ಹೂಡಿಕೆಗೆ ಈ ಷೇರಿನ ಕುರಿತು ಅಧ್ಯಯನ ಮಾಡಿರಿ.

ಇದನ್ನೂ ಓದಿ: ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್; ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಹೆಚ್ಚಿಸಿದ ಸರ್ಕಾರ
(ಈ ಮೇಲ್ಕಂಡ ಬರಹವು ವೈಯಕ್ತಿಕ ಅಧ್ಯಯನವಾಗಿದ್ದು, ನ್ಯೂಸ್ ಮಲ್ನಾಡ್ ಮೀಡಿಯಾಕ್ಕೆ ಹಾಗು ಮೇಲಿನ ಬರಹಕ್ಕೆ ಯಾವುದೇ ನೇರ ಸಂಬಂಧ ಇರುವುದಿಲ್ಲ. ಹೂಡಿಕೆ ಮಾಡುವ ಮುನ್ನ ಅಧಿಕೃತ /ಸರ್ಟಿಫೈಡ್ ಅಡ್ವೈಸರ್ ನೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ)
ಇದನ್ನೂ ಓದಿ: ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್; ಇನ್ಮುಂದೆ ಗ್ರಾ.ಪಂ ಗಳಲ್ಲಿ ಸಿಗಲಿವೆ ಈ ದಾಖಲೆ!






