(Share Market Kannada) ನಿನ್ನೆಯೇ ಚರ್ಚಿಸಿದಂತೆ ಇಂದು ನಿಫ್ಟಿ ಫಿಫ್ಟಿಯು ಮೇಜರ್ ಸಪೋರ್ಟ್ ಜೋನ್ ಆಗಿದ್ದ 22783 ಲೆವೆಲ್ ನ ಬ್ರೇಕ್ ಮಾಡಿ ಕೆಳಗಡೆ ಕ್ಲೋಸ್ ಆಗಿದೆ. ನಿಫ್ಟಿಯಲ್ಲಿ ದಿನ ಪೂರ್ತಿ ಸೆಲ್ಲಿಂಗ್ ಪ್ರೆಷರ್ ಇದ್ದರು ಸಹ ಹೇಳಿಕೊಳ್ಳುವಂತಹ ಸೆಲ್ಲಿಂಗ್ ಮೊಮೆಂಟುಮ್ ಕಂಡುಬರಲಿಲ್ಲ. ಅಂಕಗಳು 22783 ಕೆಳಗೆ ಹೋದರು ಸಹ, ನಿಫ್ಟಿಯು ದಿನವೆಲ್ಲ ಸಪೋರ್ಟ್ ಜೋನ್ ಅನ್ನು ರೆಸಿಸ್ಟನ್ಸ ಜೋನ್ ಆಗಿ ಮಾರ್ಪಡಿಸಿ ಅಲ್ಲೇ ಸೈಡ್ ವೇಸ್ ನಲ್ಲಿ ಸಾಗಿತ್ತು. ಅಲ್ಲದೆ 15 ಮಿನಿಟ್ ಟೈಮ್ ಫ್ರೇಮ್ ನಲ್ಲಿ ನೋಡುವುದಾದರೆ ಕೊನೆಯ ಕ್ಯಾಂಡಲ್ ಹ್ಯಾಮ್ಮೆರ್ ಅಟ್ ದಿ ಬಾಟಮ್ ಇರುವುದರಿಂದ, ಪ್ರೈಸ್ ಬುಲ್ಲಿಶ್ ರಿವರ್ಸಲ್ ಆಗುವ ಸಾಧ್ಯತೆಗಳು ಇರಬಹುದು. ಒಂದು ವೇಳೆ ನಿಫ್ಟಿ 22577ನ್ನು ಬ್ರೇಕ್ ಡೌನ್ ಮಾಡಿದ ಪಕ್ಷದಲ್ಲಿ ಮುಂದಿನ ಮೇಜರ್ ಸಪೋರ್ಟ್ 22500 ಆಗಿರಲಿದೆ.
ಫಿಬೋನಾಚಿ ರಿಟ್ರೇಸ್ಮೆಂಟ್ ಪ್ರಕಾರ:
ನಿಫ್ಟಿಯ ಪ್ರಿವಿಯಸ್ ಮೇಜರ್ ಲೊ ಪ್ರೈಸ್ ಆಗಿರುವ 21821 ರಿಂದ ಫಿಬೋನಾಚಿ ರಿಟ್ರೇಸ್ಮೆಂಟ್ ನೋಡಿದರೆ ಇದುವರೆಗೆ ಕೇವಲ ಶೇಕಡಾ 38 ಕ್ಕಿಂತ ಕಡಿಮೆ ರಿಟ್ರೇಸ್ಮೆಂಟ್ ಆಗಿರುತ್ತದೆ, ಇದು ಶೇಕಡಾ 50ರಿಂದ 60ರಷ್ಟು ರಿಟ್ರೇಸ್ ಆದಲ್ಲಿ ಅದನ್ನು ಉತ್ತಮ ರಿಟ್ರೇಸ್ಮೆಂಟ್ ಎಂದು ಪರಿಗಣಿಸಬಹುದು.
ಹಾಗೆಯೇ ಪ್ರಿವಿಯಸ್ ಮೇಜರ್ ಬುಲ್ಲಿಶ್ ಕ್ಯಾಂಡಲ್ ಇಂದ ಇದುವರೆಗೆ ಶೇಕಡಾ 78ರಷ್ಟು ರಿಟ್ರೇಸ್ಮೆಂಟ್ ಆಗಿರುವುದು ನಿಫ್ಟಿಯು ಇನ್ನಷ್ಟು ಕುಸಿತ ಕಾಣುವ ಸಾಧ್ಯತೆಯನ್ನು ತೋರುತ್ತದೆ.

ನಿಫ್ಟಿ ಆಪ್ಷನ್ ಚೈನ್ ಅನಾಲಿಸಿಸ್:
ಕಾಲ್ ಸೈಡ್ ನಲ್ಲಿ 22800, 22900,23000 ಲೆವೆಲ್ ಗಳಲ್ಲಿ ಅತಿ ಹೆಚ್ಚು ಕಾಲ್ ಸೆಲ್ಲರ್ ಗಳು ಕುಳಿತಿದ್ದಾರೆ. ಹಾಗೆಏ ಪುಟ್ ಸೈಡ್ ನಲ್ಲಿ 22350 ಕೆಳಗೆ ಪುಟ್ ಸೆಲ್ಲರ್ ಗಳು ಇದ್ದು, 22700 ರಿಂದ 22400 ವರೆಗೆ ಪುಟ್ ಲಾಂಗ್ ಇರುವುದು ತಿಳಿದಿ ಬರುತ್ತಿದೆ. ಆಪ್ಷನ್ ಚೈನ್ ಅನಾಲಿಸಿಸ್ ಪ್ರಕಾರವಾಗಿ ನಿಫ್ಟಿಯು ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಕಂಡುಬರುತ್ತಿದೆ.
ಇದನ್ನೂ ಓದಿ: ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
ಈ ಷೇರುಗಳ ಮೇಲೆ ಸಹ ಗಮನವಿಡಿ:
1. ಏನ್ ಹೆಚ್ ಪಿ ಸಿ (NHPC)
ಉತ್ತಮ ಮೊಮೆಂಟುಮ್ ನೀಡಿದ್ದ NHPC ಷೇರು ಇದೀಗ ಒಳ್ಳೆಯ ಡಿಪ್ ಕೊಟ್ಟಿದ್ದು, 101ರ ಲೆವೆಲ್ ಖರೀದಿಗೆ ಉತ್ತಮ ಹಂತವಾಗಿರುತ್ತದೆ. ಶಾರ್ಟ್ ಟರ್ಮ್ ಟಾರ್ಗೆಟ್ 115 – 120.

2. ಹಿಂದೂಸ್ತಾನ್ ಕಾಪರ್
ದೀಪಾವಳಿಯ ನಂತರ ಉತ್ತಮ ಮೊಮೆಂಟುಮ್ ನೀಡಿದ್ದ ಹಿಂದೂಸ್ತಾನ್ ಕಾಪರ್ ಇದೀಗ 390 ರ ಮೇಲೆ ಕ್ಲೋಸ್ ನೀಡಿದ ಪಕ್ಷದಲ್ಲಿ ಖರೀದಿಗೆ ಉತ್ತಮವಾಗಿರುತ್ತದೆ. ಟಾರ್ಗೆಟ್ 402 – 415. 415ರ ಮೇಲೆ ಪ್ರೈಸ್ ಉಳಿದುಕೊಂಡಲ್ಲಿ 430ರ ವರೆಗೂ ಟಾರ್ಗೆಟ್ ನೀಡುವ ಸಾಧ್ಯತೆ ಇರುತ್ತದೆ.
(ಹೂಡಿಕೆ ಮಾಡುವ ಮುನ್ನ ಅಧಿಕೃತ /ಸರ್ಟಿಫೈಡ್ ಅಡ್ವೈಸರ್ ನೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ)
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
- ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
- ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
- ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
- ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್; ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ






