(Savitribai Phule:) ಮಹಿಳೆಯರು ಆತ್ಮವಿಶ್ವಾಸದಿಂದ ತಮ್ಮದೇ ಆದ ವ್ಯವಹಾರ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯು ಮಹಿಳೆಯರಿಗೆ ಕೌಶಲ ತರಬೇತಿಯ ಜೊತೆಗೆ ಉದ್ಯಮ ಆರಂಭಿಸಲು ಅಗತ್ಯವಿರುವ ಸಾಲ ಸೌಲಭ್ಯ ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸುವ ಮೂಲಕ, ಗ್ರಾಮೀಣ ಆಧಾರಿತ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇನ್ನು ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸರ್ಕಾರದಿಂದ ಮಹತ್ವದ ಆದೇಶ!
ಮಹಿಳೆಯರಿಗೆ ಸ್ವ-ಉದ್ಯೋಗ ಅವಕಾಶ:
ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ, RUDSETI/RSETI ಸಂಸ್ಥೆಗಳು ಮತ್ತು ಇತರ ತಾಂತ್ರಿಕ ಬೆಂಬಲ ಸಂಸ್ಥೆಗಳ ಮೂಲಕ ಮಹಿಳೆಯರಿಗೆ ಸ್ವ-ಉದ್ಯೋಗ ಅವಕಾಶಗಳಿಗಾಗಿ ತರಬೇತಿ ನೀಡಲಾಗುವುದು. ಸರ್ಕಾರವು ತರಬೇತಿ ಪಡೆಯುವವರನ್ನು ಬ್ಯಾಂಕ್ಗಳೊಂದಿಗೆ ಸಂಪರ್ಕಿಸಲು ಮತ್ತು ಅವರ ಉದ್ಯಮಗಳನ್ನು ಪ್ರಾರಂಭಿಸಲು ಅವರಿಗೆ ಅನುಸರಣಾ ಬೆಂಬಲವನ್ನು ಒದಗಿಸಲು ಯೋಜಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ನೀಡಿದ್ದಾರೆ.
(Savitribai Phule:) ಈ ಯೋಜನೆಯ ಉದ್ದೇಶವೇನು?:
* ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು.
* ಇದು 100 ಗ್ರಾಮ ಪಂಚಾಯತ್ಗಳಲ್ಲಿ 30,000 ಮಹಿಳೆಯರಿಗೆ ಉದ್ಯೋಗ ಆಧಾರಿತ ಕೌಶಲ್ಯಗಳಲ್ಲಿ ತರಬೇತಿ ನೀಡುವುದು.
* ಆಯ್ದ ಗ್ರಾಮಗಳಲ್ಲಿ ಮಹಿಳಾ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಮಹಿಳೆಯರು ತಮ್ಮ ಆಕಾಂಕ್ಷೆಗಳು ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ತರಬೇತಿ ಪಡೆಯಬಹುದಾಗಿದೆ.
* ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ತರಬೇತಿ ನೀಡುವುದು.
* ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಕಾರ್ಯಕ್ರಮಗಳ ಮೂಲಕ ಆರ್ಥಿಕ ಸಬಲೀಕರಣ.
ಇದನ್ನೂ ಓದಿ: ಶೃಂಗೇರಿಯ ಟ್ರಿಲಿಯಂಟ್ ಡಿಜಿಟಲ್ ಕಂಪನಿಯಲ್ಲಿ ಭರ್ಜರಿ ಜಾಬ್ ಆಫರ್!; ವಾಕ್-ಇನ್ ಸಂದರ್ಶನ, ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
ಯಾವೆಲ್ಲಾ ತರಬೇತಿ:
* ಜ್ಯಾಂ, ಉಪ್ಪಿನಕಾಯಿ, ಹಪ್ಪಳ ತಯಾರಿಯಂತಹ ಆಹಾರ ಸಂಸ್ಕರಣೆ ಉದ್ಯಮ
* ಹೊಲಿಗೆ, ಉಡುಪು ತಯಾರಿಕೆ
* ಹಸ್ತಕಲಾ ಮತ್ತು ಕುಸುರಿ ಕಲೆ ಉದ್ಯಮ
* ಬ್ಯೂಟಿ ಪಾರ್ಲರ್’ನಂತಹ ಸೌಂದರ್ಯ ಮತ್ತು ಮಹಿಳಾ ಸೇವೆಗಳು
* ಸಣ್ಣ ಪ್ಯಾಕೇಜಿಂಗ್, ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆ
* ಡೇಟಾ ಎಂಟ್ರಿ, ಕಂಪ್ಯೂಟರ್ ಕೋರ್ಸ್
* ಸಾಲ ಮತ್ತು ಮಾರುಕಟ್ಟೆ ಸಹಾಯ
* ಬ್ಯಾಂಕುಗಳಿಂದ ಸುಲಭ ಸಾಲ ಸೌಲಭ್ಯ
ಇದನ್ನೂ ಓದಿ: ಪಾಕ್ ವಿರುದ್ಧ ಆಪರೇಷನ್ ಸಿಂಧೂರ್..; ಭಾರತೀಯ ಸೇನೆಯಿಂದ ಏರ್ಸ್ಟ್ರೈಕ್..!
(Savitribai Phule:) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?:
ಯೋಜನೆಗೆ ಆಯ್ಕಯಾದ ಗ್ರಾಮಗಳ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಕೌಶಲ್ಯ ವಿಕಾಸ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಗ್ರಾಮ ಪಂಚಾಯಿತಿ ಅಥವಾ ತಹಶೀಲ್ದಾರ್ ಕಚೇರಿ ಮುಖಾಂತರ ಈ ಯೋಜನೆಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.
ಅಗತ್ಯವಿರುವ ದಾಖಲೆಗಳು:
* ಆಧಾರ್ ಕಾರ್ಡ್
* ವೋಟರ್ ಐಡಿ
* ರೇಷನ್ ಕಾರ್ಡ್
* ಬ್ಯಾಂಕ್ ಖಾತೆ ವಿವರ (Savitribai Phule:)

ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರೇ ಗಮನಿಸಿ; ಸ್ಯಾಲರಿ ಪ್ಯಾಕೇಜ್ ಕುರಿತು ಮುಖ್ಯ ಮಾಹಿತಿ!
ಇತ್ತೀಚಿನ ಜನಪ್ರಿಯ ಸುದ್ದಿಗಳು (Savitribai Phule:)
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?





