PM Kusum B Scheme:ಸೋಲಾರ್ ಪಂಪ್ ಸೆಟ್‌ಗಳಿಗೆ ಅರ್ಜಿ ಆಹ್ವಾನ

(PM Kusum B Scheme:) ಕರ್ನಾಟಕ ಸರ್ಕಾರದ ಇಂಧನ ಇಲಾಖೆ, ಕೃಷಿ ಇಲಾಖೆ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (KREDL) ವತಿಯಿಂದ ಪಿಎಂ–ಕುಸುಮ್ ಕಾಂಪೊನೆಂಟ್–ಬಿ ಯೋಜನೆ ಅಡಿಯಲ್ಲಿ ರೈತರಿಗೆ ಸೋಲಾರ್ ಪಂಪ್ ಸೆಟ್‌ಗಳನ್ನು ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.


ನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್‌ ರದ್ದು; ನಿಮ್ಮ ತಾಲೂಕಿನ ರೇಷನ್‌ ಕಾರ್ಡ್ ಡಿಲೀಟ್‌ ಆದ ಡಿಟೈಲ್ಸ್‌ ಇಲ್ಲಿದೆʼ


ಈ ಯೋಜನೆಯಡಿ ರೈತರು ಡೀಸೆಲ್ ಹಾಗೂ ವಿದ್ಯುತ್ ಅವಲಂಬನೆ ಕಡಿಮೆ ಮಾಡಿಕೊಂಡು ಸೌರಶಕ್ತಿಯಿಂದ ನೀರಾವರಿ ಸೌಲಭ್ಯ ಪಡೆಯಬಹುದಾಗಿದೆ. 3 ಹೆಚ್‌ಪಿ, 5 ಹೆಚ್‌ಪಿ, 7.5 ಹೆಚ್‌ಪಿ ಮತ್ತು 10 ಹೆಚ್‌ಪಿ ಸಾಮರ್ಥ್ಯದ ಸೋಲಾರ್ ಪಂಪ್ ಸೆಟ್‌ಗಳು ಲಭ್ಯವಿದ್ದು, ರೈತರ ವರ್ಗದ ಆಧಾರದಲ್ಲಿ ಸಹಾಯಧನ ನೀಡಲಾಗುತ್ತದೆ.

ಯೋಜನೆಯಂತೆ ಎಸ್‌ಸಿ/ಎಸ್‌ಟಿ ರೈತರಿಗೆ 50 ಶೇಕಡಾ, ಸಾಮಾನ್ಯ ವರ್ಗದ ರೈತರಿಗೆ 30 ಶೇಕಡಾ ಹಾಗೂ ಇತರ ರೈತರಿಗೆ 20 ಶೇಕಡಾ ಸಹಾಯಧನವನ್ನು ಸರ್ಕಾರ ನೀಡಲಿದೆ. ಉಳಿದ ಮೊತ್ತವನ್ನು ರೈತರು ಭರಿಸಬೇಕಾಗುತ್ತದೆ.


ನ್ನೂ ಓದಿ: ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತಾ?; FSSAI ವರದಿ ಇಲ್ಲಿದೆ ನೋಡಿ


ಅರ್ಹ ರೈತರು ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಅಥವಾ ನೀರಾವರಿ ಸೌಲಭ್ಯ ಹೊಂದಿರಬೇಕು. ಅರ್ಜಿ ಸಲ್ಲಿಸಲು ಆಸಕ್ತರು www.souramitra.com ಅಥವಾ www.kredl.karnataka.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲಾ ಅಧಿಕಾರಿಗಳು, KREDL ಕಚೇರಿಗಳು ಅಥವಾ ನೀಡಲಾದ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈತರು ಈ ಯೋಜನೆಯ ಪ್ರಯೋಜನ ಪಡೆದು ಕಡಿಮೆ ವೆಚ್ಚದಲ್ಲಿ ಸುಸ್ಥಿರ ಕೃಷಿ ನಡೆಸುವಂತೆ ಸರ್ಕಾರ ಮನವಿ ಮಾಡಿದೆ.

ಸೂಚನೆ: ಈ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಗಿದಿದ್ದು, ಕೇವಲ ಯೋಜನೆಯ ಮಾಹಿತಿಗಾಗಿ ಈ ಲೇಖನ ಹಾಕಲಾಗಿದೆ. 


ನ್ನೂ ಓದಿ: ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್


PM Kusum B Scheme Karnataka solar pump subsidy poster
PM Kusum B Scheme:ಸೋಲಾರ್ ಪಂಪ್ ಸೆಟ್‌ಗಳಿಗೆ ಅರ್ಜಿ ಆಹ್ವಾನ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (PM Kusum B Scheme:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
  6. ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
  7. ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್‌ ರದ್ದು; ನಿಮ್ಮ ತಾಲೂಕಿನ ರೇಷನ್‌ ಕಾರ್ಡ್ ಡಿಲೀಟ್‌ ಆದ ಡಿಟೈಲ್ಸ್‌ ಇಲ್ಲಿದೆ
  8. ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್