(pump sets 25:) ನೀರಾವರಿ ಪಂಪ್ ಸೆಟ್ ಗಳಿಗೆ ಮೂಲಸೌಕರ್ಯ ರಚಿಸುವ ಸಂಬಂಧ ರೈತರಿಗೆ ಅನುಕೂಲವಾಗುವಂತೆ ಜಾರಿಗೊಳಿಸುವ ಬಗ್ಗೆ ನವೀಕೃತ ಶೀಘ್ರು ಸಂಪರ್ಕ ಯೋಜನೆ ಜಾರಿಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
(pump sets 25:) ಆದೇಶದಲ್ಲಿ ಏನಿದೆ?:
ನೀರಾವರಿ ಪಂಪ್ ಸೆಟ್ ಗಳಿಗೆ ಮೂಲಸೌಕರ್ಯ ರಚಿಸುವ ನಿಟ್ಟಿನಲ್ಲಿ ಶೀಘ್ರ ಸಂಪರ್ಕ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಅದರಂತೆ ರೂ.10,000 ಮತ್ತು ಠೇವಣಿ ಹಣ ಪಾವತಿಯೊಂದಿಗೆ, ರೈತರು ಇಚ್ಚಿಸಿದಲ್ಲಿ, ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ಮೂಲಸೌಕರ್ಯ ರಚಿಸಿಕೊಳ್ಳುವಂತೆ ಮತ್ತು ಅವಶ್ಯಕತೆಗೆ ತಕ್ಕಂತೆ 25 KVA ಪರಿವರ್ತಕವನ್ನು ವಿಸಕಂಗಳು ಒದಗಿಸಲು ಅವಕಾಶ ಕಲ್ಪಿಸಲಾಗಿತ್ತು.
ನೀರಾವರಿ ಪಂಪ್ ಸೆಟ್ ಗಳನ್ನು ವ್ಯವಸ್ಥಿತವಾಗಿ ವಿದ್ಯುತ್ ಜಾಲಕ್ಕೆ ಸೇರ್ಪಡಿಸಲು ಮತ್ತು ಹಗಲಿನ ವೇಳೆಯಲ್ಲಿಯೇ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸುವ ದೃಷ್ಟಿಯಿಂದ ದಿನಾಂಕ 22.9.2023ರ ಅಂತ್ಯಕ್ಕೆ ನೋಂದಣಿಗೊಂಡು ವಿದ್ಯುತ್ ಮೂಲಸೌಕರ್ಯಕ್ಕೆ ಬಾಕಿ ಇದ್ದ ಅರ್ಜಿಗಳ ಪೈಕಿ ಮತ್ತು ಹೊಸದಾಗಿ ನೋಂದಣಿಗೊಳ್ಳುವ ಅರ್ಜಿಗಳ ಪೈಕಿ ಕೊಳವೆಬಾವಿಗಳು ಹಾಲಿ ಇರುವ ವಿದ್ಯುತ್ ಜಾಲದಿಂದ 500 ಮೀಟರ್ ದೂರವಿದ್ದಲ್ಲಿ, Stand alone/off grid Solar pump ಕೇಂದ್ರ ಸರ್ಕಾರದ ಸಹಾಯಧನ 30% ಮತ್ತು ರಾಜ್ಯ ಸರ್ಕಾರದ ಸಹಾಯಧನ 50% ರೊಂದಿಗೆ ಸೌರ ಪಂಪ್ ಅಳವಡಿಸಲು, 500 ಮೀಟರ್ ಒಳಗಿದ್ದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ವಿಸಕಂಗಳು ರಚಿಸಲು ಹಾಗೂ ಹೊಸದಾಗಿ ನೋಂದಣಿಗೊಳ್ಳುವ ರೈತರು ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ವಿದ್ಯುತ್ ಮೂಲಸೌಕರ್ಯ ರಚಿಸಿಕೊಳ್ಳಲು ಆದೇಶ ಹೊರಡಿಸಲಾಗಿದ್ದು, ಈ ಆದೇಶದ ಹಿಂದೆ ಚಾಲ್ತಿಯಲ್ಲಿದ್ದ ಎಲ್ಲಾ ಆದೇಶ ಸುತ್ತೋಲೆಗಳನ್ನು ಹಿಂಪಡೆಯಲಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಪಾಲಿಶ್ ಅಕ್ಕಿ ಬಳಸೋ ಮುನ್ನ ಹುಷಾರ್; ಹೊರಬಿತ್ತು ಅಘಾತಕಾರಿ ಅಂಶ!
ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಶೀಘ್ರು ಸಂಪರ್ಕ ಯೋಜನೆಯ ಮಾದರಿಯನ್ನು ತಾಂತ್ರಿಕ ಮತ್ತು ಆರ್ಥಿಕ ಸಾಧಕ ಭಾಧಕಗಳನ್ನು ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲಾ ವಿಸಕಂಗಳಿಗೆ ಸೂಚಿಸಲಾಗಿತ್ತು. ಶೀಘ್ರ ಸಂಪರ್ಕ ಯೋಜನೆ ವಿಧಾನ ಜಾರಿಗೊಳಿಸಿದಲ್ಲಿ ಹೆಚ್ಚಿನ ರೈತರು ಮೂಲಸೌಕರ್ಯ ರಚಿಸಿಕೊಳ್ಳಲಿದ್ದು, ವಿಸಕಂಪನಿಗಳು ಪರಿವರ್ತಕವನ್ನು ಮಾತ್ರ ಒದಗಿಸಬೇಕಾಗಿರುವುದರಿಂದ, ದಿನಾಂಕ 22.9.2023 ರ ಅಂತ್ಯಕ್ಕೆ ನೋಂದಣಿಗೊಂಡು ಮೂಲಸೌಕರ್ಯ ರಚನೆಗೆ ಬಾಕಿ ಇರುವ ಮತ್ತು ಹೊಸದಾಗಿ ನೋಂದಣಿಗೊಳ್ಳುವ ಕೃಷಿ ಪಂಪ್ ಸೆಟ್ ಅರ್ಜಿದಾರರಿಗೆ ಅನುಕೂಲವಾಗುವಂತೆ ಮತ್ತು ಅನಧಿಕೃತ ಸಂಪರ್ಕವನ್ನು ನಿಯಂತ್ರಿಸುವ ದೃಷ್ಟಿಯಿಂದ ಶೀಘ್ರ ಸಂಪರ್ಕ ಯೋಜನೆ ವಿಧಾನವನ್ನು ಜಾರಿಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗಾಗಿ ಈ ಕೆಳಗಿನ ಆದೇಶವನ್ನು ಹೊರಡಿಸಲಾಗಿದೆ.
(pump sets 25:) ಏನಿದೆ ಆದೇಶದಲ್ಲಿ:
* ದಿನಾಂಕ 22.9.2023 ಕ್ಕೂ ಮುನ್ನ ನೋಂದಣಿಗೊಂಡು ಮತ್ತು ಅಗತ್ಯ ಶುಲ್ಕ ಮತ್ತು ಠೇವಣಿ ಪಾವತಿಸಿ ವಿದ್ಯುತ್ ಮೂಲಸೌಕರ್ಯ ರಚಿಸಲು ಬಾಕಿಯಿರುವ ಪಂಪ್‌ಸೆಟ್‌ಗಳಿಗೆ ರೈತರು ಇಚ್ಚಿಸಿದಲ್ಲಿ HT ಮತ್ತು LT network ವಿಸ್ತರಣೆ ಕಾಮಗಾರಿಗಳನ್ನು ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ಮೂಲಸೌಕರ್ಯ ರಚಿಸಿಕೊಳ್ಳುವುದು ಮತ್ತು ವಿಸಕಂಗಳ ವೆಚ್ಚದಲ್ಲಿ ಸೂಕ್ತ ಸಾಮರ್ಥ್ಯದ ಪರಿವರ್ತಕವನ್ನು 2 ಅಥವಾ ಹೆಚ್ಚಿನ ಸಂಖ್ಯೆಯ ರೈತರ ಪಂಪ್‌ಸೆಟ್‌ಗಳನ್ನು ಒಟ್ಟುಗೂಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಒದಗಿಸುವುದು.
ಇದನ್ನೂ ಓದಿ: ದಾಖಲೆ ಸೃಷ್ಟಿಸಿದ ಆಧಾರ್ ಅಥೆಂಟಿಕೇಶನ್; ಏನಿದು?
* ನೋಂದಣಿಗೊಂಡ /ನೋಂದಣಿಗೊಳ್ಳುವ ಪಂಪ್‌ಸೆಟ್‌ಗಳಿಗೆ ರೈತರು ಇಚ್ಚಿಸಿದಲ್ಲಿ HT ಮತ್ತು LT network ವಿಸ್ತರಣೆ ಕಾಮಗಾರಿಗಳನ್ನು ರೂ.15,000/- ಮತ್ತು KERC ನಿಯಮಾವಳಿಗಳಂತೆ ಠೇವಣಿ ಹಣವನ್ನು ವಿಸಕಂಗಳಿಗೆ ಪಾವತಿ ಮಾಡುವುದರೊಂದಿಗೆ, ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ಮೂಲಸೌಕರ್ಯ ರಚಿಸಿಕೊಳ್ಳುವುದು ಮತ್ತು ವಿಸಕಂಗಳ ವೆಚ್ಚದಲ್ಲಿ ಸೂಕ್ತ ಸಾಮರ್ಥ್ಯದ ಪರಿವರ್ತಕವನ್ನು, 2 ಅಥವಾ ಹೆಚ್ಚಿನ ಸಂಖ್ಯೆಯ ರೈತರ ಪಂಪ್‌ಸೆಟ್‌ಗಳನ್ನು ಒಟ್ಟುಗೂಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಒದಗಿಸುವುದು.
(pump sets 25:) * ನೀರಾವರಿ ಪಂಪ್‌ಸೆಟ್‌ಗಳು ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಸ್ವಯಂ ಕಾರ್ಯನಿರ್ವಹಣೆಯಡಿ (Self- execution) ಕಾಮಗಾರಿ ಕೈಗೊಳ್ಳುವುದು ಇಲ್ಲದಿದ್ದಲ್ಲಿ ನವೀಕೃತ ಶೀಘ್ರ ಸಂಪರ್ಕ ಯೋಜನೆಯಡಿ (New SSY) ಕಾಮಗಾರಿ ಕೈಗೊಳ್ಳುವುದು. ಇದಕ್ಕೆ ಹೊರತುಪಡಿಸಿ, ಯಾವುದೇ ನೀರಾವರಿ ಪಂಪ್‌ಸೆಟ್‌ಗಳು ವಿದ್ಯುತ್ ಜಾಲದಿಂದ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಹೊಂದಿದ್ದಲ್ಲಿ, ಅವುಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ ವಹಿಸಿ, ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರ ಜೊತೆಗೆ ನಿಯಮಾನುಸಾರ ಕ್ರಮವಹಿಸುವುದು.
* HT ಮತ್ತು LT network ವಿಸ್ತರಣೆ ಕಾಮಗಾರಿಗಳನ್ನು ಕೈಗೊಳ್ಳುವಾಗ, ಪರಿವರ್ತಕದಿಂದ LT ಮಾರ್ಗವನ್ನು ಕೇವಲ ಒಂದು ಅಥವಾ ಎರಡು Span ಗೆ ಸೀಮಿತಗೊಳಿಸುವುದು.
(pump sets 25:) * ಶೀಘ್ರ ಸಂಪರ್ಕ/ ನವೀಕೃತ ಶೀಘ್ರ ಸಂಪರ್ಕ ದಲ್ಲಿ ಒದಗಿಸಿದ ಪರಿವರ್ತಕಗಳಲ್ಲಿ ತಾಂತ್ರಿಕ ಕಾರ್ಯ ಸಾಧ್ಯತೆಯಿದ್ದಲ್ಲಿ ಇತರೆ/ಮುಂಬರುವ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ವಿಸಕಂಗಳು ಅಧಿಕಾರವನ್ನು ಹೊಂದಿರುತ್ತವೆ. ವಿಸಕಂಗಳ ವ್ಯಾಪ್ತಿಯಲ್ಲಿ ರೈತರ ಪಂಪ್ ಸೆಟ್ ಗಳ ಅರ್ಜಿ ನೋಂದಣಿಯಾಗಿದ್ದು, ಅವು ಹಾಲಿ ಇರುವ ಪರಿವರ್ತಕದ ಸಮೀಪದಲ್ಲಿದ್ದು ಪರಿವರ್ತಕದಲ್ಲಿ ಈ ಪಂಪ್ ಸೆಟ್‌ನ/ಪಂಪ್ ಸೆಟ್‌ಗಳ ಹೊರೆಯನ್ನು ನಿರ್ವಹಿಸಲು ಸಾಧ್ಯವಿದ್ದಲ್ಲಿ, ಆ ಪರಿವರ್ತಕದಿಂದಲೇ ವಿದ್ಯುತ್ ಸಂಪರ್ಕ ನೀಡುವುದು.
ಇದನ್ನೂ ಓದಿ: ಈ 3 ರಾಶಿಯವರಿಗೆ ಜೀವನಕ್ಕೊಂದು ತಿರುವು ಸಿಗೋದು ಗ್ಯಾರಂಟಿ
* HT/LT network ವಿಸ್ತರಣೆ ಕಾಮಗಾರಿಗಳನ್ನು ರೈತರು ಸ್ವಯಂ ಕಾರ್ಯ ನಿರ್ವಹಣೆ ಮತ್ತು ನವೀಕೃತ ಶೀಘ್ರ ಸಂಪರ್ಕ ಯೋಜನೆಯಡಿ ಕೈಗೊಂಡಾಗ ಅಂದಾಜು ಪಟ್ಟಿಯ ಒಟ್ಟು ವೆಚ್ಚದ ಮೇಲೆ ವಿಧಿಸಲಾಗುವ ಮೇಲ್ವಿಚಾರಣಾ ಶುಲ್ಕವನ್ನು ಮನ್ನಾ ಮಾಡುವುದು.
* ತಾಂತ್ರಿಕ ಸಾಧ್ಯತೆಯಿರುವಲ್ಲಿ, ಹಾಲಿ ಇರುವ LT ಜಾಲದಿಂದ Service main ಮೂಲಕ ಅಥವಾ LT ಮಾರ್ಗ ವಿಸ್ತರಣೆಯೊಂದಿಗೆ ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯುವ ರೈತರು ಸಹ ರೂ.15,000/- ಮತ್ತು ಠೇವಣಿ ಹಣ ಪಾವತಿಸುವುದು. ಅಂತಹ ರೈತರು ನವೀಕೃತ ಶೀಘ್ರ ಸಂಪರ್ಕ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ.

ಇತ್ತೀಚಿನ ಜನಪ್ರಿಯ ಸುದ್ದಿಗಳು (pump sets 25:)
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?





