(Aadhaar authentication:) ಭಾರತದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಸಂಖ್ಯೆಯಲ್ಲಿ ಆಧಾರ್ ದೃಢೀಕರಣ ನಡೆದಿದೆ. 2024-25ರಲ್ಲಿ ಆಧಾರ್ ಅಥೆಂಟಿಕೇಶನ್ ಆದ ಸಂಖ್ಯೆ 2,707 ಕೋಟಿ ಗಡಿ ದಾಟಿದೆಯಂತೆ. ಕೊನೆಯ ತಿಂಗಳಾದ ಮಾರ್ಚ್ ತಿಂಗಳೊಂದರಲ್ಲೇ 247 ಕೋಟಿ ಆಧಾರ್ ಟ್ರಾನ್ಸಾಕ್ಷನ್ಸ್ ಆಗಿವೆ. ಆಧಾರ್ ಸಿಸ್ಟಂ ಬಂದಾಗಿನಿಂದ ಅಥೆಂಟಿಕೇಶನ್ ಪ್ರಮಾಣ 14,800 ಕೋಟಿಯಾಗಿದೆ. ಇದು ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದುಬಂದಿರುವ ಅಂಶವಾಗಿದೆ.
ಇದನ್ನೂ ಓದಿ: ಈ ದಿನ SSLC ಫಲಿತಾಂಶ ಪ್ರಕಟ
ಏನಿದು ಆಧಾರ್ ಅಥೆಂಟಿಕೇಶನ್?
ಆಧಾರ್ ದಾಖಲೆಗಳು ಅಗತ್ಯ ಇರುವ ವಿವಿಧ ಸೇವೆಗಳನ್ನು ಪಡೆಯಲು ಮತ್ತು ಆಧಾರ್ ದಾಖಲೆ ದೃಢೀಕರಿಸಲು ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಆ ಮೂಲಕ ಆಧಾರ್ ದೃಢೀಕರಣ ಮಾಡಲಾಗುತ್ತದೆ. ಕೆಲವೆಡೆ ಬೆರಳಚ್ಚು ಮೂಲಕವೂ ಆಧಾರ್ ದೃಢೀಕರಣ ಪಡೆಯಲಾಗುತ್ತದೆ.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
ಯುಐಡಿಎಐ ಸಂಸ್ಥೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತವಾಗಿ ಆಧಾರ್ ಫೇಸ್ ಅಥೆಂಟಿಕೇಶನ್ ಸಲ್ಯೂಶನ್ಸ್ ಅನ್ನು ಅಭಿವೃದ್ಧಿಪಡಿಸಿದೆ. ಈ ಫೇಸ್ ಅಥೆಂಟಿಕೇಶನ್ ಫೀಚರ್ ಸಾಕಷ್ಟು ಬಳಕೆಯಾಗುತ್ತಿದೆ. ಮಾರ್ಚ್ ತಿಂಗಳೊಂದರಲ್ಲೇ 15 ಕೋಟಿಗೂ ಹೆಚ್ಚು ಆಧಾರ್ ಫೇಸ್ ಅಥೆಂಟಿಕೇಶನ್ ನಡೆದಿದೆ. ಸರ್ಕಾರ ಹಾಗೂ ಖಾಸಗಿ ವಲಯಕ್ಕೆ ಸೇರಿದ ನೂರಕ್ಕೂ ಹೆಚ್ಚು ಸಂಸ್ಥೆಗಳು ಆಧಾರ್ ಫೇಸ್ ಅಥೆಂಟಿಕೇಶನ್ ಮೂಲಕ ವಿವಿಧ ಸೇವೆಗಳನ್ನು ಸುಗಮವಾಗಿ ವಿತರಿಸುತ್ತಿವೆ.
ಇದನ್ನೂ ಓದಿ: ಮನೆಯಲ್ಲಿ ಪಾಲಿಶ್ ಅಕ್ಕಿ ಬಳಸೋ ಮುನ್ನ ಹುಷಾರ್; ಹೊರಬಿತ್ತು ಅಘಾತಕಾರಿ ಅಂಶ!
ಫೇಸ್ ಅಥೆಂಟಿಕೇಶನ್ ಫೀಚರ್ ಅಭಿವೃದ್ಧಿಪಡಿಸಿದ ಯುಐಡಿಎಐ ಸಂಸ್ಥೆಗೆ ಪ್ರೈಮ್ ಮಿನಿಸ್ಟರ್ ಅವಾರ್ಡ್ ಕೊಡಲಾಗಿದೆ. ಇನ್ನೋವೇಶನ್ ಕೆಟಗರಿಯಲ್ಲಿ ಪ್ರಧಾನಿಗಳ ಸಾರ್ವಜನಿಕ ಆಡಳಿತದ ಎಕ್ಸಲೆನ್ಸ್ ಅವಾರ್ಡ್ ಅನ್ನು ಸರ್ಕಾರ ಕಳೆದ ವಾರ ನೀಡಿದೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು (Aadhaar authentication:)
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?





