(Ganeshotsava) ರಾಜ್ಯದಲ್ಲಿ ಪಂಚಮಿ ಹಬ್ಬ ಹಾಗೂ ವರಮಹಾಲಕ್ಷ್ಮಿ ಹಬ್ಬ ಮುಗಿಯುತ್ತಿದ್ದಂತೆಯೇ ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶಾದ್ಯಂತ ಭರ್ಜರಿ ವಿಜೃಂಭಣೆಯಿಂದ ಆಚರಿಸುವಂತಹ ಗೌರಿ ಗಣೇಶ ಹಬ್ಬದ ಆಚರಣೆಯು ಆರಂಭವಾಗಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿ. ಪರಮೇಶ್ವರ್ ಅವರು ಕಾನೂನು ನಿಯಮ ಉಲ್ಲಂಘಿಸಿದವರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತವಾಗಿ ಹೇಳಿದ್ದಾರೆ. ಗೃಹ ಸಚಿವರು ಗೌರಿ ಗಣೇಶ ಹಬ್ಬಕ್ಕೆ ಎಚ್ಚರಿಕೆ ಸಂದೇಶ ಕೊಟ್ಟಿದ್ದು ಇದರ ಮಾಹಿತಿಯನ್ನು ಕೆಳಗೆ ತಿಳಿಯಿರಿ..
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 18ನೇ ಕಂತಿನ ಹಣ ಈ ದಿನ ಜಮಾ!; ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿ!
ಗೃಹ ಸಚಿವ ಜಿ. ಪರಮೇಶ್ವರ್ ಅವರು ಕೊಟ್ಟ ಎಚ್ಚರಿಕೆ ಸಂದೇಶವೇನು?:
ರಾಜ್ಯದ ಜನತೆಗೆ ನಾವು ಮನವಿ ಮಾಡಿಕೊಳ್ಳುವುದು ಏನೆಂದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಅಡಿಯಲ್ಲಿ ಶಾಂತಿಯಿಂದ ನಾವು ಹಬ್ಬವನ್ನು ಸಂಭ್ರಮಿಸೋಣ ಮತ್ತು ಆಚರಿಸೋಣ, ಇದಕ್ಕೆ ಬೇಕಾದಂತಹ ಬೆಂಬಲವನ್ನು ನಾವು ನೀಡಲಿದ್ದೇವೆ ಎಂದರು. ಕಳೆದ ವರ್ಷವೂ ಕೂಡ ಗೌರಿ ಗಣೇಶ ಹಬ್ಬದ ಸೆಪ್ಟೆಂಬರ್ ತಿಂಗಳಿನಲ್ಲಿ ಆಚರಿಸಲಾಗಿತ್ತು, ಅದೇ ರೀತಿ ಈ ವರ್ಷವೂ ಕೂಡ ಹಿಂದೂ ಕ್ಯಾಲೆಂಡರ್ ನ ಪ್ರಕಾರ ಸೆಪ್ಟೆಂಬರ್ ತಿಂಗಳ ಏಳನೇ ತಾರೀಖಿನಿಂದ ಗಣೇಶನ ಹಬ್ಬ ಪ್ರಾರಂಭವಾಗುತ್ತದೆ. ನನಗೆ ರಾಜ್ಯದ ಜನರ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಶಾಂತಿಯಿಂದ ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ಈ ಹಬ್ಬವನ್ನು ಆಚರಿಸಲಿದ್ದಾರೆ ಎಂದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಮಹಿಳೆಯರಿಗೆ ಉಚಿತ ಗ್ಯಾಸ್ ಯೋಜನೆ; ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ
ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವರು :
ಗೌರಿ ಗಣೇಶ ಹಬ್ಬದ ಆಚರಣೆಯ ವಿಚಾರವಾಗಿ ಮಾತನಾಡಿದ ಗೃಹ ಸಚಿವರು ಇದರ ಜೊತೆಗೆ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಕೂಡ ಮಾತನಾಡಿದರು. ಇತ್ತೀಚೆಗೆ ಹಬ್ಬಿದ ವದಂತಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ, ಎಂಬ ವದಂತಿಯು ಸುಳ್ಳಾಗಿದ್ದು ಕೊಟ್ಟ ಭರವಸೆ ಪ್ರಕಾರ ನಾವು ಗ್ಯಾರಂಟಿ ಯೋಜನೆಗಳನ್ನು ಬಡವರ ಸಂಪೂರ್ಣ ಸಮೃದ್ಧಿಗಾಗಿ ನಾವು ಮುಂದುವರಿಸಲಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲ ಉದ್ದೇಶ ಬಡತನ ನಿರ್ಮೂಲ ಹಾಗೂ ಆರ್ಥಿಕವಾಗಿ ಸದ್ಬಲರನ್ನಾಗಿ ಮಾಡಲು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದರು. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣವು ಮಹಿಳೆಯರ ಖಾತೆಗೆ ಜಮವಾಗಲು ಆರಂಭವಾಗಿದ್ದು, ಇನ್ನೂ ಹಲವು ಜಿಲ್ಲೆಗಳ ಮಹಿಳೆಯರ ಖಾತೆಗೆ ಹಣ ಜಮಾವಾಗುವುದು ಬಾಕಿ ಇದೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
- ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
- 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
- PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?






