Police Stickers: ಪೊಲೀಸ್ ಸ್ಟಿಕ್ಕರ್‌ಗೆ ಕಡಿವಾಣ!

(Police Stickers:) ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ. ಒಂದು ವೇಳೆ ಬರೆಸಿದ್ದರೆ ಅದು ಕಾನೂನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.

ಶ್ರವಣ ಬೆಳಗೊಳದ ಶಾಸಕ ಬಾಲಕೃಷ್ಣ ಸಿಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 561ಕ್ಕೆ ಲಿಖಿತ ಮೂಲಕ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ಉತ್ತರ ನೀಡಿದ್ದಾರೆ.

ರಾಜ್ಯದ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದರು.


ನ್ನೂ ಓದಿ: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!; ಲಕ್ಷ್ಮಿ ಮುನಿಸಿಗೆ ನೀವು ಬಡವರಾಗ್ತೀರಿ!


ಹಾಗಿದ್ದಲ್ಲಿ ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಕೆಲ ಪೊಲೀಸ್ ನೌಕರರು ಮತ್ತು ಅಧಿಕಾರಿಗಳು ಕಾನೂನಿನ ಉಲ್ಲಂಘನೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ, ಇವರ ವಿರುದ್ಧ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳೇನು? ಎಂಬ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ತಮ್ಮ ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಯಿಸಿಕೊಂಡಿರುವುದು ಗೃಹ ಇಲಾಖೆಯ ಗಮನಕ್ಕೆ ಬಂದಿದೆ. ಸ್ವಂತ ವಾಹನದ ಮೇಲೆ ಪೊಲೀಸ್ ಅಧಿಕಾರಿಗಳು ಹಾಗೂ ನೌಕರರು ಪೊಲೀಸ್ ಎಂದು ಬರೆಸಿದ್ದರೆ ಅವರ ವಿರುದ್ಧ 2022 ರ ಸರ್ಕಾರದ ಸುತ್ತೋಲೆ ಪ್ರಕಾರ ಕಾನೂನು ಕ್ರಮ ಆಗುತ್ತದೆ ಎಂದು ತಿಳಿಸಿದ್ದಾರೆ.

(Police Stickers:) ಪೊಲೀಸ್ ಸ್ಟಿಕ್ಕರ್‌ಗೆ ಬಳಸದಂತೆ ಎಚ್ಚರಿಕೆ:
ಖಾಸಗಿ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಓಡಾಡುವ ವ್ಯವಸ್ಥೆ ಇನ್ನುಂದೆ ಬಂದ್ ಆಗಲಿದೆ. ಏಕೆಂದರೆ ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಸ್ಟಿಕ್ಕರ್ ಅಂಟಿಸಿಕೊಂಡು ಸಂಚರಿಸಲು ಕಾನೂನಿನಲ್ಲಿ ಅವಕಾಶ ಇಲ್ಲವೆಂದು ರಾಜ್ಯ ಪೊಲೀಸ್ ಇಲಾಖೆ ಹೇಳಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆಯ ಅನ್ವಯ ರಾಜ್ಯದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಾಹನಗಳಿಗೆ ಮಾತ್ರವೇ ಕರ್ನಾಟಕ ಸರ್ಕಾರದ ಹೆಸರು, ಲಾಂಛನ ಹಾಗೂ ಚಿಹ್ನೆ ಬಳಸಲು ಅವಕಾಶವಿದೆ. ಹೀಗಾಗಿ ನಿಯಮದ ಪ್ರಕಾರ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಹೆಸರು ಬಳಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.

(Police Stickers:) ಪೊಲೀಸರಿಂದ ಆಕ್ರೋಶ:
ಪೊಲೀಸ್ ಫಲಕ, ಹೆಸರು ಹಾಕಿಕೊಂಡು ದರ್ಪ-ದಬ್ಬಾಳಿಕೆ ಮಾಡಿದರೆ ಕ್ರಮ ಕೈಗೊಳ್ಳಲಿ. ವಾಹನದ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಎಂದು ಬಳಸಿದರೆ ಅದರಲ್ಲಿ ತಪ್ಪೇನಿದೆ? ದೊಂಬಿ-ಗಲಭೆ ಅಥವಾ ಇನ್ಯಾವುದೋ ತುರ್ತು ಸಂದರ್ಭಗಳಲ್ಲಿ ಸ್ವಂತ ವಾಹನ ಬಳಕೆ ಮಾಡುತ್ತೇವೆ. ಅಥವಾ ಬಸ್ ನಿಲ್ದಾಣವೋ, ನಿರ್ಜನ ಪ್ರದೇಶದಲ್ಲೋ ವಾಹನ ನಿಲ್ಲಿಸಿ ಕರ್ತವ್ಯಕ್ಕೆ ಹೋಗಿರುತ್ತೇವೆ. ಪೊಲೀಸ್ ಎಂದು ಹೆಸರಿದ್ದರೆ ವಾಹನಕ್ಕೆ ಸುರಕ್ಷತೆ ಇರುತ್ತೆ. ಇಲ್ಲವಾದರೆ ಕಳುವಾಗಬಹುದು, ವಾಹನಕ್ಕೆ ಹಾನಿಯಾಗದಿರಲಿ ಕಳುವಾಗದಿರಲಿ ಎನ್ನುವ ಕಾರಣಕ್ಕೆ ಪೊಲೀಸ್ ಹೆಸರು ಬಳಕೆ ಮಾಡಲಾಗುತ್ತದೆ ಎಂದು ಪೊಲೀಸರ ವಾದವಾಗಿದೆ.
ಬಳಸಬಾರದೇಕೆ?
• ಮೋಟಾರು ಕಾಯ್ದೆಯನ್ವಯ ಸ್ವಂತ ವಾಹನದ ಮೇಲೆ ಇಲಾಖೆ ಹೆಸರು ಬಳಸುವಂತಿಲ್ಲ
• ಕೆಲವೊಂದು ಸಂದರ್ಭದಲ್ಲಿ ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ದುರ್ಬಳಕೆ ಸಾಧ್ಯತೆ
• ಪೊಲೀಸರ ವಾಹನದ ಸೋಗಿನಲ್ಲಿ ಅಪರಾಧ ಪ್ರಕರಣಗಳಿಗೆ ಬಳಕೆಯಾಗುವ ಸಾಧ್ಯತೆ
• ಖಾಸಗಿ ವಾಹನಗಳಿಗೆ ಸರ್ಕಾರಿ ಲಾಂಛನ ಬಳಸಬಾರದೆಂದು ಹೈಕೋರ್ಟ್‌ನಿಂದ ಆದೇಶ
Police Stickers: ಪೊಲೀಸ್ ಸ್ಟಿಕ್ಕರ್‌ಗೆ ಕಡಿವಾಣ!
Police Stickers: ಪೊಲೀಸ್ ಸ್ಟಿಕ್ಕರ್‌ಗೆ ಕಡಿವಾಣ!