(PAN-Aadhaar Link:) ಆಧಾರ್ ಸಂಖ್ಯೆಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಬೇಕು ಎಂಬುದನ್ನು ಆದಾಯ ತೆರಿಗೆ ಇಲಾಖೆ (Income Tax Department) ಹಲವು ವರ್ಷಗಳ ಹಿಂದೆಯೇ ಕಡ್ಡಾಯಗೊಳಿಸಿತ್ತು. ಮಧ್ಯಂತರದಲ್ಲಿ ಹಲವು ಬಾರಿ ಗಡುವು ವಿಸ್ತರಣೆ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಡಿಸೆಂಬರ್ 31ರ ಕೊನೆಯ ಗಡುವೂ ಮುಕ್ತಾಯವಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆʼ
ಈ ಡೆಡ್‌ಲೈನ್ ಮತ್ತೊಮ್ಮೆ ವಿಸ್ತರಿಸಲಾಗುತ್ತದೆ ಎಂಬ ಯಾವುದೇ ಅಧಿಕೃತ ನೋಟಿಫಿಕೇಶನ್ ಸದ್ಯಕ್ಕೆ ಬಂದಿಲ್ಲ. ಹೀಗಿರುವಾಗ, ಆಧಾರ್‌ಗೆ ಲಿಂಕ್ ಆಗದೇ ಇರುವ ಪ್ಯಾನ್ ಹೊಂದಿರುವವರು ಏನು ಮಾಡಬೇಕು? ಅವರಿಗೆ ಎದುರಾಗುವ ಸಮಸ್ಯೆಗಳೇನು? ಎಂಬ ಪ್ರಶ್ನೆಗಳು ಮೂಡಿವೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಆಧಾರ್ ಜೊತೆ ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತದೆ?
ಆದಾಯ ತೆರಿಗೆ ಇಲಾಖೆ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಹಣಕಾಸು ವ್ಯವಹಾರಗಳನ್ನು ಸರಿಯಾಗಿ ಟ್ರ್ಯಾಕ್ ಮಾಡಲು ಪ್ಯಾನ್ ಕಾರ್ಡ್ ಅನ್ನು ಬಳಸುತ್ತದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಬಳಸುವುದನ್ನು ತಡೆಯಲು ಆಧಾರ್–ಪ್ಯಾನ್ ಲಿಂಕ್ ಕಡ್ಡಾಯ ಮಾಡಲಾಗಿದೆ.
ಆಧಾರ್‌ಗೆ ಲಿಂಕ್ ಆಗದೇ ಇರುವ ಪ್ಯಾನ್ ಅನ್ನು ಈಗ ‘ಇನಾಪರೇಟಿವ್’ (ನಿಷ್ಕ್ರಿಯ) ಎಂದು ಪರಿಗಣಿಸಲಾಗುತ್ತದೆ. ಅಂದರೆ, ಆ ಪ್ಯಾನ್ ಇದ್ದರೂ ಇಲ್ಲದಂತೆಯೇ ಆಗುತ್ತದೆ.
ಇದನ್ನೂ ಓದಿ: ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತಾ?; FSSAI ವರದಿ ಇಲ್ಲಿದೆ ನೋಡಿ
ಇನಾಪರೇಟಿವ್ ಪ್ಯಾನ್ ಇದ್ದರೆ ಎದುರಾಗುವ ಸಮಸ್ಯೆಗಳು:
* ಹೊಸ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ
* ಡೀಮ್ಯಾಟ್ ಖಾತೆ ತೆರೆಯಲು ಆಗುವುದಿಲ್ಲ
* ಹೆಚ್ಚಿನ ಮೊತ್ತದ ಹಣಕಾಸು ವ್ಯವಹಾರ ಮಾಡಲು ಅವಕಾಶ ಇರುವುದಿಲ್ಲ
* ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಆಗುವುದಿಲ್ಲ
* ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಸಾಧ್ಯವಿಲ್ಲ
* ಆದಾಯ ತೆರಿಗೆ ರೀಫಂಡ್ ಸಿಗುವುದಿಲ್ಲ
* ಸಾಮಾನ್ಯಕ್ಕಿಂತ ಎರಡು ಪಟ್ಟು ಹೆಚ್ಚು TDS (ಟಿಡಿಎಸ್) ಕಡಿತವಾಗುತ್ತದೆ
ಈಗಲೂ ಪ್ಯಾನ್–ಆಧಾರ್ ಲಿಂಕ್ ಮಾಡಬಹುದೇ?:
ಹೌದು. ಗಡುವು ಮುಗಿದಿದ್ದರೂ ಕೂಡ ಲೇಟ್ ಲಿಂಕಿಂಗ್ ಫೀ ಪಾವತಿಸಿ ಪ್ಯಾನ್ ಮತ್ತು ಆಧಾರ್ ಅನ್ನು ಈಗಲೂ ಲಿಂಕ್ ಮಾಡಬಹುದು.
ಲಿಂಕ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ನಿಮ್ಮ ಪ್ಯಾನ್ ಕಾರ್ಡ್ ಮತ್ತೆ ಸಕ್ರಿಯವಾಗುತ್ತದೆ. ಆದರೆ ಲಿಂಕ್ ಆಗುವವರೆಗೂ ಅದು ಇನಾಪರೇಟಿವ್ ಸ್ಥಿತಿಯಲ್ಲೇ ಇರುತ್ತದೆ ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿ: ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್
ಪ್ಯಾನ್–ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವ ವಿಧಾನ:
* ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ
* ಮುಖಪುಟದ ‘Quick Links’ ವಿಭಾಗದಲ್ಲಿ ‘Link Aadhaar Status’ ಆಯ್ಕೆಮಾಡಿ
* ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ
* ‘View Link Aadhaar Status’ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಪ್ಯಾನ್ ಆಧಾರ್‌ಗೆ ಲಿಂಕ್ ಆಗಿದೆಯೇ ಇಲ್ಲವೇ ಎಂಬ ಮಾಹಿತಿ ತಕ್ಷಣ ಲಭ್ಯವಾಗುತ್ತದೆ
* ಎಸ್ಸೆಮ್ಮೆಸ್ ಮೂಲಕವೂ ಸ್ಟೇಟಸ್ ತಿಳಿಯಬಹುದು
* ಮೊಬೈಲ್ ಮೂಲಕವೂ ಸುಲಭವಾಗಿ ಪ್ಯಾನ್–ಆಧಾರ್ ಲಿಂಕ್ ಸ್ಟೇಟಸ್ ತಿಳಿದುಕೊಳ್ಳಬಹುದು.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (PAN-Aadhaar Link:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
- ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
- ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆʼ





