onions:‌ ಕಪ್ಪು ಕಲೆ ಇರುವ ಈರುಳ್ಳಿ ತಿನ್ನಬೇಕಾ ಅಥವಾ ಬೇಡ್ವಾ.?

(onions) ಬಹುತೇಕ ಭಾರಿ ನೀವು ಈರುಳ್ಳಿಯನ್ನು ಖರೀದಿಸಿದಾಗ ಈರುಳ್ಳಿಯ ಮೇಲೆ ಕಪ್ಪು ಬಣ್ಣದ ಬೂದಿಯ ತರ ಬಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಅಥವಾ ಅಪಾಯವೊ ಎಂಬ ಮಾಹಿತಿ ಬಹುತೇಕ ಜನರಿಗೆ ತಿಳಿದಿಲ್ಲ. ಹೀಗಾಗಿ ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


ಮಹಿಳೆಯರು ಅಡುಗೆ ಮಾಡುವಾಗ ಪ್ರತಿಯೊಂದು ಅಡುಗೆಗೂ ಈರುಳ್ಳಿ ಇಲ್ಲದೆ ಕೆಲಸವನ್ನು ಮುಂದುವರಿಸುವುದಿಲ್ಲ. ಈರುಳ್ಳಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹು ಪ್ರಯೋಜನಗಳಿದ್ದು, ಇದರಿಂದ ನಮ್ಮ ದೇಹಕ್ಕೆ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣ ಹಾಗೂ ವಿಟಮಿನ್ ಬಿ ಸೇರಿದಂತೆ ವಿವಿಧ ಉಪಯುಕ್ತ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತವೆ.


ಇದನ್ನೂ ಓದಿ; ರೇಷನ್‌ ಕಾರ್ಡ್‌ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ?; ಏನಂತಾರೆ ಅಧಿಕಾರಿಗಳು?


ಆದಾಗ್ಯೂ, ಕೆಲವೊಮ್ಮೆ ನೀವು ಈರುಳ್ಳಿಯನ್ನ ಖರೀದಿಸಿದಾಗ ಅಥವಾ ಸಿಪ್ಪೆ ತೆಗೆಯುವಾಗ ಈರುಳ್ಳಿ ಮೇಲೆ ಕಪ್ಪು ಕಲೆಗಳಿರುವುದನ್ನ ಕಾಣಬಹುದು. ಒಂದೇ ನೋಟದಲ್ಲಿ ಇದು ಸಾಮಾನ್ಯವಾಗಿ ಒಂದು ರೀತಿಯ ಶಿಲೀಂಧ್ರದಂತೆ ಕಾಣುತ್ತದೆ. ವಾಸ್ತವವಾಗಿ, ಈ ಕಪ್ಪು ಕಲೆಗಳು ಆಸ್ಪರ್ಗಿಲಸ್ ನೈಗರ್ ಎಂಬ ನಿರ್ದಿಷ್ಟ ರೀತಿಯ ಶಿಲೀಂಧ್ರದಿಂದ ಉಂಟಾಗುತ್ತವೆ. ಈ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ ಮತ್ತು ಸಾಮಾನ್ಯವಾಗಿ ಈರುಳ್ಳಿಯಲ್ಲಿ ಕಂಡು ಬರುತ್ತದೆ. ಇದು ಕಪ್ಪು ಶಿಲೀಂಧ್ರದಂತಹ ಗಂಭೀರ ಕಾಯಿಲೆಯನ್ನ ಉಂಟು ಮಾಡದಿದ್ದರೂ, ಇದು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ.


ಇದನ್ನೂ ಓದಿ; ರಾಜ್ಯದ ಎಲ್ಲಾ ಹೋಟೆಲ್‌ ಗಳಿಗೆ ಹೊಸ ನಿಯಮ ಜಾರಿ; ಏನದು? ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ


ಇನ್ನು ಈರುಳ್ಳಿಯನ್ನು ಫ್ರಿಜ್ ನಲ್ಲಿ ಇಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಏಕೆಂದರೆ ಇದು ಶಿಲೀಂಧ್ರವು ಅತಿಯಾಗಿ ಬೆಳೆಯಲು ಕಾರಣವಾಗುತ್ತದೆ. ಈರುಳ್ಳಿಯ ಮೇಲೆ ಕಪ್ಪು ಕಲೆಗಳು ಕಂಡುಬಂದರೆ, ಅದನ್ನು ತಿನ್ನುವುದನ್ನು ತಪ್ಪಿಸಿ, ವಿಶೇಷವಾಗಿ ಈ ರೀತಿಯ ಶಿಲೀಂಧ್ರವು ಅದರಲ್ಲಿ ಕಾಣಿಸಿಕೊಂಡರೆ. ಯಾಕಂದ್ರೆ, ಇದು ಆರೋಗ್ಯಕ್ಕೆ ಅಪಾಯಕಾರಿ.

onions:‌ ಕಪ್ಪು ಕಲೆ ಇರುವ ಈರುಳ್ಳಿ ತಿನ್ನಬೇಕಾ ಅಥವಾ ಬೇಡ್ವಾ.?
onions:‌ ಕಪ್ಪು ಕಲೆ ಇರುವ ಈರುಳ್ಳಿ ತಿನ್ನಬೇಕಾ ಅಥವಾ ಬೇಡ್ವಾ.?

ಇದನ್ನೂ ಓದಿ; ಪಾನ್-ಆಧಾರ್ ಕಾರ್ಡ್‌ ಹೊಂದಿರುವವರ ಗಮನಕ್ಕೆ;  ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಇತ್ತೀಚಿನ ಜನಪ್ರಿಯ ಸುದ್ದಿಗಳು