Nabard: ರೈತರಿಗೆ ಶಾಕ್ | ಕೃಷಿ ಸಾಲ ನೀಡಲು ಹಣದ ಕೊರತೆ

(Nabard) ರಿಯಾಯಿತಿ ಬಡ್ಡಿ ದರದಲ್ಲಿ ಕೃಷಿ ಸಾಲ ಮಿತಿಯನ್ನು ನಬಾರ್ಡ್ ಕಡಿಮೆ ಮಾಡಿದ್ದು, ಇದರಿಂದ ತೀವ್ರ ಹಣಕಾಸಿನ ತೊಂದರೆ ಎದುರಾಗಿದೆ. ಕೃಷಿಸಾಲ ವಿತರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


ಹೌದು, ರೈತರಿಗೆ ಸಾಲ ನೀಡುವ ಸಹಕಾರಿ ಸಂಘಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ನಬಾರ್ಡ್‌ ಕಡಿತಗೊಳಿಸಿದ್ದು, ರಾಜ್ಯದಲ್ಲಿ ಕೃಷಿ ಸಾಲ ವಿತರಣೆ ಹಣದ ಕೊರತೆ ಉಂಟಾಗಿದೆ.


ಇದನ್ನೂ ಓದಿ; ರೇಷನ್‌ ಕಾರ್ಡ್‌ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ?; ಏನಂತಾರೆ ಅಧಿಕಾರಿಗಳು?


ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತವನ್ನು ನಬಾರ್ಡ್ ಇಳಿಕೆ ಮಾಡಿದ್ದರಿಂದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಕಷ್ಟ ಎದುರಾಗಿದೆ. ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತ ಕಡಿತಗೊಳಿಸಿದ್ದರಿಂದ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ.


ಇದನ್ನೂ ಓದಿ; ರಾಜ್ಯದ ಎಲ್ಲಾ ಹೋಟೆಲ್‌ ಗಳಿಗೆ ಹೊಸ ನಿಯಮ ಜಾರಿ; ಏನದು? ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ


(Nabard) ರಾಜ್ಯ ಸರ್ಕಾರದಿಂದ ಎಲ್ಲಾ 31 ಜಿಲ್ಲೆ ಒಳಗೊಂಡಂತೆ 21 ಡಿಸಿಸಿ ಬ್ಯಾಂಕುಗಳ ಮೂಲಕ 2024 -25 ನೇ ಸಾಲಿಗೆ 35.10 ಲಕ್ಷ ರೈತರಿಗೆ 25000 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ರೈತರಿಗೆ ಕೃಷಿ ಸಾಲ ಸಮರ್ಪಕ ವಿತರಣೆ ಉದ್ದೇಶದಿಂದ ಒಟ್ಟು ಸಾಲದಲ್ಲಿ ಶೇಕಡ 60 ರಷ್ಟು ಸುಮಾರು 13,742 ಕೋಟಿ ಅಲ್ಪಾವಧಿ ಕೃಷಿ ಸಾಲ ಮಂಜೂರು ಮಾಡುವಂತೆ ನಬಾರ್ಡ್ ಗೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, 4580 ಕೋಟಿ ರೂಪಾಯಿಯನ್ನು ಶೇಕಡ 8ರ ಹೆಚ್ಚುವರಿ ಬಡ್ಡಿ ದರದಲ್ಲಿ ನಬಾರ್ಡ್ ಮಂಜೂರು ಮಾಡಿದೆ.


ಇದನ್ನೂ ಓದಿ; ಪಾನ್-ಆಧಾರ್ ಕಾರ್ಡ್‌ ಹೊಂದಿರುವವರ ಗಮನಕ್ಕೆ;  ಈ ಸುದ್ದಿ ಮಿಸ್‌ ಮಾಡ್ದೆ ಓದಿ


ರಿಯಾಯಿತಿ ಬಡ್ಡಿ ದರದಲ್ಲಿ ಕೃಷಿ ಸಾಲ ಮಿತಿಯನ್ನು ನಬಾರ್ಡ್ ಕಡಿಮೆ ಮಾಡಿದೆ. ಇದರಿಂದ ತೀವ್ರ ಹಣಕಾಸಿನ ತೊಂದರೆ ಎದುರಾಗಿದ್ದು, ಕೃಷಿ ಸಾಲ ವಿತರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

Nabard: ರೈತರಿಗೆ ಶಾಕ್ | ಕೃಷಿ ಸಾಲ ನೀಡಲು ಹಣದ ಕೊರತೆ
Nabard: ರೈತರಿಗೆ ಶಾಕ್ | ಕೃಷಿ ಸಾಲ ನೀಡಲು ಹಣದ ಕೊರತೆ

ಇದನ್ನೂ ಓದಿ; ಬ್ಯಾಂಕ್ ಆಫ್ ಬರೋಡದಲ್ಲಿ ಜಾಬ್‌ ಆಫರ್‌; 10,000-15,000 ಸಂಬಳ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ ನೋಡಿ


ಇತ್ತೀಚಿನ ಜನಪ್ರಿಯ ಸುದ್ದಿಗಳು