Ms-Mrs IRM:Mrs ಇಂಡಿಯಾ ರೋಲ್‌ ಮಾಡೆಲ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ದಿವ್ಯಾ ಶೆಟ್ಟಿ

(Ms-Mrs IRM) Mrs ಇಂಡಿಯಾ ರೋಲ್ ಮಾಡೆಲ್ ಪ್ರತಿಷ್ಠಿತ ಪ್ರಶಸ್ತಿಯನ್ನು ದಿವ್ಯಾ ಶೆಟ್ಟಿ ಅವರು ಮುಡಿಗೇರಿಸಿಕೊಂಡಿದ್ದಾರೆ.


ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ


Ms and Mrs ಇಂಡಿಯಾ ರೋಲ್ ಮಾಡೆಲ್ ಗ್ಯ್ರಾಂಡ್‌ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಡಿಸೆಂಬರ್ 1 ರಂದು ಅದ್ದೂರಿಯಾಗಿ ಜರುಗಿದ್ದು, ಇದರಲ್ಲಿ ದಿವ್ಯಾ ಶೆಟ್ಟಿ Mrs ಇಂಡಿಯಾ ರೋಲ್ ಮಾಡೆಲ್ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನಂದಿನಿ ನಾಗರಾಜ್ ಅವರಿಂದ ರಿಬರ್ತ್ ಈವೆಂಟ್ಸ್ ಇಂಡಿಯಾ ಆಯೋಜಿಸಿದ Ms and Mrs ಇಂಡಿಯಾ ರೋಲ್ ಮಾಡೆಲ್ ಎರಡೂ ಸ್ಪರ್ಧೆಯೂ ಶ್ರೇಷ್ಠತೆಯನ್ನು ಆಚರಿಸುವ ಪ್ರಖ್ಯಾತ ರಾಷ್ಟ್ರವ್ಯಾಪಿ ವೇದಿಕೆಯಾಗಿದೆ


ಇದನ್ನೂ ಓದಿ; ಕೃಷಿ ಯಂತ್ರಗಳ ಖರೀದಿಗೆ ಭಾರೀ ಸಬ್ಸಿಡಿ; ಹೀಗೆ ಅರ್ಜಿ ಸಲ್ಲಿಸಿ


ಸುಮಾರು 30ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಮಿಸ್‌ ಹಾಗೂ ಮಿಸೆಸ್‌ ಕೆಟಗರಿಯನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಟ್ರೆಡಿಷನಲ್‌ ಹಾಗೂ ವೆಸ್ಟರ್ನ್ ರೌಂಡ್‌ಗಳಲ್ಲಿ ಭಾಗವಹಿಸಿದ್ದ ಯುವತಿಯರು ಹಾಗೂ ಮಹಿಳೆಯರು ಅತ್ಯುತ್ಸಾಹದಿಂದ ಎಲ್ಲಾ ರೌಂಡ್‌ಗಳಲ್ಲೂ ಪಾಲ್ಗೊಂಡರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಭಿನ್ನ-ವಿಭಿನ್ನವಾಗಿ ಸಿಂಗರಿಸಿಕೊಂಡಿದ್ದರು. ಜ್ಯೂರಿ ಪ್ಯಾನೆಲ್‌ನ ಪ್ರತಿ ಪ್ರಶ್ನೆಗೂ ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡಿದರು.

2025 ರ ಸ್ಪರ್ಧೆಯ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅಗ್ರ ಮೂರು ಅಂತಿಮ ಸ್ಪರ್ಧಿಗಳ ಘೋಷಣೆಯಲ್ಲಿ ದಿವ್ಯಾ ಶೆಟ್ಟಿ ಕೂಡ ಒಬ್ಬರು.


ಇದನ್ನೂ ಓದಿ; ರಾಜ್ಯದ SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಈ ವರ್ಷದ ಪ್ರಶ್ನೆಪತ್ರಿಕೆ ಕುರಿತು ಇಲ್ಲಿದೆ ನೋಡಿ ಡಿಟೈಲ್ಸ್


(Ms-Mrs IRM) ದಿವ್ಯಾ ಶೆಟ್ಟಿ ಅವರ ಸ್ಪೂರ್ತಿದಾಯಕ ಪ್ರಯಾಣ:
ದಿವ್ಯಾ ಶೆಟ್ಟಿಯವರು ಕರ್ನಾಟಕದ ಪ್ರಶಾಂತ ಕರಾವಳಿ ಪ್ರದೇಶದಿಂದ ಬಂದವರು ಮತ್ತು ಸೊಂಪಾದ ಪಶ್ಚಿಮ ಘಟ್ಟದ ಚಿಕ್ಕಮಗಳೂರಿನಲ್ಲಿ ಬೆಳೆದ ಅವರು ಇಂಡಿಯನ್ ಅಕಾಡೆಮಿ ಇನ್‌ಸ್ಟಿಟ್ಯೂಟ್‌ಗಳು ಮತ್ತು XLRI ಜಮ್ಶೆಡ್‌ಪುರದ ಹಳೆಯ ವಿದ್ಯಾರ್ಥಿಯಾಗಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಪ್ರಮುಖ ಎಂಎನ್ಸಿ ಕಂಪನಿಯಾದ ಬ್ಲೂ ಯೋಂಡರ್‌ ನಲ್ಲಿ 16 ವರ್ಷಗಳ ಯಶಸ್ವಿ ವೃತ್ತಿಜೀವನದೊಂದಿಗೆ, ದಿವ್ಯಾ ಅವರು ತಮ್ಮ ವೃತ್ತಿಪರ ಸಾಧನೆ ಕಂಡುಕೊಂಡಿದ್ದಾರೆ.


ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಬೆಳೆ ಹಾನಿ ಪರಿಹಾರ ಜಮಾ! ಜಿಲ್ಲಾಧಿಕಾರಿಗಳಿಗೆ ಸೂಚನೆ


ಕುಟುಂಬದ ಬೆಂಬಲವೇ ಯಶಸ್ಸಿಗೆ ಕಾರಣ:
ದಿವ್ಯಾ ಅವರು ಸುಕೇಶ್ ಆರ್ ಆಳ್ವಾ ಅವರನ್ನು ವಿವಾಹವಾಗಿದ್ದು, ಇಬ್ಬರು ಪುಟ್ಟ ಗಂಡುಮಕ್ಕಳ ತಾಯಿಯಾಗಿದ್ದಾರೆ. ತನ್ನ ಸಹೋದರಿ ಮತ್ತು ಕುಟುಂಬದ ಅಚಲ ಬೆಂಬಲವೇ ತನ್ನ ಯಶಸ್ಸಿಗೆ ಕಾರಣ. ಈ ಮೈಲಿಗಲ್ಲನ್ನು ತಲುಪುವಲ್ಲಿ ಅವರ ಪ್ರೋತ್ಸಾಹ ಸಹಕಾರಿಯಾಗಿದೆ ಎಂದು ದಿವ್ಯಾ ಶೆಟ್ಟಿ ಹೇಳುತ್ತಾರೆ.

Ms-Mrs IRM:Mrs ಇಂಡಿಯಾ ರೋಲ್‌ ಮಾಡೆಲ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ದಿವ್ಯಾ ಶೆಟ್ಟಿ
Ms-Mrs IRM:Mrs ಇಂಡಿಯಾ ರೋಲ್‌ ಮಾಡೆಲ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ದಿವ್ಯಾ ಶೆಟ್ಟಿ

ಇತ್ತೀಚಿನ ಜನಪ್ರಿಯ ಸುದ್ದಿಗಳು