Mobile Theft: ಸ್ಮಾರ್ಟ್ ಫೋನ್ ಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇಷ್ಟ ಅನ್ನುವುದಕ್ಕಿಂತಲೂ ಎಲ್ಲರ ಅಗತ್ಯ ಸಾಧನವಾಗಿದೆ ಎನ್ನಬಹುದು. ಎಷ್ಟೋ ಜನರು ಸ್ಮಾರ್ಟ್ ಫೋನ್ ಗಳನ್ನು ಕಳೆದುಬಿಡುತ್ತಾರೆ. ಇನ್ನೂ ಕೆಲವರ ಸ್ಮಾರ್ಟ್ ಫೋನ್ ಗಳು ಕಳ್ಳತನವಾಗುತ್ತದೆ. ಈ ಸಂದರ್ಭದಲ್ಲಿ ತಕ್ಷಣ ಏನು ಮಾಡುವುದೆಂದು ಗೊತ್ತೇ ಆಗಲ್ಲ. ಆದರೆ ಇದೀಗ ಈ ಕಳ್ಳತನವಾದ, ಕಳೆದು ಹೋದ ಮೊಬೈಲ್ ಗಳನ್ನು ಪತ್ತೆಹಚ್ಚಲು ಹೊಸ ಆನ್ ಲೈನ್ ಪೋರ್ಟಲ್ ಅನ್ನು ಪೊಲೀಸ್ ಇಲಾಖೆ ಪರಿಚಯಿಸಿದೆ. ಕಳೆದು ಹೋದ ಫೋನ್ ಮತ್ತೆ ಸಿಗುತ್ತೆ ಎಂಬುದು ಭರವಸೆ ಇರುವುದಿಲ್ಲ. ಆದರೆ ಈ ಟ್ರಿಕ್ ಮೂಲಕ ಕಳೆದ ಹೋದ ಮೊಬೈಲ್ ಅನ್ನು ಮತ್ತೆ ಮರು ಪಡೆಯಬಹುದು.
ಇದನ್ನೂ ಓದಿ; ಮೂಡಿಗೆರೆ: ಕಾಡಾನೆ ದಾಳಿಯಿಂದ ಬೆಳೆಗಳು ನಾಶ
ಒಂದು ವೇಳೆ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಇ – ಪೋರ್ಟಲ್‌ನಲ್ಲಿ ಮನೆಯಲ್ಲಿಯೇ ಕುಳಿತು ಸುಲಭವಾಗಿ ದೂರು ದಾಖಲಿಸಬಹುದಾಗಿದೆ. ದೂರು ನೀಡಿದ ಕೆಲವೇ ದಿನಗಳಲ್ಲಿ ಫೋನ್ ಪತ್ತೆ ಮಾಡಲಾಗುತ್ತದೆ. ಆದರೆ ಇದಕ್ಕೆ ಕೆಲವು ಕ್ರಮಗಳಿವೆ. ಅದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.
ಇದನ್ನೂ ಓದಿ; ಚಿಕ್ಕಮಗಳೂರು: ಗ್ಯಾಸ್ ಗೀಸರ್ ಸೋರಿಕೆ; ಯುವಕ ಸಾವು
ಕಳೆದು ಹೋದ ಮೊಬೈಲ್ ಬಗ್ಗೆ ದೂರನ್ನು KSP Application ನಲ್ಲಿ ಈ ಕೆಳಕಂಡ ರೀತಿಯಲ್ಲಿ ಹಾಕಬಹುದಾಗಿದೆ:
* ಮೊದಲಿಗೆ ಗೂಗಲ್ ಪ್ಲೇಸ್ಟೋರ್‌ನಿಂದ KSP Application ನ್ನು ಡೌನ್ ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಿ.
* ಮೊಬೈಲ್ ದೂರನ್ನು E-Lost ನಲ್ಲಿ ವರದಿ ಮಾಡಲು KSP Application ನ್ನು ಒಪನ್ ಮಾಡಿ ಅಲ್ಲಿರುವ E-Lost ವರದಿ option ನ್ನು ಆಯ್ಕೆ ಮಾಡಿ.
* ನಂತರ “E-lost ವರದಿಯನ್ನು ನೋಂದಾಯಿಸಿ option ನ್ನು ಆಯ್ಕೆ ಮಾಡಿ.
* ನಂತರ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ರಾಜ್ಯ ಮೊಬೈಲ್ ನಂಬರ್ ಹಾಗೂ ಸಾದ್ಯವಾದರೆ ಇಮೆಲ್ ಐಡಿ ನೋಂದಾಯಿಸಿ, ನಂತರ Next option ನ್ನು ಆಯ್ಕೆ ಮಾಡಿ.
* ನಂತರ ಮೊಬೈಲ್‌ನ ಬಿಲ್ ಇದ್ದರೆ ಅದನ್ನು ಆಪ್‌ಲೋಡ್ ಮಾಡಿ ನಂತರ Select article option ನ್ನು ಆಯ್ಕೆ ಮಾಡಿ.
* ನಂತರ “mobile option” ನ್ನು ಆಯ್ಕೆ ಮಾಡಿ.
* ನಂತರ ಮೊಬೈಲ್ ಮಾಹಿತಿಯನ್ನು ನೋಂದಾಯಿಸಿ ನಂತರ “Add option” ನ್ನು ಆಯ್ಕೆ ಮಾಡಿ.
* ನಂತರ ಮೊಬೈಲ್ ಕಳೆದುಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ಹಾಗೂ ಕಳೆದು ಹೋದ ಬಗೆಯ ಬಗ್ಗೆ ಮಾಹಿತಿ ನೋಂದಾಯಿಸಿ “Submit option” ಆಯ್ಕೆ ಮಾಡಿ ಕೋನೆಗೆ ರಶೀದಿಯನ್ನು ಪಡೆಯಿರಿ.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಒಂದೇ ಕಡೆಯಲ್ಲಿ ಇಷ್ಟೆಲ್ಲಾ ಸೇವೆ ಸಿಗುತ್ತೆ ಅಂತ ಗೊತ್ತಿದ್ದರೆ ನೀವು ಹತ್ತು ಕಡೆ ಅಲೆಯೋದು ತಪ್ಪುತ್ತೆ
- ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಳವಾದ ವ್ಯಾಘ್ರಗಳ ಸಂತತಿ
- ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿ ವಜಾ
Mobile Theft: ಕಳೆದು ಹೋದ ಮೊಬೈಲ್‌ನ್ನು CEIR portal ನ ಸಹಾಯದಿಂದ ಬ್ಲಾಕ್ ಮಾಡುವ ವಿಧಾನ:
* ನಿಮ್ಮ ಮೊಬೈಲ್ ಕಳೆದು ಹೋದ ತಕ್ಷಣ ಪೊಲೀಸ್ ಇಲಾಖೆಯ ‘KSP App ನ ಸಹಾಯದಿಂದ “E-lost’ ದೂರನ್ನು ವರದಿ ಮಾಡಿ ರಶೀದಿ ಪಡೆಯಬೇಕು.
* ನಿಮ್ಮ ಮೊಬೈಲ್ ಕಳೆದು ಹೋದ ತಕ್ಷಣ ಪ್ರಸ್ತುತ ಕಳೆದು ಹೋದ ಮೊಬೈಲ್‌ನಲ್ಲಿದ್ದ, ಮೊಬೈಲ್ ನಂಬರ್‌ನ ಡುಪ್ಲಿಕೇಟ್ ಸಿಮ್ ನಂಬರ್‌ನ್ನು ಪಡೆದುಕೊಳ್ಳಬೇಕು.
* ನಂತರ http://www.ceir.gov.in ಲಿಂಕ್ ನ ಸಹಾಯದಿಂದ CEIR portal ನ್ನು ಒಪನ್ ಮಾಡಬೇಕು.
* http://www.ceir.gov.in ಲಿಂಕ್ ನ್ನು ಕ್ಲಿಕ್ ಮಾಡಿದ ನಂತರ ಚಿತ್ರದಲ್ಲಿ ಕಂಡಂತೆ CEIR portal ಮುಖ ಪುಟ ಒಪನ್ ಆಗುವುದು, ಅದರಲ್ಲಿ ಕೆಂಪು ಬಣ್ಣದಲ್ಲಿರುವ “Block STOLEN/LOST MOBILE” option ನ್ನು ಆಯ್ಕೆ ಮಾಡಬೇಕು.
* Block STOLEN/LOST MOBILE” option ನ್ನು ಆಯ್ಕೆ ಮಾಡಿದ ನಂತರ ಚಿತ್ರದಲ್ಲಿ ಕಂಡಂತಹ ಪಾರ್ಮ್ ಒಪನ್ ಆಗುವುದು, ಅದರಲ್ಲಿ ಕೇಳಿದ ಹಾಗೆ ಮಾಹಿತಿಯನ್ನು ಭರ್ತಿ ಮಾಡಿ ನಂತರ ಕೊನೆಯಲ್ಲಿ Submit option ನ್ನು ಕ್ಲಿಕ್ ಮಾಡಬೇಕು,
* ನಂತರ ನಿಮಗೆ 18 ನಂಬರ್‌ನ ಒಂದು request I’D ಸಿಗುತ್ತದೆ. ನಿಮ್ಮ ಕೋರಿಕೆ ಸಲ್ಲಿಕೆಯಾದ 24 ಗಂಟೆಗಳಲ್ಲಿ ನಿಮ್ಮ ಕಳೆದು ಹೋದ ಮೊಬೈಲ್‌ನ IMEI ಬ್ಲಾಕ್ ಆಗುತ್ತದೆ.
ಇದನ್ನೂ ಓದಿ; ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನ!; ಭಾರತದ ರಫ್ತು ನಿಷೇಧಕ್ಕೂ ಇದಕ್ಕೂ ಏನು ಸಂಬಂಧ!
ಕಳೆದು ಹೋದ ಮೊಬೈಲ್ ಅನ್ನು ಬ್ಲಾಕ್ ಮಾಡುವುದರಿಂದ ಏನು ಲಾಭ:
* ನಿಮ್ಮ ಕಳೆದು ಹೋದ ಮೊಬೈಲ್‌ನ್ನು ಇತರರು ಬಳಸಿ ದುರುಪಯೋಗಪಡಿಸುವುದನ್ನು ತಡೆಯಬಹುದು.
* ನಿಮ್ಮ ಕಳೆದು ಹೋದ ಮೊಬೈಲ್‌ನ್ನು ಪತ್ತೆ ಮಾಡಬಹುದಾಗಿದೆ.






Leave a Reply