Maha Shivratri 2025: ಮಹಾ ಶಿವರಾತ್ರಿ ಪೂಜೆ ದಿನ ಈ ತಪ್ಪು ಮಾಡದಿರಿ

(Maha Shivratri 2025) ಮಹಾ ಶಿವರಾತ್ರಿಯನ್ನು ಫೆಬ್ರವರಿ 26 ಅಂದರೆ ನಾಳೆ ಆಚರಿಸಲಾಗುತ್ತದೆ. ಈ ದಿನವು ಶಿವ ಮತ್ತು ಪಾರ್ವತಿ ಮದುವೆಯಾದ ದಿನವೆಂದು ಭಕ್ತರು ನಂಬುತ್ತಾರೆ. ಹಾಗೆಯೇ ಅಂದು ಅನೇಕರು ಉಪವಾಸ, ಧ್ಯಾನ, ಜಪ, ನೃತ್ಯ ಮುಂತಾದ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ.


ಇದನ್ನೂ ಓದಿ: ಜಿಲ್ಲಾ ಡಿಸಿಸಿ ಬ್ಯಾಂಕ್‌ ನಲ್ಲಿ ಜಾಬ್‌ ಆಫರ್‌; ಆಕರ್ಷಕ ಸಂಬಳ, ಅರ್ಜಿ ಲಿಂಕ್‌ ಇಲ್ಲಿದೆ ನೋಡಿ


ಮಹಾ ಶಿವರಾತ್ರಿ ದಿನದಂದು ಪೂಜೆ ಮಾಡುವುದಕ್ಕಾಗಿ ಅಥವಾ ವ್ರತವನ್ನು ಮಾಡುವುದಕ್ಕಾಗಿ ಭಕ್ತರು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಇನ್ನೇನು ನಾಳೆ ಮಹಾಶಿವರಾತ್ರಿ ಹಬ್ಬ ಬಂದೇ ಬಿಡುತ್ತದೆ. 2025ರ ಮಹಾ ಶಿವರಾತ್ರಿ ಪೂಜೆಯನ್ನು ಮಾಡುವುದಕ್ಕಾಗಿ ನಾವು ಹೇಗೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು.? ಮಹಾ ಶಿವರಾತ್ರಿ ಉಪವಾಸ ವ್ರತವನ್ನು ಮಾಡುವುದು ಹೇಗೆ.? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮಹಾಶಿವರಾತ್ರಿ ಹಬ್ಬ ಅತ್ಯಂತ ಶಕ್ತಿಯುತ ಮತ್ತು ಪವಿತ್ರ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಶಿವನ ಭಕ್ತರು ಬೆಳಗ್ಗೆಯಿಂದ ಮುಂದಿನ ಸೂರ್ಯೋದಯದವರೆಗೆ ಉಪವಾಸ ಮಾಡುತ್ತಾರೆ. ಮರುದಿನ ಸೂರ್ಯೋದಯದ ನಂತರ ಆಹಾರ ಸೇವಿಸುತ್ತಾರೆ. ಹಲವರು ಹಣ್ಣುಗಳು ಮತ್ತು ಬೇಯಿಸದ ಆಹಾರವನ್ನು ಮಾತ್ರ ತಿನ್ನುತ್ತಾರೆ.


ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ


ಮಹಾಶಿವರಾತ್ರಿಯ ಉಪವಾಸವು ಅದನ್ನು ಆಚರಿಸುವ ದಿನದಂದು ಪ್ರಾರಂಭವಾಗುತ್ತದೆ ಮತ್ತು ಮರುದಿನ ಸೂರ್ಯೋದಯದ ನಂತರ ಕೊನೆಗೊಳ್ಳುತ್ತದೆ. ಆದ್ದರಿಂದ 2025 ರಲ್ಲಿ ಭಕ್ತರು ಫೆಬ್ರವರಿ 26 ರ ಮುಂಜಾನೆಯಿಂದ ಫೆಬ್ರವರಿ 27 ರ ಸೂರ್ಯೋದಯದವರೆಗೆ ಉಪವಾಸವನ್ನು ಆಚರಿಸುತ್ತಾರೆ. ಇದು ಕಟ್ಟುನಿಟ್ಟಾದ 24ಕ್ಕೂ ಅಧಿಕ ಗಂಟೆಗಳ ಉಪವಾಸವಾಗಿದೆ ಮತ್ತು ಭಕ್ತರು ತಮ್ಮ ಆರೋಗ್ಯ ಮತ್ತು ದಿನಚರಿಯನ್ನು ಅವಲಂಬಿಸಿ ನಿರ್ಜಲ ಉಪವಾಸ ಅಥವಾ ಧಾನ್ಯವಿಲ್ಲದ ಉಪವಾಸವನ್ನು ಆಚರಿಸಲು ಆಯ್ಕೆ ಮಾಡುತ್ತಾರೆ.

ಶಿವ ಪೂಜೆಯನ್ನು ಆರಂಭಿಸುವ ವಿಧಾನ ಹೇಗೆ?:
ಮಹಾ ಶಿವಾರತ್ರಿ ದಿನ ಶಿವ ಪೂಜೆಯನ್ನು ಮಾಡುವ ಮುನ್ನ ಅಥವಾ ಶಿವಲಿಂಗ ಅಥವಾ ಶಿವನ ಪ್ರತಿಮೆ ಅಥವಾ ಶಿವನ ಫೋಟೋವನ್ನು ಪ್ರತಿಷ್ಠಾಪನೆ ಮಾಡುವ ಶುದ್ಧತೆಯ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಮಹಾ ಶಿವರಾತ್ರಿ ದಿನ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ತುಂಬಾನೇ ಪ್ರಮುಖವಾದುದ್ದು. ಶಿವಲಿಂಗಕ್ಕೆ ಜಲಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕವನ್ನು ಮಾಡಿಸುವುದು ತುಂಬಾನೇ ಒಳ್ಳೆಯದು. ಈ ದಿನ ಶಿವಲಿಂಗಕ್ಕೆ ನೀರು, ಹಾಲು ಮೊಸರು, ಎಳನೀರು, ಜೇನುತುಪ್ಪ, ಸಕ್ಕೆರಪುಡಿ ಮತ್ತು ತುಪ್ಪದಂತಹ ವಸ್ತುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ.


ಇದನ್ನೂ ಓದಿ: ಪಂಪ್ಸೆಟ್ ಅಳವಡಿಕೆಗೆ ಸರ್ಕಾರದಿಂದ ಸಿಗಲಿದೆ ಶೇ.80% ರಷ್ಟು ಸಹಾಯಧನ!; ಈ ರೀತಿ ಅರ್ಜಿ ಸಲ್ಲಿಸಿ ಪಡೆಯಿರಿ


ಶಿವನಿಗೆ ಹೂವು, ಹಣ್ಣು, ದೀಪಗಳಿಂದ ಅಲಂಕಾರವನ್ನು ಮಾಡಿದ ನಂತರ ಕಡ್ಡಾಯವಾಗಿ ಮಹಾ ಶಿವರಾತ್ರಿ ದಿನ ನೈವೇದ್ಯವನ್ನು ಅರ್ಪಿಸಬೇಕು. ಮಹಾ ಶಿವರಾತ್ರಿ ದಿನದಂದು ಶಿವನಿಗೆ ಪ್ರಿಯವಾದ ಹಣ್ಣುಗಳನ್ನು, ಹಾಲನ್ನು, ಜೇನು ತುಪ್ಪವನ್ನು ಸೇರಿದಂತೆ ಇನ್ನಿತರ ಖಾದ್ಯಗಳನ್ನು ಅರ್ಪಿಸಬೇಕು. ಈ ದಿನ ಬಿಲ್ವಪತ್ರೆ, ಧಾತುರಾ, ಭಾಂಗ್‌ ಹಾಗೂ ಇನ್ನಿತರ ವಿಶೇಷವಾದ ವಸ್ತುಗಳಿಂದ ಶಿವನಿಗೆ ನೈವೇದ್ಯವನ್ನು ನೀಡಬೇಕು.

ಮಹಾ ಶಿವರಾತ್ರಿ ಉಪವಾಸ ವ್ರತ ಮಾಡುವುದು ಹೇಗೆ?:
ಕೆಲವೊಬ್ಬರು ನಿರ್ಜಲ ಉಪವಾಸ ಅಂದರೆ ನೀರಿಲ್ಲದೆ ಉಪವಾಸವನ್ನು ಮಾಡುತ್ತಾರೆ. ಇನ್ನು ಕೆಲವರು ಹಾಲು, ಹಣ್ಣು, ಒಣ ಹಣ್ಣುಗಳನ್ನು ಸೇವಿಸುವ ಮೂಲಕ ಉಪವಾಸವನ್ನು ಮಾಡುತ್ತಾರೆ. ಈ ದಿನ ಕೆಲವೊಂದು ಧಾನ್ಯಗಳನ್ನು ತೆಗೆದುಕೊಳ್ಳುವ ಮೂಲಕವೂ ಉಪವಾಸ ಮಾಡಬಹುದು. ಉಪವಾಸ ಮಾಡುವವರು ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಸದೃಢರಾಗಿರಬೇಕು. ಸಾಧ್ಯವಾದರೆ ಈ ದಿನ ರಾತ್ರಿ ಜಾಗರಣೆಯನ್ನು ಕೂಡ ಮಾಡಬಹುದು.

Maha Shivratri 2025: ಮಹಾ ಶಿವರಾತ್ರಿ ಪೂಜೆ ದಿನ ಈ ತಪ್ಪು ಮಾಡದಿರಿ
Maha Shivratri 2025: ಮಹಾ ಶಿವರಾತ್ರಿ ಪೂಜೆ ದಿನ ಈ ತಪ್ಪು ಮಾಡದಿರಿ

ಇದನ್ನೂ ಓದಿ: 1 ತಿಂಗಳ ಬಳಿಕ ಈ ಕಾರು ಸ್ಥಗಿತ!; ಯಾಕೆ ಗೊತ್ತಾ?


ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ