Land ownership scheme: ಭೂಮಿ ಖರೀದಿಗೆ 12.50 ಲಕ್ಷ ರೂ. ಸಬ್ಸಿಡಿ

Land ownership scheme:ಗ್ರಾಮೀಣ ಭಾಗದಲ್ಲಿ ವಾಸಿಸುವಂತ ಮಹಿಳೆಯರು ಅದರಲ್ಲೂ ಭೂಹೀನ ಮತ್ತು ಆದಿವಾಸಿ ಮಹಿಳೆಯರು ಆರ್ಥಿಕವಾಗಿ ಹಿಂದುಳಿದವರ ಸ್ಥಿತಿ ಸುಧಾರಿಸಲು ಕರ್ನಾಟಕ ಸರ್ಕಾರವು ಭೂ ಒಡೆತನ ಯೋಜನೆಯಲ್ಲಿ ಭಾರೀ ಬದಲಾವಣೆ ತಂದಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿ ಒದಗಿಸಲು ವೆಚ್ಚವನ್ನ ಹೆಚ್ಚಿಸಲಾಗಿದೆ. ಈ ಯೋಜನೆಯಿಂದ ಬಡವರು ಕೂಡ ಭೂಮಿ ಹೊಂದುವಂತಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಜಮೀನುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೆ ಇದೆ. ಕರ್ನಾಟಕ ಸಕಾರವು ಇದನ್ನು
ಗಮನದಲ್ಲಿಟ್ಟುಕೊಂಡು ವೆಚ್ಚವನ್ನ ಗಣನೀಯವಾಗಿ ಹೆಚ್ಚಿಸಿದೆ.ಈ ಯೋಜನೆಯ ಮುಖ್ಯ ಉದ್ದೇಶ ಭೂಹೀನ ಮಹಿಳಾ ಕೃಷಿ ಕಾರ್ಮಿಕರನ್ನ ಆರ್ಥಿಕವಾಗಿ ಬಲಪಡಿಸಲು “ಭೂ ಒಡೆತನ ಯೋಜನೆ” ಅಡಿಯಲ್ಲಿ ಮಹತ್ವದ ಬದಲಾವಣೆ ಆಗಿದೆ. ಬಡವರು ಕೂಡ ತಮ್ಮ ಸ್ವಂತ ಭೂಮಿಯನ್ನು ಈ ಸರ್ಕಾರದ ಸೌಲಭ್ಯ ಬಳಸಿಕೊಂಡು ಭೂಮಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಹಾಯಧನವನ್ನ ನೀಡುತ್ತಿದೆ.

ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

ಎರಡು ಹಂತಗಳಲ್ಲಿ ಕರ್ನಾಟಕ ಸರ್ಕಾರವು ಭೂಮಿಯ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಭೂ ಒಡೆತನ ಯೋಜನೆಯ ವಿಂಗಡಿಸಿದೆ.ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜಮೀನು ಖರೀದಿಸಲು ಒಟ್ಟು ಘಟಕ ವೆಚ್ಚವನ್ನು 25.00 ಲಕ್ಷ ರೂ.ನಿಗದಿಪಡಿಸಲಾಗಿದೆ. ಈ ನಾಲ್ಕು ಜಿಲ್ಲೆಗಳ ಫಲಾನುಭವಿಗಳಿಗೆ ಸರ್ಕಾರದಿಂದ 12.50 ಲಕ್ಷ ರೂ. ಸಹಾಯಧನ ಸಿಗಲಿದ್ದು, ಉಳಿದ 12.50 ಲಕ್ಷ ರೂ. ಮೊತ್ತವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ.ರಾಜ್ಯದ ಇನ್ನುಳಿದ 27 ಜಿಲ್ಲೆಗಳಲ್ಲಿ ಭೂಮಿ ಖರೀದಿಸಲು ಒಟ್ಟು ಘಟಕ ವೆಚ್ಚವನ್ನು 20.00 ಲಕ್ಷ ರೂ. ನಿಗದಿಪಡಿಸಿದ್ದು, ಈ ಜಿಲ್ಲೆಗಳ ಫಲಾನುಭವಿಗಳಿಗೆ ಸರ್ಕಾರವು 10.00 ಲಕ್ಷ ರೂ.ಸಹಾಯಧನವನ್ನು ನೀಡುತ್ತದೆ. ಬಾಕಿ ಇರುವ 10.00 ಲಕ್ಷ ರೂ. ಮೊತ್ತವನ್ನು ಕಡಿಮೆ ಬಡ್ಡಿದರದ ಸಾಲವಾಗಿ ಒದಗಿಸುತ್ತದೆ.

ಭೂ ಒಡೆತನ ಯೋಜನೆ ನೀಡುತ್ತಿರುವ ಹಣಕಾಸಿನ ನೆರವನ್ನ ಬಳಸಿಕೊಂಡು ಕನಿಷ್ಠ 2 ಎಕರೆ ಒಣ ಭೂಮಿಯನ್ನ ಖರೀದಿಸಲು ಅವಕಾಶವಿದೆ. ಒಂದು ವೇಳೆ ಫಲಾನುಭವಿಗಳು ನೀರಾವರಿ ಸೌಲಭ್ಯ ಬೂಮಿಯನ್ನು ಖರೀದಿಸುವುದಾದರೆ,1 ಎಕರೆ ಜಮೀನು ಮಾತ್ರ ಖರೀದಿಸಬಹುದು. ತೋಟಗಾರಿಕಾ ಬೇಳೆಗಳನ್ನು ಬೆಳೆಯನ್ನು ಬೆಳೆಯಲು ಇಚ್ಛಿಸಿದರೆ ಯೋಗ್ಯವಾದ ಭೂಮಿಗೆ ಕನಿಷ್ಠ ಅರ್ಧ ಎಕರೆ ಭೂಮಿಯನ್ನು ಖರೀದಿಸಬೇಕು. ತಾವು ಆಯ್ಕೆ ಮಾಡುವ ಅನುಸಾರ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: ಆಧಾರ್‌ ಸೇವಾ ಕೇಂದ್ರದಲ್ಲಿ ಜಾಬ್‌, ಅರ್ಜಿ ಆಹ್ವಾನ

ಅಗತ್ಯವಿರುವ ದಾಖಲೆಗಳು
* ಆಧಾರ್ ಕಾರ್ಡ್( Aadhaar Card)
* ರೇಷನ್‌ ಕಾರ್ಡ್(Ration card)
* ಇತ್ತೀಚಿನ ಭಾವಚಿತ್ರ( A recent photograph)
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ(Caste and income certificate)
* ಭೂಹೀನ ಕೃಷಿ ಕಾರ್ಮಿಕ ದೃಢೀಕರಣ ಪತ್ರ ತಹಶೀಲ್ದಾರ್ ಅವರಿಂದ(Landless Agricultural Laborer Confirmation Letter from Tahsildar)
* ಖರೀದಿಸಲಿರುವ ಜಮೀನಿನ ದಾಖಲೆಗಳು ಯೋಜನಾ ವರದಿ(Documents of the land to be purchased planning report)

Land ownership scheme: ಭೂಮಿ ಖರೀದಿಗೆ 12.50 ಲಕ್ಷ ರೂ. ಸಬ್ಸಿಡಿ
Land ownership scheme: ಭೂಮಿ ಖರೀದಿಗೆ 12.50 ಲಕ್ಷ ರೂ. ಸಬ್ಸಿಡಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Land ownership scheme:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ