K. J. George: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಯಾರೂ ಕೂಡ ಆಳಂದ ಶಾಸಕ ಬಿ ಆರ್ ಪಾಟೀಲ್ ಅವರ ಕ್ಷಮೆ ಕೇಳಿಲ್ಲ. ಬಿ ಆರ್ ಪಾಟೀಲ್ ವಿಚಾರದಲ್ಲಿ ಎಲ್ಲರೂ ಒಳ್ಳೆಯದನ್ನೇ ಮಾತನಾಡಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಸಹ ಒಳ್ಳೆಯದನ್ನೇ ಮಾತನಾಡಿದ್ದಾರೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ; ಮೂಡಿಗೆರೆ: ಕಾಡಾನೆ ದಾಳಿಯಿಂದ ಬೆಳೆಗಳು ನಾಶ
ಕೇರಳದ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿಯವರ ನಿಧನದಿಂದ ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬರಲು ಆಗದ ಕಾರಣ ಸಭೆ ಮುಂದೆ ಹೋಗಿದೆ ಅಷ್ಟೇ. ಮುಖ್ಯಮಂತ್ರಿಯವರು ನಿಜವಾಗಿಯೂ ಒಬ್ಬ ಡೆಮಾಕ್ರಟಿಕ್ ವ್ಯಕ್ತಿ. ಇವರು ತುರ್ತಾಗಿ ಸಿಎಲ್‌ಪಿ ಮೀಟಿಂಗ್ ಕರೆದಿದ್ದಾರೆ. ಬೇರೆ ಏನೂ ಇಲ್ಲ. ಎಲ್ಲ ಚೆನ್ನಾಗಿ ಮಾತನಾಡಿದ್ದಾರೆ. ಗಲಾಟೆ ಏನೂ ನಡೆದಿಲ್ಲ. ಎಲ್ಲರೂ ಮುಖ್ಯಮಂತ್ರಿಯವರಿಗೆ ಸಪೋರ್ಟ್ ಮಾಡಿದ್ದಾರೆ. ಕೆಲ ಸಚಿವರಿಗೆ ಬೇಜಾರು ಆಗುತ್ತೆ. ಅಭಿವೃದ್ಧಿ ಕಾರ್ಯವನ್ನ ತಾತ್ಕಾಲಿಕವಾಗಿ ತಡೆ ಹಿಡಿದಿದ್ದೇವೆ. ಅದನ್ನ ಮತ್ತೆ ಪ್ರಾರಂಭ ಮಾಡಲು ಆದೇಶ ಕೊಡಲು ಮುಂದಾಗಿದ್ದಾರೆ ಎಂದು ಹೇಳಿದರು. ಬಜೆಟ್‌ನಲ್ಲಿನಲ್ಲಿರುವ ಅಭಿವೃದ್ಧಿ ಕೆಲಸ ಆಗಿಯೇ ಆಗುತ್ತೆ. ಹೊಸ ಕಾರ್ಯಕ್ರಮಕ್ಕಷ್ಟೇ ನಿರ್ಬಂಧ ಹಾಕಲಾಗಿದೆ ಎಂದು ತಿಳಿಸಿದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು
- ಒಂದೇ ಕಡೆಯಲ್ಲಿ ಇಷ್ಟೆಲ್ಲಾ ಸೇವೆ ಸಿಗುತ್ತೆ ಅಂತ ಗೊತ್ತಿದ್ದರೆ ನೀವು ಹತ್ತು ಕಡೆ ಅಲೆಯೋದು ತಪ್ಪುತ್ತೆ
- ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಳವಾದ ವ್ಯಾಘ್ರಗಳ ಸಂತತಿ
- ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿ ವಜಾ
K. J. George: ಜುಲೈ ತಿಂಗಳ ಬಿಲ್ ಆಗಸ್ಟ್ ನಲ್ಲಿ ಬರಲಿದೆ:
ಗೃಹ ಜ್ಯೋತಿ ಜುಲೈನಿಂದಲೇ ಪ್ರಾರಂಭ ಆಗಿದೆ. ಜುಲೈ ತಿಂಗಳ ಬಿಲ್ ಆಗಸ್ಟ್ ನಲ್ಲಿ ಬರಲಿದೆ. ರಾಜ್ಯದಲ್ಲಿ ಮತ್ತೆ ಕಸ್ತೂರಿ ರಂಗನ್ ವರದಿ ಹಿನ್ನೆಲೆ ಪ್ರತಿಕ್ರಿಯಿಸಿದ ಸಚಿವರು, ಯಾವ ಮಂತ್ರಿ ಮಂಡಲದಲ್ಲೂ ಸೂಕ್ಷ್ಮ ವಲಯದ ಬಗ್ಗೆ ತೀರ್ಮಾನ ಆಗಿರಲಿಲ್ಲ. ಸೆನ್ಸಿಟೀವ್ ಝೂನ್ ಮಾಡಲು ಕ್ಯಾಬಿನೆಟ್ ಉಪ ಸಮಿತಿಗೆ ರಚನೆಗೆ ಅಧಿಕಾರ ಕೊಟ್ಟಿದ್ದೇವೆ. ಸಬ್ ಕಮಿಟಿಯಲ್ಲಿ ಚರ್ಚೆಯಾಗಿ ಕ್ಯಾಬಿನೆಟ್‌ನಲ್ಲಿ ತೀರ್ಮಾನವಾಗಲಿದೆ ಎಂದು ಕೆ ಜೆ ಜಾರ್ಜ್ ಸ್ಪಷ್ಟಪಡಿಸಿದರು.


ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಳವಾದ ವ್ಯಾಘ್ರಗಳ ಸಂತತಿ
- ಶೃಂಗೇರಿ: ಗ್ರಾ. ಪಂ ನೂತನ ಅಧ್ಯಕ್ಷರಿಂದ ಮಾದರಿ ನಡೆ
- ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿ ವಜಾ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-29.07.2023
- ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಇಡಿ | 29-06-2023
- ಸೀಬೆ ಹಣ್ಣಿನಲ್ಲಿ ಅಡಗಿದೆ ಆರೋಗ್ಯ ಮತ್ತು ಸೌಂದರ್ಯದ ಗುಟ್ಟು
- ಮೂಡಿಗೆರೆ: ಕಾಡಾನೆ ದಾಳಿಯಿಂದ ಬೆಳೆಗಳು ನಾಶ
- ಒಂದೇ ಕಡೆಯಲ್ಲಿ ಇಷ್ಟೆಲ್ಲಾ ಸೇವೆ ಸಿಗುತ್ತೆ ಅಂತ ಗೊತ್ತಿದ್ದರೆ ನೀವು ಹತ್ತು ಕಡೆ ಅಲೆಯೋದು ತಪ್ಪುತ್ತೆ
intresting story ಓದಲು ಇಲ್ಲಿ ಕ್ಲಿಕ್ ಮಾಡಿ





Leave a Reply