Jackfruit: ಹಲಸಿನ ಹಣ್ಣಿನಲ್ಲಿದ್ಯಂತೆ ಮಾಂಸದಷ್ಟೇ ಪೋಷಕಾಂಶ

(Jackfruit) ನೀವು ಸಸ್ಯಾಹಾರಿನ? ನಿಮಗಿದೆ ಒಂದು ಸಿಹಿ ಸುದ್ದಿ! ಸಾಮಾನ್ಯವಾಗಿ ಮಾಂಸಾಹಾರದಲ್ಲಿ ಸಿಗುವಷ್ಟು ಪೋಷಕಾಂಶಗಳು ಸಸ್ಯಹಾರಿಗಳಿಗೆ ಸಿಗುವುದಿಲ್ಲ ಎಂಬ ಮಾತಿದೆ. ಆದರೆ ಈ ಹಣ್ಣನ್ನು ಸೇವನೆ ಮಾಡಿದರೆ ಮಾಂಸ ತಿಂದಷ್ಟೇ ಪೋಷಕಾಂಶಗಳು ನಿಮಗೆ ಒದಗುತ್ತವೆ. ಇದು ಬರೀ ಸಸ್ಯಾಹಾರಿಗಳಿಗೆ ಸಿಹಿ ಸುದ್ದಿ ಮಾತ್ರವಲ್ಲ ನೀವು ಎಲ್ಲಾ ಸಮಯದಲ್ಲಿಯೂ ಕೂಡ ಮಾಂಸಹಾರವನ್ನು ಸೇವನೆ ಮಾಡಲು ಕಷ್ಟವಾಗಬಹುದು ಅಂತಹ ಸಂದರ್ಭದಲ್ಲಿ ಈ ಹಣ್ಣನ್ನು ತಿಂದರೆ ಸಾಕು.


ಇದನ್ನೂ ಓದಿ: ಯಜಮಾನಿಯರಿಗೆ ಸರ್ಕಾರದಿಂದ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಬರಲ್ಲ ಗೃಹಲಕ್ಷ್ಮಿ ಯೋಜನೆಯ ಹಣ


ಮಳೆಗಾಲವನ್ನು ಹಣ್ಣುಗಳ ಸೀಸನ್ ಎಂದು ಕೂಡ ಕರೆಯಬಹುದು. ಯಾಕೆಂದರೆ ಮಳೆಗಾಲದಲ್ಲಿ ಬಹಳ ರೀತಿಯ ಹಣ್ಣುಗಳು ತಿನ್ನಲು ಸಿಗುತ್ತವೆ. ಅದರಲ್ಲಿ ಹಲಸಿನ ಹಣ್ಣು ಕೂಡ ಒಂದು. ಹಲಸಿನ ಹಣ್ಣಿನ ಒಂದು ತೊಳೆಯನ್ನು (ಸೊಳೆ) ತಿಂದರೆ ಸಾಕು ಮತ್ತೆ ಮತ್ತೆ ತಿನ್ನಬೇಕು ಅನಿಸುವ ರುಚಿ ಇದರದ್ದು. ಇದು ಬರೀ ರುಚಿ ಅಷ್ಟೇ ಅಲ್ಲ ಇದರಲ್ಲಿ ನೀವು ಊಹಿಸಿಯೇ ಇಲ್ಲದಷ್ಟು ಆರೋಗ್ಯ ಅಡಗಿದೆ. ಹೊರಗೆ ಒರಟಾದ ಮುಳ್ಳಿನ ಮೇಲ್ಮೈಯಿಂದ ಕೂಡಿದ್ದರು ಒಳಗಿರುವ ಹಣ್ಣು ಮಾತ್ರ ಮೃದುವಾಗಿ ಸಿಹಿಯಾಗಿ ರುಚಿಕರವಾಗಿರುತ್ತದೆ. ತನ್ನ ಪರಿಮಳದಿಂದಲೇ ದೂರದಲ್ಲಿರುವ ಜನರ ಬಾಯಿಯಲ್ಲಿಯೂ ನೀರೂರಿಸುವ ಶಕ್ತಿ ಇದಕ್ಕಿದೆ.


ಇದನ್ನೂ ಓದಿ: ಅನರ್ಹ BPL ರೇಷನ್ ಕಾರ್ಡ್ ರದ್ದು; ರಾಜ್ಯ ಸರ್ಕಾರ ಖಡಕ್ ಆದೇಶ..!; ನಿಮ್ಮ ಕಾರ್ಡ್ ರದ್ದಾಗಿದೆಯೇ ಚೆಕ್ ಮಾಡಿ


ಮಾಂಸಾಹಾರ ದೇಹಕ್ಕೆ ಪೌಷ್ಟಿಕಾಂಶವನ್ನು ಕೊಡುತ್ತದೆ. ಆದರೆ ನಮ್ಮ ಹೃದಯಕ್ಕೆ ಅಷ್ಟೇನೂ ಆರೋಗ್ಯಕರ ಅಲ್ಲ. ಹಾಗಾಗಿ ಸಸ್ಯಾಧಾರಿತ ಆಹಾರಗಳು ಹೃದಯಕ್ಕೆ ಒಳ್ಳೆಯದು ಎಂಬುದು ಕೆಲವು ತಜ್ಞರು ಹೇಳುವ ಮಾತು. ಅದರಂತೆಯೇ ಕೆಲವು ಸಸ್ಯ ಆಧಾರಿತ ತರಕಾರಿಗಳನ್ನ ಮಾಂಸದ ಪರ್ಯಾಯವಾಗಿ ಸೇವಿಸುತ್ತಾರೆ ಅಂತಹ ತರಕಾರಿ ಹಾಗೂ ಹಣ್ಣುಗಳ ಸಾಲಿನಲ್ಲಿ ಹಲಸಿನ ಹಣ್ಣು ಮೊದಲ ಸ್ಥಾನದಲ್ಲಿದೆ. ಹಲಸಿನ ಹಣ್ಣನ್ನು ಕತ್ತರಿಸಿದಾಗ ಸ್ವಲ್ಪ ಮಾಂಸದ ಹೋಲಿಕೆಯೂ ನೋಡಬಹುದು.


ಇದನ್ನೂ ಓದಿ: ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ


ಇದರಿಂದ ಯಾವೆಲ್ಲಾ ಉಪಯೋಗಗಳಿವೆ ಗೊತ್ತಾ?:

ಹಲಸು ಹೆಚ್ಚು ಉಷ್ಣವಲಯದ ಹಣ್ಣು, ಇದು ನಮ್ಮ ಭಾರತ ದೇಶದ ಹಣ್ಣು ಆದರೂ, ಪ್ರಪಂಚದ ಹಲವಾರು ದೇಶಗಳಲ್ಲಿ ಹಲಸನ್ನು ಬೆಳೆಯುತ್ತಾರೆ. ಇದು ಜೀವ ಸತ್ವಗಳು ಹಾಗೂ ಖನಿಜಗಳಿಂದ ತುಂಬಿಕೊಂಡಿದೆ. ಮಕ್ಕಳಿಗೆ ಪೋಷಣೆ ನೀಡುವ ವಿಟಮಿನ್ ಎ, ವಿಟಮಿನ್ ಬಿ3 ಹಾಗೂ ನಾರಿನಂಶ ಇದರಲ್ಲಿದೆ. ಇದು ತಟಸ್ಥ ಪರಿಮಳ ಹೊಂದಿರುವುದರಿಂದ ಯಾವುದೇ ರೀತಿಯ ಮಸಾಲ ಪದಾರ್ಥಗಳ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಹಲಸಿನ ಹಣ್ಣು ಸಿಹಿಯಾಗಿರುವುದರಿಂದ ಹಲವಾರು ಸಿಹಿ ಪದಾರ್ಥಗಳನ್ನು ತಯಾರಿಸಬಹುದು.


ಇದನ್ನೂ ಓದಿ: ಯಜಮಾನಿಯರಿಗೆ ಗುಡ್ ನ್ಯೂಸ್; ಜೂನ್-ಜುಲೈ ತಿಂಗಳ 4000 ಹಣ ಒಟ್ಟಿಗೆ ಜಮಾ..!


ಉದಾಹರಣೆಗೆ ದೋಸೆ, ಇಡ್ಲಿ, ಕಡುಬು, ಹೋಳಿಗೆ, ಮೂಳ್ಕ ಅಂತಹ ನಾನಾ ಖಾದ್ಯ ತಯಾರಿಸಬಹುದು. ಇನ್ನು ಹಲಸಿನ ಕಾಯಿಯಿಂದ ಹಪ್ಪಳ, ಚಿಪ್ಸ್, ಬೋಂಡ ಮಾತ್ರವಲ್ಲದೆ ಸಾಂಬಾರನ್ನು ಕೂಡಾ ಮಾಡಬಹುದು. ಅದರಲ್ಲಿಯೂ ಹಲಸಿನ ಕಾಯಿಯ ಮಂಚೂರಿಯನ್ನು ನೀವೊಮ್ಮೆ ತಿಂದರೆ ಮತ್ತೆಂದೂ ನಿಮಗೆ ಗೋಬಿ ಮಂಚೂರಿ ತಿನ್ನುವುದೇ ಬೇಡ ಇದನ್ನೇ ತಿನ್ನೋಣ ಅನಿಸುವುದು ನಿಶ್ಚಿತ.

ಹಲಸಿನ ಬೀಜ:
ಅಡುಗೆಯಲ್ಲಿ ಹಲಸಿನ ಹಣ್ಣಿನಷ್ಟೇ ಪ್ರಾಮುಖ್ಯತೆ ಹಲಸಿನ ಬಿಜಕ್ಕೂ ಇದೆ. ಮಲೆನಾಡ ಭಾಗದಲ್ಲಿ ಜನರು ಸೊಪ್ಪಿನ ಸಾಂಬಾರನ್ನು ತಯಾರಿಸುವಾಗ ಹಲಸಿನ ಬೀಜವನ್ನೂ ಸೇರಿಸುತ್ತಾರೆ. ಅದರ ರುಚಿ ಸವಿದಷ್ಟು ಸವಿಯಬೇಕು ಅನಿಸುತ್ತದೆ. ಅಷ್ಟೇ ಅಲ್ಲ ಹಲಸಿನ ಬೀಜದ ಪಲ್ಯ ಮಾಡಿ ದೋಸೆ, ರೊಟ್ಟಿ ಅಥವಾ ಚಪಾತಿ ಜೊತೆ ಚೆನ್ನಾಗಿರುತ್ತದೆ.


ಇದನ್ನೂ ಓದಿ: ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ


ಗರ್ಭಿಣಿಯರು ಹಲಸು ತಿನ್ನಬಹುದೇ?:
ಹಲಸಿನ ಹಣ್ಣು ತಿನ್ನೋದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ, ಹಾಗೂ ಆರೋಗ್ಯಕರ ತೂಕ ಪಡೆಯಲು ಇದು ಒಳ್ಳೆಯದು. ಆದರೂ ಗರ್ಭಿಣಿಯರು ಹೆಚ್ಚು ಹಣ್ಣು ತಿನ್ನಬಾರದು ಎಂಬ ಮಾತಿದೆ. ವೈದ್ಯರು ಹೇಳುವ ಪ್ರಕಾರ ಹಲಸಿನ ಹಣ್ಣನ್ನು ತಿನ್ನುವುದರಿಂದ ಗರ್ಭಿಣಿಯರಿಗೆ ಯಾವುದೇ ತೊಂದರೆ ಇಲ್ಲ.

ಇಷ್ಟೆಲ್ಲಾ ಪೋಷಕಾಂಶ ಹಾಗೂ ರುಚಿ ಹೊಂದಿರುವ ಹಲಸಿನ ಹಣ್ಣನ್ನು ಈ ಮಳೆಗಾಲದಲ್ಲಿ ಸೇವನೆ ಮಾಡೋದು ತಪ್ಪಿಸಬೇಡಿ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಹೆಚ್ಚು ಹಣ್ಣನ್ನು ಸೇವಿಸಬೇಡಿ ಯಾಕೆಂದರೆ ಇದರಿಂದಾಗಿ ಗ್ಯಾಸ್ಟ್ರಿಕ್ ಹೆಚ್ಚಾಗಬಹುದು.

Jackfruit: ಹಲಸಿನ ಹಣ್ಣಿನಲ್ಲಿದ್ಯಂತೆ ಮಾಂಸದಷ್ಟೇ ಪೋಷಕಾಂಶ
Jackfruit: ಹಲಸಿನ ಹಣ್ಣಿನಲ್ಲಿದ್ಯಂತೆ ಮಾಂಸದಷ್ಟೇ ಪೋಷಕಾಂಶ

ಇದನ್ನೂ ಓದಿ: ಕರ್ನಾಟಕ ಬ್ಯಾಂಕ್ ನಲ್ಲಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ