Idli And Dosa: ನಂದಿನಿ ಬ್ರ್ಯಾಂಡ್‌ನ ಇಡ್ಲಿ, ದೋಸೆ ಹಿಟ್ಟು ಎಂಟ್ರಿ!

(Idli And Dosa) ಇದೀಗ ಮಾರುಕಟ್ಟೆಗೆ ನಂದಿನಿ ಬ್ರ್ಯಾಂಡ್‌ನ ಇಡ್ಲಿ, ದೋಸೆ ಹಿಟ್ಟು ಲಭ್ಯವಾಗಲಿದ್ದು, ಹಾಲು, ಮೊಸರಿನಂತೆ ಇನ್ಮುಂದೆ ಗ್ರಾಹಕರಿಗೆ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ದೊರೆಯಲಿದೆ.


ಇದನ್ನೂ ಓದಿ: ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ


ರಾಜ್ಯದ ಜನತೆಗೆ ಈವರೆಗೆ ಮನೆ ಬಾಗಿಲಿಗೆ ನಂದಿನಿ ಬ್ರ್ಯಾಂಡ್‌ನ ಹಾಲು ಮೊಸರು ಬರುತ್ತಿದ್ದ ಮಾದರಿಯಲ್ಲಿಯೇ ಇನ್ನು ಮುಂದೆ ಇಡ್ಲಿ, ದೋಸೆ ಹಿಟ್ಟು ಕೂಡ ಬರಲಿದೆ. ಎಲ್ಲ ನಗರ, ಪಟ್ಟಣಗಳ ಜನರು ಬೆಳಗ್ಗಿನ ತಿಂಡಿ ಬಗ್ಗೆ ಚಿಂತೆ ಮಾಡುವ ಅಗತ್ಯವೇ ಇರುವುದಿಲ್ಲ. ಬೆಳಗ್ಗೆ ಇಡ್ಲಿ ಮಾಡಬೇಕೆಂದರೆ ಹಿಂದಿನ ದಿನದ ರಾತ್ರಿ ಎಲ್ಲಾ ರೆಡಿ ಮಾಡಿಕೊಳ್ಳಬೇಕು. ಆದರೆ, ಇದೀಗ ರೆಡಿಮೆಡ್​ ಬರುತ್ತಿರುವುದರಿಂದ ಯಾವುದೇ ಚಿಂತಿಸುವ ಅವಶ್ಯವೇ ಇಲ್ಲ.


ಇದನ್ನೂ ಓದಿ: ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?


ಗ್ರಾಹಕರಿಗೆ ಕೈಗೆಟುವ ದರದಲ್ಲಿ ನೀಡಲಾಗುತ್ತಿದೆ. ದೋಸೆ ಮತ್ತು ಇಡ್ಲಿ ಹಿಟ್ಟಿನ 450 ಗ್ರಾಂ ಪ್ಯಾಕ್​ಗೆ 40 ರೂ. ಹಾಗೂ 900 ಗ್ರಾಂ ಪ್ಯಾಕೇಟ್​ಗೆ 80 ರೂಪಾಯಿ ದರ ನಿಗದಿ ಮಾಡಲಾಗಿದೆ.


ಇದನ್ನೂ ಓದಿ: ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್


ಆರಂಭದಲ್ಲಿ ಮಾರುಕಟ್ಟೆಗಳು ಹಾಗೂ ನಂದಿನಿ ಹಾಲಿನ ಕೇಂದ್ರಗಳಲ್ಲಿ ಇದೀಗ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮನೆ, ಮೆನೆಗೆ ಹಾಲನ್ನು ತಲುಪಿಸುವ ಮಾದರಿಯಲ್ಲಿಯೇ ಇಡ್ಲಿ ಅಥವಾ ದೋಸೆ ಹಿಟ್ಟುಗಳನ್ನು ಕೂಡ ಸರಬರಾಜು ಮಾಡುವುದಕ್ಕೆ ಚಿಂತನೆ ಮಾಡಲಾಗಿದೆ.


ಇದನ್ನೂ ಓದಿ: 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಇನ್ನು ಕೆಎಂಎಫ್ ಬಿಡುಗಡೆ ಮಾಡಿರುವ ಈ ಇಡ್ಲಿ, ದೋಸೆ ಹಿಟ್ಟು ವೇ ಪ್ರೋಟೀನ್ ಆಧಾರಿತವಾಗಿದೆ. ಆರೋಗ್ಯಕ್ಕೂ ಉತ್ತಮ ಎಂದು ಹೇಳಲಾಗುತ್ತಿದೆ. ಇನ್ನು ರುಚಿ ಹಾಗೂ ಸ್ವಾದದ ಬಗ್ಗೆ ಇನ್ನು ಮುಂದೆ ಜನರ ಬಳಕೆಯಿಂದ ರೇಟಿಂಗ್ಸ್ ಬರಬೇಕಿದೆ.

Idli And Dosa: ನಂದಿನಿ ಬ್ರ್ಯಾಂಡ್‌ನ ಇಡ್ಲಿ, ದೋಸೆ ಹಿಟ್ಟು ಎಂಟ್ರಿ!
Idli And Dosa: ನಂದಿನಿ ಬ್ರ್ಯಾಂಡ್‌ನ ಇಡ್ಲಿ, ದೋಸೆ ಹಿಟ್ಟು ಎಂಟ್ರಿ!

ಇತ್ತೀಚಿನ ಜನಪ್ರಿಯ ಸುದ್ದಿಗಳು