(Anoop Poojary) ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ವಾಹನ ಕಣಿವೆಗೆ ಉರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯ ಯೋಧ ಅನೂಪ್ ಪೂಜಾರಿ (33) ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
ಸೇನೆ ಸೇರುವ ಕನಸು:
ಬಡ ಕುಟುಂಬದ ಅನೂಪ್ ಕೋಟದ ವಿವೇಕ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಎನ್‌ಸಿಸಿ ಸೇರಿದ್ದರು. ಬಹಳ ಚುರುಕಿನ ವ್ಯಕ್ತಿತ್ವದ ಇವರು, 26/11ರ ಮುಂಬೈ ಭಯೋತ್ಪಾಕರ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಾನೂ ಸೇನೆ ಸೇರಿ ದೇಶ ಸೇವೆ ಮಾಡುವ ಕನಸು ಹೊತ್ತಿದ್ದರು.
ದ್ವಿತೀಯ ಪಿಯುಸಿ ಮುಗಿಯುತ್ತಿರುವಾಗಾಲೇ ನೇರ ಸಂದರ್ಶನದಲ್ಲಿ ಸೈನ್ಯಕ್ಕೆ ಆಯ್ಕೆಯಾಗಿದ್ದರು. ಶಾಲಾ ಜೀವನದಲ್ಲಿ ಕಲಿಕೆಯಲ್ಲೂ ಮುಂದಿದ್ದರು.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
ಮೂರು ವರ್ಷ ಮತ್ತೆ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗುವ ಆಲೋಚನೆಯನ್ನು ಅನೂಪ್ ಹೊಂದಿದ್ದರು. ಈ ನಡುವೆ ಕಾಶ್ಮೀರದ ಪೂಂಚ್‌ನಲ್ಲಿ ದುರ್ಘಟನೆಯಾಗಿದೆ.
3 ದಿನಗಳ ಹಿಂದೆ ಊರಿನಿಂದ ತೆರಳಿದ್ದರು!:
ಬೀಜಾಡಿ ನಿವಾಸಿ ಚಂದು ಪೂಜಾರಿ ಹಾಗೂ ನಾರಾಯಣ ಪೂಜಾರಿ ದಂಪತಿ ತಮ್ಮ ಏಕೈಕ ಪುತ್ರನನ್ನು ಸೇನೆಗೆ ಸೇರಿಸಿದ್ದರು. ಅವರಿಗೆ ಇನ್ನಿಬ್ಬರು ಪುತ್ರಿಯರಿದ್ದರೆ.
ಇದನ್ನೂ ಓದಿ: ಇ-ಖಾತೆ ಕುರಿತು ಆಯುಕ್ತರಿಂದ ಖಡಕ್ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
ಅನೂಪ್ ಅವರಿಗೆ 3 ವರ್ಷಗಳ ಹಿಂದೆ ವಿವಾಹವಾಗಿದ್ದು, 2 ವರ್ಷದ ಹೆಣ್ಣು ಮಗುವಿದೆ. ಜನವರಿಯಲ್ಲಿ ಸಿಗಬೇಕಿದ್ದ ರಜೆ ಮೊದಲೇ ಸಿಕ್ಕಿದ್ದರಿಂದ ಡಿಸೆಂಬರ್ ಮೊದಲ ವಾರದಲ್ಲಿ ಇವರು ಊರಿಗೆ ಬಂದಿದ್ದರು.
ಹಿಂದಿನ ತಿಂಗಳು ನಡೆದಿದ್ದ ಮಗಳ ಹುಟ್ಟುಹಬ್ಬವನ್ನು ಕುಟುಂಬದವರು, ಮಗಳೊಂದಿಗೆ ಇವರು ಆಚರಿಸಿದ್ದರು. ಅಲ್ಲದೆ ಕರಾವಳಿಯ ಪ್ರಮುಖ ಜಾತ್ರೆಯಾದ ಡಿ.15ರಂದು ಕೋಟೇಶ್ವರದಲ್ಲಿ ನಡೆದ ಕೊಡಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಡಿ.21ರಂದು ಮರಳಿ ಕರ್ತವ್ಯಕ್ಕೆ ತೆರಳಿದ್ದರು.
ಇದನ್ನೂ ಓದಿ: 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
ಸೇವೆಗೆ ವಾಪಾಸ್ಸಾದ ಮೂರೇ ದಿನದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹುತಾತ್ಮ ಯೋಧ ತಾಯಿ, ಇಬ್ಬರು ಹಿರಿಯ ಸಹೋದರಿಯರು, ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳು ಕಡ್ಡಾಯ!
- ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
- ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಬೆಳೆ ಹಾನಿಗೊಳಗಾದ ರೈತರ ಬ್ಯಾಂಕ್ ಖಾತೆಗೆ ಇನ್ಪುಟ್ ಸಬ್ಸಿಡಿ ಜಮೆ!
- ರಾಜ್ಯದ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಗುಡ್ ನ್ಯೂಸ್; ಪಡಿತರ ಚೀಟಿ ವಿತರಣೆ ಆರಂಭ
- ರೇಷನ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ; ಇಂತಹವರಿಗೆ ಮುಂದಿನ ತಿಂಗಳಿನಿಂದ ಸಿಗಲ್ಲ ರೇಷನ್!
- ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಏನದು? ರೈತರೇ ಮಿಸ್ ಮಾಡ್ದೆ ಈ ಸುದ್ದಿ ಓದಿ
- ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
- ಪಡಿತರ ಚೀಟಿ ಹೊಂದಿರುವವರು ಓದಲೇಬೇಕು ಈ ಸುದ್ದಿ; ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ಕಾರ್ಡ್
- ಆಧಾರ್ ಕೇಂದ್ರದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ
- ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಈ ಯೋಜನೆಯಡಿ ಸಿಗಲಿದೆ ಸಾಲ ಸೌಲಭ್ಯ!; ಸಾಲಕ್ಕೆ ಯಾವುದೇ ಗ್ಯಾರಂಟಿಯ ಅಗತ್ಯವಿಲ್ಲ
- ಇನ್ಮುಂದೆ DL ಪಡೆಯುವುದು ಬಹಳ ಸುಲಭ; ಬರಲಿದೆ ಈ ಹೊಸ ನಿಯಮ
- ಪೋಷಕರ ಗಮನಕ್ಕೆ; ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಈ ದಾಖಲೆಗಳು ಕಡ್ಡಾಯ!
- ವಾಹನ ಖರೀದಿಸಲು ಸಬ್ಸಿಡಿ; ಆಧಾರ್ ಕಾರ್ಡ್ ಇದ್ರೆ ಈ ರೀತಿ ಅರ್ಜಿ ಸಲ್ಲಿಸಿ
- ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆ ನಷ್ಟ ಪರಿಹಾರ ಖಾತೆಗೆ ಜಮಾ!
- ಶ್ರೀಲಂಕಾದಿಂದ ಕಾಳು ಮೆಣಸು ಆಮದು; ಐದು ವಾರಗಳಲ್ಲಿ ಕುಸಿತ ಕಂಡ ಕರಿ ಚಿನ್ನ: ರೈತರಲ್ಲಿ ಆತಂಕ
- ಅಕ್ರಮ ಕಟ್ಟಡ ಮಾಲೀಕರಿಗೆ ಬಿಗ್ ಶಾಕ್; ಕಟ್ಟಡ ತೆರವುಗೊಳಿಸುವುದರ ಕುರಿತು ಮಖ್ಯ ಮಾಹಿತಿ ನೀಡಿದ ಡಿ.ಕೆ.ಶಿ






